ಗೂಗಲ್ ಮತ್ತು ಕನ್ನಡ
ಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ ಟೈಪ್ ಮಾಡಬಹುದು. ಇಲ್ಲಿ ನನ್ನದೇ ಆದ ಕೀಲಿಮಣೆ ವಿನ್ಯಾಸವನ್ನು ಬಳಸಿದ್ದು, ಇದು ಕಗಪ ಕೀಲಿಮಣೆಗಿಂತ ಭಿನ್ನವಾಗಿದೆ.
ನನ್ನ ಅಂತರ್ಜಾಲ ಪುಟದ ವಿಳಾಸ ಹೀಗಿದೆ:
http://karnataka.110mb.com/google.html
ಇದು ಗೂಗಲ್ ಕನ್ನಡಕ್ಕಿಂತ ಭಿನ್ನವೇ? ಹೌದು. ಗೂಗಲ್ ಕನ್ನಡದ ಪುಟದಲ್ಲಿ ಕನ್ನಡದ ಸೂಚಕಗಳಿವೆ. ಆದರೆ ಕನ್ನಡದ ಪುಟಗಳನ್ನು ಹುಡುಕಲು "ಬರಹ ಡೈರೆಕ್ಟ್" ನಂತಹ ತಂತ್ರಾಂಶದ ಅಗತ್ಯವಿರುತ್ತದೆ.
ನೀವು ನನ್ನ ಪುಟವನ್ನು ಬಳಸಿ ನೋಡಿ, ಪ್ರತಿಕ್ರೀಯೆ ತಿಳಿಸಿ
ಪ್ರತಿಕ್ರಿಯೆ (5)
ಅಂತರ್ಜಾಲವನ್ನು ಮನೆಯಿಂದಲೇ ಬಳಸುವವರು 'ಸುಲಭ ಗೂಗಲ್' ನ ಬಳಕೆಯನ್ನು ಕಂಡುಕೊಳ್ಳಲಾರರು. ಏಕೆಂದರೆ ಬರಹ ಡೈರೆಕ್ಟ್ ಬಳಸಿ ನೇರವಾಗಿ ಗೂಗಲ್ ಪುಟದಲ್ಲಿ ಕನ್ನಡವನ್ನು ಬಳಸಬಹುದು. ಆದರೆ ಒಂದು ಬ್ರೌಸಿಂಗ್ ಸೆಂಟರ್ ನಲ್ಲಿ ಕುಳಿತು ಅಂತರ್ಜಾಲವನ್ನು ಹುಡುಕುವವರಿಗೆ ಬರಹ ಡೈರೆಕ್ಟ್ ಬಳಸುವುದು ಸುಲಭವಲ್ಲ.
ಇನ್ನೊಂದು ಸನ್ನಿವೇಷ ಎಂದರೆ ನನ್ನ ಕಛೇರಿಯಲ್ಲಿ ಯಾವುದೇ ಹೊಸ ತಂತ್ರಾಂಶವನ್ನು ಇನ್ಸ್ಟಾಲ್ ಮಾಡುವುದನ್ನು ವೆಬ್ ಸೆನ್ಸ್ ಎಂಬ ತಂತ್ರಾಂಶವು ತಡೆಹಿಡಿಯುತ್ತದೆ. ಆದ್ದರಿಂದ ಬರಹ ಇಲ್ಲದೇ ಕನ್ನಡವನ್ನು ಅಂತರ್ಜಾಲದಲ್ಲಿ ಬಳಸಲು ತಂತ್ರಾಂಶವನ್ನು ರೂಪಿಸಲು ಯೋಚಿಸಿದೆ.
ಸುಲಭ ಗೂಗಲ್ ನ್ನು ಬಹಳಷ್ಟು ಜನರು ಬಳಸಿದ್ದಾರೆ ಮತ್ತು ಬಳಸುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾಧಗಳು.
ನನ್ನ ಗೂಗಲ್ ಪುಟವನ್ನು ಎಷ್ಟು ಜನರು ಬಳಸುತ್ತಿದ್ದಾರೆ ಎಂದು ಗೂಗಲ್ ನಿಂದ ಪಡೆದ ಗ್ರಾಫ್ ನ್ನು ಇಲ್ಲಿ ಲಗತಿಸಿದ್ದೇನೆ.