ಸಿಪ್ - ೨೭ 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 

 

 


ಆರರ ನಂತರ ಒಂದು ನಿಮಿಷವೂ ಆಫೀಸ್ ನಲ್ಲಿ ನಿಂತರೆ ರಾತ್ರಿ ಹನ್ನೆರಡರ ತನಕ ಆಫೀಸ್ ನಲ್ಲೆ ಉಳಿಯಬೇಕು ಎಂದು ಈ ಎರಡು ತಿಂಗಳಲ್ಲಿ ನಾನು ತಿಳಿದುಕೊಂಡಿದ್ದೆ, ಅದಕ್ಕೆ ಆರರ ಮೊದಲೇ ಸಿಸ್ಟಮ್ ಲಾಗೌಟ್ ಮಾಡಿಕ್ಕೊಂಡೆ; ಎಂಟು ಗಂಟೆ ಇಂದ ಕಟ್ಟಿದ್ದ ಫಾರ್ಮಲ್ ವೇಷ ರೂಂ ನಲ್ಲಿ ಕಳಚಿ ಮತ್ತೆ ಜೀನ್ಸ್, ಟಿ ಶರ್ಟ್ ತೊಟ್ಟು ವಾಲೆಟ್ ಗಟ್ಟಿ ಮಾಡಿಕ್ಕೊಂಡು ಅವಳ ಹಾಸ್ಟೆಲ್ ತಲುಪಿದೆ. ನಾನು ಮಿಸ್ ಕಾಲ್ ಕೊಡುವ ಮೊದಲೇ ಅವಳು ತನ್ನ ರೂಂನಿಂದ ಕೆಳಗಿಳಿದಿದ್ದಳು. ನನ್ನನ್ನು ನೋಡುತಿದ್ದಂತೆ ಕಣ್ಣುಗಳು ಮುದ್ದಿಸಲು ಶುರುಮಾಡಿದವು.

ಯು- ಟರ್ನ್ ತೆಗೆದು ಅವಳನ್ನು ಬೈಕಲ್ಲಿ ಕೂರಿಸಿ ಸ್ಪೀಡ್  ಹೆಚ್ಚಿಸಿದೆ; ರಾಮನ ಪಾದಸ್ಪರ್ಶಕ್ಕೆ ಕಾಯುತಿದ್ದ ಅಹಲ್ಯೆ ಯಂತಾಗಿದ್ದ ಹಿಂದಿನ ಸೀಟ್ ಈಗ ಅರಳುತಿತ್ತು, ಕೆಂದಾವರೆ ಮೇಲೆ ನಗುತಿತ್ತು. ನೇಸರ ಪಡುವಣದಲ್ಲಿ ಕರಗುತಿದ್ದ, ಕೆಂದಾವರೆ ಯ ಮಣಿ ಮುಕುಟ ಕಣ್ಣುಗಳು ಬೆಳಗುತಿದ್ದವು. ಕೈ ಬೆರಳುಗಳ ಹಿಡಿತ ಹಿಂದಿನಗಿಂತ ಗಟ್ಟಿಯಾಗಿದ್ದವು, ಇನ್ನೆಂದೂ ಸಡಿಲಿಸಲಾಗದ ಬಿಗಿ ಹಿಡಿತ. ಹೆಗಲ ಮೇಲಿನ ಹಿಡಿತ ಗಟ್ಟಿಯಾದಂತೆ, ನನ್ನ ಬಲಗೈ ಹಿಡಿತ ಗಟ್ಟಿಯಾಗುತಿತ್ತು, ಕೆಳಗಿನ ಟೈಯರ್ ವೇಗ ಹೆಚ್ಚಿಸುತಿತ್ತು; ಅವಳು ಹಿಡಿತ ಇನ್ನೂ ಗಟ್ಟಿಮಾಡುತಿದ್ದಳು, ಒಂದಕ್ಕೊಂದು ಡೈರೆಕ್ಟ್ ಪ್ರೋಪೋಶನ್ ಆಗಿದ್ದವು.

