ಸಹೃದಯರೇ,

ಸಂಪದ ಬಳಗದ ನನ್ನ ಎಲ್ಲಾ ಸಹೋದರರಿಗೂ ನಿಮ್ಮ ಸಹೋದರಿಯಿಂದ ರಕ್ಷಾ ಬಂಧನದ ಶುಭಾಶಯಗಳು! ನಿಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಈ ತಂಗಿಯ ಹಾರೈಕೆ!

ಬೆಚ್ಚನೆಯ ಮಡದಿಯು
ಮನಸಲಿ ಅಚ್ಚೊತ್ತಿರುವಾಗ
ತಂಗಿಯ ನೆನಪುಗಳೆಲ್ಲ
ಕೊರೆವ ಛಳಿಯಂತೆ

ಮನವು ಮರೆತಿರುವಾಗ
ಕಾಲ ಮರೆಯಗೊಡುವುದೆ?
ಬೆಸೆಯಿಸಿದೆ ಬಾಂಧವ್ಯವ
ರಾಖಿಯ ನೂಲಿನಂತೆ!

- ಸೌಮ್ಯ ಶಾಸ್ತ್ರಿ, ಬೆಂಗಳೂರು