
ಹೌದು..ನಿಮ್ಹಾನ್ಸ್ ಗೆ"
"ಯಾಕೆಂದರೆ ಅಲ್ಲಿನ ನರತಜ್ಞರು ಇವನನ್ನು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ಕೊಡಿಸುತ್ತಾರೆ ಅಂತ ಇರಬಹುದು".
"ಅದೆಲ್ಲ ಸರಿ ನಿಜವಾಗಿ ಇದು ಹೇಗೆ ಶುರುವಾಯ್ತು..? ಯಾಕೆ ತ್ಯಾಂಪ ಹೀಗಾದ ಹೇಳಿ ನನಗೆ... ಮೊದಲಿಂದ." ನಾನೆಂದೆ.
ತ್ಯಾಂಪನ ಹೆಂಡತಿ ಅರ್ಥಾತ್ ತ್ಯಾಂಪಿ ಇದಕ್ಕೆ ಕಾರಣವಾದಘಟನೆಯನ್ನು ವಿವರಿಸಿದ್ದು ಹೀಗೆ
." ಆ ದಿನ ಅಂದರೆ ರವಿವಾರ ೧.೦೮.೧೦ ರಂದು. . ನಮಗೆ ಮಂತ್ರಿ ಮಾಲ್ ನಲ್ಲಿ ಸ್ವಲ್ಪ ಕೆಲಸವಿತ್ತು.ನಾನೂ ಅವರೂ ಹೊರಗಡೆ ಹೋಗಿದ್ದವು
ಹಿಂದಿನ ದಿನ ಸಂಪದದಲ್ಲಿ ಬಂದ ದುಬೈ ಮಂಜಣ್ಣನ " ನೆನಪಿನಾಳದಿಂದ...೧೧, ೧೨ " ಲೇಖನ ( http://sampada.net/blog/manju787/31/07/2010/27204), ಓದಿ ಭಾರೀ ಖುಷಿಯಲ್ಲಿದ್ದರು, ತಾವೇ ಮಂಜಣ್ಣನಾದ ಹಾಗೆ ಅವರ ಫೈಟಿಂಗ್ ಶೈಲಿ ನನಗೆ ಮತ್ತೆ ಮತ್ತೆ ವಿವರಿಸುತ್ತಿದ್ದರು. ಅದು ಅವರು ತನ್ನ ಅಕ್ಕನ ಮರಣದ ದುಃಖಾತಿರೇಕದಿಂದ ಆಗಿದ್ದೆಂದರೂ ಅವರು ಕೇಳಲಿಲ್ಲ. ಅಂತ ಅಲ್ಲಿಗೆ ಹೋದೆವು. ಅಲ್ಲಿ ಮೊದಲಿಂದ್ಲೂ ಅವರಿಗೆ ಆ "ಎತ್ತಣೆ " ನೋಡಿದರೆ ಹೆದರಿಕೆ. ಅದರಲ್ಲಿ ಎಂದೂ ಹೋಗೋದೇ ಇಲ್ಲ. ಆ ದಿನ ಪಕ್ಕದ ಮನೆಯ ಮಕ್ಕಳೂ ಜತೆಗಿದ್ದವು.ಅದರಲ್ಲೇ ಹೋಗೋಣ ಅಂತ ಅವುಗಳ ಒತ್ತಾಯ ಬೇರೆ.ಸರಿ ಅವರನ್ನೂ ಮಕ್ಕಳನ್ನೂ ಒಂದು ಕಡೆ ಬಿಟ್ಟು ನಾನು ಸ್ವಲ್ಪ ಹೊತ್ತು ಬೇರೆ ಕಡೆ ಹೋದೆ ಅಷ್ಟೇ, ಈಗ ಯಾಕೆ ಹೋದೆ ಅನ್ನಿಸಿತು.
