ಕಾನ್ಸ್ಟೇಬಲ್  ಗುಂಡಣ್ಣ  ಸಂಜೆ ಹೊತ್ಗೆ ನಗರಕ್ಕೆ ವಾಪಾಸಗಬೇಕು ಅಂತ  ಬಸ್ಸಲ್ಲಿ ಬರ್ತಿರ್ವಾಗ  ಹೊಟ್ಟೆಲಿ ಯುದ್ಧ ನಡೀತಿದೆ 'ಗ್ರೈನ್ಡಿಂಗ್ಮಶೀನು' ಜೋರಾಗಿ  ತಿರ್ಗ್ತಿದೆ ಎನ್ನೋ ಫೀಲಿಂಗು ಬಂದು ಬಸ್ಸಿನ ಡ್ರೈವರಿಗೆ  ಬಸ್ಸು ನಿಲ್ಲಿಸಲು ಹೇಳಿ ನೀವು ಹೋಗಿ ನ ಬೇರೆ ಗಾಡಿ ಹಿಡಿದು ಬರುವೆ ಅಂತ  ಹೇಳಿ ,ಪಕ್ಕದ ಪೊದೆಯತ್ತ ಓಡಿ ಹೋದ!!  ಅರ್ಧ ಘಂಟೆ ನಂತರ  ಎದ್ದು ಉಸ್ಸಪ್ಪ ಅಂತ  ಬಂದು  ಮನದಲ್ಲೇ ಹೇಳಿಕೊಂಡ -ಏನೋ 'ಬಿಟ್ಟಿ' ಸಿಕ್ಕಿತು ಅಂತ ಹಳ್ಳೀಲಿ  ಆ ನಾಟಿ ಕೋಳಿ ತಿಂದ್ರೆ ಹಿಂಗಾ ಆಗೋದು?

ಒಂದರ್ಧ ಘಂಟೆ ಕಾದರೂ  ಯಾವುದೇ ಗಾಡಿ ಕಾಣದೆ ಇವತ್ತು ನಾ ನಗರಕ್ಕೆ ನಡೆದೇ ಹೋಗಬೇಕಾದೀತೇನೋ  ಅನ್ಕೊಂಡ. ಇನ್ನೇನು'ನಟರಾಜ ಸರ್ವೀಸು' ಶುರು ಮಾಡಬೇಕು ಅಸ್ಟರಲ್ಲಿ ದೂರದಲ್ಲಿ ಯಾವುದೇ ಗಾಡಿ ಬರುವ ಹಾಗೆ ಕೇಳಿಸಿತು.. ಕೊಂಚ ಕಣ್ಣಿಗೆ ಕಾಣುವಹಾಗೆ ಹತ್ತಿರ ಬಂದಾಗ  ಅದು ಗೂಡ್ಸ್ ಗಾಡಿ ಅಂತ  ಗೊತ್ತಾಯ್ತು ಮುಂದಿನ ಕ್ಯಾಬಿನ್ನಿನಲ್ಲಿ  ಇಬ್ಬರು ಕುಳಿತಿರುವ ಹಾಗೆ ಕಾಣ್ಸಿತು..  ದೂರನಿಂತು ಕೈ ಮಾಡಿದರೆ ಹಾಗೆ 'ಕೈ ಬೀಸಿ' ಹೊರಡಬಹುದು ಅಂತ ಸಂಶಯ ಬಂದು  ರಸ್ತೆ 'ಮಧ್ಯಕ್ಕೆ' ಹೋಗಿ ನಿಂತು  ಅಡ್ಡಡ್ಡ ಕೈ ಆಡಿಸಿದ  'ನಿಲ್ಲಿಸಲೆ ಬೇಕು' ಎಂಬಂತೆ:)

ಗಕ್ಕನೆ ಬ್ರೇಕ್ ಹಾಕಿ  ರಸ್ತೆ ಮಧ್ಯೆ ನಿಂತು ಡ್ರಾಪ್ ಕೇಳೋ ಈ ಆಸಾಮಿ ಯಾರುಂತ ಸಿಟ್ಟು ಬಂದು 'ಮುಂದೇನು' ಅನ್ನುವ ಹಾಗೆ ಅರ್ಮುಗಂ ನ ನೋಡಿದ  ಡ್ರೈವರ್ ಸೀಟಲ್ಲಿದ್ದವ.... ನಮಗೆ ಜಾಗ ಇಲ್ಲ, ಈ ವಯ್ಯನ್ನ  ಅದೆಲ್ಲಿ ಬಿಸಾಕೋದು? ಹಿಂದೆ ಅಂತ್ರೂ ಕೂರಿಸೋಹಾಗಿಲ್ಲ, ಅಲ್ಲಿ ಕುರ್ಚಿ ಇದ್ದು ಅಕಸ್ಮಾತ ಏನಿದೆ ಅಂತ ಅವನೆನಾರ  ಕೆದಕಿ ನೋಡಿದರ? ಇವನು ಹಳ್ಲಿಯವಾ ತರಹ ಕಾಣಲ್ಲ, ಇನ್ಯಾರುಇರಬಹುದು? ಆದರೂ 'ಮಾನವೀಯತೆಯೇ' ಗೆದ್ದು, ಬಾ ಒಳಗೆ ಹತ್ತು ಎಂದು ಕರೆದ..

