ಮುಂಬೈನ  ಸಾಂತಾಕೃಝ್ ನಲ್ಲಿ  ...

 

ಸಾಂತಾಕೃಝ್ (ಪೂ)ಪ್ರಭಾತ್ ಕಾಲೋನಿಯಲ್ಲಿರುವ ಪೇಜಾವರಮಠದ ಸಭಾಗೃಹದಲ್ಲಿ  !

ಜನವರಿ, ೭, ಶನಿವಾರ ಸಂಜೆ,  ಮುಂಬೈನ ಬಿ. ಆರ್. ರೆಸ್ಟೋರೆಂಟ್ ಹೋಟೆಲ್ ಸಮೂಹದ ಉದ್ಯಮಿ ಉಡುಪಿ ವಳಕಾಡು ಬಿ.ಆರ್.ಶೆಟ್ಟಿ ಪರಿವಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವಿದ್ಯಾನಿಧಿ ವಿದ್ಯಾಭೂಷಣರ, ಹರಿದಾಸ ಸಾಹಿತ್ಯ, ಮತ್ತು  ಭಕ್ತಿ ಸಂಗೀತ ದ್ವಿತೀಯ ಪ್ರದರ್ಶನವನ್ನು ಉಚಿತವಾಗಿ ಸಾದರಪಡಿಸಿದರು. 
 
ಮುಂಬೈನ ಸಾಂತಾಕೃಝ್ (ಪೂ)ಪ್ರಭಾತ್ ಕಾಲೋನಿಯಲ್ಲಿರುವ ಪೇಜಾವರಮಠದ ಸಭಾಗೃಹದಲ್ಲಿ ಜಗದ್ಗುರು ಶ್ರೀ ಮಧ್ವಚಾರ್ಯರ ಸಂಸ್ಥಾನದ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಆಯೋಜಿಸಲ್ಪಟ್ಟ ಭಕ್ತಿಸಂಗೀತ ಕಾರ್ಯಕ್ರಮದಲ್ಲಿ ಮುಂಬೈ ವೃತ್ತಿಪರ ಶೈಕ್ಶಣಿಕ ರಂಗದ ಪ್ಯಾಶನ್ ವಲಯವನ್ನು ತನ್ನ ಐ.ಐ.ಟಿ.ಸಿ. ಸಂಸ್ಥೆಯ ಮೂಲಕ ವಿಶ್ವಕ್ಕೆ ಪರಿಚಯಿಸಿದ ದಕ್ಶಿಣಕನ್ನಡ ಜಿಲ್ಲೆಯ ಮೂಲದ  ಎಸ್.ಕೆ ಉರ್ವಲ್ ಮತ್ತು ಶ್ರೀಮತಿ ಪ್ರಪುಲ್ಲಾ ಉರ್ವಲ್ ದಂಪತಿಗಳು  ಆತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ತಿತರಿದ್ದರು. 
 
ಪ್ರಾರಂಭದಲ್ಲಿ ಎಸ್.ಕೆ ಉರ್ವಲ್ ಮತ್ತು ಶ್ರೀಮತಿ ಪ್ರಪುಲ್ಲಾ ಉರ್ವಲ್ ದಂಪತಿಗಳು ಭಕ್ತಿಸಂಗೀತ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ  ಚಾಲನೆನೀಡಿದರು. ವಿದ್ಯಾನಿಧಿ ವಿದ್ಯಾಭೂಷಣ  ಹಾಗೂ ಸಹ-ಕಲಾವಿದರನ್ನು ಪುಷ್ಪಗುಚ್ಛದಿಂದ ಸನ್ಮಾನಿಸಲಾಯಿತು.
 
ವೈದ್ಯಕೀಯ ಸಮಾಜಸೇಗೆಗಾಗಿ ದುಡಿಯುತ್ತಿರುವ 'ಡಾ. ಸುರೇಶ್ ಎಸ್.ರಾವ್ ಕಟೀಲು', 'ಡಾ.ವೆಂಕಟೇಶ್  ಜಿ.ಪೈ ಕೋಟ', ಹಾಗು ಹಿರಿಯ ಪತ್ರಕರ್ಥ 'ಶ್ರೀನಿವಾಸ ಜೋಕಟ್ಟೆ', 'ಎಸ್. ಎಲ್. ಭಟ್' ರವರನ್ನು ಪುಷ್ಪಗುಚ್ಛದಿಂದ ಸನ್ಮಾನಿಸಲಾಯಿತು. 
 
