ಈ ಕಥಾಮಾಲಿಕೆಯನ್ನು ನಾಲ್ಕು ಕಂತುಳಲ್ಲಿ ಪ್ರಕಟಿಸುತ್ತಿದ್ದೇನೆ.
ಪ್ರತಿ ಗುರುವಾರದಂದು ಒಂದೊಂದು ಕಂತು ಪ್ರಕಟುಸುತ್ತಿದ್ದೆನೆ. ಇದು ನನ್ನ ಎರಡನೇ ಪ್ರಯತ್ನ.
ಸಂಪದಗರಿಂದ ಪ್ರೋತ್ಸಾಹವಿರಲಿ ಎಂದು ಆಶಿಸುತ್ತೇನೆ.
ವಂದನೆಗಳು ಮಧ್ವೇಶ್
ಭಾಗ - ೧
ಶ್ಯಾಮರಾಯರು, ಬೆಳಿಗ್ಗೆ ಎದ್ದು , ವಾಕಿಂಗ್ ಹೊರಟರು,
"ಬರ್ತಾ ಹಾಲು, ಕೊತ್ತಂಬರಿ ಸೊಪ್ಪು ತನ್ನಿ, ಮರೀಬೇಡಿ, ಆಜ್ಞಾಪಿಸಿದಳು" ಸೂಸೆ ಸುಮತಿ.
"ಅಯ್ಯೊ, ನೀನು ಹೋಗಿ ಇವರಿಗೆ ಹೇಳಿದರೆ ಅದು ಬರೋ ಅಷ್ಟರಲ್ಲಿ ಪ್ರಳಯ ಆಗೋಗಿರುತ್ತೆ" ಅಂತ ಕೊಂಕಿಸಿದರು ಅತ್ತೆ ಪದ್ದಮ್ಮ.
"ಆ ವಿಚಾರ, ಈ ವಿಚಾರ ಅಂತ ಆ ತರಲೆ ರಾಮರಾಯರು, ಬೊಳಪ್ಪ ದೊರೆಸಾಮಿ, ಕುಳ್ ಶೆಟ್ಟರು ಎಲ್ಲಾ ಸೇರಿ ಯಾರ್ ಮನೆ ಏಳುಸ್ತಾರೋ
ಏನ್ ರಾಜ್ಯಭಾರದ ಮಾತೋ?! ಬರೋದ್ ಇನ್ ಹತ್ ಘಂಟೆಗೆ"
ಅಂತ ತಮ್ಮ ಯಜಮಾನರಾದ ಶ್ಯಾಮರಾಯರ ವಾಕಿಂಗ್ ಕಂ ಮೀಟಿಂಗ್ ಬಗ್ಗೆ ತಮಗೆ ಇದ್ದ ಅಭಿಪ್ರಾಯ ಒಂದೇ ಉಸಿರಲ್ಲಿ ಹೊರ ಹಾಕಿದರು.
ಇದೆಲ್ಲಾ ಒಂತರಾ ವಯಸ್ಸಾದ ಮೇಲೆ "I miss you" ಅಂತ ಹೇಳೋ ಪರಿ ಇರಬೇಕು. ಆಲ್ವಾ!
ಆದೇನೋ ನಂಗಿನ್ನು ಅಷ್ಟ್ ವಯಸ್ಸೂ ಆಗಿಲ್ಲಾ. ನನ್ ಮಿಸೆಸ್ಸು "ಮಿಸ್ ಯು" ಅಂತ ಹೇಳೂ ಇಲ್ಲಾ!?.
ಶ್ಯಾಮರಾಯರು, ಕೊನೆಮನೆ ಶೆಟ್ರು, ಹಿಂದಿನ ಬೀದಿ ದೊರೆಸಾಮಿ, ಮುಂದಿನ ಬೀದಿ ರಾಮರಾಯರು ಎಲ್ಲಾ ಒಟ್ಟಿಗೆ ಸೀರಿ ವಾಕಿಂಗ್ ಹೋಗಿ ಅಲ್ಲೇ ಇರುವ
ಪಾರ್ಕ್ ನಲ್ಲಿ ಕೂತು ಹರಟೆ ಹೊಡೆದು ಬರುತ್ತಿದ್ದರು.
