ಒಂದು ಸಾರಿ ನನ್ನ ಹಳೆಯ ಸ್ನೇಹಿತ ಸೀನ ಊರಿಂದ ಬಂದ. ಸರಿ ಬಸ್ಟಾಂಡ್ ಗೆ ಹೋಗಿ ಅವನನ್ನ ಮತ್ತು ಅವನ ಹೆಂಡರನ್ನ ಕರೆದುಕೊಂಡು ಮನೆಗೆ ಬಂದೆ. ಹೊಸದಾಗಿ ಮದುವೆಯಾಗಿತ್ತು. ಅವನ ಹೆಂಡರಿಗೆ ಬಾರೇ ಮಾ ಅನ್ನೋನು. ಪಿರುತಿ ಇರಬೇಕು ಅಂದ್ಕಂಡು ಸುಮ್ನಾದೆ. ಮನೇಲ್ಲಿ ಸೀನ ನನಗಿಂತ ಹೆಚ್ಚಾಗಿ ನನ್ನ ಹೆಂಡರತ್ರಾನೇ ಮಾತಡೋನು.  ಉಪ್ಪಿನ ಕಾಯಿ ಹೇಗೆ ಹಾಕ್ತೀರಾ, ಇಡ್ಲಿನ್ನ ಅಕ್ಕಿಯಲ್ಲಿ ಮಾಡ್ತೀರೋ ಇಲ್ಲಾ ಉದ್ದಲ್ಲಿ ಮಾಡ್ತೀರೋ ಅಂದಾ. ಅಕ್ಕಿ ಉದ್ದು ಎರಡೂ ಮಿಕ್ಸ್ ಮಾಡಿ ಮಾತ್ತೀವಿ ಅಂದ್ಲು ಹೆಂಡರು. ಬೆಳಗ್ಗೆ ಸಾನ ಮಾಡಿದ್ ಮ್ಯಾಕೆ ಹಣೆಗೆ ಕುಂಕುಮ ಇಟ್ಕಂಡು, ಲೇ ಲಿಪ್ ಸ್ಟಿಕ್ ಇಲ್ವೇನೇ ಅನ್ನೋನು. ರಾತ್ರಿ ಮಲಗುವಾಗ ನಂಗೂ ನೈಟಿ ಕೊಡೇಮ್ಮಾ ಅನ್ನೋನು. ಆ ಯಮ್ಮ ಪಂಚೆ ಮುಖದ ಮ್ಯಾಕೆ ತಂದು ಒಗೆಯೋಳು.  ಇವನ್ಯಾಕೆ ಹಿಂಗೆ ಆಡ್ತಾನೇ ಅಂತಾ ಗೊತ್ತಾಗ್ತಾ ಇರ್ಲಿಲ್ಲ. ಏನಮ್ಮಾ ನಿಮ್ಮ ಯಜಮಾನರು ಹಿಂಗೆ ಆಡ್ತಾರಲ್ಲಾ ಅಂದೆ. ಅದಕ್ಕೆ ಆ ಯಮ್ಮ. ಅದೂ ಅವನೂ ಅಲ್ಲ, ಅವಳೂ ಅಲ್ಲ . ಅದು ಅಆ ಆಗಿದೆ ಅಂತು. ಆಹಾ ಏನೋ ವತ್ವಾಸ ಆಗಿದೆ ಅಂತಾ ಗೊತ್ತಾಯ್ತು.
ಸೀನ ಬಾರಲಾ ಅಂತಾ ಹೆಗಲ ಮೇಲೆ ಕೈ ಹಾಕಿದೆ. ಏ ಕೈ ತೆಗಿಯೋ ಒಂತರಾ ಆಗುತ್ತೆ ಅಂದಾ. ಲೇ ನಾನು ನಿನ್ನ ಪ್ರೆಂಡ್ ಅಲ್ವೇನ್ಲಾ. ಆದರೂ ದೂರ ನಿಂತು ಮಾತಾಡು. ಅಂದು ಅವನ ಹೆಂಡರು ಸೆರಗು ಹಿಡಿದುಕೊಂಡ. ಅವನ ಅಣ್ಣ ದರ್ಬೇಸಿ ತಿಪ್ಪಂಗೆ ಪೋನ್ ಮಾಡಿ ಸೀನ ಯಾಕಲಾ ಹಿಂಗೆ ಆಡ್ತಾನೆ ಅಂದೆ. ಅವನು ಹೆಣ್ಣು ಮಕ್ಕಳು ಜೊತೆಗೆ ಕುಂಟೆ ಪಿಲ್ಲೆ, ಅಡುಗೆ ಆಟ,ರಂಗೋಲಿ ಹಾಕದು ಕಲ್ತು ಹಿಂಗೆ ಆಗಿದಾನೆ ಅಂದ.

