___LINK_OPEN_href="http://2.bp.blogspot.com/_Xahtxjj2WYE/TGwQsM1bYmI/AAAAAAAAAu0/Fnb9Gs2_PXM/s1600/11.bmp" onblur="try {parent.deselectBloggerImageGracefully();} catch(e) {}"___ಅಪ್ಪ ಹೆಣ್ಮುಮಕ್ಕಳಿಗೆ ಹೀರೋ. ಜಗತ್ತಿನ ಎಲ್ಲ ಹುಡುಗಿಯರಿಗೆ ಒಂದು ಸೆಕ್ಯೂರ್ಡ್ ಫೀಲ್. ಅಮ್ಮ ಕಷ್ಟ ಅರ್ಥ ಮಾಡಿಕೊಳ್ತಾಳೆ. ಬೆಂಬಲಕ್ಕೆ ಅಪ್ಪಬೇಕು. ಅಪ್ಪನೇ ಎಲ್ಲ. ಆದ್ರೆ, ನಾವು ಈ ಫೀಲ್ ಬಿಟ್ಟು ಹೊರಗಡೆ ಬಂದೇಯಿಲ್ಲ. ಸೃಷ್ಟಿಯ ಸಹಜ ನಿಯಮದಂತೆ ಹೆಣ್ಣುಮಕ್ಕಳು ಅಪ್ಪನತ್ತ ವಾಲುತ್ತಾರೆ. ಗಂಡು ಮಕ್ಕಳು ಅಮ್ಮನ ಒಲವಿಗೆ ಕರಗುತ್ತಾರೆ. ಈ ನಡುವೆ ಅಪ್ಪನೂ ಮಗನನ್ನ ತುಂಬಾ ಪ್ರೀತಿಸಬಲ್ಲ ಅನ್ನೋ ಸತ್ಯ ನಿಜಕ್ಕೂ ಕಣ್ಮುಂದೆ ಬರಲೂ ಸಾಧ್ಯವಿಲ್ಲ...

ಆದ್ರೆ, ಹಾಲಿವುಡ್ ಇಂಥಹ ಪ್ರಯತ್ನ ಮಾಡಿದೆ. "ಎಮ್ಟನ್ ಮಗನ್" ಅಂಥ ತಮಿಳ್ ಚಿತ್ರರಂಗ ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಮೌಲ್ಯ ತೆರೆದಿಟ್ಟು ದುಡ್ಡು ಬಾಚಿಕೊಂಡಿದೆ. ಕನ್ನಡ ಚಿತ್ರರಂಗ ಈಗ ಅದಕ್ಕೆ ಕೈಹಾಕಿದೆ. "ಪುತ್ರ" ಅನ್ನೊ ಚಿತ್ರ ಇದೇ ಭಾವದಲ್ಲಿಯೆ ಮಿಡಿಯಲಿದೆ. ತಂದೆಯ ಭದ್ರ ಬುನಾದಿಯಂತಹ ಸಲಹೆ..ಸಿಡುಕು..ಸಹಕಾರಗಳು "ಪುತ್ರ"ದಲ್ಲಿ ಗಂಡು ಮಕ್ಕಳ ಎದೆ ತಟ್ಟಲಿವೆ..

ಪುತ್ರದ ನಾಯಕನಾರಿರಬಹುದು ಅಂತ ನೀವು ಥಿಂಕ್ ಮಾಡ್ತಿರಬಹುದು. ಮನಸಾರೆ.. ನಾಯಕ ದಿಗಂತ್ ಪುತ್ರದ ಪುತ್ರ. ಅವಿನಾಶ್ ತಂದೆಯ ಪಾತ್ರಧಾರಿ. ಇವರ ಮಧ್ಯೆದ ಕಥೆನೇ "ಪುತ್ರ" ಆದ್ರೂ, ಚಿತ್ರದಲ್ಲಿ ಪ್ರೀತಿಯ ಎಳೆಯಿದೆ. ತ್ರೀಕೋನ ಪ್ರೀತಿಯ ಅಲೆ ಇಲ್ಲೂ ಹರೆಯುತ್ತದೆ. ಹಳ್ಳಿಯ ಹುಡುಗಿ...ಶಹರದ ಬೆಡಗಿ ಅಂತಲೇ ಕಥೆಗೆ ಎರಡು ಫ್ಲೆವರ್ ನೀಡಲಾಗಿದೆ. ಹಳ್ಳಿಯ ಚೆಲುವೆಯಾಗಿ "ಅಂಬಾರಿ" ಸುಪ್ರಿತಾ ಆಕ್ಟಿಂಗ್. ನಗರದ ಹುಡುಗಿಯಾಗಿ ರೂಪಶ್ರೀ ಕಾಣಿಸಿಕೊಳ್ತಾಯಿದ್ದಾರೆ...

ಹಿರಿಯ ನಿರ್ದೇಶಕ ಉಮಾಕಾಂತ್ ರ ಈ ಕನ್ನಡದ ಪ್ರಯತ್ನಕ್ಕೆ ನಟ ದಿಗಂತ್ ತುಂಬಾ ಸಂತಸಗೊಂಡಿದ್ದಾರೆ. ಚಿತ್ರದಲ್ಲಿ ಅಭಿನಯಿಸುತ್ತಲೇ ತಮ್ಮ ತಂದೆಯ ನೆನಪು ಮಾಡಿಕೊಂಡಿದ್ದಾರೆ. ಕಾರಣ, ತಂದೆಯ-ಮಗನ ಫೀಲಿಗ್ಸ್ ಇಲ್ಲಿ ಅಷ್ಟೊಂದು ಆಳ ಅಷ್ಟೊಂದು ನಿರಾಳ...ಇದನ್ನ ಕನ್ನಡದ ಮಂದಿ ಹೇಗೆ ತೆಗೆದುಕೊಳ್ತಾರೋ ಏನೋ. ಒಳ್ಳೆಯ ಪ್ರಯತ್ನವಂತು ಇಲ್ಲಿ ಆಗ್ತಾಯಿದೆ...

 

-ರೇವನ್ ಪಿ.ಜೇವೂರ್