 

ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಕುಳಿತರು ಮೂವರು... ನೀವು ಯಾರು ಎಲ್ಲಿಗೆ ಹೊರಟಿದ್ದೀರಾ? ಗಾಡೀಲಿ ಏನಿದೆ? ಅಂತೆಲ್ಲ ಪ್ರಶ್ನೆಕೇಳಲು ಶುರು ಹಚ್ಹ್ಹ್ಸಿಕೊಂಡ  ಗುಂಡಣ್ಣ,  ನಾವು 'ಇದೆ ವೃತ್ತಿ' ಅಂತ ಯಾವುದನ್ನು ಮಾಡುವುದಿಲ್ಲ. ಆಯಾಯ  ಕಾಲಕ್ಕೆ ನಮಗೆ ಏನುಕೆಲಸ  ಸಿಕ್ಕುತ್ತೋ ಅದನ್ನ  ಮಾಡ್ತೀವಿ, ಈಗ ಸಧ್ಯಕ್ಕೆ  ನಗರದಲ್ಲಿ ಇರುವ ಕೆಲ ದನ-ಕರುಗಳಿಗೆ ಹಳ್ಳಿಯಿಂದ  'ಹುಲ್ಲು-ಮೇವು ' ತೆಗೆದುಕೊಂಡು ಹೋಗುತ್ತಿರುವೆವು ಎಂದ ಅರ್ಮುಗಂ...

ಆದರೆಗುಂಡಣ್ಣನದೋಪೋಲೀಸುಬುದ್ಧಿ  ಅದುಅರ್ಮುಗಂನಮಾತಿಗೆ  'ಸಂಶಯ' ಪಟ್ಟುಅದರೂತೋರ್ಪಡಿಸಿಕೊಳ್ಳದೆ    ಓಹೋಹಾಗೋಅಂತನಕ್ಕುಸುಮ್ಮನಾದ..... ಗಾಡಿಕಚ್ಚಾರಸ್ತೆಯೊಂದಕ್ಕೆ  ಪ್ರವೇಶಿಸಿ  ಬಹುಪ್ರಯಾಸದಿಂದ  ಗಾಡಿಓಡಿಸುತ್ತಿರಬೇಕಾದರೆ  ಅದ್ಯಾರೋಒಬ್ಬಹುಡುಗ  ಸೈಕಲ್ಲು  ತುಳಿದುಕೊಂಡು  ಎರಡೂಕೈಬಿಟ್ಟು  ಎದುರುಬರುತ್ತಿದ್ದವನು  ತಿರುವಿನಲ್ಲಿಈ  ಗಾಡಿಬಂದಕೂಡಲೇ   ಗಾಭರಿಯಾಗಿಇಳಿಜಾರಿಗೆಹೋಗಿಬಿದ್ದ, ಗಾಡಿಇನ್ನೇನುಅವನಿಗೆಗುದ್ದಿಯೇಬಿಟ್ಟಿತುಅಂತಅದನ್ನುತಪ್ಪ್ಪಿಸಲು  ಹೊರಟಡ್ರೈವರನಹಿಡಿತಕ್ಕೆಸಿಗದೇ  ಗಾಡಿಪಕ್ಕದಕಲ್ಲುಒಂದನ್ನಏರಿಅಲ್ಲಿಂದ  ಪಕ್ಕಕ್ಕೆವಾಲಿಕೊಂಡು  ಇಳಿಜಾರಿಗೆಹೋಗಿಅಲ್ಲಿ  ಎದುರಿನಗಿಡಕ್ಕೆತಾಗಿ 'ಮುಂದಿನ' ಗಾಲಿಗಳ 'ಮೇಲೆ' ನಿಂತಿತು.. ಮತ್ತುಅದರಿಂದ  ಮೂವರೂಒಂದೊಂದುದಿಕ್ಕಿಗೆಹೊರಎಸೆಯಲ್ಪಟ್ಟರು:(

 

 

 