ಒಂದು ಕೈಯ್ಯಲ್ಲಿ ಬಕೇಟು ಹಿಡಿದು ಇನ್ನೇನು ಬೇಕೋ ಬೇಡವೋ ಅಂತ ಇನ್ನೇನು ಮೊದಲ ಹೆಜ್ಜೆ ಮೆಟ್ಟಲಿನ ಮೇಲೆ ಇಡಬೇಕು, ಪಕ್ಕದಲ್ಲೇ ಒಂದು ಹೆಂಗಸಿಗೂ ಗಂಡಸಿಗೂ ಜಗಳ( ಪ್ರಾಯಷಃ ಅವಳ ಗಂಡನೇ ಇರಬೇಕು) ಆಗುವುದನ್ನು ನೋಡಿದರು, ಇದನ್ನು ಬಿಟ್ಟು ಅವರ ಜಗಳ ಬಿಡಿಸಲು ಹೊರಟರು. ತಾನೇ ದುಬಾಯಿ ಮಂಜಣ್ಣ ಅಂದ್ಕೊಂಡು ಅದೇ ಶೈಲಿಯಲ್ಲಿ ಹೊರಟರು. ಆದರೆ ಅದದ್ದೇ ಬೇರೆ. ಆತ ಇವರನ್ನೇ ತಪ್ಪು ತಿಳಕೊಂಡು , ಇವರ ಮೇಲೆ ಏರಿಬಂದ ಮೊದಲ ಪೆಟ್ಟು ಅವನೇ ತಿಂದ ಜೋರಾಗಿಯೇ, ಆದರೆ ನಂತರದ್ದು ಮಾತ್ರ ಇವರ ಬಾರಿ, ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿಯಾಯ್ತು ಇವರ ಗತಿ,
ಅದೂ ಅಲ್ಲದೇ ನಂತರ ಇವರು "ಎತ್ತಣೆ" ( ಎಲಿವೇಟರ್) ಮೇಲೆ ಯಾವ ಧ್ಯಾನದಲ್ಲಿ ನಿಂತರೋ, ಅದರ ಮೇಲೆ ಒಂದು ಕಾಲು ಮಾತ್ರ ಇತ್ತು, ಅನಂತರ ಏನಾಯ್ತೊ ಗೊತ್ತಿಲ್ಲ, ಕಾಲು ಮೇಲೆ ತಲೆ ಕೆಳಗೆ ಆಗಿ , ಬಕೇಟು ನೆಲಕ್ಕೆ ತಾಗಿದ ಶಬ್ದ ಜೋರಾಗಿಯೇ ಇತ್ತು( ಜತೆಯಲ್ಲಿ ಇವರೂ ಇದ್ದರಲ್ಲ), ಪಕ್ಕದಲ್ಲೇ ನಿಂತಿದ್ದ ಗೂರ್ಖಾ "ಎತ್ತಣೆ" ( ಎಲಿವೇಟರ್).... ಯನ್ನು ನಿಲ್ಲಿಸದಿದ್ದರೆ ಗೊತ್ತಿಲ್ಲ ಏನಾಗುತ್ತಿತ್ತೋ. ಅಂತು ಹಿಡಿದು ಎತ್ತಿದೆವು ಆಗೇನೋ ಸರಿಯಿದ್ದರು ಅನ್ನಿಸಿತ್ತು .
ಸ್ವಲ್ಪ ಕಾಲ ಅವರನ್ನು ಅಲ್ಲಿಯೇ ಪಕ್ಕದ ಮನೆಯಮಕ್ಕಳ ಜತೆ ಬಿಟ್ಟು ನಾನು ನನ್ನ ಪರ್ಚೇಸಿಂಗ್ ಗೆ ಸ್ವಲ್ಪ ಕಾಲ ಬೇರೆ ಫ್ಲೋರ್ ಗೆ ಹೋಗಿದ್ದೆ. ವಾಪಾಸ್ಸು ಬಂದು ನೋಡಿದರೆ ... ಪೂರ್ತಿ ಬದಲಾಗಿದ್ದಾರೆ ಅನ್ನಿಸಿತು.್
"ಸ್ವಲ್ಪ ಕಾಲ ಎಂದರೆ ನಾನು ಕೇಳಿದೆ...?"