___LINK_OPEN_ href="http://2.bp.blogspot.com/_JufO3uU_KXE/TFgBOFdTfFI/AAAAAAAAAAY/J8TNYjLlxo4/s1600/untitled.JPG"___

ಸರಿ ಇವನು ಹಿಂಗೆ ಬಿಟ್ಟರೆ ಸಂಸಾರ ಹಾಳಾಗುತ್ತಲಾ ಅಂತಾ. ನಮ್ಮೂರಿನ ಫೇಮಸ್ ನಾಟಿ ವೈದ್ಯರಾದ ಗೌಡಪ್ಪನ ಹತ್ತಿರ ಕರೆದುಕೊಂಡು ಹೋದೆ. ಏನೋ ಇದು ವಾಸನೆ. ಏ ಥೂ ಗೌಡಪ್ಪ, ದೂರ ನಿಂತುಕೊ. ನಿನ್ನ ಮೀಸೆ ನೋಡಿದ್ರೆ, ಪುಟ್ ಪಾತ್ ಮೇಲೆ ಟಾರ್ ಹಾಕಿದಂಗೆ ಇದೆ ಕಣೋ. ನಿನ್ನ ಮೂಗು ನೋಡಿದ್ರೆ NH4 ನ್ಯಾಷನಲ್ ಹೈವೇ ಇದ್ದಂಗೆ ಇದೆಯಲ್ಲೋ, ಹಣೆ ನೋಡಿದರೆ ಬ್ರಾಡ್ ಗೇಜ್ ಇದ್ದಂಗೆ ಇದೆ. ಇನ್ನು ಬಾಯಿ ಬಚ್ಚಲು ಆಗಿದೆ ಕಣೋ ಅಂದ ಸೀನ. ಲೇ ಬೀಡಿ ಬಿಟ್ಟು ಒಂದು ವರ್ಷ ಆಗಿದೆ. ಲೇ ಏನ್ಲಾ ಇದು ಕೋಮಲಾ. ಸರಿ ಗೌಡಪ್ಪನ ನಾಡಿ ಹಿಡಿದು. ನೋಡ್ಲಾ ಕೋಮಲ್ ಇವನಿಗೆ ಹೆಣ್ಣು ಜೀನ್ಸ್ ಜಾಸ್ತಿಯಾಗಿದೆ. ಅದಕ್ಕೆ ಹಿಂಗೆ ಆಡ್ತಾನೆ. ಗಂಡು ಮಕ್ಕಳು ಜೊತೆ ಆಟ ಆಡಕ್ಕೆ ಬಿಡು ಅಂದು ಒಂದಿಷ್ಟು ತುಳಸಿ ಸೊಪ್ಪಿನ ರಸ, ಮುಗ್ಗಲು ಹಿಡಿದ ಜೇನುತುಪ್ಪ, ಮಗಂದು ಬಗ್ಗಿಸಿದ್ರೂ ,ಬಾಟಲಿಯಿಂದ ಬೀಳ್ತಾ ಇರಲಿಲ್ಲ. ಹಾಗೇ ಒಂದಿಷ್ಟು ತಂಬುಳಿ ಸೊಪ್ಪು ಕೊಟ್ಟು ದಿನಾ ತಿನ್ನಕ್ಕೆ ಹೇಳು ಸರಿ ಆಗ್ತಾನೆ ಅಂದ. ಇದನ್ನೆಲ್ಲಾ ತಿನ್ನಸಿದ ಮೇಲೆ ಪಿತ್ತ ಕಡಿಮೆಯಾಗಿದ್ದು ಬಿಟ್ಟರೆ ಅಆ ಅಂಗೇ ಇತ್ತು. ನಮ್ಮೂರಿನ ಗಂಡು ಮಕ್ಕಳು ಜೊತೆ ಫುಟ್ ಬಾಲ್ ಆಡಕ್ಕೆ ಅಂತಾ ಕರೆದುಕೊಂಡು ಹೋದರೆ, ಹೆಣ್ಣು ಮಕ್ಕಳು ಕೊಚ್ಚೆ ದಾಟೋ ಬೇಕಾದ್ರೆ ಲಂಗ ಎತ್ತಕೊಂಡು ಹೋದ ಹಾಗೆ  ಪಂಚೆ ಎತ್ತಿ ಒದೆಯೋನು. ಕ್ರಿಕೆಟ್ ನಲ್ಲಿ ನುಲಿತಾ ಬಾಲು ಹಾಕೋನು. ಫೀಲ್ಡಿಂಗ್ ಗೆ ನಿಲ್ಲಿಸಿದರೆ ಬಾಲು ಎಸೆದು ಅಆ ಅನ್ನೋನು. ಏ ಥೂ.  ಯಾರಲಾ ಇವನು ಅಂದ ಸುಬ್ಬ . ಒಂದು ಸ್ವಲ್ಪ ದಿನಾ ಮುಂಚೆ ಬಂದಿದ್ರೆ ಮಹಾಭಾರತ ನಾಟಕದಾಗೆ ಶಿಖಂಡಿನ ಮಾಡ್ಬೋದಿತ್ತು ಅಂದ. ಲೇ ಸುಮ್ಕಿರಲಾ.