ಕ್ಷಣ  ಮಾತ್ರದಲ್ಲಿ ಆದ ಈ  ಘಟನೆಯಿಂದ  ದಿಗ್ಬ್ರ್ಹಾನ್ತನಾಗಿ ಎಚ್ಚೆತ್ತು  ಮೊದಲು ನೋಡಿದವನು ಗುಂಡಣ್ಣ   ತಾನು ಗಡಿಯಿಂದ ದೂರಕ್ಕೆಇಳಿಜಾರಿನಲ್ಲಿ  ಮಣ್ಣಿನ ಗುಂಡಿಯಲ್ಲಿ ಬಿದ್ದದ್ದು  ಗೊತ್ತಾಯ್ತು, ಅವರಿಬ್ಬರೂ ಎಲ್ಲಿ? ಅಂತ ನೋಡಲು ಒಬ್ಬನು  ಮರ ಒಂದರ ರೆಂಬೆ ಮೇಲೆ'ತೂಗಾಡುತ್ತಿದ್ದ', ಇನ್ನೊಬ್ಬ ಯಾವುದೋ ಗಿಡದ ಬೊಡ್ಡೆಗೆ  ಹೋಗಿ ಬಿದ್ದಿದ್ದ:) ಆ ಸೈಕಲ್ಲು ಹುಡುಗನೋ  ಸೈಕಲ್ಲನ್ನು ಎತ್ತಿಕೊಂಡು ಓಡುತ್ತಿರುವುದು  ಕಾಣಿಸಿತು..ಅವನಿಗೆ ಹಿಡಿ ಶಾಪ ಹಾಕುತ್ತ  ಗುಂಡಿಯಿಂದ ಮೇಲೆದ್ದು  ಬಂದ ಗುಂಡಣ್ಣ  ,ಮೈಗೆ ಹತ್ತಿದ ಮಣ್ಣು ಕೊಡವಿಕೊಳ್ಳುತ್ತಾ.. ತತ್ !!  ಆ ದರಿದ್ರ ಕುರ್ಚಿ ಸಿಗೊವರ್ಗೆ ನಂಗೆ ಇನು ಅದೆನು ಕಾದೈತೋ ಶಿವ್ನೇ ಅಂದ..!!

 

ಬಿದ್ದರಭಸಕ್ಕೆಮೂರ್ಚೆಬಂದಂತಾಗಿಬಿದ್ದಿದ್ದ  ಅರ್ಮುಗಂದಡಬಡಿಸಿ  ಎದ್ದುಆಕುರ್ಚಿಗಾಗಿಕಣ್ಣುಹಾಯಿಸಿದ, ಅದೋಗಾಡಿಯಿಂದ -ಹುಲ್ಲಿನಆಚೆಗೆಬಂದುಕೆಳಗೆರೋಡಿನಪಕ್ಕವಾಲಿಕೊಂಡುಬಿದ್ದಿತ್ತು.. ತನಸ್ನೇಹಿತನೋ  ಮರದರೆಂಬೆಯೊಂದರಲ್ಲಿನೆತಾಡುತ್ತಿದ್ದುಕಾಣಿಸಿಅವನಿಗೆಕೈನೀಡಿಕೆಳಗೆಇಳಿಸಿಕುರ್ಚಿಕಡೆಓಡಿದ, ಆಗವನಮನದಲ್ಲಿಕುರ್ಚಿಗೆಸಧ್ಯಇನ್ನೂಆಗಿರದಿದ್ದರೆಸಾಕಸ್ಟೆಎನ್ನುವಭಾವನೆ:) ಕುರ್ಚಿಸಮೀಪಿಸಿಅದನ್ನುನೇವರಿಸುತ್ತಾನಿಂತಿದ್ದ  ಅರ್ಮುಗಂಹೆಗಲಮೇಲೆಬಿತ್ತುಕೈ....

 

ಚಿಕ್ಕಂದಿನಿಂದ  ಹೆಗಲ ಮೇಲೆ ಅದೆಸ್ಟೋ ಕೈ  ಬಿದ್ದಿದ್ದ ಅರ್ಮುಗಮ್ನಿಗೆ  'ಈ ಕೈ' ಬಿದ್ದ ರೀತಿ  ಅದು ಕೊಡುತ್ತಿರುವ ಫೀಲಿಂಗು ಯಾಕೋ'ವಿಶೇಷ' ಅನ್ನಿಸಿತು  ಸಾವಕಾಶವಾಗಿ ತಿರುಗಿ ನೋಡಿದಾಗ  ಎದುರು ನಿಂತು 'ಒಂಥರಾ' ನೋಡುತ್ತಿದ್ದ  ಗುಂಡಣ್ಣ ಕಾಣಿಸಿ  ಗಾಡಿಯಲ್ಲಿ ಕೂರುವಾಗ ಇದ್ದ ಗುಂಡಣ್ಣ ನ ವರ್ತನೆಗೂ ಈಗಿನದಕ್ಕೂ ತಾಳೆ ಆಗುತ್ತಿಲ್ಲ ಅನ್ನುವ  ಭಾವನೆ ಮನದಲ್ಲಿ ಬಂದು  ಈ ವಯ್ಯ   ಅಪ್ಪಿ-ತಪ್ಪಿ- 'ಪೋಲೀಸು' ಅಲ್ಲವಸ್ಟೇ?  ಆದರೆ ? ನನ್ನ ಕಾಸೂ ಗೋವಿಂದ:) ಜೊತೆಗೆ ಏರೋ ಪ್ಲೇನು ದ್ದೆವ್ರೆ 'ಹಾಗಾಗದಿರಲಿ' ಎನ್ನುವ  ಬೇಡಿಕೆಯನದೇವರಿಗೆ ಇಟ್ಟ ಅರ್ಮುಗಂ!!