"ಬರೇ ನನ್ನ ಎರಡು ಐಟಮ್ ಖರೀಧಿಸಿದೆ ಅಷ್ಟೇ"
"ಅಂದರೆ ಸುಮಾರು ಎರಡು ಮೂರು ಗಂಟೆಗಳಾಗಿದ್ದಿರಬಹುದು ಅಷ್ಟೇ"
"ಅಷ್ಟೇ"
ಸರಿ ನೀವು ಬಂದು ನೋಡಿದಾಗ ಏನಾಗಿತ್ತು..?
"ನಾನು ಬಂದು ನೋಡುವಾಗ ಪ್ರಳಯವೇ ಬಂದಂತಾಗಿತ್ತು"
"ಯಾಕೆ..?"
"ನನ್ನವರನ್ನು ಮಂತ್ರಿ ಮಾಲ್ ನ ಗೇಟ್ ನ ಹೊರಗಡೆ ಕಳುಹಿಸಿದ್ದರು, ಅಲ್ಲಿಯೇ ಪುನಹ ಒಳಕ್ಕೆ ಬರ ಬಾರದ ಹಾಗೆ ಪಕ್ಕದಲ್ಲೇ ಸೆಕ್ಯುರಿಟಿ ಕೂಡಾ ಕಾಯುತ್ತಿದ್ದರು."
"ಸರಿ ಆಮೇಲೆ..?"
"ಅವರ ಕೈಯ್ಯಲ್ಲೊಂದು ಪತ್ರವಿತ್ತು."
"ಪತ್ರವಾ ? ಯಾವ ಪತ್ರ..?"
"ನನಗೂ ಅವರಿಗೂ ಮುಂದಿನ ೬ ತಿಂಗಳು ಮಾಲ್ ನೊಳಕ್ಕೆ ಪ್ರವೇಶ ನಿಷೇಧ ಹೇರಿದ್ದ ಪತ್ರವದು."
ತ್ಯಾಂಪನ ಹೆಂಡತಿ ಕೊಟ್ಟ ಪತ್ರ ಓದಿದೆ ಒಕ್ಕಣೆ ಸರಿ ಸುಮಾರು ಹೀಗಿತ್ತು
ಮಿ ತ್ಯಾಂಪ ಹಾಗೂ ಅವರ ಧರ್ಮ ಪತ್ನಿಗೆ ಮುಂದಿನ ಆರು ತಿಂಗಳ ಕಾಲ ಮಂತ್ರಿ ಮಾಲ್ ನೊಳಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಾರಣ ಹೀಗಿ
೧. ಹೆಂಗಸರ ಬಾಸ್ಕೇಟಿನಲ್ಲಿ ರೇಝರ್ ಗಳನ್ನೂ ಗಂಡಸರ ಬಾಸ್ಕೇಟಿನಲ್ಲಿ ಹೆಂಗಸರ ಒಳ ಉಡುಪುಗಳನ್ನೂ ಅವರ ವಸ್ತುಗಳ ಜತೆ ಸೇರಿಸಿ ಕೋಲಾಹಲವನ್ನುಂಟು ಮಾಡಿದ್ದಾರೆ.
೨. ಕೆಲವು ಗ್ರಾಹಕರ ಕಾಲ ಕೆಳಗಿನಿಂದ ಟೋಮೇಟೋ ಸಾಸ್ ಉದ್ದಕ್ಕೂ ಚೆಲ್ಲಿ ಅವರಲ್ಲಿ ಹಾಗೂ ನಮ್ಮ ಸ್ಟಾಫ್ ನವರಲ್ಲಿ ಆತಂಕ ಸೃಷ್ಟಿಸಿದ್ದಾರೆ.
೩. ಡ್ರೆಸ್ಸಿಂಗ್ ರೂಮ್ ನಲ್ಲಿ ಕೆಲಕಾಲವಿದ್ದು ಅಲ್ಲಿಂದ "ಹೇಯ್ ಇಲ್ಲಿ ಟೊಯ್ಲೆಟ್ ಪೇಪರ್ ಇಟ್ಟಿಲ್ಲ " ಅಂತ ಗಲಾಟೆ ಮಾಡಿದ್ದಾರೆ.