"ಅಲ್ಲಾರೀ ನೆನ್ನೆ ಏನಾಯಿತು ಆಂದರೆ, ನಾನು ಹೇಳಿದ್ನಲ್ಲ, ಅದೇ ನಮ್ಮ ದೊಡ್ಡಪನ್ದು, ಅಂತ, ವ್ಯೆದಿಕ, ಹೋಗಿದ್ವಿ, ಆ ಪುರೋಹಿತರು ಬರೋಅಷ್ಟರಲ್ಲಿ ನಮ್ಮ ತಿಥಿ ಆಗ್ತಾಇತ್ತು! ಅಲ್ಲಿಂದ ಬರೋವಷ್ಟ್ರಲ್ಲಿ ೩.೩೦ಘಂಟೆ" ಮಾತು ಪ್ರಾರಂಭಿಸಿದರು ಶ್ಯಾಮರಾಯರು.
"ಆದಕ್ಕೇ ಅಲ್ವೆ ನಾನು ಇದೆಲ್ಲಾ ರಗಳೆನೇ ಬೇಡ ಅಂತ ನಮ್ಮಪ್ಪಂದು ಅಮ್ಮಂದು ತಿಥಿ ಮಠದಲ್ಲೇ ಮಾಡೋದು.
ಈಗಿನ ಹುಡುಗರಿಗೆ ಅದೆಲ್ಲಾ ಆಸಕ್ತಿ ಇಲ್ಲಾ, ಯಾರೂ ಬರೋಲ್ಲಾ, ಅದಕ್ಕೆ, ನಾನು ನಮ್ಮನೆಯವಳು ಹೋಗಿ ಬರ್ರೀವಿ" ಎಂದರು ರಾಮರಾಯರು.
"ಅಯ್ಯೋ ನಿಂಮ್ದು ಎಲ್ಲಾದಕ್ಕೊ ಏನಾದರೂ ಇರುತ್ತೆ, ಶ್ಯಾಮರಾಯರು ಏನ್ ಹೇಳ್ತಾರೋ ಕೇಳ್ರಿ" ಎಂದರು ಶೆಟ್ಟರು.
ಮುಂದುವರೆಸಿದರು ಶ್ಯಾಮರಾಯರು,
"ಮನೆಗೆ ಬಂದ್ವಿ, ಬೀಗದ ಕೀ ಇಲ್ಲಾ ಕಣ್ರಿ, ನಮ್ ಪದ್ದುನೋ ಶುರು ಹಚ್ಚಿದಳು, ಬೀಗದ ಕೀ ಎಲ್ ಬಿಟ್ರಿ, ಏಲ್ ಹೋದ್ರು ಹರಟೆ, ಈಗ ಏನ್ ಮಾಡೋದು, ಸುಮೇರು ಬರೋ ವರೆಗೊ ಫುಟ್ ಬಾತೇ ಗತಿ"
"ಇಲ್ಲ ಕಣೇ. ನಾನ್ ತೊಗೊಂಡಿರಲಿಲ್ಲಾ. ಸುಮೇರು ಹತ್ತಿರಾನೇ ಇರಬೇಕು" ಆಂದರೆ ನನ್ ಮೇಲೆ ನಂಬಿಕೆನೆ ಇಲ್ಲಾ.
"ನಿಮ್ ಮರಿವಿಗೆ ಏನ್ ಹೇಳಬೇಕು ಅಂತಾನೆ ಗೊತ್ತಾಗೊಲ್ಲ. ಸುಮ್ನೆ ಎಲ್ಲಾದಕ್ಕೊ ಮುಂದೆ ಹೋಗ್ತಿರಾ ಸತೀಶನಿಗೆ ಗೊತ್ತಾದರೆ ಇನ್ನೇನು ರಾದ್ದಾಂತ ಕಾದಿದೆಯೋ?
"ಸುಮೇರು ಸ್ಕೂಲ್ ವ್ಯಾನ್ ಬಂತು ಇರು. ಅವನ್ ಹತ್ರ ಇರುತ್ತೆ" ಎಂದರು ರಾಯರು.
ಸುಮೇರು ಬಂದ "ಇದ್ಯಾಕ್ ಅಜ್ಜಿ ಹೊರಗೇ ನಿಂತಿದೀಯ ಬಾಗಿಲ್ ತೆಗಿ, ಈಗ್ ಬಂದ್ರಾ ತಾತ ಎಂದ" ಆನ್ನೋದೆ ನನ್ನ ಮೂಮ್ಮಗ.
