ಜಾಕಿ ನಮಗೆಲ್ಲಾ ತಿಳಿದಿರುವಂತೆ ದುನಿಯಾ ಸೂರಿ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಚಿತ್ರ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದು ಪುನೀತ್ ಹೋಂ ಬ್ಯಾನರ್ ಚಿತ್ರ. ಇದರ ಬಗ್ಗೆ ಒಂದಷ್ಟು ವಿಷಯ ತಿಳಿಯೋಣ.
ಇದರ ಕತೆ ಬರೆಯಲು ಸೂರಿ ಪಂಚತಾರಾ ಹೋಟೆಲ್ ಬುಕ್ ಮಾಡಿ ಸುಮಾರು ಎರಡು ತಿಂಗಳು ಇದ್ದರಂತೆ. ಅಲ್ಲಿನ ಹೋಟೆಲ್ ಬಿಲ್, ಚಾ, ಸಿಗರೇಟಿನ ಖರ್ಚಿನಲ್ಲಿ ಮತ್ತೊಂದು ಆರ್ಟ್ ಫಿಲಂ ತೆಗೀಬೋದಿತ್ತು ಅಂತಾರೆ. ಸರಿ ಕತೆ ಸಿದ್ದವಾಯಿತು. ಅಮ್ಮಾ ಈ ಚಿತ್ರದ ಹೆಸರು "ಜಾಕಿ" ಅಂತಾ, ಅಪ್ಪುವರನ್ನು ಹಾಕಿ ಕೊಂಡರೆ ಉತ್ತಮ ಕಾಸು ಬರುತ್ತೆ. ಹಂಗೇ ನಾನು ಫೇಮಸ್ ಆಗ್ತೀನಿ ಅಂದ್ರಂತೆ. ನಮ್ಮ ರಾಘಣ್ಣನ ಹಾಕ್ಕೊಂಡು ತೆಗೀಬಹುದಲ್ಲಾ. ಆವಾಗ ಚಿತ್ರದ ಟೈಟಲ್ ನ್ನು "ಜಕಾನ್ ಜಾಕಿ" ಅಂತಾ ಇಡಬೇಕಾಗುತ್ತೆ. ಆಮೇಲೆ ಚಿತ್ರದ ತುಂಬೆಲ್ಲಾ ಬರೀ ಕಾಮಿಡಿ ಆರ್ಟಿಸ್ಟ್ ಗಳೇ ಆಗಿ ಬಿಡುತ್ತಾರೆ ಅಮ್ಮಾ. ಅದಕ್ಕೆ ಅಪ್ಪುವರನ್ನು ಹಾಕಿ ಮಸ್ತ್ ಆಗಿ ಮಾಡೋಣ ಬಿಡಿ. ಖರ್ಚು ಎಷ್ಟಾಗಬಹುದು. ಏನು ಒಂದು 6ಕೋಟಿ. ಬ್ಯಾಂಕಿಗೆ ಬಡ್ಡಿ ಹಾಕಿದರೆ ತಿಂಗಳಿಗೆ 42ಲಕ್ಷ ಬರುತ್ತೆ. ಇನ್ನು ಪಿಚ್ಚರ್ ಹೆಚ್ಚು ಕಮ್ಮಿಯಾದರೆ ನೀವು ಮಾತ್ರ ನಿರ್ದೇಶಕರಾಗಿ ಇರುವುದಿಲ್ಲ ಕಣಪ್ಪಾ. ಮತ್ತೆ. ಈಗ ಹೇಳಲ್ಲಾ ಮೊದಲು ಪಿಚ್ಚರ್ ಹೊರಬರಲಿ ಕಣಪ್ಪಾ. ಅಮ್ಮಾ ಪಿಚ್ಚರ್ ಬಗ್ಗೆ ನೀವು ಯೋಚನೆನೇ ಮಾಡಬೇಡಿ.