ಮುಂಬೈಶಾಖೆಯ ಪೇಜಾವರಮಠದ  ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ, ತಮ್ಮ  ಸ್ವಾಗತ ಭಾಷಣದಲ್ಲಿ ಸಭಿಕರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಐ.ಐ.ಟಿ.ಸಿ ನಿರ್ದೇಶಕರುಗಳಾದ 'ವಿಕ್ರಾಂತ್', ಮತ್ತು 'ರೀನಾ ಎಸ್'. ಸೇರಿದಂತೆ, ಅತಿಥಿಗಳಾದ 'ವಾಸುದೇವ ಉಪಾಧ್ಯಾಯ', 'ರವಿ ಸುವರ್ಣ', 'ಹರೀಶ್ ಶೆಟ್ಟಿ', 'ವಿಠಲ್ ಹೆಗ್ಡೆ', 'ದಯಾನಂದ ಶೆ'ಟ್ಟಿ, 'ಕೈತಾನ್ ಡಾಯಿಸ್', 'ವಿಕ್ರಮ್ ರೈ', 'ಹರಿಭಟ್, ನಿರಂಜನ್ ಗೋಪ್ಟೆ', ಮೊದಲಾದವರು ಹಾಗು ಅಪಾರ ಸಂಗೀತ ರಸಿಕರಿಂದ ಸಭಾಂಗಣ ತುಂಬಿತುಳುಕುತ್ತಿತ್ತು.
 
'ಶ್ರೀ ವಿದ್ಯಾಭೂಷಣರು' ತಮ್ಮ ಸಿರಿಕಂಠದಿಂದ ದಾಸರಕೀರ್ತನೆಗಳನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು.   
 
ಭಕ್ತಿಸಂಗೀತ ಕಾರ್ಯಕ್ರಮದ ಕೊನೆಯಲ್ಲಿ 'ಪ್ರಕಾಶ್ ಆಚಾರ್ಯ ರಾಮಕುಂಜ' ವಂದನಾರ್ಪಣೆಯನ್ನು ಮಾಡಿದರು.

ಸನ್, ೨೦೧೨ ರ ಜನವರಿ, ೬, ಶುಕ್ರವಾರದ  ಸಂಜೆ, ಮುಂಬೈನ ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಶ್ರೀ ವಿದ್ಯಾನಿಧಿ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮ ! 

 

ಉರುವಲ್ ದಂಪತಿಗಳಿಗೆ ಶುಭಾಶೀರ್ವಾದ...

 

ಶ್ರೀ.ಕೆ.ಮಂಜುನಾಥಯ್ಯ,  ವೇದಿಕೆಕೆಯ ಮೇಲೆ ಗಣ್ಯರನ್ನು ಸನ್ಮಾನಿಸುತ್ತಿರುವುದು.....

 ಹೋದ ವರ್ಷ,(೨೦೧೧) ಅಂದರೆ ಕೇವಲ ೫ ತಿಂಗಳ ಹಿಂದೆಯೇ ವಿದ್ವಾನ್ ವಿದ್ಯಾಭೂಷಣರ ಸಂಗೀತ ಕಾರ್ಯಕ್ರಮವನ್ನು ಮುಂಬೈನ ಸಂಗೀತ ಪ್ರೇಮಿಗಳಿಗೆ ಉಣಬಡಿಸಲು ಆಯೋಜಿಸಿದ್ದ ಊರ್ವಲ್ ದಂಪತಿಗಳು ೨೦೧೨ ರ ಪ್ರಾರಂಭದಲ್ಲೇ ಮತ್ತೊಮ್ಮೆ 'ವಿದ್ಯಾಭೂಷಣರ ಗಾಯನ'ವನ್ನು ಮತ್ತೆ ಆಯೋಜಿಸಿ ಎಲ್ಲರ ಮನಸ್ಸಿಗೆ ಮುದತಂದರು.

ಹೆಚ್ಚುಬಳಕೆಯಲ್ಲಿಲ್ಲದ ಕೀರ್ತನೆಗಳನ್ನು ತಮ್ಮ ಹಾಡುಗಾರಿಕೆಯಲ್ಲಿ ಅಳವಡಿಸಿಕೊಂಡು ಅವಕ್ಕೆ ಹೊಸ ನವಿರಾದ 'ಕರ್ನಾಟಕ  ಶಾಸ್ತ್ರೀಯ ಸಂಗೀತ'ದ ಮೆರುಗನ್ನು ಕೊಟ್ಟು ಸುಶ್ರಾವ್ಯವಾಗಿ ಹಾಡುವ ವಿದ್ಯಾಭೂಷಣರ ಪರಿ ಅನನ್ಯವಾದದ್ದು. ವಿದ್ಯಾಭೂಷಣರ ಸಂಗೀತ ಕೃಷಿ, ಅವರದೇ ವಿಶೇಷ ಛಾಪನ್ನು ಹೊಂದಿದ್ದು ಪ್ರತಿಸಲವೂ ಕೇಳುಗರನ್ನು ಆತ್ಮಾವಲೋಕನೆಗೆ  ತೆರೆದಿಡುತ್ತದೆ. ವಿದ್ಯಾಭೂಷಣರಿಗೆ ವಿದ್ಯಾಭೂಷಣರೇ  ಸರಿಸಾಟಿ !

ಕಾರ್ಯಕ್ರಮದ ಮೊದಲಿಗೆ ಶ್ರೀ. ಕೆ. ಮಂಜುನಾಥಯ್ಯನವರು, ಪ್ರಾಸ್ತಾವಿಕವಾಗಿ ಸಭೆಗೆ ವಿದ್ಯಾಭೂಷಣ ಮತ್ತು ಅವರ ತಂಡದವರನ್ನು ಸಭೆಗೆ ಆಹ್ವಾನಿಸಿ, ಎಲ್ಲರಿಗೂ ಹೊಸವರ್ಷದ ಆಗಮನದ ಶುಭ ಕೋರಿದರು. 