ಮೂರು ನಾಲ್ಕು ಕಿಲೋ ಮೀಟರ್ ಕ್ರಮಿಸಿದ ಮೇಲೆ ಅವಳಲ್ಲಿ "ಬೈ ಟು.. ? ಎಲ್ಲಿ ...?"
"ಹೊಸ ಸಿಪ್ ಅಸ್ವಾದಿಸ ಬೇಕು.. ಇನ್ನೂ ಹೋಗಿರದ ಜಾಗ ತೋರಿಸು.."
"ಎಕ್ಸ್ ಪ್ರೆಸ್ ಹೈವೇ .. ಖಂಡಾಲ..?"
"ಖಂಡಾಲಾ ನಾ..? ಇಟ್ಸ್ ಟೂ ಫಾರ್ ವೈಭು, ಇವತ್ತು ಬೇಡ ಇನ್ಯಾವತ್ತಾದ್ರೂ...?"
"ಅಲ್ಲಿ ವರೆಗೆ ಅಲ್ಲ , ಇಲ್ಲಿಂದ ಇಪತ್ತು ಕಿ.ಮಿ ದೂರದಲ್ಲಿ ಒಂದು ಡಾಭ ಇದೆ, ಅಲ್ಲಿ ಹೋಗೋಣ.. ಅಲ್ಲಿ ಟೀ ಚೆನ್ನಾಗಿರುತ್ತೆ.."
"ಮಾತಾಡುವುದು ನೋಡು ಟ್ರೈ ಮಾಡಿದ ತರಹ.."
"ನಿಜವಾಗಲು ನಾನು ಕುಡ್ಡಿದ್ದೇನೆ.. ಸೂಪರ್ ಇದೆ.." ಅವಳು ಇಲ್ಲದಾಗ ಕದ್ದು ಮೆದ್ದ ರುಚಿ ನಾಲಗೆ ತಪ್ಪಿ ಹೊರಬಿತ್ತು.
 ಸಂಶಯದ ಹಾಲಲ್ಲಿ ಸುಳಿ ಏಳಲು ಇಷ್ಟು ಸಾಕಾಗಿತ್ತು, ಅವಳು ತಿರುಗಿ "ಯು ಚೀಟ್..." ಎಂದಳು.
ಮೌನದಲ್ಲಿದ್ದೆ.."ಯು ಚೀಟ್ ನಾನಿಲ್ಲದಾಗ, ನೀನೊಬ್ಬನೇ ಗಮ್ಮತ್ತು ಮಾಡ್ತಿದ್ದಿಯಲ್ಲ.. ಐ ಹೇಟ್ ಯು, ಯಾರ್ ಜೊತೆ ಯಜಮಾನರ್ದು ಇಲ್ಲಿ ವರೆಗೆ ಮೆರವಣಿಗೆ ಬಂದದ್ದು ಎಂದಾದ್ರೂ ತಿಳಿ ಬಹುದಾ...?"



ವಿಶ್ವಾಸ ಉಳಿಸ ಬೇಕಾದ್ರೆ ಮೊದಲಿಗೆ ಒಂದು ಸುಳ್ಳು, ನಂತರ ಆ ಸುಳ್ಳನ್ನು ನಿಜ ಮಾಡಲು ಸಾವಿರ ಸುಳ್ಳ ಕಂತೆ ಬಿಡಿಸುವುದು ಅವಶ್ಯ .. ಪ್ರೀತಿ ಉಳಿಸಲು ವಿಶ್ವಾಸ ಅತ್ಯಾವಶ್ಯ !!! ಅಂದರೆ ಪ್ರೀತಿಸಲು ತಯಾರಿರುವರು ಸುಳ್ಳಿನ ಕತೆ ಕಟ್ಟುವ ಜಾಣರಾಗಿರಬೇಕು.



"ಆಕೃತಿ, ಅದು .. ಅದು" ಎನ್ನುವಷ್ಟರಲ್ಲಿ ಅವಳು "ಹಾಂ ತಿಳೀತು .. ಅವಳೇ ಅಲ್ಲ ..."
"ಇಲ್ಲ ರಾಜ,ಅವಳ ಜೊತೆ ಯಾರು ಬರ್ತಾರೆ, ಆ ವಿವೆಕೆ ಬರಬೇಕು .. "
"ನಿಜವಾಗಲು ಅವಳ ಜೊತೆ ಬಂದಿಲ್ಲ ಅಲ್ಲಾ ....?"
"ಯಾವ್ ತರಹ ಪ್ರೂವ್ ಮಾಡ್ಲಿ ನಿನ್ನ ತಲೆ ಮೇಲೆ ಕೈ ಇಟ್ಟು ಹೇಳಲಾ ...?" ಎಂದು ಫಿಲ್ಮಿ ಡೈಲಾಗ್ ಬಿಟ್ಟೆ.
"ಬೇಡ ವೈಭು, ನಿನ್ ಮೇಲೆ ವಿಶ್ವಾಸ ಇದೆ, ಕೈ ತೇಗಿ" ಎಂದು ಚಾಚಿದ ಕೈ ತೆಗೆದಳು.ಇದು ಒಂದು ತಿಂಗಳಿಂದ ಅವಳಲ್ಲಿ ಕಂಡುಕ್ಕೊಂದ ಗುಣ, ಮಾತಲ್ಲೇ ವಿಶ್ವಾಸ ಮೂಡಿಸುವ ಕಲೆ. ಒಂದೇ ಸುಳ್ಳಿಂದಕೆಲಸ ಮುಗೀತು ಎಂದು ಒಳಗಿದ್ದ ಹರಿಶ್ಚಂದ್ರನ ತುಂಡು ಖುಷಿ ಪಟ್ಟಿತು.ಕೆಂದಾವರೆಯ ಹಿಡಿತ ಗಟ್ಟಿಯಾಯಿತು.


ಮುಖವನ್ನು ತಂದು ಹೆಗಲ ಮೇಲೆ ಇಟ್ಟು "ಈ ಜಾಗ ನನಗಾಗೆ ಮೀಸಲು, ಯಾರ ಕೆಟ್ಟ ಕಣ್ಣು ಇದಕ್ಕೆ ಹೊಂಚು ಹಾಕ ಬಾರದು, ಹಾಗೆ ಒಂದು ದೃಷ್ಟಿ ಬೊಟ್ಟಿಡಬೇಕು "
"ದೃಷ್ಟಿ ಬೊಟ್ಟ...?"
"ಹಮ್ ಮತ್ತೆ ಯಾರಾದ್ರು ಇದನ್ನು ಆಕ್ರಮಿಸಿದರೆ, ನನ್ನ ಸಮಾಧಿಗೆ ಜಾಗ ಸಿಗದು ..."
"ಹೇ, ರಾಜಾ..." ಎನ್ನುವಷ್ಟರಲ್ಲಿ ಬೈಕ್ ತನ್ನ ವೇಗ ಸೊನ್ನೆಗೆ ತಂದಿತ್ತು.
ಅವಳು ಮೌನದಲ್ಲಿದ್ದಳು, ನಾನು "ಆಕೃತಿ, ಹಾಗೆಲ್ಲ ಹೇಳ್ಬೇಡಾ..."