ಸರಿ ಮಹೂರ್ತದ ದಿನ. ಪೂಜೆ ಎಲ್ಲಾ ಆಯ್ತು. ದೇವರು ಬಲಗಡೆ ಪ್ರಸಾದ ಆಯ್ತಂತೆ. ಶುಭಸಕುನ. ಮೊದಲನೆ ದಿನಾನೇ ಬೈಕನ್ನು ಮೇಲೆ ಹಾರಿಸೋದು. ಅದೂ ಕಂಠೀರವ ಸ್ಟುಡಿಯೋದಲ್ಲಿ. ಕ್ರೇಜಿ ಸ್ಟಾರ್, ರವಿ ಅಂಕಲ್ ಕ್ಲಾಪ್ ಮಾಡಿದರು. ಎರಡು ಟೇಬಲ್ ಇಟ್ಟು ಅದರ ಮೇಲೆ ಹಲಗೆ ಇಟ್ಟಿದ್ದರು. ಇದರ ಮೇಲೆ ಬೈಕ್ ಹಾರುತ್ತೆ. ಏ ಡ್ಯೂಪ್ ಕರೀರಿ. ಸರ್ ನನಗೆ ಭಯವಾಗುತ್ತೆ ಅದ್ನಂತೆ ಡ್ಯೂಪ್ ಆರ್ಟಿಸ್ಟು. ಸರಿ ನಾನೇ ಮಾಡ್ತೀನಿ ಅಂದ್ರು ಅಪ್ಪುರವರು. ಲೈಟ್ಸ್, ಕ್ಯಾಮೆರಾ, ಆಕ್ಸನ್ ಅಂತಿದ್ದಾಗೆನೇ ಬೈಕ್ ಸ್ಪೀಡಾಗಿ ಬಂದು ಹಲಗೆ ಹತ್ತಿರ ಡುರ್,ಡುರ್ ಅಂತಾ ಆಫ್ ಆಯ್ತು. ಸೈಲೆನ್ಸರಲ್ಲಿ ಕಸ ಇತ್ತಂತೆ. ಇದು ಶುಭ ಸಕುನ ಅಂದ್ರು ಅಲ್ಲಿದ್ದ ಮಹಾಶಯರೊಬ್ಬರು. ಮತ್ತೆ ಅಪ್ಪು ವಾಪಸ್. ಪುನರ್ ಪ್ರತಿಷ್ಠಾನ. ಆಕ್ಸನ್, ಪುನೀತ್ ಬೈಕ್ ಜೋರಾಗಿ ಬಂದು ಹಾರಸೇ ಬಿಟ್ಟರು. ಮೇಲೆ ಯಾರು ನೋಡಲೇ ಇಲ್ಲ. ಸೂರ್ಯನ ಬೆಳಕಿಗೆ ಸೀನು ಬರುತ್ತೆ ಅಂತಾ. ಎಲ್ಲಾರೂ ಚಪ್ಪಾಳೆ. ಒಬ್ಬರಿಗೊಬ್ಬರಿಗೆ ಹಾರ. ನೋಡಿದ್ರೆ ಪುನೀತೇ ಇಲ್ಲ. ಬೈಕ್ ಹಾರಿಸಿದ್ದ ರಭಸಕ್ಕೆ ಸ್ಟುಡಿಯೋ ಕಾಂಪೌಂಡ್ ದಾಟಿ ಪೀಣ್ಯಾ ರೋಡ್ ಸಿಗ್ನಲ್್ನಲ್ಲಿ. ಜನಾ ಎಲ್ಲಾ, ನೋಡಲಾ ಪುನೀತ್. ಮಧ್ಯಾಹ್ವ ಊಟದ ಟೈಮಿಗೆ ಸ್ಟುಡಿಯೋ ಒಳಗೆ ಬಂದ್ರು. ಸೆಕ್ಯುರಿಟಿ ಕನ್ಫೂಸ್ ಆಗಿದ್ನಂತೆ. ಇದೇನು ಡಬ್ಬಲಾ ಆಕ್ಟಿಂಗಾ. ಬೆಳಗ್ಗೆ ತಾನೆ ಒಳಗೆ ಹೋಗಿದ್ರು, ಇದೇನಿದು. ಏನ್ ಆಕ್ಷನ್ ರೀ ನಿಮ್ದು. ಸ್ವಲ್ಪ ಹೆಚ್ಚು ಕಡಿಮೆಯಾದರೂ ಹೀರೋನೇ ಚೇಂಜ್ ಮಾಡಬೇಕಾಗುತ್ತೆ ಅಂದ್ರಂತೆ ಅಪ್ಪು.