 

 

ಏನೋಹೈವಾನ್ ! ಗಾಡೀಲಿ  ಬರೀಹುಲ್ಲುಇದೆಅಂತಹೇಳಿ  'ಈಕುರ್ಚೀನ' ಕದ್ದುಸಾಗಿಸ್ತಇದ್ದೀಯ?  ನಂಗೆನೀಅವಾಗಏನೂಹೇಳಿದೆ? ಇದೆಕೆಲಸಅಂತಯಾವುದೂಮಾಡಲ್ಲಅಂತಅಂದಾಗಲೇಸಂಶಯಬಂದಿತ್ತು, ಈಗ 'ರುಜು' ಆಯ್ತುನೋಡು, ನನ್  ಮಕ್ಳ - ನನ್ನಏನು 'ಯಾನ್ದಳ್ಲಿಗೂಬಲ್' ಅನ್ಕೊನ್ದಿರೆನ್ಲ? ನನ್ನೇ  ಯಾಮಾರ್ಸೋಕೆನೋಡ್ತೀರಾ?

 

 

ನಿಮ್ಮನ್ನ ಲಾಕಪ್ಪಿಗೆ ಒದ್ದು ಒಳ ಹಾಕಿ   'ದುಬೈ ಏರೋ'  ಪ್ಲೇನು ಹತ್ತಿಸದಿದ್ದರೆ ನಾ ಹೆಡ್ ಕಾನಸ್ಟೇಬಲ್ಲು  ಗುಂಡಣ್ಣ ನೆ ಅಲ್ಲ!! ಅವರೋ-ಇವರೋ ಇರಬಹುದು ಅಂತ  ಯೋಚಿಸ್ತಿದ್ದ ಅರ್ಮುಗಂ ಗೆ  ಇವರು 'ಅವರೇ'  ಪೊಲೀಸರೇ ಅಂತ ಗೊತ್ತಾಗಿ 'ತೊಡೆ' ಗಳು ಗಡ ಗಡ ನಡುಗಿ ಮೈ ಎಲ್ಲ 'ಒಂಥರಾ'  ಫೀಲಿಂಗು ಶುರು ಆಯ್ತು:(

 

ಗುಂಡಣ್ಣ ನ ಆಲೋಚನೆ!!:ಅಬ್ಬ ದೇವ್ರೇ ನಾನೇ 'ಅದ್ರ್ಹಸ್ಟವಂತ'  ಅಲ್ದೆ ಏನು? ಎಲ್ರೂ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು  ಕೈಯಲ್ಲಿ ಲಾಂದ್ರ ಹಿಡಿದು ಅಲ್ಲಿ 'ಎಲ್ಲೆಲ್ಲೋ'  ಈ ಕುರ್ಚೀಗಾಗಿ ಹುಡುಕುತ್ತಿದರೆ 'ಈ ಕುರ್ಚಿ' ನನ್ನ ಹತ್ತಿರವೇ ಬಂದಿದೆ, ಅಹ!  ನಂಗೆ  -ನನಗೊಬ್ಬನಿಗೆ ಒಂದು ಕೋಟಿ ಬಹುಮಾನ ಗ್ಯಾರಂಟಿ!!

ಲೋ ಅಡ್ನಾಡಿ  ನಂ ಮಕ್ಳ  ಅದು ಯಾರ ಕುರ್ಚಿ ಗೊತ್ತೇನೋ? ಸೀ ಎಮ್ಮು ಕುರ್ಚಿ. ಅದನೆ ವಿಧಾನ ಸೌಧದಿಂದ  ಎತಾಕೊಂಡು ಬಂದಿದೀರಲಾ ನೀವದೆಂತ? ಆಯನಾತೀ ನನ್ಮ ಕ್ಲಿರ್ಬೇಕು'  ಅದ್ಕೆ ಎಂತ ಶಿಕ್ಷೆ ಇದೆ ಗೊತ್ತ? ಬನ್ನಿ ನಿಮಗಿದೆ 'ಮಾರಿ ಹಬ್ಬ' ಅಲ್ಲಿ ಎಂದ ಗುಂಡಣ್ಣ

 

 

ಯಾವ್ದೋಮಾಮೂಲಿಕುರ್ಚಿಅಂತಹಣಕೊಟ್ಟುತಂದ , ಅಕುರ್ಚಿ  ಹಿಂದೆಇಸ್ಟೆಲ್ಲಾ  ರಹಸ್ಯ  ಇತಿಹಾಸಇದೆಅಂತಗೊತ್ತಾಗಿಮುಂದೆತಮಗೆಸಿಗೋ 'ಟ್ರೀಟ್ಮೆಂಟು'  ನೆನೆಸಿಕೊಂಡುಕಣ್ಣೇರುಸುರಿಸುತ್ತ- ಸ್ಸಾರ್ತಪ್ಪಾಯ್ತುಕ್ಷಮಿಸಿಸ್ಸಾರ್  ಆಹಳ್ಳಿಯವನುಕೊಳ್ಳಿ- ಕಳ್ಳಮುನಿಯನಮ್ಮನ್ನಯಮಾರ್ಸಿಬಿಟ್ಟ, ನಮಗೆಅದು 'ಸೀಎಮ್ಮುಕುರ್ಚಿ' ಅಂತಗೊತ್ತಿರಲಿಲ್ಲ  ನಾವ್ಇಬ್ಬರೂಇಲ್ವರ್ಗೂಅದ್ರಮೇಲೆ'ಒಮ್ಮೆಯೂ' ಕುಳಿತಿಲ್ಲಬೇಕಾರನೋಡಿಅಂದಆರ್ಮುಗಂ ..