'ಅವಳನ್ನು ನಾನು ಹೆಸರಿಟ್ಟು ಕರಿಯುವುದು ಇನ್ನೊಬ್ಬರ ಎದುರಿಗೆ ಮಾತ್ರ, ಬಿಟ್ಟರೆ ಅವಳಲ್ಲಿ ನಿಜವಾಗಲು ಕೋಪ ಬಂದಾಗ...'


ನನ್ನ ಮಾತಿನ ಗಾಂಭಿರ್ಯತೆ ಮನಗೊಂಡು "ಸೋರಿ ವೈಭು, ಈ ಜಾಗ ಇನ್ನೊಬ್ಬರ ಜೊತೆ ಹಂಚಿ ಕೊಳ್ಳಲು ಇಷ್ಟವಿಲ್ಲ, ನನಗೆ ಆಧಾರ ಸ್ಥಂಬ ಇದು, ಜಗತ್ತಲ್ಲಿ ಅತ್ಯಮೂಲ್ಯ ವಸ್ತು" 
ಹಣೆ ಹೆಗಲ ಮೇಲಿಟ್ಟು ಗಾಳಿಗೆ ಹಾರಿದ್ದ ಕೂದಲು ನನ್ನ ಕಿವಿಗೆ ಕಚಗುಳಿ ಇಡುತಿತ್ತು, ಕೈಯಿಂದ ಆ ತಲೆಯನ್ನು ಸವಾರಿಸಿದೆ. ತುಟಿಯಿಂದ ಮುತ್ತಿಟ್ಟ ಅನುಭವ ವಾಯಿತು. ಮತ್ತೆರಲು ಆ ಮುತ್ತಿನ ಮತ್ತು ಸಾಕಾಗಿತ್ತು. ಮೊದಲ ಬಾರಿಗೆ ಅವಳು ಮುತ್ತಿಟ್ಟಾಗ ಅದರ ಪರಿವಿರದ ನನಗೆ ದೇಹದಲ್ಲಿ ಹರಿದ ವಿದ್ಯುತ್ ಅನುಭವಕ್ಕೆ ಬಂದಿರಲಿಲ್ಲ, ಇವತ್ತು ಪ್ರತಿ ಅಂಗಾಗಳು ಅದನ್ನು ಬಯಸಿದ್ದವು, ಕೊಟ್ಟ ಹೈ ಓಳ್ಟೇಜ್ ಶಾಕ್ ಗೆ ದೇಹಕ್ಕೆ ಪವರ್ ಸುಪ್ಪ್ಲ್ಯ್ ಮಾಡುತಿದ್ದ ಪ್ರತಿಯೊಂದು ಫ್ಯೂಸ್ ಟುಸ್ಸಾಯಿತು. ಕಲ್ಲಾಯಿತು ದೇಹ,  ಕಲ್ಲನ್ನು ಮುದ್ದಿಸುತಿತ್ತು ಹಿಂದೆ ಕುಳಿತ  ಇಪ್ಪತ್ಮೂರರ ದೇಹ.


