ಏನೆಂದು ನಾ ಹಾಡಲಿ
ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು
ಭೇಟಿಯಾಗದ ಇಬ್ಬರ ಹೃದಯದ ಬೇಟೆ ಶುರುವಾಯಿತು
ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು
ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು || ಏನೆಂದು ನಾ ಹಾಡಲಿ ||
ಕಣ್ಣು ಹುಡುಕುತಿದೆ ಹುದುಗಿಟ್ಟ ಪ್ರೀತಿಪಾಠದ ಸಂಚಿಯ
ಕಾಲು ಹಾತೊರೆಯುತಿದೆ ಹರಿದಾಟದ ಆ ತಿಳಿ ಸಂಜೆಯ
ತುಟಿಯಂಚು ತುದಿಗಾಲಲಿ ನಿಂತಿದೆ ಪ್ರಣಯದ ಮಾತು ಉದುರಿಸಲು
ಗುಳಿಯೊಂದು ಕಾರಣ ಹೇಳದೆ ಮೊಗ್ಗಿನ ಗಲ್ಲದಲಿ ಅರಳಿತು || ಏನೆಂದು ನಾ ಹಾಡಲಿ ||
ಮುಂಗುರುಳ ಲಾಲಿಗೆ ಚಂದಿರ ಮಲಗಿದ ಮೇಘಚಾದರಹೊದ್ದು
ನಯನಶರ ಧಾಳಿಗೆ ಬಿಲ್ಲೊಂದು ಕಳಚಿತು ಬಣ್ಣವ ಮಳೆಯಲಿ ಮಿಂದು
ಗೆಜ್ಜೆಯ ಝೇಂಕಾರಕೆ ಭ್ರಮರವು ಕಮಲದೊಡಲಲಿ ಮಂಪರು
ಲಜ್ಜೆಯ ವೈಯ್ಯಾರಕೆ ನವಿಲು ಸ್ಥಪತಿರಚಿತ ಒಂಟಿಕಾಲ ಶಿಲ್ಪ || ಏನೆಂದು ನಾ ಹಾಡಲಿ ||
ನಿಮ್ಮ
ಕಾಮತ್ ಕುಂಬ್ಳೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)