 

ನಮ್ಮನ್ನಬಿಟ್ಟುಬಿಡಿಸ್ಸಾರ್  ಬೇಕಾರೆನೀವ್ಅದ್ನತೆಗೆದುಕೊಂಡು  ಹೋಗಿಆದ್ರೆನಮ್ಮನ್ನಮಾತ್ರ   ಬಿಡಿ   -ಏನೋ  ಮೂರುಕಾಸಿನಆಸೆಗ್ಮಣ್ಣುತಿನ್ನೋಕೆಲಸಮಾಡಿದ್ವುಅಂತಕಾಲಿಗೆಬೀಳಲುಹೋದರು, ತತ್ನನ್ಮಕ್ಳಾ- ಕೈಕಾಲುಬಿದ್ರೆನಿಮ್ಮನ  ಬಿಟ್ಬಿಡ್ಬೇಕ?  ನಿಮ್ಮನ್ನಬಿಟ್ಟು ,ನಾನಗರಕ್ಈಕುರ್ಚೀನಹೊಯ್ದು, ಇದುಆಕಾಶದಿಂದ  ಕೆಳಗೆನನ್ಮುಂದೆಬಿತ್ತು  ಅಂತಹೇಳಲಾ?

ಅದುಹೆಂಗೆಸಿಕ್ಕಿತು? ಕದ್ದವರಾರು?  ಅಂತ 'ನೂರಾರು' ಸಂಶಯದ  ಪ್ರಶ್ನೆಕೇಳ್ತಾರೆಪತ್ರಿಕೆ-ಟೀವಿಯವರು  ,ಆಗನಾಏನ್ಹೇಳಲಿ? ನಿಮ್ಮನ್ನಸ್ಟೇಶನ್ಗೆಹಾಕೊದೇಯಅಂದ..

 

 

 ಈಗಮೊದಲುಮರಕ್ಕೆಸಿಕ್ಕು 'ನೇತಾಡುತಿರ್ವ' ಆಗಾಡೀನ  ಇಬ್ರೂಕೆಳಗೆಇಳಿಸಿ  ಆಮೇಲೆ  ಮಿಕ್ಕಿದ್ದುಯೋಚಿಸೋಣಅಂದಗುಂಡಣ್ಣ...  ಈಗಲೇ  ಕಮೀಶನರಿಗೆಫೋನಾಯಿಸಿ  ಕುರ್ಚಿಸಿಕ್ಕಬಗ್ಗೆಹೇಳಿದರೆ  ಆಮೇಲೆತನಗೆಸಿಗವ 'ರಾಜಮರ್ಯಾದೆ' ನೆನೆದೆ  ಮೈಮನಉಲ್ಲಸಮಯವಾಯ್ತು.. ಅಬ್ಬದೇವ್ರೇಅಂತೂನೆನನ್ನಮೇಲೆದಯೆತೋರಿದೆ, ಒಮ್ಮೆಗೆ 'ಜಾಕ್ಪಾಟ್' ಹೊಡೆದಿರುವೆ.. ಈ  ನಿನ್ನಕೊಡುಗೆಗಾಗಿ  'ನೂರೊಂದು' ತೆಂಗಿನಕಾಯಿಹೊಡೆವೆಅಂದ!!

 

 ಬೇಡಈಗಲೇ  ಕಮೀಶನರಿಗೆ  ಫೋನಾಯಿಸದೆ ,ಸಧ್ಯಕ್ಕೆಈಕುರ್ಚೀನ  ಎಲ್ಲಿಯಾರಅಡಗ್ಸೀಇಟ್ಟು, ಮೊದಲುಇದನ್ನುಕದ್ದವರುಯಾರುಎಷ್ಟುಜನಇದರುಅವ್ರಪ್ಲಾನ್ಹೇಗಿತ್ತು? ಅವರಉದ್ದೇಶಏನುಅಂತೆಲ್ಲನಾನೇವಿಚಾರಿಸಿವಿಸ್ತೃತವರಧಿಸಮೇತ  ಕಮೀಶನರಿಗೆಹೇಳಿದರಾಯ್ತುನಂಗೆ 'ಇನ್ಸ್ಪೆಕ್ಟರ್'  ಜಾಬಿಗೆ 'ಪ್ರೋಮೊಷನ್ನು'  ಕೊಡಬಹುದು. ಬಲುಪ್ರಯಾಸಪಟ್ಟು  ಗಾಡಿಯನ್ಮರದಿಂದ  ಕೆಳಗೆಇಳ್ಸಿ  ನೆಲದಮೇಲೆನಿಲ್ಲಿಸಿಒಮ್ಮೆಏನರಆಗಿದೆಯಅಂತಾನೋಡಿದಾಗ  ಸ್ವಲ್ಪನಜ್ಜು-ಗುಜ್ಜಾಗಿದ್ದ  ಹೊರಮೈ  ,ಬಿಟ್ಟು  ಗಾಡಿಯಯಾವುದೇಭಾಗಕ್ಕೂಇನ್ನೇನೂಆಗಿರಲಿಲ್ಲ…..

