ಮುಂಬೈನ ನೂರುವರ್ಷಕ್ಕೂ ಮೇಲ್ಪಟ್ಟು ಸೇವೆಮಾಡಿದ ಮೇಲೂ ಇನ್ನೂ ಪರಿಸ್ಥಿತಿಗೆ ಹೊಂದಿಕೊಂಡು ನಿಲ್ಲಲು ಹರಸಾಹಸ ಪಡುತ್ತಿರುವ ನೂರಾರು (ಸಾವಿರಾರು ಕಟ್ಟಡಗಳು ನಮಗೆ ಕಾಣಿಸುವುದು ಪ್ರಿನ್ಸೆಸ್ ಸ್ಟ್ರೀಟ್, ಜವೇರಿ ಬಝಾರ್, ಲಾಲ್ಬಾಗ್ ಹಾಗೂ ಕಲ್ಬಾದೇವಿ ವಲಯಗಳಲ್ಲಿ} .(ಬೆಂಳೂರಿನ ಲಾಲ್ ಬಾಗ್ ತೋಟವನ್ನು ನೆನೆಸಿಕೊಂಡು ಮೂರ್ಛೆಹೋಗಬೇಡಿ)
ಒಮ್ಮೆ ಹಾಗೇ ನನ್ನ ಕ್ಯಾಮರಾವನ್ನು ಕೊಂಡೊಯ್ಯುತ್ತಿದ್ದಾಗ ಅದು ಪಿಳಿಪಿಳಿ ಕಣ್ಣು ಬಿಡುತ್ತಾ ಏನಾದರೊಂದು ಚಿತ್ರವನ್ನು ತನ್ನ ಹಸಿದ ಹೊಟ್ಟೆಯಲ್ಲಿ ತೆಗೆದಿಡುವ ದಾಹದಿಂದ ಚಡಪಡಿಸುತ್ತಿದ್ದ ಸಮಯದಲ್ಲಿ ಕಣ್ಣಿಗೆ ಕಂಡ ಕಟ್ಟಡವಿದು. ಒಂದು ದೊಡ್ಡ ಆನೆ ಕಟ್ಟಡಕ್ಕೆ ಹೊಂದಿಕೊಂಡಂತೆ ಇದೆ. ಅದೇನು ಕಟ್ಟಡವನ್ನು ಹೊರುವ ಸಾಹಸ ಮಾಡಿಲ್ಲ. ಮಾಡಿದರೆ ಅದಕ್ಕೆ ಸಾಧ್ಯವಾಗುವುದೂ ಇಲ್ಲ. ಇನ್ನೂ ಬಿದ್ದು ಮಣ್ಣಾಗದ ಅಥವಾ ಇತಿಹಾಸದ ಪುಟಗಳನ್ನು ಓದುಗರಿಗೆ ತೆರೆದಿಡುವ ಸಾಹಸಮಾಡುತ್ತಾ ತಟ್ಟಾಡುತ್ತಿರುವ ಈ ಬಿಲ್ಡಿಂಗ್ ನ್ನು ನೀವು ಒಮ್ಮೆ ಕಣ್ಣು ಹಾಯಿಸಿ ನೋಡಿ ಅಯ್ಯಾ !
ಅಂದರೆ ಇದೇ ತೀರ ಶಿಥಿಲವಾದದದ್ದೇ ? ಎಂದರೆ, "ಅಲ್ಲ; ಇನ್ನೂ ಇದೆ ತಡ್ಕೊಳ್ಳಿ ತೋರಿಸ್ತೀನಿ ಅನ್ನಲು ಅಡ್ಡಿಯಿಲ್ಲ" ಏನಂತೀರಿ ?!
ಪ್ರತಿಕ್ರಿಯೆ (1)