ಕನ್ನಡಿಗರೇ,
ಕೋರಮಂಗಲದಲ್ಲಿ ಇರುವ ಅಂಗಡಿಯ ಫಲಕವನ್ನು ನೋಡಿ. ಇದು ನಿಜವಾಗಿಯೂ "ಗುಂಡಿಗೆ" ಇರುವ ಕನ್ನಡಿಗರ ಉದಾಹರಣೆ.
ನಾನು ನೋಡಿರುವ ಹಾಗೆ, ಯಾರೇ ಆಗಲಿ, ತಮ್ಮ ಕೆಲಸ - ವ್ಯಾಪಾರ ಬಂದಾಗ ಭಾಷೆ - ಸಂಸ್ಕೃತಿ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿ ಕೊಲ್ಲದೆ ರಾಜಿ ಮಾಡ್ಕೊಳ್ತಾರೆ. ಕನ್ನಡದಲ್ಲಿ ಮಾತಾಡಿ ಎಂದು ಬೇರೆಯವರಿಗೆ ಹೇಳಿದರೆ, ಅವ್ರು ಬೇಜಾರು ಮಾಡ್ಕೊಂಡು ಬೇರೆ ಕಡೆ ವ್ಯಾಪಾರ ಮಾಡ್ಬೋದು ಅನ್ನುವ ಹುಸಿ ಅಂಜಿಕೆ ನಮ್ಮಲ್ಲಿ. ಆದರೆ, ಈ ತರಹ ಕನ್ನಡಿಗರ ದಿಟ್ಟತನ ನಿಜವಾಗಿಯೂ ಅತ್ಯಂತ ಸ್ತ್ಯುತ್ಯರ್ಹ.
ದಯವಿಟ್ಟು ಯಾರಾದ್ರೂ ಇಲ್ಲಿ ಹೋದರೆ, ಅವರ ಕನ್ನಡಾಭಿಮಾನದ ಬಗ್ಗೆ ಅಭಿನಂದಿಸಿ. ಇದರಿಂದ ಅವರಿಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ.
ಹೀಗೆಯೇ, ನಾವು ಬೇರೆ ವ್ಯಾಪಾರಿಗಳಿಗೂ ತಿಳಿಹೇಳಿ, ಈ ತರಹ ಕನ್ನಡ ಉತ್ತೇಜಿಸುವ ಕೆಲಸಗಳಲ್ಲಿ ತೊಡಗುವರಿಗೆ ನಾವು ಒಳ್ಳೆಯ ವ್ಯಾಪಾರ ಕೊಡುತ್ತೇವೆ ಎಂದು ಹೇಳಬೇಕು ಮತ್ತು ಅದರಂತೆಯೇ ನಡೆಯ ಬೇಕು. ಆಟೋ ಚಾಲಕರು ಮತ್ತು ನಮ್ಮ ಬಿ. ಎಂ. ಟಿ. ಸಿ. ನಿರ್ವಾಹಕರೂ ಪ್ರಯಾಣಿಕರಿಗೆ ಕನ್ನಡವನ್ನೇ ಪಸರಿಸಿದರೆ, ನಮ್ಮ ಬೆಂಗಳೂರಿನಲ್ಲಿ ಕನ್ನಡದ ಕಂಪು ಮತ್ತಷ್ಟು ಹರಡುತ್ತದೆ.
ಈ ಬರಹ ನನಗೆ ಮಿಂಚೆಯಲ್ಲಿ ಬಂದಿತ್ತು. ಕನ್ನಡಿಗರಲ್ಲೂ ಸ್ವಲ್ದ ಧೈರ್ಯ ಇರುವವರು ಇದ್ದಾರಲ್ಲ ಎಂಬ ಹೆಮ್ಮೆಯೊಂದಿಗೆ ಈ ಬರಹ ಪ್ರಕಟಿಸಿದ್ದೇನೆ.
ಕ್ರೆಡಿಟ್ಸ್: ಮಿಂಚೆ ಕಳುಹಿಸಿದ ತೇಜಸ್ವಿನಿಯವರಿಗೆ
ಚಿತ್ರ ಇಲ್ಲಿದೆ ನೋಡಿ, ಲೇಖನಕ್ಕೆ ಲಗತ್ತಿಸಲಾಗುತ್ತಿಲ್ಲ.
http://sampada.net/image/27270
ಪ್ರತಿಕ್ರಿಯೆ (1)