 

 

 

 

ಗುಂಡಣ್ಣನನ್ನ  'ಹೊಡೆದು'  ನಾವು ಓಡಿದರೆ ಹೆಂಗೆ? ಅನ್ನುವ ಆಲೋಚನೆ ಅರ್ಮುಗಂ ಮತ್ತು ಸ್ನೇಹಿತನ ಮನದಲ್ಲಿ ಮೂಡಿತು  ಕೊಂಚ ಮುಂದಕ್ಕೆ ಬಂದಿದ್ದರಸ್ಟೇ  ಅವರ ಆ ಆಲೋಚನೆ  ಗುಂಡಣ್ಣ ನಿಗೆ  ಗೊತ್ತಾಗಿ  ಮೆಲ್ಲಗೆ  ಬೆನ್ನಿನ ಹಿಂಬದಿಯಲ್ಲಿ   ಅಡಗಿಸಿದ್ದ ಪಿಸ್ತೂಲನ್ನ  ಸುಮ್ಮನೆ ತೆಗೆದು 'ಚೆಕ್' ಮಾಡುವವನಂತೆ  ಮಾಡಿ ಜೇಬಿಗೆ ಸೇರಿಸಿ ಒಮ್ಮೆ ಅರ್ಮುಗಂ ಮತ್ತು ಸ್ನೇಹಿತನ ಕಡೆ ನೋಡಿ ನಕ್ಕ!! ಇನ್ನೇನು ಮಾಡುವುದು ಕಾಸೂ ಹೋಯ್ತು, ಕುರ್ಚೀನು ಹೋಯ್ತು, ಜೊತೆಗೆ 'ದುಬೈ ಏರೋ ಪ್ಲೇನು'  ಹತ್ತುವ 'ಯೋಗಾಯೋಗ ' ಬೇರೆ ಇದೆ:(

ಈಪೋಲೀಸಪ್ಪಹೇಳಿದಹಾಗೆಕೇಳಿದರೆನಮ್ಮನ್ನಬಿಡಬಹುದು, ಮೊದಲುಆ  ಬೆಂಕಿಮುನಿಯನಅಂಡಿಗೆಬೆಂಕಿಇಕ್ಕಬೇಕು  ಅದ್ಕೆಈಪೋಲೀಸಪ್ಪಂಗೆಎಲ್ಲಹೇಳಬೇಕು,  ಸ್ಸಾರ್ಅಂತಶುರುಮಾಡಿಮೊದಲಿಂದ -ಇಲಿವರ್ಗೆಆದದ್ದನ್ನೆಲ್ಲಹೇಳಿದ, ಅವ್ನುಹೇಳಿದ್ದುಕೇಳಿ,ಗುಂಡಣ್ಣ  ಲೋಮತ್ತೆನನ್ನಯಮಾರ್ಸೋಕ್ನೋಡ್ತೀಯ? ಹೋಗಿಹೋಗಿಅದ್ಯಾವ್ದೋ 'ಹಳ್ಳಿಗುಗ್ಗು' ನನ್ಮಗ  ಈಕುರ್ಚೀನವಿಧಾನಸೌಧದಿಂದಎತಾಕೊಂಡ್ಬಂದಅಂತನೀಹೇಳಿದ್ರೆಅದ್ನನಾನಂಬಬೇಕ?

 

 

ಅದ್ನ ಚಿಕ್ ಮಗೂನೂ ನಂಬೋಲ್ಲ ಗೊತ್ತುಂಟ? ನಡಿ ಗಾಡಿಹತ್ತಿ , ಹಳ್ಳಿ ಕಡೆ ಹೋಗಿ  ಆ ಮುನಿಯನನ್ನ ಮತ್ತು ಸ್ನೇಹಿತರನ್ನ ಕರ್ಕೊಂಡು ಊರ 'ಹೊರಗಡೆ' ಬನ್ನಿಅಲ್ಲಿನಿಮ್ಮನ್ನೆಲ್ಲವಿಚಾರಿಸುವೆ. ನೀವುತಪ್ಪಿಸಿಕೊಳ್ಳುವ  ಆಲೋಚನೆಮಾಡಬೇಡಿಅಂತತನ್ನಕ್ಯಾಮೆರಮೊಬೈಲು  ಫೋನುತೆಗೆದು  ಇಬ್ಬರಫೋಟೋಹೊಡೆದ.. ಆಯ್ತುಸ್ವಾಮೀ  ನೀವೆಳಿದಂಗೆಅಂದವ್ರೆ  ಹಳ್ಳಿಗೆಗಾಡಿಓಡಿಸಿ  ಹಳ್ಳಿಹತ್ತಿರಬಂದಾಗಒಂದೆಡೆನಿಲ್ಲಿಸಿ  ಬೆಂಕಿಮುನಿಯಮತ್ತುಕಂಪನಿಹುಡುಕಲುಊರಹೊಳಹೊಕ್ಕರು..

