ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ ಮುಕ್ತಿ ಪಡೆಯಲು ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ. ಈ ರೀತಿಯ ಮಾತುಗಳನ್ನು ನಾವು ಪಡೆ ಪಡೆ ಆಡುತ್ತೇವೆ. "ನನಗಂತೂ ಸಾಕಾಗಿ ಹೋಗಿದೆ ಎಲ್ಲಾದ್ರೂ ಆಚೆ ಹೋಗಿ ರಿಫ್ರೆಶ್ ಆಗಬೇಕೂ ರೀ " ಎನ್ನುವ ಮಾತುಗಳು ನಮ್ಮ ಬಾಯಿಂದ ಬರುತ್ತದೆ. ಆದರೆ ಹಲವು ಸಾರಿ ಈ ನಿರೀಕ್ಷೆ ತಪ್ಪಾಗಿ ಯಾಕಾದ್ರೂ ಹೊರಗೆ ಹೊಫಿದ್ವೋ ಅನ್ನಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ಒಂದು ಪ್ರಯತ್ನ ಮಾಡೋಣ ಬನ್ನಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
೧] ನೀವುಹೊರಗಡೆ ಕುಟುಂಬ ದೊಡನೆ / ಸ್ನೇಹಿತರೊಡನೆ/ ಒಬ್ಬರೇ ಯಾವ ಜಾಗದಲ್ಲಿ ರಿಲಾಕ್ಸ್ ಮಾಡಲು ಬಯಸುತ್ತೀರಿ?
೨] ನೀವು ಉಳಿಯುವ ಸ್ಥಳದಲ್ಲಿ ನೀವು ನಿರೀಕ್ಷಿಸುವ ಸೌಲಭ್ಯ ಗಳೇನು ??
3] ನಿಮ್ಮ ಕಲ್ಪನೆಯ ಪ್ರದೇಶ ಹೇಗಿರ ಬೇಕು ??
೪] ಯಾವ ಚಟುವಟಿಕೆಯಿಂದ ನಿಮ್ಮ ಮನಸ್ಸು ಉಲ್ಲಾಸವಾಗಿ ಆ ಜಾಗಕ್ಕೆ ಮತ್ತೊಮ್ಮೆ ಕುಟುಂಬ ದೊಡನೆ / ಸ್ನೇಹಿತರೊಡನ / ಒಬ್ಬರೇ ಹೋಗಬೇಕು ಎನ್ನಿಸುತ್ತದೆ??
೫] ಈ ಗಿನ ರೆಸಾರ್ಟ್/ ಹೋಂ ಸ್ಟೇ ಸಂಸ್ಕೃತಿ ನಿಮಗೆ ಒಪ್ಪಿಗೆಯಾಗಿದೆಯೇ ?? ನಿಮ್ಮ ಕಲ್ಪನೆಯ ರೆಸಾರ್ಟ್ / ಹೋಂ ಸ್ಟೇ ಹೇಗಿರ ಬೇಕು ?? ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .
ಬನ್ನಿ ಒಂದು ಪ್ರಯತ್ನ ಮಾಡೋಣ!!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಗೂಗಲ್ ಬಜ್ ಗೊಂದು ವಿದಾಯ ಹೇಳಿಬಿಡಿ.
ಕನ್ನಡ ಸಾಹಿತ್ಯ ಪರಿಷತ್ತು ಹಾಗು ೬೦೦೦ ಕನ್ನಡ ಬ್ಲಾಗುಗಳು !!!!
ಡಾ// ರಾಜ್ ಕುಮಾರ್ ಹಾಗೂ ಬಿ. ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡಿದ್ದು ಇಲ್ಲೇ !
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)