ಈಗ ಬೇಸಿಗೆ ಶುರುವಾಗಿ ಎಲ್ಲೆಲ್ಲೂ ಬಿಸಿಲಿನ ಝಳಝಳ.....ನಮ್ಮ ಮನಸು ಆಗಲೆ ಮುಂದೆ ಬರುವ ಮಳೆಗಾಲಕ್ಕೆ ಅತುರದಿಂದ ಕಾದು ನಿಲ್ಲುವುದು ಸಹಜ. ಈ ಆಲೋಚನೆಗಳು ಬಂದಾಗ ನಾನು 'ಹಾಗೆ ಸುಮ್ಮನೆ' ಹೀಗೆ ಗೀಚಿದೆ.![]()
ಮೋಡವು ಮುಗಿಲ ಮುಸುಕುತಿರೆ
ಸೋನೆ ಹನಿಗಳು ಸುರಿಯುತಿರೆ
ಮಳೆಯು ಮೊದಲಾಯ್ತು ನೋಡಾ
ಮಣ್ಣು ಕಂಪ ಸೂಸಿದರೆ
ಒಣಗಿದ ಮೈಮನವು ಹಸಿಯಾಗಿ
ಭಾವ ಹೊಳೆಯಾಗಿ ಹರಿಯಿತು ಈ ಕವನದಾಂಗ!!
-----------
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!