"ಅರೇ ಇದೇನೊ ನಿನ್ಹತ್ರಾನೂ ಇಲ್ವಾ ಕೀ" ಎಂದರು ಪದ್ದಮ್ಮ.
"ಇಲ್ಲ ಅಜ್ಜೀ" ಎಂದವನೇ , ಅಪ್ಪನಿಗೆ ಫೋನಾಯಿಸಿದ.
ಈಗೆಲ್ಲಾ ಎಲ್ಲರ ಬಳಿ ಮೊಬೆಲ್ ಫೋನ್ ಇವನು ಏನ್ ಹೇಳಿದನೋ, ಅವರಪ್ಪ ಏನ್ ಅರ್ಥ ಮಾಡಿಕೊಂಡನೊ,
ಅರ್ಧ ಘಂಟೆಯಲ್ಲಿ ಬೀಗ ರಿಪೇರಿ ಮಡುವವನ ಜೊತೆ ಬಂದೇ ಬಿಟ್ಟ ದೊಡ್ಡ ಮಗ ಸತೀಶ.
"ಅಯ್ಯೊ ಅಲ್ಲಾರಿ ನೀವೆಲ್ಲೊ ಹುಡುಕಲೇ ಇಲ್ವಾ" ಎಂದರು ತರಲೆ ರಾಮರಾಯರು.
"ಹುಡುಕದೆ ಇರ್ತಾರೆಯೆ, ಅವರು ಏನ್ ಹೇಳ್ತಾರೊ ಕೇಳ್ರಿ" ಸಿಡುಕಿದರು ಶೆಟ್ಟರು.
"ಆದೇ ಹೇಳೋಣಾ ಆಂತ, ತಿರುಗಿ ಬಸ್ ಹಿಡಿದು ಆ ತಿಥಿ ಮನೆಗೆ ಹೋದೆ"
"ಆಲ್ಲಾರಿ ಅರ್ಜ್೦ಟ್ ಇರೋವಾಗ ನಿಂಮ್ದೇನ್ ಮಂಕು ಬುದ್ದಿ , ಆಟೋದಲ್ಲಿ ಹೋಗೋದ್ ಬಿಟ್ಟು. ತಿರುಗಾ ಮೊಗು ತೂರಿಸಿದರು" ರಾಮರಾಯರು,
"ನಮ್ಕಡೆ, ಒಂದ್ಸಾರಿ, ತಿಥಿ ಮನೆಯಿಂದ ಬಂದ್ರೆ, ತಿರುಗಾ ಹೋಗಲ್ಲಾ ಅಲ್ಲಿಗೆ" ಎಂದರು ದೊರೆಸಾಮಿಗಳು , ಬೊಳುತಲೆ ಸವೆರುತ್ತಾ,
"ಅಯ್ಯೋ ಅದು ಸೊತಕದ ಮನೆಗೆ ರೀ, ಈಗೇನು ಬಾಗಿಲು ಒಡೆದರೋ ಹ್ಯಾಗೆ" ಎಂದರು ಶೆಟ್ರು.
"ಅಯ್ಯೊ ಬಾಗಿಲು ಒಡೆಯೋದು ಇರಲೀ, ನನ್ ಪುಣ್ಯ, ನನ್ ಹಿಡ್ಕೊಂಡ್ ಹೊಡೀಲಿಲ್ಲಾ!
ನನ್ನ ಮಗ ಸತೀಶ ಅದೇನ್ ಜೆನರಲ್ ಮ್ಯಾನೆಜರ್ ಕೆಲಸ ಮಾಡ್ತಾನೋ ಬ್ಯಾಂಕಲ್ಲಿ, ಏಲ್ಲಾದಕ್ಕೊ ಟೆನ್ಷನ್ ಮಾಡ್ಕೊಂಡ್ ಕೂಗಾಡ್ತಿರ್ತಾನೆ"
ನಾನು ಕೀ ಸಿಗಲಿಲ್ಲಾ ಅಂತ ವಾಪಸ್ಸು ಬಂದೆ, ಆಷ್ಟರಲ್ಲಿ ಬೀಗ ರಿಪೇರಿ ಮಾಡೋನ್ ಏನೋ ನೋಡ್ತಿದ್ದ. ನಾನ್ ವಿಚಾರಿಸಿದೆ,
"ಏನಪ್ಪಾ, ಕೀ ತೆಗಿಯಕಾಗುತ್ತಾ ಅಥವಾ, ಬಾಗಿಲು ಏನಾದರೊ ಒಡಿಲೇ ಬೇಕಾ ಅಂತಾ"
ನನ್ನ ಹೆಂಡತಿ ಅಷ್ಟರಲ್ಲಿ ಹಿಂದಿನಿಂದ ಗದರಿದಳು
"ಈಗ ನೀವ್ ಮಾಡಿರೋ ಘನ ಕಾರ್ಯಾನೆ ಸಾಕು, ಬಾಗಿಲು ಏನು ಒಡೆಯೋಕೆ ಹೇಳ್ಬೇಡಿ, ತೆಪ್ಪಗೆ ಈಕಡೆ ಬಂದು ಕೊತ್ಕೊಳ್ಳಿ".