ಜ್ಯಾನಕ್ಕೆ ಬಂದ ಮನಸ್ಸು ಅವಳ ಕೈಯನ್ನು ಹಿಡಿದು ತುಟಿಗೊತ್ತಿಕ್ಕೊಂಡಿತು. ಬೈಕಿಂದ ಕೆಳಗಿಳಿದ ಜೋಡಿ ನಡು ರೋಡಿನಲ್ಲಿ ಮುತ್ತಿನ ಸುರಿಮಳೆ ಗೈಯುತಿತ್ತು, ಲೋಕದ ಪರಿವಿಲ್ಲದೆ ಹನಿ ಹನಿ ಮಳೆ ಸುರಿಯುತಿತ್ತು, ಸುಂಟರಗಾಳಿ ಜಡಿ ಮಳೆ ಸುರಿಸುವ ಮೋಡ ಒಟ್ಟು ಗೂಡುತ್ತಿದ್ದವು, ಅಷ್ಟರಲ್ಲಿ  ಇಬ್ಬರಿಗೂ ವಾಸ್ತವದ ಅರಿವು ಹುಟ್ಟಿ "ಬೇಡ,ಸಾಕು" ಎಂಬ ಮಾತು ಹೊರ ಬಂತು. ಏನೋ ಮಾಡ ಬಾರದ ತಪ್ಪು ಮಾಡಿದಂತ ಪಾಪ ಪ್ರಜ್ಞೆ ಕಾಡುತಿತ್ತು. ಕಣ್ಣಲ್ಲಿ ಕಣ್ಣು ಇಡಲಾಗದ ಪಾಪ ಪ್ರಜ್ಞೆ. ಅವಳು "ವೈಭು ಹೋಗೋಣ ವೇನೋ...? ಟೀ ಬಿಟ್ಟು ಉಳ್ದದೆಲ್ಲ ಆಗ್ಹೋಯ್ತು..." ಅಂದಳು.
"ಸಾರೀ, ನಾನು ನಿನ್ನ ಹುರ್ಟ್ ಮಾಡಿದ್ರೆ, ನನ್ನ ಎಚ್ಚರಿಕೆಯಲ್ಲಿ ನಾನಿರ್ಬೇಕಿತ್ತು, ಬೈಕ್ ನಿಲ್ಲಿಸಿ ತಪ್ಪು ಮಾಡಿದೆ" ಅಂದೆ
ಅವಳು "ನಾನು ಕಿಡಿ ಹಚ್ಚಿದ್ದು, ಇಲ್ಲನ್ತಾದ್ರೆ ನೀನು ಈ ರೀತಿ ವರ್ತಿಸುತ್ತಿರಲಿಲ್ಲ" ಎಂದು ನಾಚಿಗೆ ಇಂದ ಕಣ್ಣು ಜಾರಿಸಿದಳು.
"ಬಿಡು, ಇಲ್ಲೇ ಇನ್ನೇನೋ ಬಂದು ಬಿಡ್ತು, ಐದು ನಿಮಿಷದ ದಾರಿ, ಒಂದು ಟೀ ಕುಡಿದು ಊಟ ಮುಗಿಸಿ ಹೋಗೋಣಾ, ಇಲ್ಲಿ ವರೆಗೆ ಬಂದು ಹಾಗೆ ಹೋಗುವುದು ಬೇಡ..."
"ಓಕೆ." ಎನ್ನುತ್ತಾ ಅವಳು ನನ್ನನ್ನು ಬೈಕೆರುವಂತೆ ಸಜ್ಞೆ ಮಾಡಿದಳು. ಬೈಕ್ ಏರಿ ಗತಿ ಹೆಚ್ಚಿಸಿಕ್ಕೊಂಡೆ.



ಎಕ್ಸ್ ಪ್ರೆಸ್ ಹೈವೇ  ಇಂದ ಬೈಕನ್ನು ಎಡಕ್ಕೆ ವಾಲಿಸಿ ಡಾಬಾ ಎದುರಿಗೆ ನಿಲ್ಲಿಸಿದೆ. ಇಬ್ಬರು ಇಳಿದು ಹೊರಗೆ ಹಾಸಿದ್ದ ಚಾರ್ ಪಾಯಿ ಮೇಲೆ ಕುಳಿತುಕೊಂಡೆವು. ಪ್ರತಿ ಚಾರ್ಪಾಯಿಗಳ ಎದುರಲ್ಲಿ ಇದ್ದಿಲನ್ನು ಕಾಲು ಕಾಯಿಸುವ ಸಲುವಾಗಿ ಇಟ್ಟಿದ್ದರು. ಚಪ್ಪಲಿ ಕಳಚಿ ಅವಳು ಅಲ್ಲಿ ತನ್ನ ಕೋಮಲ ಕಾಲನ್ನು ಬಿಸಿಮಾದಳು ತೊಡಗಿದಳು, ಶೂ ಬಿಚ್ಚುವ ಮನಸಾಯಿತು, ಅಷ್ಟರಲ್ಲೇ ಒಬ್ಬ ಹುಡುಗ ಆರ್ಡರ್ ತೆಗೆಯಲು ಬಂದ "ಸಾಬ್ ಕ್ಯಾ ಚಾಹಿಯೇ...?"
"ದೋ ಛಾಯ ಬನದೋ.. ಬಾದ್ ಮೇ ಬೋಲ್ದೆತೆ ಹೇ ಖಾನೆ ಮೇ ಕ್ಯಾ ಚಾಯಿಯೇ ಬೋಲ್ಕೆ" ಎನ್ನುವಾಗ ಅವಳು "ದೋ ನಹಿನ್ ಭೈ ಏಕ ಛಾಯ ಕಾಫಿ ಹೇ"  ಅಂದಳು.
ಹುಡುಗ "ವನ್ ಬೈ ಟು ಕರ್ನಾ ಹೇ ಕ್ಯಾ ಸಾಬ್".
ಅವಳನ್ನು ಪ್ರಶ್ನಿಸಿದೆ "ಅವಳು ನಹಿ ಭೈ ಏಕ್ ಹೀ ಕಾಫಿ ಹೇ" ಅಂದಳು.


