ನೀನೊಬ್ಬ ಜಗದೊಳಗೆ, ನಿನ್ನೊಳಗದೊಂದು ಜಗ |

ನೀನೆ ಜಗ, ನೀನಿರದೆ ಜಗವುಂಟೆ ನಿನಗೆ? ||

ತಾನೆ ಜಗವೆಲ್ಲವೆಂದರಿತಂಗೆ ಹಗೆಯೆಲ್ಲಿ? |

ಏನಿಹುದವಂಗನ್ಯ-ಮರುಳು ಮುನಿಯ ||