ಸರಿ ಜಾಕಿ ಅಂದರೆ ಜಾಕಿಚಾನ್ ಅಂದ್ಕಂಡು ನಮ್ಮ ಅಪ್ಪುರವರು ದಿನಾ 8ಗಂಟೆ ಜಿಮ್ ನಲ್ಲಿ ವರ್ಕ್ ಮಾಡಿದ್ದೇ ಮಾಡಿದ್ದು. ಮಾಂಸ ಎಲ್ಲಾ ಬಿಟ್ಟು. (ಶ್ರಾವಣ ಬೇರೆ), ಬರೀ ಕೊತ್ತಂಬರಿ ಸೊಪ್ಪ,ಹರವೇ ಸೊಪ್ಪ,ಮೂಲಂಗಿ ಸೊಪ್ಪ ತಿಂದ್ಕಂಡು ಬಾಡಿ ಬಿಲ್ಡ್ ಮಾಡಿದ್ರು. ನಮ್ಮ ಕಟ್ಟಿಗೆ ಒಡೆಯೋ ಕಿಸ್ನಂ ತರಾ. ಸರೀ ಪುನೀತ್ ಸೆಟ್ ಗೆ ಬಂದರೆ ನೆಕ್ಸ್ಟ್ ಪಿಚ್ಚರ್ ಗೆ ಚಾನ್ಸ್ ಕೊಡ್ತೀನಿ ಆಮೇಲೆ ಬಾಪ್ಪಾ ಅಂದ್ರಂತೆ ಸೂರಿ. ರೀ ನಾನು ಅಪ್ಪು. ಓಹ್ ಸಾರಿ ಸಾರ್ ನಿಮ್ಮ ಬಾಡಿ ನೋಡಿ ಕನ್ಫೂಸ್ ಆಗ್ಬಿಟ್ಟೆ. ಹಾಗೇ ಅಪ್ಪುರವರ ಕೂದಲನ್ನು ಡಿಸೈನ್ ಮಾಡಿ ಮಾಡಿ ಮುಂದಿನ ಚಿತ್ರಕ್ಕೆ ವಿಗ್ ಹಾಕಳ್ಳೋ ಲೆವೆಲ್ ಗೆ ತಂದಿದ್ದಾರಂತೆ.
ಇಷ್ಟೆಲ್ಲಾ ಯಾಕೆ ಬಾಡಿ ಇಳಸಕ್ಕೆ ಹೋದ್ರಿ. ಇದು ಸಂಸಾರ ಭರಿತ, ಈಸ್ಟ್ ಮನ್ ಕಲರ್ ನಲ್ಲಿ ತೆಗಿತಿರೋ ಚಿತ್ರ. ಆಮೇಲೆ ದುನಿಯಾ ತರಾ ಕಾಡಲ್ಲಿ ಸೂಟಿಂಗ್, ಹಾಡಿಗೆ ಮಾತ್ರ ಫಾರಿನ್. ಅಯ್ಯೋ ಸುಮ್ನೆ ಬಾಡಿ ಇಳಿಸಿದನಲ್ಲಪ್ಪಾ ಅಂದ ಅಪ್ಪು ತಕ್ಷಣವೇ ಮನೆಗೆ ಪೋನ್ ಮಾಡಿ ಟೇಲರ್ ಹತ್ತಿರ ಯಾವ ಪ್ಯಾಂಟಿಂದೂ ಸೊಂಟ ಹಿಡಿಬೇಡ ಅಂತಾ ಹೇಳು. ಮತ್ತೊಂದು ತಿಂಗಳಲ್ಲಿ ನಾರ್ಮಲ್ ಆಗ್ತೀನಿ ಕಣೇ ಅಂತ ಅವರ ಹೆಂಡ್ತಿಗೆ ಹೇಳಿದ್ರಂತೆ. ಏಯ್ ಒಂದು 4ಪ್ಲೇಟ್ ಚಿಕನ್ ತೊಗಂಡು ಬಾಪ್ಪಾ.
