ಪ್ರೇಮದ frame
 ನಮ್ಮ family photoಗೆ

 frame ಇಲ್ಲ;

 ಪ್ರೇಮದ ಚೌಕಟ್ಟಿದೆ.

 
ನೀನು
 ನನ್ನವಳಾಗುವ ತನಕ
 ಮನದೊಡತಿ
 ನನ್ನವಳಾದ ಬಳಿಕ
 ಮನೆಯೊಡತಿ

 
 

 ನನ್ನವಳು

 ಅಂದು 

         ಮೈಸೂರ ದಸರಾ ಜಾತ್ರೆಯಲಿ
         ತುಂಟಾಟಕ್ಕೆಳೆದೆ ಅವಳ ಜಡೆಹಿಡಿದು

 ಇ೦ದು

        ಸಂಸಾರ ಸಾಗರ ಯಾತ್ರೆಯಲಿ

        ಎಳೆದು ಸಾಗಿಸುತಿಹಳೆನ್ನ ಕೈಹಿಡಿದು

  

ಪ್ರೇಯಸಿಗೆ...
 ಬಣ್ಣವೆನ್ನ ಕಪ್ಪಾದರೇನೇ,

 ಚಿನ್ನಾ? ನಿನ್ನ

 ಕಣ್ಣಗೊಂಬೆಯಾಗಲಾರೆ, ದಿಟ;

 ಕಣ್ಣ ಕಾಡಿಗೆಯಾಗಲಾರೆನೇನೇ?