ನನ್ ಮಗ ಶುರು ಮಾಡಿದ,
"ಆಲ್ಲಾ ನನನ್ನ ಏನ್ ಅದ್ಕೊಂಡೀದೀರಿ ಎಲ್ಲಾ. ಆಪೀಸಿನಲ್ಲಿ ಪ್ರಾಣ ಹೋಗೊ ಅಷ್ಟು ಕೆಲಸ, ಇದರಲ್ಲಿ ಈತರ ಟೆನ್ ಷನ್.
ಪಾಪ ಸುನೀತ ಬರೋ ಟ್ಯೆಮ್ ಆಯ್ತು, ಶೀ ಹಾಸ್ ಟು ಸ್ಟಾಂಡ್ ಆನ್ ರೋಡ್.
ಯಾಕಾದರೊ ಮನೇಲ್ ಇಲ್ದೆ ತಿರುಗ್ತಾ ಇರ್ತೀರೋ. ಈಗ ನೋಡಿ how much i have to spend, for nothing.
We cannot take chance . Tommorrow this person can make one more duplicate key and do something"
"ಆವನು ಹೇಳೋದು ಸರೀನೆ, ಏನಾದರು ಹೆಚ್ಚುಕಮ್ಮಿ ಆದರೆ? ಮೂನ್ನೆ ಮೂರನೆ ಕ್ರಾಸ್ ನಲ್ಲಿ ಕೊಲೆ ಆಗಲಿಲ್ವಾ" ಅಂದರು ರಾಮರಾಯರು.
"ಅಯ್ಯೋ ಮೊರನೆ ಬ್ಲಾಕ್ ನಲ್ಲಿ ರೀ, ಅದು ಆಗಿದ್ದು ದರೋಡೆ , ಮನೆ ಕೀ ಮಾಡಕ್ಕೆ ಬಂದವ್ನು, ದರೋಡೆಗೆ ಯಾಕ್ರಿ ಬರ್ತಾನೆ. ಸುಮ್ನೆ ಕುತ್ಕೂಳ್ರಿ", ಗುಡುಗಿದರು ಶೆಟ್ಟರು.
"ನಾನು ಅದನ್ನೇ ಹೇಳೋಣ ಅಂತಿದ್ದೆ" ಆಕಳಿಸಿದರು ದೊರೆಸಾಮಿ.
"ಅದಿರಲಿ, ಅಲ್ಲಾರಿ ಎಲ್ಲಾದಕ್ಕೊ ಹೆದರಿಕೊಂಡರೆ ಹೇಗೆ. ಹೋಗಲಿ ಬಿಡಪ್ಪಾ, ಬೀಗ ಛೇಂಜ್ ಮಾಡಿಬಿಟ್ರೆ ಆಯಿತು" ಎಂದೆ.
"ನೀವು ಕಳ್ಕೊಂಡ್ ಬಂದಾಗಲೆಲ್ಲಾ, ಬೀಗ ಛೇಂಜ್ ಮಾಡಕ್ಕಾಗತ್ತಾ" ಅಂತಾ ನಕ್ಕರು ರಾಮರಯರು.
ಈ ಜನ್ಮದಲ್ಲಿ ಮೂಗು ತುರೀಸೊ ಬುದ್ದಿ ಬಿಡಲ್ಲಾ ಇವರು, ಎಂದು ಆರ್ಥ ಬರೋಹಾಗೆ ಲುಕ್ ಕೊಟ್ಟರು ಶೆಟ್ಟರು.