ಹುಡುಗ ಒಳಗೆ ಹೋದ, ನಾನು "ಯಾಕೆ ಬೇಡ್ವಾ ನಿಂಗೆ ಚಾಯ್..?"
"ಹೇಳಿದ್ದು ಒಂದು ಚಾಯ್ ನನಗೆ, ನನ್ನ ಬಿಟ್ಟು ನೀನು ಆ ದಿನ ಕುಡಿದಿದ್ದಿಯಲ್ಲಾ, ಅದಕ್ಕೆ ನಿನಗೆ ಈ ಶಿಕ್ಷ್ಯೇ"
"ಹೀಗೂ ಸಮಾಚಾರ, ಪರವಾಗಿಲ್ಲ" ಎಂದು ಮುಗುಳ್ನಕ್ಕೆ. ಕಣ್ಣು ಇನ್ನು ಬೆಂಕಿ ಆಡಿಸುತಿದ್ದ ಅವಳ ನೀಳ ಕಾಲನ್ನು ನೋಡುತಿದ್ದವು. ನನ್ನ ತೊಡೆ ತಟ್ಟಿ ಕಳೆದು ಹೋದ ನನ್ನನ್ನು ಎಬ್ಬಿಸಿ ಅವಳು "ಚಳಿ ಹಿಡಿತಾ ಇದೆಯಾ..? ಬೆಂಕಿ ಆಡಿಸಲು ಮನಸಾಗುತ್ತಿದೆಯಾ..?"
"ಹೌದು, ಶೂ ಭಿಚ್ಚಲು ಆಲಸ್ಯ" ಎಂದು ಉತ್ತರ ಕೊಟ್ಟೆ.
ಅವಳು "ಸುಖ ಬೇಕಾದರೆ,ಆಲಸ್ಯ ಬಿಡಬೇಕು" ಎನ್ನುತ್ತಾ ಮುಗುಳ್ನಕ್ಕಳು. ಬೆಂಕಿ ಅವಳ ಕಾಲ ಕೆಳಗೆ ಉರಿಯುತ್ತಿದ್ದರೂ ಎದೆಯಲ್ಲಿ ಅವಳು ಕಿಚ್ಚು ಹಚ್ಚಿದಂತಾಯಿತು. ಇನ್ನು ತಡ ಮಾಡುವುದು ಸರಿಯಲ್ಲ ಎಂದು ಶೂ ಬಿಚ್ಚಿ ಕೆಳಗಿನ ಕಾವಲಿಯ ಇನ್ನೊಂದು ಬದಿಗೆ ನನ್ನ ಕಾಲನ್ನು ಚಾಚಿದೆ.


ಒಳಗೆ ಹೋದ ಹುಡುಗ ಒಂದು ಗಾಜಿನ ಗ್ಲಾಸ್ನಲ್ಲಿ ಟೀ ಹಿಡಿದು ಹೊರ ಬಂದ. ಅವಳು ಅವನ ಕೈಯಿಂದ ಆ ಟೀ ಅನ್ನು ಕಸಿದು ನನ್ನನ್ನು ದುರುಗುಟ್ಟಿ ನೋಡುತಿದ್ದಳು, ಮೊದಲಿಗೆ ಕೋಪ ಬಂತಾದರೂ, ನಾನು ತೋರಿಸಿ ಕೊಡಲಿಲ್ಲ, ಅವಳು ಗ್ಲಾಸನ್ನು ತುಟಿಯಂಚಿನಲ್ಲಿ ಇಟ್ಟು ಹೀರಲು ಶುರುಮಾಡಿದಳು.ದೃಷ್ಟಿಯನ್ನು ಕಾಲ್ ಕೆಳಗಿನ ಕಾವಲಿಗೆ ಜಾರಿಸಿದೆ. ಹತ್ತು ಇಪತ್ತು ಸೆಕೆಂಡಿನಲ್ಲಿ ಅವಳ ಕಾಲು ನನ್ನ ಕಾಲನ್ನು ಸ್ಪರ್ಶಿಸಲು ಹವಣಿಸುತ್ತಿತ್ತು ಮೊದಲಿಗೆ ಅವ್ವುಗಳಿಂದ ವಿಕರ್ಷಣೆ ಗೊಂಡಂತೆ ನಟಿಸಿದರೂ ಕೊನೆಗೆ ಮನಸ್ಸಿನ ಆಕರ್ಷಣೆ, ದೇಹದ ವಿಕರ್ಷಣೆಯನ್ನು ನಶಿಸಿಸಿತು. ಕಾಲುಗಳು ಸ್ತಬ್ದವಾಗಿತ್ತು, ಅವಳು ಸ್ಪರ್ಶಿಸಿದಳು, ಸ್ಪರ್ಶ ಸುಖದಲ್ಲಿ ತೇಲುತಿದ್ದೆ, ಒಮ್ಮೆಲೇ ಆ ಸ್ಪರ್ಶ ಬರೇ ಸುಖಕಲ್ಲ್ಲ, ಏನೋ ನನಗೆ ಸಜ್ಞೆ ಮಾಡಲು ಎಂಬಂತೆ ಒದ್ದಿತು. ಅವಳನ್ನು ನೋಡಿದೆ.


ಕಣ್ಣುಗಳು ಮಾತಾಡುತಿದ್ದವು, ಅವ್ವು ಕೈಯಲ್ಲಿನ ಆ ಗಾಜಿನ ಗ್ಲಾಸ್ನಲ್ಲಿರುವ ಟೀ ಹೀರು ಎನ್ನುತಿತ್ತು. ಎತ್ತಿ ಅದನ್ನು ಸವಿಯುತಿದ್ದೆ. ಇನ್ನೂ ಆ ಹುಡುಗ ಅಲ್ಲೇ ನಿಂತಿದನ್ನು ನೋಡಿ ನಾಚಿದೆ; ಫ್ರೀ ಯಾಗಿ ಲವ್ ಸ್ಟೋರಿ ನೋಡುತಿದ್ದ ಅವನಲ್ಲಿ "ಭಾಯಿ ಯಹಾನ್  ಸಿನೆಮಾ ಚಲ ರಹಾ ಹೇ ಕ್ಯಾ ...ನಿಕಲೋ..." ಎಂದೆ. ಕಳೆದು ಹೋದ ಆಕೃತಿಗೆ ನಮ್ಮಿಬ್ಬರ ನಡುವೆ ಇದ್ದ ಇನ್ನೊಬ್ಬ ಪ್ರೇಕ್ಷಕನ ಇರುವು ತಿಳಿಯುತ್ತಲೇ ಮತ್ತೆ ನನ್ನ ಕಾಲನ್ನು ತದುಕಿದಳು.