೪. ಮಕ್ಕಳ ಆಟಿಕೆಯ ವಿಭಾಗದಲ್ಲಿ ಎಲ್ಲಾ ಹಲವಾರು ಆಟಿಕೆಗಳ ಸ್ವಿಚ್ಚುಗಳನ್ನು ಅದುಮಿ ಅಲ್ಲಿಗೆ ಬಂದ ಮಕ್ಕಳನ್ನೂ ದೊಡ್ದವರನ್ನೂ ಕಂಗಾಲು ಮಾಡಿಸಿದ್ದಾರೆ
೫. ಹೆಂಗಸರು ಮಕ್ಕಳ ಮೇಲೆ ಎಲ್ಲೆಂಲ್ಲಿಂದಲೋ ಹಾವು ಜಿರಲೆ ಹಲ್ಲಿ( ಕೃತಿಮ) ಬೀಳಿಸಿ ಹಂಗಾಮಾ ಮಾಡಿದ್ದಾರೆ.
೬. ಹೆಂಗಸರು ಗಂಡಸರು ಎಂತ ಚೇಂಜ್ ರೂಮಿನ ಹೊಸ ಬೋರ್ಡಗಳನ್ನು ಬದಲಿಸಿ ಹಲವರನ್ನು ಬೆಚ್ಚಿ ಬೀಳಿಸಿದ್ದಾರೆ.
೭. ಮಕ್ಕಳ ವಿಭಾಗದ ಎಲ್ಲಾ ಮಕ್ಕಳಿಗೂ ಒಂದೊಂದು ಐಸ್ ಕ್ರೀಂ ಉಚಿತ ಎಂದು ಧ್ವನಿವರ್ಧಕದಲ್ಲಿ ಮಕ್ಕಳ ದನಿಯಲ್ಲಿ ಹೇಳಿಸಿ ಕೊಡದೇ ಇದ್ದಾಗ ಅವರೆಲ್ಲಾ ಅಳುವಂತೆ ಮಾಡಿ ಸತ್ಯಾ ನಾಶ್ ಮಾಡಿದ್ದಾರೆ
೮. ಪ್ರಿಂಟರ್ ಪೇಪರಗಳನ್ನು ಟೋಯ್ಲೆಟ್ ಪೇಪರ್ಗಳನ್ನೂ ಬದಲಿಸಿ ನಮ್ಮ ಸ್ಟಾಫ್ ಗಳನ್ನು ಬೇಸ್ತು ಬೀಳಿಸಿದ್ದಾರೆ.
೯. ಮಾಲ್ ನೊಳಗಿನ ಎಲ್ಲಾ ಗ್ರಾಹಕರ ಬಾಸ್ಕೇಟಿನಲ್ಲಿ ಮಿ ತ್ಯಾಂಪನವರು ಒಂದೊಂದು ಕಂಡೋಮ್ ಪ್ಯಾಕೇಟನ್ನು ಅವರಿಗೆ ಗೊತ್ತಿಲ್ಲದ ಹಾಗೆ ಹಾಕಿ ಅವರಲ್ಲಿ ಗಲಿಬಿಲಿ ಮೂಡಿಸಿರುತ್ತಾರೆ
೧೦. ಇಷ್ಟೂ ಸಾಲದೆಂಬಂತೆ ನಿಂತ ಫ್ಯಾನುಗಳನ್ನು ಒಮ್ಮೆಲೇ ಚಾಲೂ ಮಾಡಿಸಿ ಹಲವರ ವಿಗ್ ಗಳನ್ನು ಉದುರಿಸಿ ಅವರ ಮಂಡೆ ಬೋಳು ಮಾಡಿ ಎಲ್ಲರೂ ನಗುವಂತೆ ಮಾಡಿದ್ದಾರೆ.
ಈ ಎಲ್ಲಾ ಮೇಲಿನ ಕಾರಣಗಳಿಂದ ನಮ್ಮ ಎಲ್ಲಾ ಗ್ರಾಹಕರ ಸುಖ ಹಾಗೂ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಎಲ್ಲಾ ಬ್ರಾಂಡ್ ಮಾಲುಗಳಲ್ಲಿ ತಮ್ಮ ಹಾಗೂ ತಮ್ಮವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ದಯವಿಟ್ಟು ಸಹಕರಿಸ ತಕ್ಕದ್ದು.
