ಮೂರು ವರ್ಷ ಹಳೆಯದಾದ ಈಗಿನ ನನ್ನ "ಎಲ್ ಜೀ"  ಲ್ಯಾಪ್ಟಾಪ್ ಕಾರ್ಯಕ್ಷಮತೆಯಲ್ಲಿ ಕಳಪೆ ಆಗುತ್ತಿರುವುದರಿಂದ ಬೇರೊಂದು ಲಾಪ್ ಟಾಪ್ ಕೊಳ್ಳುವ ಯೋಚನೆಯಲ್ಲಿದ್ದ್ದೇನೆ. ವಿಂಡೋಸ್ ಆಧಾರಿತ ಕಂಪ್ಯೂಟರ್ ಬಳಸಿ ನಂತರ ಈಗ "ಆಪಲ್" ಕಂಪ್ಯೂಟರ್ ಪ್ರಯತ್ನಿಸುವ ಆಸೆ ಇದೆ. ಸಂಪದಿಗರಲ್ಲಿ ಯಾರಾದರೂ ಆಪಲ್ ಬಳಸುತ್ತಿದ್ದೀರಾ? ಆಪಲ್ ನನ್ನಂಥ ಕಂಪ್ಯೂಟರ್ ಗೀಕ್ ಅಲ್ಲದವರಿಗೆ ಕಷ್ಟವೇ? ವಿಂಡೋ ಬೇಸ್ಡ್ ಕಂಪ್ಯೂಟರ್ ಗಿಂತ ಆಪಲ್ ಎಷ್ಟು ಪರಿಣಾಮಕಾರಿ ಎಂದು ಸಂಪದಿಗರು ಮಾಹಿತಿ ನೀಡಿದರೆ ಉಪಕಾರ. ಜೆಡ್ಡಾ ದಲ್ಲಿ ಬೇಸಿಕ್ 'ಆಪಲ್' ಲಾಪ್ ಟಾಪ್ ಗೆ ಐವತ್ತು ಸಾವಿರ ರೂಪಾಯಿಗಳು. ಭಾರತದಲ್ಲಿ ಕಡಿಮೆಗೆ ಸಿಗಬಹುದೇ?  ಆಪಲ್ ಬಗ್ಗೆ ವಿಸ್ತೃತವಾಗಿ ಬರೆದರೆ ನನಗೂ ಇತರರಿಗೂ ಉಪಕಾರವಾಗುತ್ತದೆ.