"ಭಾಯಿ, ಆಪ್ನೆ ಖಾನೆ ಮೇ ಬಾದ್ ಮೇ ಬೋಲ್ತೆ ಹೇ ಬೋಲ ಥಾ, ಇಸಿಲಿಯೇ ಮೇ ರುಖಾ... ಐಸೆ ಕ ಫಿಲಿಂ ಮೇ ರಾಜ್ ದೇಖತಾ , ಆಜ್ ನಯ ನಹೀನ್" ಎಂದ ಆ  ಚೋಟುದ್ದ ಹುಡುಗ.
"ಹಾನ್ ಬೋಲಾ ಥ, ದಸ್ ಮಿನಟ್ ಮೇ ಆನ ಬೋಲ್ದೇತಾ" ಅಂದೆ.
ಅವನು ಮನಸಲ್ಲೇ "ಏಕ್ ಮಿನಿಟ್ ಕ ಚಾಯ್ ಪೀನೆಕೋ ಇನ್ಹೇ ಆದ ಘಂಟಾ ಲಗತಾ, ಖಾನ ಖಾನೆ ಕಿತ್ನ ಟಯಿಮ್ ಲೇಂಗೇ ಉಪರ್ವಾಲ ಹೀ ಜಾನೆ" ಎಂದದ್ದು ನಮಗೆ ಕೇಳಿಸುತಿತ್ತು.
ಅವನನ್ನು ತಡೆದು"ಭಾಯಿ ಚಾವಲ್, ರಾಯಿತಾ, ಬೇಗನ ಭರ್ತಾ ಲಾವೋ" ಅಂದೆ.


ಆಕೃತಿ ನನ್ನಲ್ಲಿ "ಏನ್ ವೈಭು ವೆಜ್ ಹೇಳ್ತಿದ್ದಿಯ, ನೋನ್ ವೆಜ್ ಗೆ ತ್ಯಾಗಾನಾ ...?"
"ನೀನಿದ್ದಿಯಲ್ಲ, ಬೇಡ ಹೇಳಿ"
"ಪರವಾಗಿಲ್ಲ ಹೇಳು, ನಾನು ವೆಜ್ ತಿನ್ತೇನೆ ನೀನು ನೋಂ ವೆಜ್ ತಿನ್ನು" ಎನ್ನುತ್ತಾ ಅವನಲ್ಲಿ "ಭೈಯ್ಯ, ಯಹನ್ ಚಿಕನ್ ಕೌನ್ಸ ಅಚ್ಚಾ ಮಿಲ್ತಾ.." ಅಂದಳು.
ಅವನು "ಬಟರ್ ಚಿಕನ್ ಬೋಲ್ಥ ಹೂನ್ ಮೇಡಂ" ಎಂದು ಅಲ್ಲಿಂದ ನಾನು ಬೈಯುವ ಮುಂಚೆ ಓಡಿ ಹೋದ.



ಕೈಯಲ್ಲಿದ್ದ ಗ್ಲಾಸ್ ನ ಏಲಕ್ಕಿ ಎಡೆಗೆ ಮನಸ್ಸು ನಾಟಿತು, ಹನಿ ಹನಿಯಾಗಿ ಆಸ್ವಾದಿಸುತಿದ್ದೆ. ಅವಳು "ಓಯ್ ಹೇಗಿದೆ..?"
"ತುಂಬಾ ಚೆನ್ನಾಗಿದೆ, ನಾನೇ ಸುಜ್ಜೆಸ್ಟ್ ಮಾಡಿದ್ದು ಅಲ್ಲ, ನೀನು ಹೇಳು ಹೇಗಿತ್ತು ಹೇಳಿ"
"ನೀನು ಸುಜ್ಜೆಸ್ಟ್ ಮಾಡಿದ ಟೀ ಇಷ್ಟು ಸಿಹಿ ಇರಲಿಕ್ಕಿಲ್ಲ, ಅನ್ಕೋತೀನಿ" ಅಂದು ಕಣ್ಣನ್ನು ತಗ್ಗಿಸಿದಳು.
"ಅಂದ್ರೆ ..." ಎನ್ನುವಷ್ಟರಲ್ಲಿ ಅವಳ ಮಾತಿನ ಮರ್ಮಾರ್ಥ ತಿಳಿದು "ಹೌದು, ಇವತ್ತು ಸಕ್ರೆ ಬದಲು ಜೇನೇ ಹಾಕಿ ಟೀ ಮಾಡಿದಂತಿದೆ" ಅಂದೆ.
"ಇದಕ್ಕಾಗಿಯೇ, ನಾನು ಒಂದು ಟೀ ಸಾಕು ಹೇಳಿದ್ದು, ಒನ್ ಬೈ ಟು ಮಾಡಿದ್ರೆ ಸಕ್ರೆನೆ  ಅನುಭವಕ್ಕೆ ಬರುತಿತ್ತು" ಎನ್ನುತ್ತಾ ಮುಗುಳ್ನಕ್ಕಳು.
ಇನ್ನೊಂದು ಸಿಪ್ ಏರಿಸುತಿದ್ದೆ "ಅವಳು , ಸಾಕು ಸಾಕು, ನಾನೂ ಜೀನಿನ ಸವಿ ನೋಡ್ಬೇಕು" ಎಂದು ಕೈಯಿಂದ ಆ ಗ್ಲಾಸನ್ನು ಕಸಿದಳು.ಮತ್ತೆ ಅದನ್ನು ಆ ಮಧುಭರಿತ ತುಟಿಗೆ ತಾಗಿಸಿ ಹನಿ ಹನಿ ಇಳಿಸಿದಳು.