ನನಗೆ ಸಂಶಯಬಂತು ಈ ಮೇಲಿನವುಗಳು ತ್ಯಾಂಪನ ಕೆಲಸವಾಗಿರಲು ಸಾಧ್ಯವೇ ಇಲ್ಲ, ತ್ಯಾಂಪ ಇನ್ನೊಬ್ಬರನ್ನು ಹಳ್ಳಕೆ ಬೀಳಿಸಿ ತಾನು ಎಂದೂ ನಗಲಾರ, ಬೇಕಾದರೆ ತಾನೇ ಬಿದ್ದು ನಕ್ಕಾನು...
******** *********** ************
ಸೀನ ಬಸ್ಸಿನಿಂದಿಳಿದು ಅಟೋರಿಕ್ಷಾ ದತ್ತ ನಡೆದ.
ಬರ್ತೀಯೇನಪ್ಪಾ..
ಸರಿ ಎಲ್ಲಿಗೆ ಸಾರ್
ಹೇಳಿದ
ಆಟೋ ಹೊರಟಿತು.
ಅದು ಹೋಗುವ ರಭಸ ಸೀನನಿಗೆ ಸಂಶಯಕ್ಕಿಟ್ಟುಕೊಂಡಿತು.
ಬೆಳಗಿನ ಹೊತ್ತು, ಅಲ್ಲೊಂದು ಇಲ್ಲೋಂದು ವಾಹನ ಮಾತ್ರ ರಸ್ತೆಯಲ್ಲಿ ಓಡಾಡುತ್ತಿವೆ, ಆದರೂ ಈತ ಒಂಬತ್ತೂವರೆ ಹತ್ತು ಗಂಟೆಯ ರಸ್ತೆಯಲ್ಲಿದ್ದಹಾಗೆ ಓಡಿಸುತ್ತಿದ್ದಾನೆ, ಅದೂ ಅರ್ಧ ಕಣ್ಣು ಮುಚ್ಚಿ, ನಿದ್ದೆಯಲ್ಲಿದ್ದಾನಾ ಹೇಗೆ ಅಂತ ಸೀನನಿಗೆ ಸಂಶಯವೂ ಬಂತು. ಹೀಗೇ ಇದ್ದರೆ ತನ್ನ ಅಸ್ತಿತ್ವಕ್ಕೆ ಸಂಚಕಾರ ವೆಂದರಿತ ಸೀನ ಮಿಣ್ಣಕ್ಕೆ ಅದರಿಂದ ಇಳಿದು ಸ್ವಲ್ಪ ಹೊತ್ತು ನಿಂತ. ಅದೃಷ್ಟಕ್ಕೆ ಸ್ವಲ್ಪ ದೂರದಲ್ಲಿ ಇನ್ನೊಂದು ಅಟೋ ಬರುವುದು ಕಂಡಿತು.ಅದರಲ್ಲಿ ಕುಳಿತು ಮೊದಲಿನದ್ದನ್ನು ಹಿಂಬಾಲಿಸಲು ಹೇಳಿದ. ಮುಂದಿನ ವ್ರತ್ತದಲ್ಲಿ ಮೊದಲಿನ ಆಟೋದವ ಹಿಂದಕ್ಕೆ ನೋಡಿ ಗಾಬರಿಯಿಂದ ತನ್ನ ಆಟೋದಿಂದ ಇಳಿದು ಅರ್ಧ ಆಶ್ಚರ್ಯ, ಅರ್ಧ ಹೆದರಿಕೆಯಿಂದ ಅದರ ಸುತ್ತ ತಿರುಗುತ್ತ ಇದ್ದು ಬಿಟ್ಟ.
ಸರಿಯಪ್ಪ ಇನ್ನು ಮುಂದೆ ಸೀದಾ ಹೋಗಿ ಬಲಗಡೆ ತಿರುಗು ಎಂದ ಸೀನ.
ತ್ಯಾಂಪನ ರಾಮಾಯಣ ೧ ಕೊಂಡಿ: http://sampada.net/blog/gopinatha/04/08/2010/27279
ಪ್ರತಿಕ್ರಿಯೆ (6)