ಒಂದು ದಿನ ಅವನ ಹೆಂಡರು ಚೂಡಿದಾರ್ ಹಾಕ್ಕೊಂಡು ಹೋಯ್ತಾ ಇದ್ದ. ಯಾವುದೋ ಫಿಗರ್ ಅಂದುಕೊಂಡು ನಮ್ಮೂರಿನ ಪಡ್ಡೆ ಹುಡುಗರೆಲ್ಲಾ ಬೆನ್ನು ಹತ್ತಿದ್ರು. ನಾನು ಯಾವುದೋ ಹೊಸಾ ಫಿಗರ್ ಅಂತಾ ನೋಡಿದ್ರೆ ಸೀನ. ಲೇ ಇದೇನ್ಲಾ ಅಂದೆ. ಸಿದ್ದೇಸನ ಗುಡಿಗೆ ಹೋಗ್ತಾ ಇದೀನಿ ಕಣೋ ಅಂದ. ಲೇ ಬಾರಲಾ ಮನೆಗೆ ಅಂದು. ನನ್ನ ಹೆಂಡರಿಗೆ ನೋಡೇ ಇವನಿಗೆ ಅಡುಗೆ ಮಾಡೋದ್ರಿಂದ ಹಿಡಿದು ಎಲ್ಲಾ ಕೆಲಸ ಕೊಡು ಮಗಾ ಇನ್ನ ಮ್ಯಾಕೆ ಅಆ ಅಂದಿರಬಾರದು ಅಂದೆ. ಸರಿ ನನ್ನ ಹೆಂಡರು ಬೆಳಗ್ಗೆನೇ ಎದ್ದು ಪೇಟೆಗೆ ಹೋಗೋಕ್ಕೆ ರೆಡಿಯಾಗೋಳು. ಸೀನ ನಮ್ಮನೆ ಕಲಸದೋನು ತರಾ ಆಗಿದ್ದ. ಬಂದಾಗ ದೊಡ್ಡಣ್ಣ ಇದ್ದಂಗೆ ಇದ್ದೋನು ಒಂದೇ ವಾರದಾಗೆ ಹೊನ್ನವಳ್ಳಿ ಕೃಸ್ಣ ಆದಂಗೆ  ಆಗಿದ್ದ. ಹಳೇ ಬೆಸೀಟ್, ಅಟ್ಟದ ಮೇಲಿದ್ದ ಹಿತ್ತಾಳೆ ಹಂಡೆ, ಹಿತ್ತಲೆ ಕಡೇ ಪಾಚಿ ಕಟ್ಟಿದ್ದ ಜಾಗ ಎಲ್ಲಾ ಶುಭ್ರವಾಗಿತ್ತು. ಸಂಜೆ 7ಕ್ಕೆ ಮಲಗೋನು. ಅಟ್ಟೊಂದು ಕೆಲಸ. ಸಾವಿತ್ರಿ ಧಾರವಾಹಿ ನೋಡ್ತಾ ಅಂಗೇ ಬಾಯಿ ಬುಟ್ಕಂಡು ಮಲಗಿರೋನು. ಎಬ್ಬಿಸಿದರೆ ಎಲ್ಲಿದೆ ಪಾತ್ರೆ ಅನ್ನೋನು. ಹಿಂಗೆ ಒಂದು ಆರು ತಿಂಗಳು ಕೆಲಸ ಮಾಡಿಸಿದ್ವಿ ನೋಡಿ. ಮಗಂದು ಅಆ ಹೋಗಿ ಯಾಕಲಾ ಅನ್ನೋ ಲೆವೆಲ್ ಗೆ ಬಂದ. ಅವನ ಹೆಂಡರು ಅಂತೂ ನಮ್ಮ ಗಂಡನ ಮೇಲಿದ್ದ ದೆವ್ವನ ಬಿಡಿಸಿದಿರಿ ಅಂದ್ಲು. ಈಗ ಜೊತೆಗೆ ಹೋದ್ರೆ. ಮಂಜುಮಾಲಿನಿ ಜೊತೆ ಹೊನ್ನವಳ್ಳಿ ಕೃಷ್ಣ ಹೋದಂಗೆ ಕಾಣ್ತದೆ. ನನ್ನ ಹೆಂಡರು ಸೀನ ಊರಿಗೆ ಮತ್ತ್ಯಾಗ ಬರ್ತಾನೆ ಅಂತಾಳೆ. ಯಾಕೇ ಅವನ ಹೆಣ ಹಾಕೋಕ.