ಕಲ್ಗಲೆರಡು ಭಂದಿಸಿದ್ದವು, ಕಣ್ಣೆರಡು ಕಂಕಣ ಕಟ್ಟಿದ್ದವು. ಇನ್ನೇನೋ ಕಳಕೊಂಡು ಹೋಗುತ್ತೇವೆ ಎನ್ನುವಷ್ಟರಲ್ಲಿ ಜೇಬಿನಲ್ಲಿದ್ದ ಮೊಬೈಲ್ ವೈಬ್ರಶನ್ ಶುರುವಾಯಿತು.
ಜೀವನ್ ಕರೆ ಮಾಡಿದ್ದ.


"ಹೇ ವೈಭು, ಹೇಗಿದ್ದಿಯಾ...?"
"ನಂಗೆ ಏನೋ ಆಗಿದೆ, ಆರಾಮಾಗಿದ್ದೇನೆ, ನೀನು ಹೇಗಿದ್ದಿಯಾ..? ರಾಮಾ ಅತ್ತೆ ಹೇಗಿದ್ದಾರೆ..?"
"ಇಬ್ರೂ ಅರಾಮಗಿದ್ದೇವೆ,ಮತ್ತೆ ಕೆಲಸ ತುಂಬಾ ಬಂದಿದ್ಯೇನೋ...?"
"ಅಷ್ಟೇನೂ ಇಲ್ಲ, ದಿನಕ್ಕೆ ಹನ್ನೊಂದ ರಿಂದ ಹನ್ನೆರಡು ಗಂಟೆ ಆಫೀಸ್ ನಲ್ಲಿರ್ತೇನೆ ಅಷ್ಟೇ.. ಪರವಾಗಿಲ್ಲ, ಇಲ್ಲಿನ ಟೆನ್ಶನ್ ತೆಕೋ ಬೇಡ..."
"ಇಲ್ಲ ಮಗ, ತಿವಾರಿ ಅಂದ್ರೆ ಯಾರೋ..? ಬೆಳಗ್ಗೆ ಕರೆ ಮಾಡಿದ್ದ.."   
"ಅವನಾ ಲೂಸ್ ಪಾರ್ಟಿ, ನಮ್ಮ ಮೆನೆಜೆರ್ ಇನ್ನುಮುಂದೆ... ನಿನ್ನೆ ಇಂದ ಆಫೀಸ ನಲ್ಲಿ ವಕ್ಕರಿಸಿಕ್ಕೊಂಡಿದ್ದಾನೆ"
"ಏಕ್ಸ್ಪಿರಿಯನ್ಸಡ್ ? ಟೆಕ್ನಿಕಲ್ ಪೆರ್ಸನ್ ..?"
"ಟೆಕ್ನಿಕಲ್ ನಿಲ್ , ಮೇನೇಜ್ಮೆಂಟ್ ಕಣ ಕಣದಲ್ಲಿ ತುಂಬಿದೆ ಅನ್ಕೊಳ್ತೇನೆ..."
"ಹೌದು,ನಂಗೂ ಹಾಗೆ ಅನ್ಸಿತು;ನನಗೆ ನಾಳೆ ಆಫೀಸ್ ಗೆ ಬರಬೇಕು ಎಂದು ಕಂಡಿಶನ್ ಹಾಕಿದ್ದಾನೆ, ನಾಳೆ ಬರ್ತಾ ಇದ್ದೇನೆ ಕಣೋ, "
"ನೋಡು, ನಿಂಗೆ ಗೊತ್ತಾಯ್ತು ನೋಡು ಅವನ ಬಗ್ಗೆ, ಒಂದೇ ದಿನದಲ್ಲಿ ಆಫೀಸ್ ನಲ್ಲಿ ಗುಲ್ಲೆಬ್ಬಿಸಿದ್ದಾನೆ..."
"ಬೇರೆ ಏನೋ ಮಾಡಿದ... ?"
"ನಮ್ಮೆಲ್ಲಾ ಫ್ರೀಡಂ ಗೆ ಬೇಲಿ ಹಾಕಿದ, ನಾಳೆ ಯಿಂದ ಮೇನೇಜ್ಮೆಂಟ್ ಕೆಲಸ ಯಾವುದೂ ನಾವು ಮಾಡ್ಬೇಕು ಅಂತ ಇಲ್ಲ..."
"ಯು ಮೀನ ಅಪ್ಪ್ರೂವಲ್ , ಪ್ರಾಜೆಕ್ಟ್ ಬಿಲ್ಲಿಂಗ್ ಎಲ್ಲ ಅವ್ನೆ ಮಾಡ್ತಾನಂತೆಯಾ...?"
"ಹಮ್, ಹೌದು , ನೀನು ಬಂದು ನೋಡು, ಗೊತ್ತಾಗುತ್ತೆ ಅವನು ಎಳೆಯುತ್ತಿರುವ ಲಗಾಮು ಎಷ್ಟು ಶಾರ್ಪ್ ಇದೆ ಹೇಳಿ."
"ಹಮ್, ಮತ್ತೆ, ಎಲ್ಲಿದ್ದಿಯ..? ಒಫ್ಫಿಸ್ಸಾ  ಮನೆ ..?"
"ಎರಡು ಕಡೆ ಅಲ್ಲ"
"ಅಂದ್ರೆ ಬ್ಯುಸಿ ಇದ್ದೀಯ ಅಂತಾಯ್ತು, ನೀನು ಮುಂದುವರಿಸು.. ಬಾಯ್ "
"ರಾಮಾ ಅತ್ತೆಯನ್ನು ಕೇಳಿದ್ದೇನೆ ಅಂತ ಹೇಳು, ಬಾಯ್ " ಎಂದು ಮೊಬೈಲ್ ಕರೆ ಕಟ್ ಮಾಡಿದೆ.