ಸರಿ ಪಿಚ್ಚರ್್ನಲ್ಲಿ ಒಂದು ಹತ್ತು ಫೈಟ್, 7ಸಾಂಗ್, ಕತೆ ಮಾತ್ರ ಕಾಲು ಗಂಟೆ. ಇದರಲ್ಲಿ ಆಲ್ ಮೋಸ್ಟ್ ಅಪ್ಪು ನಟಿಸಿದ ಎಲ್ಲಾ ಚಿತ್ರಗಳ ಸೀನ್ ಇದೆಯಂತೆ. ಚಿತ್ರದಲ್ಲಿ ಅಪ್ಪುರವರು ನೆಲದ ಮೇಲೆ ಇರದೇ ಇಲ್ವಂತೆ, ಅಷ್ಟೊಂದು ಫೈಟ್. ಎರ್ರಾಬಿರ್ರಿ. ಜನಕ್ಕೆ ಇದು ಸರ್ಕಸ್ಸೋ ಅಥವಾ ಫಿಲ್ಮ್ ಅನ್ನು ಅನುಮಾನ ಕಡೆಗೆ ಬರುವ ಮಟ್ಟಿಗೆ ಚಿತ್ರ ಇದೆಯಂತೆ. ಸೂರಿ ಮಾತ್ರ ಬಹಳ ತಲೆಕಡೆಸಿಕೊಂಡು ತೆಗೆದಂತಹ ಚಿತ್ರ ಅಂತೆ. ಈ ಕಡೆ ದುನಿಯಾ ವಿಜಿ ಬೇಜಾರಾಗಿದಾರಂತೆ. ಮೊದಲು ನಾನು ಬೇಕಾಗಿತ್ತು. ಈಗ ಬೇಡವಾ ಅಂತಾ ಗೊಣಗ್ತಾ ಇದಾರಂತೆ. ಆಮೇಲೆ ಈ ಚಿತ್ರಕ್ಕೆ ಭಟ್ಟರು ಒಂದು ಹಾಡು ಬರೆದಿದಾರೆ. ಪಂಚರಂಗಿಯಲ್ಲಿ "ಗಳು" ಇದ್ದಂತೆ "ತಾವು" ಅಂತಾ ಇದೆಯಂತೆ. ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಬಹಳ ಕಷ್ಟಪಟ್ಟು ಸಂಗೀತ ನೀಡಿದ್ದಾರಂತೆ. ಕಾರಣ ಫೈಟಿಗೆ ಡೊಳ್ಳು,ಹಲಗೆನೆ ಜಾಸ್ತಿ ಬಳಸಲಾಗಿದೆಯಂತೆ. ಅವರಿಗೆಲ್ಲಾ ಪಾಕೇಟ್ ಸಪ್ಲೆ ಮಾಡಿ ಮಾಡಿ ಪ್ರೊಡಕ್ಷನ್ ಮ್ಯಾನೇಜರ್ ಬೆಳಗ್ಗೆನೇ ಒಂದು ಪ್ಯಾಕೆಟ್ ಇಲ್ಲಾ ಅಂದ್ರೆ ತಲೇನೇ ಓಡೋಲ್ಲಾ ಅಂತಾರಂತೆ. ಅಂತೂ ಚಿತ್ರ ಸಕತ್ತಾಗಿದೆ. (ತಮಾಷೆಗೆ)
ನಿಜಕ್ಕೂ ಚಿತ್ರ ಚೆನ್ನಾಗಿದೆಯಂತೆ. ವಿಭಿನ್ನವಾಗಿದೆ ಅಂತಾ ಈಗಾಗಲೆ ಮಾಧ್ಯಮಗಳಲ್ಲಿ ಬರುತ್ತಾ ಇದೆ. ನೋಡಿ ಎಂಜಾಯ್ ಮಾಡಿ.
ಚಿತ್ರ ಕೃಪೆ : ಅಂತರ್ ಜಾಲದಿಂದ
ಪ್ರತಿಕ್ರಿಯೆ (1)