ಪತ್ನಿ : ರೀ ಇವತ್ತು ನೀವು ಸಂಜೆ ಬಿಡುವು ಮಾಡಿಕೊಂಡು ನನ್ನ ಜೊತೆ ಲಾಲ್ ಬಾಗ್ ಬರಬೇಕು.
ಪತಿ : ಯಾಕೆ, ಮದುವೆಗೆ ಮುಂಚೆ ಅಲ್ಲೇ ಇರುತ್ತಿದ್ದೀವಲ್ವೇ
ಪತ್ನಿ : ಅದಕ್ಕಲ್ರೀ, ನನ್ನ ಫ್ರೆಂಡ್ಸ್. ಅದ್ಯಾವ ಗೂಬೆ ನನ್ಮಗ ನಿನ್ನನ್ನ ಕಟ್ಟಿಕೊತಾನೆ ಅಂತಿದ್ರು. ಅದಕ್ಕೆ ನಿಮ್ಮನ್ನ ಅವರಿಗೆ ತೋರಿಸಕ್ಕೆ.
ಪತಿ : ಆಹ್. ಅಂತೂ ನಿನ್ನನ್ನ ಕಟ್ಟಿಕೊಂಡ ಮೇಲೆ ಗೂಬೆ ಅಂತಾ ಆಯ್ತು ಅನ್ನು.
ಸರಿ ಪತಿಯನ್ನು ತನ್ನ ಸ್ನೇಹಿತರಿಗೆ ತೋರಿಸಿದ್ಲು. ಆಮೇಲೆ ಪತ್ನಿಗೆ ರಾತ್ರಿ ಅವಳ ಸ್ನೇಹಿತೆಯರಿಂದ ಮೊಬೈಲ್ಗೆ ಕಾಲ್
ಸ್ನೇಹಿತೆ : ಏಯ್, ನಿನ್ನ ಗಂಡ ೊಂದು ತರಾ ಹಸು ಇದ್ದಂಗೆ. ಪಾಪ ಏನಂದ್ರೂ ಅನ್ಸುಕೊಳತ್ತೆ ಅಲ್ವಾ.
ಪತ್ನಿ : ಹಸು ಇದ್ದಂಗೆ ಆದ್ರೆ ಹಸು ಅಲ್ಲ ಕಣೇ, ಸಿಟ್ಟು ಬಂದ್ರೆ ಅಡುಗೆ ಮನೆ ಸಾಮಾನೆಲ್ಲಾ ಹಾಲಿನಲ್ಲಿ ಇರುತ್ತೆ.
ಸ್ನೇಹಿತೆ : ನಿನ್ನ ಗಂಡ ನೊಡೋಕ್ಕೆ ಹಳೇ ಮಾಡಲ್ ಅಂಬಾಸಿಡರ್ ಗೆ ಟಿಂಕರಿಂಗ್ ಮಾಡ್ದಂಗೆ ಕಾಣ್ತಾರಲ್ವಾ. ಮೂಗು ನೋಡಿದ್ರೆ ಬ್ಯಾನೆಟ್ ಇದ್ದಂಗೆ ಇದೆ. ಕಣ್ಣು ಸ್ಟ್ರಕ್ ಆಗಿರೋ ವೈಪರ್ ತರಾ ಇದೆ. ಇನ್ನು ಬಾಯಿ ಅನ್ನೋದು ಬಾಲ್ಡ್ ಆಗಿರೋ ಟೈರ್ ಬಿಟ್ಕಂಡಂಗೆ ಇದೆ ಅಲ್ವೆನೇ.
ಪತ್ನಿ : ಹೂ ಕಣೆ. ಅದು ಹಳೇ ಅಂಬಾಸಿಡರ್. ನಾನು ಮಾರುತಿ ಆಮ್ನಿ. ಒಂತರಾ ಷೋರೂಂನಲ್ಲಿ ಇಟ್ಟಿರೋ ಹಳೇ ಮಾಡಲ್ ಅನ್ನು.
ಹೌದು ನಿನ್ನ ಮದುವೆ ವಿಷಯ ಎಲ್ಲಿಗೆ ಬಂತೇ.
ಸ್ನೇಹಿತೆ : ನಾನು ಒಬ್ಬ ಹುಡುಗನ್ನ ನೋಡಿದ್ದೀನಿ. ಆದ್ರೆ ಸ್ವಲ್ಪ ದಪ್ಪ, ಸ್ವಲ್ಪ ಕರ್ರಗೆ,ಸ್ವಲ್ಪ ಹಲ್ಲು ಉಬ್ಬು ಇದೆ. ಇವತ್ತು ನೋಡಕ್ಕೆ ಹೋಗ್ತಾ ಇದೀನಿ ಕಣೇಮಾ
ಪತ್ನಿ : ಅಲ್ವೇ ನಿನಗೆ ನೋಡಿದ್ರೆ 35ವಯಸ್ಸು. ಹುಡಗನ್ನ ಅಂತೀಯಲ್ಲಾ. ಒಂದು 40ವರ್ಷ ಅಂಕಲ್ ಇರಬಹುದಾ.