ಮುಂಬೈನಗರದ ಸಂಗೀತ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಶುರುವಾಗುವ ಮೊದಲೇ ಹಾಜರಿದ್ದರು.  ಅವರೆಲ್ಲರೂ  ಬಹಳ ಆಸಕ್ತಿಯಿಂದ  ಸಂಗಿತವನ್ನು ಆಲಿಸಲು ಕಾತುರರಾಗಿದ್ದುದು ಕಾಣಬರುತ್ತಿತ್ತು.  ಸಮಯಕ್ಕೆ ಮೊದಲೇ  ಮೈಸೂರು  ಅಸೋಸಿಯೇಷನ್  ಸಭಾಂಗಣ ತುಂಬಿತುಳುಕುತ್ತಿತ್ತು.  ವಿದ್ಯಾಭೂಷಣರು ಆರಿಸಿಕೊಂಡು ಹಾಡಿದ ಅನುಪಮ ಕೃತಿಗಳು : 
 
೧. ಗಜಮುಖನೆ ವಂದಿಪೆ,
೨. ಭಾರತಿ ದೇವಿಯ ನೆನೆನೆನೆ,
೩. ಜಯ ಜಯ ಸದಮಲ ಗುಣ ಭರಿತ
೪. ಪೋಗದಿರೆಲೊ ರಂಗಾ, ಬಾಗಿಲಿನಿಂದಾಚೆಗೆ
೫. ಚಂಚಲಿಸದಿರು ಚತುರನಾಗೋ ಮನವೆ
೬. ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ (ಕನಕ ದಾಸರ ಕೃತಿ)
೭. ಕಮಲ ಮುಖಿಯೆ
೮. ಕೊಳಲನೂದುತ ಬಂದ ಗೋಪಿಯ ಕಂದ
೯. ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿನೋಡಿದಿರಿ
೧೦. ಕೃಷ್ಣನ ತೂಯನದೆ(ತುಳು)
೧೧. ಕಾಯೆ ದುರ್ಗಾಂಬಿಕೆಯೆ
೧೨. ಲೇಲೆಲೆ ಕಂಡು (ತುಳು)
೧೩. ಮಲಯಜ ಸರಸಮ ತನವಿರಹೇ ರಾಧಿಕ (ಸಂಸ್ಕೃತ)
೧೪. ವರಮಂತ್ರಾಲಯ
೧೫. ವೆಂಕಟಾಚಲ ನಿಲಯ
೧೬. ನಿನ್ನಂಥ ದೊರೆಯಿಲ್ಲ
೧೭. ಭಾಗ್ಯದ ಲಕ್ಷ್ಮೀ ಬಾರಮ್ಮ
 
ಸಂಗೀತದ ಧಾಟಿಯಲ್ಲಿ  ಮೂಡಿಬಂದ 'ಕಮಲ ಮುಖಿಯೆ', 'ಭಾರತಿ ದೇವಿಯ ನೆನೆ ' ಮೊದಲಾದ ವಿದ್ಯಾಭೂಷಣರ ಗೀತೆಗಳ ಸ್ವರಪ್ರಸ್ತಾರ, ಸೊಗಸಾಗಿ ಮೂಡಿಬಂತು. ವಿದ್ಯಾಭೂಷಣರ ಸಂಗೀತ ಸುಧೆಯಲ್ಲಿ ಮಿಂದವರಿಗೆ, ದಾಸರ ಕೀರ್ತನೆಗಳು,  ವಿಶಿಶ್ಠ ಸಾಹಿತ್ಯವನ್ನು ಹೊಂದಿದ್ದು, ಅವು  ಹಾಡುವ ಪ್ರಭುದ್ಧ ಕಲಾವಿದರ ಸಾಮರ್ಥ್ಯಕ್ಕೆ ಸವಾಲನ್ನು ಹಚ್ಚುವಂತಹ ಅದ್ಭುತ ಶಕ್ತಿಗಳ  ಕಣಜವೆನ್ನುವುದನ್ನು ಪ್ರತಿಬಾರಿ ಕೇಳಿದಾಗಲೂ ಮನದಟ್ಟಾಗುವುದಂತೂ ಖಂಡಿತ.
ಕೊನೆಯಲ್ಲಿ, ಶ್ರೀಮತಿ, ರಮಾ ವಸಂತ್ ರವರು, ಕಲಾವಿದರಿಗೆ ಮತ್ತು ಸಭೆಗೆ ಬಂದವರಿಗೆ, ಹಾಗೂ ಸಹಕರಿಸಿದ ಎಲ್ಲರಿಗೂ  ವಂದನಾರ್ಪಣೆಯನ್ನು ಸಮರ್ಪಿಸಿದರು
 
-ಚಿತ್ರ ಮತ್ತು ಲೇಖನ : ಹೊರಂಲವೆಂ