"ಹೋಗೊಣ್ವ" ಎಂದರು ದೊರೆಸಾಮಿ,
"ಇರ್ರೀ ಪೂರ್ತಿ ಹೇಳ್ಳೇ ಇಲ್ಲಾ ಇನ್ನು" ಅಂದರು ಶೆಟ್ರು.
ಮುಂದುವರಿಸಿದರು ಶ್ಯಾಮರಾಯರು"ಅಷ್ಟರಲ್ಲಿ ಬಾಗಿಲು ತೆಗೆದ"
"ಕೀ ಸಿಗ್ತಾ ಅಂದೆ, ರಿಪೇರಿ ಮಾಡುವವನಿಗೆ!"
"ವಿ ಹವ್ ಟು ಪೇ ೧೫೦ ರುಪೀಸ್, ಫಾರ್ ದಿಸ್ ಡೊಪ್ಲಿಕೇಟ್ ಕೀ. ಆಲ್ ವೇಸ್ಟ್ ಆಪ್ ಟೇಮ್ ಆಂಡ್ ಮನಿ" ಗೊಣಗಿದ ಸತೀಶ್.
ಒಳಗೆ ಫೋನ್ ರಿಂಗ್ ಆಗುತಿತ್ತು ಅರ್ಧ ಘಂಟಿಯಿಂದ.ಆಗ ತಾನೆ ಎಲ್ಲರೊ ಒಳ ಹೋದರು.
ಸುಮತಿ ಆಗಿನ್ನು ಬಂದವಳೆ ಫೋನ್ ರಿಸೀವ್ ಮಾಡಿದಳು "OKಪ, ಧ್ಯಾಕ್ಸ್, ನಾಳೆ ಕಲೆಕ್ಟ್ ಮಾಡ್ತಾನೆ. NO PROBLEM" ಅಂದವಳೆ ಮಗನಿಗೆ ಹೇಳಿದಳು.
"ಸುಮೇರು, ನೀನು ಇವತ್ತು ಬರೋವಾಗ, ಕೀ ಶಶಾಂಕನ ಮನೇಲಿ ಕಂಪ್ಯೊಟರ್ ಮುಂದೆ ಬಿಟ್ಟಿದ್ಯಂತೆ, ಬ್ರಿಂಗ್ ಇಟ್ ಟುಮಾರೋ. ಡೋಂಟ್ ಫರಗೆಟ್"
ಶ್ಯಾಮರಾಯರಿಗೆ ಕೇಳಿಸಿತು. ಪದ್ದಮ್ಮನ ಮುಖ ನೋಡಿ ಸುಮ್ಮನಾದರು.
ಈ ಶ್ಯಾಮರಾಯರ ನಸೀಬೆ ಹಾಗೆ. ತಾವು ಮಾಡದಿದ್ದ ತಪ್ಪಿಗೆ, ಆನ್ನಿಸಿಕೊಳ್ಳುವುದು. ವಯಸ್ಸು ೭೦ ಆಗಿದೆಯಲ್ಲಾ ಅದಕ್ಕೆ.
೫೮ ವರ್ಷದ ವರೆಗೊ ಸರ್ಕಾರಿ ಕೆಲಸ ಮಾಡಿ ನಿವ್ರುತ್ತಿ ಪಡೆದು ದೊಡ್ಡ ಮಗನೊಂದಿಗೆ ಇದ್ದರು.
ಎರಡನೆಯವನು ಶರತ್, MBAಮಾಡಿ ಮುಂಬಯಿಯಲ್ಲಿ ಬಹುರಾಷ್ಟ್ಟೀಯ ಕಂಪನಿಯಲ್ಲಿ ಒಳ್ಳೆಯ ಹುದ್ದೆಯಲ್ಲಿ ಇದ್ದ. ಮೊರನೆಯವಳು ಮಗಳು ಶ್ವೇತ. ಮದರಾಸಿಗೆ ಕೊಟ್ಟಿದ್ದರು.
ಎಲ್ಲರ ಹೆಸರೊ "ಎಸ್" ನಿಂದಲೇ ಪ್ರಾರಂಭ. ಹೆಸರಿನಲ್ಲೇ ಎಷ್ಟು ಸಾಮ್ಯ ನೋಡಿ. ಮನಸ್ಸಿನಲ್ಲೊ ಇರಬೇಕಲ್ಲ!?
ಮುಂದುವರೆಯುವುದು...
ಪ್ರತಿಕ್ರಿಯೆ (1)