ಒಳಗೆ ಸೇರಿದ ಹುಡುಗ ಹೇಳಿದ ಆರ್ಡರ್ ಹಿಡಿದು ನಮ್ಮೆದುರು ನಿಂತಿದ್ದ. ಪ್ಲೇಟ್ ನಲ್ಲಿ ಸೇರ್ವ್ ಮಾಡಿದ. ಅವಳ ಪ್ಲೇಟ್ ನಲ್ಲಿ ವೆಜ್ ನನಗೆ ನೋನ್ ವೆಜ್.



ಅರ್ಧ ಊಟ ಮುಗಿಯುವಷ್ಟರಲ್ಲಿ ಅವಳು "ಹೇ ವೈಭು ಆ ಪೀಸ್ ಕೊಡು ಎಂದು ಒಂದು ಸಣ್ಣ ಪೀಸ್ ಅನ್ನು ಬಾಯಿಗಿಟ್ಟಲು"
"ಏನೂ ..? ರಾಜಾ .. ನೋನ್ ವೆಜ್ಜಾ..?"
"ಎಂಜಲೇ ತಿಂದಾದ ಮೇಲೆ ಎಂತಹ ಮಡಿ, ಇವತ್ತಿಂದ ಇದಕ್ಕೂ ಅಡ್ಜಸ್ಟ್ ಆಗಲಿಕ್ಕೆ ಟ್ರೈ ಮಾಡ್ತೇನೆ" ಎಂದು ಚೀಪಲು ಶುರು ಮಾಡಿದಳು.


ಅರ್ಧ ಗಂಟೆಯಲ್ಲಿ ಎರಡು ಪ್ಲೇಟ್ ಖಾಲಿಯಾಗಿತ್ತು. ಹುಡುಗ ಇಟ್ಟ ಟಿಪ್ಸ್ ಪಡೆದು ಹಿಂದೆ ಹೋಗುವಾಗ ನನ್ನ ಬುಜ ನೋಡಿ "ಸಾಬ್ ಕುಚ್ ಧಾಗ್ ಲಗಾ ಹೇ ..." ಅಂದ.
ಅವಳು "ವೋ ದಾಗ್ ನಹಿ ನಿಶಾನಾ ಹೇ, ತುಜೆ ಅಬ ಸಮಜ್ ನಹಿ ಆಯೇಗ ಚಾರ್ ಸಾಲ್ ಬಾದ್ ಪತಾ ಚಲೇಗಾ" ಅಂದು ಮುಗುಳ ನಕ್ಕಳು.
ಅವನು "ಮೈನೆ ಐಸೆ ಕಾ ಬಹುತ್ ನಿಶಾನ ದೇಖಾ ಹೇ ಮೇಡಂ " ಎನ್ನುತ್ತಾ ಕಣ್ಣು ಊರಗಲ ಚಾಚಿದನು.
ಅವನಿಗೆ ಇನ್ನು ಹತ್ತು ರುಪಾಯಿ ಟಿಪ್ಸ್ ಕೊಟ್ಟು "ಆಜ್ ಕಾಲ್ ಕೆ ಲಡ್ಕೆ ಸಮಜ್ದಾರ್ ಹೇ, ಸ್ಕೂಲ್ ಜಾಕೆ ಪಡಲೋ ಬೇಟಾ, ಬಾದ್ ಮೇ ತುಜೆ ಭಿ ಬಹುತ್ ನಿಶಾನಿಯಾನ್ ಮಿಲೆಂಗೆ" ಅಂದೆ.
"ಜಾಥ ಹೂನ್ ಸಾಬ್ ಅಬ ಛಟಿ ಮೇ ಪಡ್ತಾ ಹೂನ್, ಮೈ ನೆಮ್ ಇಸ್ ಕಿರಣ್ ಬಾರ್ಘವ್" ಅಂದು ಮುಖ ಅಗಲಿಸಿದ ಹತ್ತು ರುಪಾಯಿಯ ನೋಟನ್ನು ತೆರೆಯುತ್ತ.



ಮುಂದಿನ ಸಿಪ್