ಗೆಳೆಯರೇ,
ನವರಂಗ್ ಸಿನಿಮಾ ಮನೆಗೆ ರಾತ್ರಿ ೧೦ ರ ಆಟಕ್ಕೆ ನಾನು ಮೊದಲ ಸಲ 'ಮುಂಗಾರು ಮಳೆ' ನೋಡೋಕೆ ಹೋದಾಗ, ಬಾಲ್ಕನಿ ಟಿಕೇಟ್, ಕಿಂಡೀಲೇ ಸಿಗುತ್ತಿತ್ತು. ಸಿನಿಮಾ ಚೆನ್ನಾಗಿದೆ ಅಂತ ಎರಡನೇ ಸಲ ಹೋದರೆ, ಇನ್ನೂ ಅರ್ಧ ಗಂಟೆ ಮೊದಲೇ sold out ಅಂತ ಮಾಡ್ಕೊಂಡು theator ನವರೇ ಮೂವತ್ತೈದು ರೂಪಾಯಿ ಟಿಕೇಟ್ನಾ ಅರವತ್ತು ರೂಪಾಯಿಗೆ ಬ್ಲಾಕ್ನಲ್ಲಿ ಮಾರುತ್ತಿದ್ದರು. ಅವನ್ನೇ ಎಷ್ಟೋ ಜನ ತುಗೋತಿದ್ದರು. ಆದರೆ ಇಂತದಕ್ಕೆ ಮಂದೀನೇ ಹೀಗೆ ಕುಮ್ಮಕ್ಕು ಕೊಡೋದು ಸರೀನಾ? ನನಗಂತೂ ಅದು ಸರಿ ಕಾಣದೇ ಕೆಳಗಡೆ ಇಪ್ಪತ್ತೈದು ರೂಪಾಯಿಯ ಟಿಕೇಟನ್ನು ಕಿಂಡಿ(counter)ಯಲ್ಲೇ ಪಡೆದು ನೋಡಿದೆವು.
ಇರೋರು ಕೊಟ್ಟು ನೋಡುತ್ತಾರೆ, ಇರದೇ ಇರೂರು ಏನ್ ಮಾಡಬೇಕು? ಆದರೆ ಸಿನಿಮಾ ನೋಡಲೇಬೇಕಾದ ಅವಸರದಲ್ಲಿ ನಾವೆಲ್ಲಾ ಇದನ್ನು ವಿಚಾರ ಮಾಡೋದೇ ಇಲ್ಲಾ. ನೀವೇನಂತೀರಿ ಇದು ಸರೀನಾ?
ಪ್ರತಿಕ್ರಿಯೆ (1)
ಅದೇ ಅನುಭವ ನನಗೂ ಆಯಿತು! ಅದರೆ ನವರಂಗ ಚಿತ್ರಮಂದಿರದಲ್ಲಲ್ಲ... ಸಾಗರ್ ಚಿತ್ರಮಂದಿರದಲ್ಲಿ. ಕಳೆದ ಭಾನುವಾರ ನಾನು ಕೂಡ "ಮುಂಗಾರಿನ ಮಳೆ" ಸಿನಿಮಾ ನೋಡಲು ಹೋಗಿದ್ದೆ... ವಿಪರೀತ ಜನ... ಬಹುಶ: ಚಿತ್ರ ಚೆನ್ನಾಗಿರುವುದು ಒಂದು ಕಾರಣವಿರಬಹುದು. ಆದರೆ ನೀವು ಹೇಳಿರೋ ಹಾಗೆ, ಇಲ್ಲಿಯೂ ಚಿತ್ರಮಂದಿರದ ಕಾವಲುಗಾರರೇ(ಸಿಬ್ಬಂದಿ (?)) ಸಾಲನ್ನು ಸರಿಯಾಗಿ ನಿಲ್ಲುವಂತೆ ತಿಳಿಸುತ್ತಾ... ವ್ಯಾಪಾರ (?)ದಲ್ಲಿ ಕಾರ್ಯೋಮ್ನುಖರಾಗಿದ್ದರು. ಪಾಪ! ಅದೇನು ಶಿಸ್ತು! ಅದೇನು ಸಂಯಮ!. ಆದರೆ ಸಾಲಿನಲ್ಲಿ ನಿಂತಿದ್ದ ನಮಗೆ "ಚೀಟಿಗಳು ಮಾರಾಟವಾಗಿವೆ" (House Full) ಎಂದು ತಿಳಿಸಲಾಯಿತು. ಸಿನಿಮಾ ನೋಡಲೇಬೇಕು ಅಂತಾ ಹಟ ಹಿಡಿದವರ ಥರಾ ನಾವಿದ್ದುದ್ದನ್ನು ನಮಗಂಡ ಮಹಾಷಯರು (ಕಳ್ಳ ಚೀಟಿ ಮಾರಾಟ - Black Ticket Sellers) ಸಂತಸಗೊಂಡು ಕರಪತ್ರ ಹಂಚೋ ಥರಾ ...... ಮುಗಿಸಿದರು. ಏನೇ ಆದರೂ ಭಾನುವಾರ... ಮಧ್ಯಾಹ್ನವಾದರೆ ಮತ್ತೆ 3 ಗಂಟೆ ಹಾಳುಮಾಡುವುದು ಸರಿಯಲ್ಲವೆಂದೆನಿಸಿ ಅದೂ ಅಲ್ಲದೇ ಮತ್ತೆ ಮೆಜಿಸ್ಟಿಕ್ ನತ್ತ ಹೋಗಬೇಕಾಗುವುದರಿಂದ 25ರೂ. ಗಳಷ್ಟು ಹೆಚ್ಚಿಗೆ ಕೊಟ್ಟರೂ ಪರವಾಗಿಲ್ಲ ಎಂದೆನಿಸಿತು. ಬೇರೆ ದಾರಿಕಾಣದೇ ನಾನಉ ಸಹ ಇದಕ್ಕೆ ಒಪ್ಪಿಕೊಂಡು (Actual Charges 45 + 25 Special Gift = 70/-) ಸಿನಿಮಾ ನೋಡಿದೆ. ಬೆಳಿಗ್ಗೆ ಪ್ರದರ್ಶನ ಮುಗಿತ್ತು... ಚಿತ್ರಾ ಚೆನ್ನಾಗಿತ್ತ್ತು... ಮತ್ತೆ ಅದೇ ಜನಜಂಗುಳಿ... ಅದೇ ಕೆಲಸ... ಅದೇ ಮಹಾನುಭಾವರು... ಬೆಕ್ಕಿನ ಕೊರಳಿಗೆ ಘಂಟೆ ಕಟ್ಟವವರ್ಯಾರು? ಶಿವಣ್ಣ.