ಸ್ನೇಹಿತೆ : ಅಲ್ಲೇ ಹತ್ತಿರ ಇದೆಯಾ
ಪತ್ನಿ : ಒಂದು 42
ಸ್ನೇಹಿತೆ : ಇನ್ನೇನು ಬಂದೇ ಬಿಟ್ಟೆ
ಪತ್ನಿ : ಒಂದು 45
ಸ್ನೇಹಿತೆ : ಇನ್ನೊಂದು ಸ್ವಲ್ಪ
ಪತ್ನಿ : ಏನು 50.
ಸ್ನೇಹಿತೆ : ಹೂ ಕಣೆ. ಸರಿಯಾಗಿ ಮೊನ್ನೆ ಆಗಸ್ಟ್ ಗೆ 50 ಅಂತೆ.
ಪತ್ನಿ : ಹಾಗಾದರೆ ನಿನ್ನ ಗಂಡ ಮರಳು ಹೊಡೆಯೋ ಲಾರಿ ತರಾ ಅನ್ನು. ಯಾಕೇಂದ್ರೆ ಮರಳು ಹೊಡೆದು ಹೊಡೆದು ಲಾರಿ ಪಾರ್ಟ್ ಎಲ್ಲಾ ಲೂಸ್ ಆಗಿರುತ್ತೆ ಅಲ್ವಾ. ಆತರಾ ಅನ್ನು. ನನ್ನ ಗಂಡಂಗೆ ಅಂಬಾಸಿಡರ್ ಅಂತಾಳೆ ಅವಳು ನೋಡಿದ್ರೆ ಲಾರಿಯನ್ನು ಕಟ್ಟಿಕೊಂತಾ ಇದಾಳೆ. ಇಡೇ ಪೋನ್.
ಪತಿ : ಯಾರೇ ಅದು.
ಪತ್ನಿ : ನನ್ನ ಸ್ನೇಹಿತೆ ಕಣ್ರೀ, ನಿಮ್ಮನ್ನ ಬಹಳ ಹೊಗಳಿದ್ಲು.
ಪತಿ : ಹೌದಾ, ಏನೋ ಮದುವೆ ಅಂತಾ ಕೇಳಿದಂಗೆ ಆಯ್ತು.
ಪತ್ನಿ : ಅವಳು ಗಂಡು ನೋಡಕ್ಕೆ ಹೋಗ್ತಾ ಇದ್ದಾಳಂತೆ, ಹುಡಗಂಗೆ ಕೇವಲ 50ವರ್ಷ ವಯಸ್ಸು ಅಂತೆ.
ಪತಿ : ನನ್ನ ತರಹ ಹೆಂಡ್ತಿ ಸತ್ತಿರೋ ಹುಡಗಂಗೆ ಹುಡಕಕ್ಕೆ ಹೇಳು. ಸಣ್ಣ ವಯಸ್ಸಿನವರು ಸಿಗಬಹುದು.
ಪತ್ನಿ : ಹಾಗಾದರೆ ನಿಮಗೆ ಮುಂಚೆ ಮದುವೆಯಾಗಿತ್ತಾ.
ಪತಿ : ಹೂಂ ಕಣೆ. ನನ್ನ ಆಫೀಸಿನಲ್ಲಿ ಅದ್ಯಾವ ಹೆಣ್ಣು ಗೂಬೆ ನಿನಗೆ ಸಿಗತ್ತೋ ಅಂದಿದ್ರು. ಅದಕ್ಕೆ ನಿನಗೆ ಅವತ್ತು ಆಫೀಸಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದು. ಹಾಗೇ ಮದುವೆಯಾಗ್ತೀನಿ ಅಂತಾ ಬೆಟ್ಟು ಕಟ್ಟಿದ್ದೆ. ಅದರಲ್ಲೇ ನಿನಗೆ ಪಾರ್ಟಿ ಕೊಡಸಿದ್ದು.
ಪತ್ನಿ : ಆಹ್. ಒಳ್ಳೇ ಗೂಬೆ ಸಂಸಾರ ಆಯ್ತಲ್ರೀಈಈಈಈಈಈಈಈಈಈ.
ಪ್ರತಿಕ್ರಿಯೆ (4)