 

ಕಾಸುಇಸ್ಕೊಂಡು  ಮನೆಗೂಹೋಗದೆ  'ಕಾಳಪ್ಪನಕಳ್ಳುಅಂಗಡಿ'  ಹೊಳನಿರ್ಭಯವಾಗಿಹೊಳಹೊರಟಈನಾಲವರನ್ನ  ಅದರಲ್ಲೂ'ಬೆಂಕಿ' ಮುನಿಯನ  ನೋಡಿ ,ಕಾಳಪ್ಪನಿಗೆ 'ಉರಿದು' ಹೋಯ್ತು, ಬಡೀಮಗನೆಎಷ್ಟುಧೈರ್ಯನನ್ನೇನೋಡಿಒಳಬರ್ತೀಯ, ಕುಡಿ-ಕುಡಿಆಮೇಲೆಕಾಸುಕೊಡದೆಇದ್ದರೆ 'ಕಕ್ಕಿಸಿಬಿಡುವೆಎಲ್ಲ' ಮನದಲ್ಲೇಹೇಳಿಕೊಂಡ. ಒಳಹೋಗಿಕಳ್ಳು-ಮೀನುಆರ್ಡರ್  ಮಾಡಿಮೀನುನೆಂಚುತ್ತ- ಕಳ್ಳುಕುಡಿಯುತ್ತಿದ್ದರು : ನಾಣಿ-ಶೀನ-ಮುನಿಯ -ಕರಿಯ...

ಮುಂದೆಆಗುವಯಾವುದರಪರಿವೆಯೂಇಲ್ಲದೆ!!

 

 

ಊರೊಳಗೆಮುನಿಯನಮನೆಅಡ್ದ್ರೆಸ್ಸು  ಕೇಳಿಅವನಮನೆಗೆಹೋಗಿ  ಕೇಳಿದಾಗ 'ಚಿಕೀರಿ'  ಅವ್ರುಮನೆಗ್ಬಂದಿಲ್ಲ, ನಿಮಗೆಎಲ್ಲರಸಿಕ್ರೆ  'ಬೇಗ' ಬರೋಕೆಹೇಳಿಅಂದ್ಲು,  ಅವ್ನುಇನ್ನೆಲ್ಲಿಬೇಗಬರೋದು? ಅವನಿಗೆ 'ದುಬೈಏರೋಪ್ಲೇನು' ಕಾಯುತ್ತಿದೆ!! ನಕ್ಕರುಅವಳಮಾತಿಗೆಅರ್ಮುಗಂಮತ್ತುಸ್ನೇಹಿತ, ಅವ್ರನಗೆಗೆಅರ್ಥಗೊತ್ತಾಗದೆ  ಸುಮ್ಮನೆಹೊಳಹೋದಳುಚಿಕ್ಕೀರಿ. ಅಕ್ಕಪಕ್ಕದವರನ್ನ  ಕೇಳಲು  ಅವ್ನುಇಸ್ತೋತ್ತಲ್ಲಿಸಿಗೋದುಏನಿದ್ರೂ 'ಕಾಳಪ್ಪನಕಳ್ಳುಅಂಗಡೀಲಿಅಂದ್ರು…..

 

 ಅವರಿವರನ್ನುಕೇಳಿಕೊಂಡುಕಳ್ಳುಅಂಗಡಿಸಮೀಪಬಂದು  ಗಲ್ಲದಪೆಟ್ಟಿಗೆಮೇಲೆಕುಳಿತಿದ್ದ  ಕಾಳಪ್ಪನ  ಭಯಂಕರಅವತಾರ  ಕಂಡುಸಾಕ್ಷಾತ್  ಯಮಧರಮನೆ  ಇಲ್ಲಿಕುಳಿತಿರುವನೇನೋ? ಎಂದುಭಯಪಟ್ಟು  ಒಳಹೋಗುವುದೋಬೇಡವೋಎಂಬಂತೆ  ನಿಂತದ್ದಅರ್ಮುಗಂಮತ್ತುಸ್ನೇಹಿತನನ್ನನೋಡಿದ  ಕಾಳಪ್ಪನಿಗೆಇವರುಯಾರೋ 'ಹೊಸಬರು' ಅನ್ನಿಸಿತು, ಬನ್ನಿಬನ್ನಿ  ಒಳಹೋಗಿ  ಬಿಲ್ಲು' ಆಮೇಲೆ' ಬರುವಾಗ  ಕೊಡಿಅಂದ:) ಅನ್ಜಂಜುತ್ತಅವನೆಡೆನೋಡುತ್ತಾಹತ್ತಿರಬಂದುಮುನಿಯಅಂತಬಾಯ್ತೆರೆಯಲು, ಓಹೋಆಕಳ್ಳಮುನಿಯಾನಹುಡುಕಿಕೊಂಡುಇಲ್ಬಂದಿರುವಿರೋ  ಅವ್ನುಒಳಗಡೆಅವ್ನೆ, ಹೋಗಿಹೋಗಿ  ಅಂದ..

