ಒಮ್ಮೆ ನಕ್ಕು ಬಿಡಿ - ೧೯
ಊರ ಹೊರವಲಯದ ಮನೆ. ಮನೆಯಲ್ಲಿ ಗೃಹಿಣಿ ಒಂಟಿಯಾಗಿದ್ದಳು. ಹೊರಗೆ ಬಿಕ್ಷುಕನ್ನೊಬ್ಬ ಬಂದ
"ಅಮ್ಮಾ ತಾಯಿ ಏನಾದರು ಹಾಕಿಯಮ್ಮ ಬಿಕ್ಷೆ" ಎಂದು ಕೂಗಿದ
"ಏನು ಇಲ್ಲ ಮುಂದೆ ಹೋಗಪ್ಪ " ಎಂದಳು ಯಥಾಪ್ರಕಾರ.
ಬಿಕ್ಷುಕನಿಗೆ ಏಕೊ ರೇಗಿ ಹೋಯಿತು. ಅವಳತ್ತ ತಿರುಗಿ ದೊಡ್ಡದಾಗಿ ಬೆದರಿಕೆಯನ್ನೆ ಹಾಕಿದ
"ಏನಮ್ಮ ಈಗ ಏನಾದರು ತಿನ್ನಲು ಹಾಕ್ತೀರೊ ಇಲ್ಲ ನಿನ್ನೆ ಹಿಂದಲ ಊರಿನಲ್ಲಿ ಮಾಡಿದಂತೆ ಮಾಡಲೋ ?"
ಒಂಟಿ ಮಹಿಳೆ ಹೆದರಿ ನಡುಗಿಬಿಟ್ಟಳು. ಇದಾವ ಗ್ರಹಚಾರ ಎನ್ನುತ್ತ ತಕ್ಷಣ ಒಳಹೋಗಿ ಮನೆಯಲ್ಲಿದ್ದ ಅಡುಗೆಯನ್ನೆಲ್ಲ ತಂದು ಹಾಕಿದಳು. ಅದನೆಲ್ಲ ಕುಳಿತು ತೃಪ್ತಿಯಿಂದ ತಿಂದ ಬಿಕ್ಷುಕ ನಂತರ ನೀರು ಕುಡಿಯುತ್ತಿದ್ದ. ಆಗ ಆ ಮಹಿಳೆ ಹೆದರಿಕೆ ಹಾಗು ಕುತೂಹಲದಿಂದ ಕೇಳಿದಳು.
"ಏನಪ್ಪ ನಿನ್ನೆ ಹಿಂದಲ ಊರಿನಲ್ಲಿ ಯಾರಿಗೆ ಏನು ಮಾಡಿದೆ"
ಅದಕ್ಕೆ ಅವ ಉತ್ತರಿಸಿದ
"ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗು ಬೇಡಿದೆನಮ್ಮ ಯಾರು ಏನು ಕೊಡಲಿಲ್ಲ ತುಂಬಾ ಕೋಪಬಂತು , ಕಡೆಗೆ ಏನು ಮಾಡೋದು ಅಂತ ಉಪವಾಸವೆ ಮಲಗಿಬಿಟ್ಟೆ !!!!"
ಪ್ರತಿಕ್ರಿಯೆ (1)