 

ಒಳಹೋಗಿಲಾಂದ್ರದಮಿಣುಕುಮಿಣುಕು  ಬೆಳಕಿಗೆಏನೂಕಾಣಿಸದೆ  ಕಣ್ಣುನಿಟ್ಟಿಸಿನೋಡಲು, ದೂರದಲ್ಲಿ  ಮೀನನ್ನುಬಾಯಿಗೆಹಾಕುತ್ತಕೈಯಲ್ಲಿಕಳ್ಳುಲೋಟಹಿಡಿದುತೂರಾಡುತ್ತಿರುವ 'ಮುನಿಯಅಂಡ್  ಕಂಪನಿ' ಕಾಣಿಸಿತು, ಅವರಮುಂದೆಹೋಗಿನಿಂತರುಅರ್ಮುಗಂಮತ್ತುಸ್ನೇಹಿತ ... ಮೊದಲುತಮ್ಮಮುಂದೆಬಂದುನಿಂತ 'ಆಇಬ್ಬರು' ಯಾರುಅಂತಗೊತ್ತಗಲಿಲ, ೫ -ಹತ್ತುನಿಮಿಷಆದರೂತಮನ್ನೇಧಿಟ್ಟಿಸಿಕೋಪದಲ್ಲಿನೋಡುತ್ತಿರುವಆಇಬ್ಬರನ್ನ  ನೋಡಲು -ಅವರುಇಬ್ಬರುತಮಗೆ 'ಪರಿಚಯದವರು' ಎಂಬಭಾವಕರಿಯ-ಮುನಿಯನಾಣಿ-ಶೀನ  ಗೆಬಂತು :)

 ಮುನಿಯನಿಗೆಮೊದಲು  ಗೊತ್ತಾಗಿದ್ದುಅವ್ರುಅರ್ಮುಗಂ  ಮತ್ತುಸ್ನೇಹಿತಅಂತ, ಮನಏನೋಕೇಡನ್ನಶಂಕಿಸಿ  'ಎಲ್ಲೋಏನೋಎಡವಟ್ಟು' ಆಗಿದೆಅಂತಗೊತ್ತಾಗಿಕುಡಿದದ್ದೆಲ್ಲ  ಹಂಗೆ 'ನೀರಾಗಿ' ಭುವಿಸೇರಿತು!!

 

ಕೈಕಾಲುಥರಥರಅನ್ನಲುಶುರುಮಾಡಿದವು.. ಮುನಿಯಓಡಲುಅಣಿಆಗುತ್ತಿದ್ದಂತೆ  ಅದನ್ನುಗ್ರಹಿಸಿಅವನಕತ್ತಿನಪಟ್ಟಿಗೆಕೈಹಾಕಿದರದರಹೊರಎಳೆದುಕೊಂಡುಬಂದು  ಕಾಳಪ್ಪನಿಗೆಕಾಸುಕೊಟ್ಟು  ಅವನನ್ನ  ಅನಾಮತ್ತಾಗಿಹೆಗಲಮೇಲೆಹಾಕಿಕೊಂಡು  ತಮಗಾಗಿಕಾಯ್ತಿದ್ದಗುಂಡಣ್ಣಇದ್ದಲ್ಲಿಗ್ಬಂದು  ,ಮುನಿಯನ್ನ  ಗಾಡಿಯಲ್ಲಿಹಾಕಿ  ಮುಖಕ್ಕೆ  ಪಕ್ಕದಲ್ಲಿಹರಿಯುತ್ತಿದ್ದಹಳ್ಳದಿಂದ  ನೀರುತಂದುರಪರಪನೆಎರೆದರು.. ಇನ್ನುಸುಧಾರಿಸಿಕೊಳ್ಳುತ್ತಿದ್ದ  ಮುನಿಯನಕೆನ್ನೆಗೆ 'ಚಟೀರನೆ' ಜೋರಾಗಿಬಾರಿಸಿದರುಗುಂಡಣ್ಣಅವ್ರು, ಆಏಟಿಗೆತತ್ತರಿಸಿ  ಅವನಕಣ್ಣಿಂದಹಂಗೆಬಂದರು 'ಗಂಗಾ-ಕಾವೇರಿ' ಸಹೋದರಿಯರು:)

 

 

ಕುರ್ಚಿ ಕಥೆ ಇನ್ನೇನು 'ಕೆಲವೇ' ಕಂತುಗಳಲ್ಲಿ ಮುಗಿಯುವ ಹಂತದಲ್ಲಿದೆ .........................!!

 

 

 

ಚಿತ್ರ ಮೂಲ: ___LINK_OPEN_href="http://tedlandphairsamerica.blogspot.com/2010_05_01_archive.html"___http://tedlandphairsamerica.blogspot.com/2010_05_01_archive.html

 

ಕುರ್ಚಿ ಚಿತ್ರ ಮೂಲ: http://blog.alicesf.com/2011/08/fallen-chair-project.html