ಸಿಪ್ - ೩೨
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಮಂಜು, ಮಂಜು !!ನಾಲ್ಕು ದಿಕ್ಕಿನಲ್ಲಿ ಮಂಜು, ಐದು ಮೀಟರ್ ದೂರದಲ್ಲಿನ ವಸ್ತುಗಳು ಸರಿಯಾಗಿ ಕಾಣದಷ್ಟು ದಟ್ಟವಾದ ಮಂಜು !!
ಕೈಗಳು ಜೋಥೆಯಾಗಿದ್ದವು ಕಣ್ಣು ಡಿಜಿಟಲ್ ಪೋರ್ಟ್ರೈಟ್ ನಿಂದ ರಿಯಲ್ ಪೋರ್ಟ್ರೈಟ್ ಕಡೆಗೆ ಆಕರ್ಶಿತವಾಗಿದ್ದವು.
ಅವಳೂ ಹೊರಗೆ ನೋಡುತಿದ್ದಳು. ಮೊಡದ ಮೇಲೆ ವಿಹರಿಸಬೇಕು ಎನ್ನುವ ಮನಸ್ಸಿನ ಅಭಿಲಾಷೆ ಈಗ ಪ್ರಾಯಶ ನಿಜ ಆಗುವ ಗಳಿಗೆ ಬಂದಿತ್ತು. "ಸೂಪರ್ !" ಎಂದು ಪ್ರತಿ ನೋಟ ಪ್ರತಿಕ್ರಿಯೆ ನೀಡುತ್ತಿತ್ತು. ಅದು ಮೊದಲ ಪ್ರೆಮಿಯಲ್ಲಿ ಪರವಶವಾಗಿತ್ತು. ಆಕೃತಿಯನ್ನು ಬಿಟ್ಟು ಅದು ಪ್ರುಕೃತಿಯ ಸೌಂದರ್ಯದಲ್ಲಿ ಕರಗಿ ಹೋಗುತಿತ್ತು.
ಕೈಯಲ್ಲಿ ತುಂಬಾ ದಿನದ ನಂತರ ಕೆಮೆರಾ ನಗುತಿತ್ತು, ಚಳಿಯಲ್ಲಿ ನಡುಗುತಿದ್ದರೂ, ಪ್ರಕೃತಿಯದರದ ಮುತ್ತನ್ನು ಆರ್ಜಿಸಲು ಕಾತರದಲ್ಲಿತ್ತು.ಸಲ್ಪದರಲ್ಲೇ ಸೀಟ್ ನಿಂದ ಎದ್ದು ನಾನು ಡ್ರೈವರ್ ಬಳಿ ಹೋಗಿ ಕುಳಿತೆ. ಮನ ಪ್ರಕೃತಿಯಲ್ಲಿ ಲೀನವಾಗಿತ್ತು.
ರೋಡಿನ ಬಲಬದಿಗೆ ಸಾಗುತಿದ್ದ ವಿಶಾಲವಾದ ಬಯಲು ಮತ್ತು ಅದರ ಹಿಂದಿನ ದಟ್ಟ ಹಸಿರು ಪ್ರಪಾತ ನಡುವಲ್ಲಿ ಮಂಜಿನ ಸಂತೆ ನನ್ನ ಕೆಮೆರಾವನ್ನು ಕೈ ಬೀಸಿ ಕರೆಯುತಿತ್ತು. ನಾನು ಡ್ರೈವರ್ ನಲ್ಲಿ "ಭೈಯ್ಯಾ ಗಾಡಿ ತೋಡ ರೈಟ್ ಮೇ ಲೇಂಗೇ ಕ್ಯಾ, ಅಚ್ಚಾ ಸ್ಪಾಟ್ ಹೇ" ಅಂದೆ.
ಅದಕ್ಕವನು "ಇದರ್ ಸೆ ಅಚ್ಚ ವ್ಯೂ ನಹಿ ಮಿಲೇಗ ಭಾಯಿ, ತೋಡ ಉಸ್ ಸೈಡ್ ಜಾಯೆಂಗೆ! ವಹಾನ್ ಸೆ ಅಚ್ಚ ವ್ಯೂ ಮಿಲೇಗ" ಅಂದ. ನಾನು ಸರಿ ಎಂದೆ. ಸಲ್ಪದರಲ್ಲಿ ತಿರುವು ಮುರುವು ರಸ್ತೆಯನ್ನು ದಾಟಿ ಬಸ್ಸ್ ವಿಶಾಲವಾದ ಬಯಲಲ್ಲಿ ನಿಂತಿದ್ದವು. ಎಲ್ಲರು ಕೆಳಗೆ ಜಿಗಿದರು. ಹೆಚ್ಚಿನವರು ಮೊಬೈಲ್ ನಲ್ಲಿ ಕಣ್ಣಿಗೆ ಕಂಡ ನೋಟ ಬಂಧಿಸುತಿದ್ದರು,ಸಾಧಾರಣದ ಕೆಮೆರಾ ಕೆಲವರ ಕೈಯಲ್ಲಿ ಕಣ್ಣು ಮಿಟಿಕಿಸುತಿದ್ದವು, ಡಿಎಸ್ಎಲ್ಆರ್ ಫೋಟೋಗ್ರಫಿ ಹುಚ್ಚಿಲ್ಲದಿದ್ದರೂ ಒಂದು ಪ್ರೆಸ್ತಿಜ್ ನ ದ್ಯೋತಕವಾಗಿ ತಿವಾರಿಯ ಕುತ್ತಿಗೆಯಲ್ಲಿ ನೆತಾಡುತಿತ್ತು.
ಪ್ರಕೃತಿಯ ಹಿನ್ನಲೆಯಲ್ಲಿ ಕೆಲವರು ಹೃತಿಕ್ ರೋಶನ್ ಆದರೆ ಇನ್ನು ಕೆಲವರು ಐಶ್ವರ್ಯ, ದಿಯಾ ಮಿರ್ಜಾ ಗಳಾಗುತಿದ್ದರು, ಭಂಗಿ ಗಳನ್ನೂ ಬದಲಿಸುತಿದ್ದರು. ಇನ್ನೊಬ್ಬರ ಮೊಬೈಲ್ ನಲ್ಲಿ ಸೆರೆಯಾಗುತಿದ್ದರು. ನಂತರ ತನ್ನ ಮೊಬೈಲ್ ಅವರಿಗೆ ಕೊಟ್ಟು ಅದರಲ್ಲಿ ಭಂದಿಸಲು ಪ್ರಯತ್ನಿಸುತಿದ್ದರು. ಮದುವೆಯಾದ ಕುತ್ತಿಗೆಗಳು ಗಂಡನಿಗೆ ಕರೆಮಾಡಿ ತಮ್ಮ ಎರಡನೇ ಹನಿಮೂನನ್ನು ಬೇಗನೆ ಇಲ್ಲಿ ಮಾಡಬೇಕಾಗಿ ತೋಡಿ ಕೊಳ್ಳುತಿದ್ದವು. ಎಂಗೇಜ್ ಆದ ಉಂಗುರಗಳು, ಇಲ್ಲಿನ ಹಸಿರನ್ನು ಉಸಿರನ್ನು ವಿವರಿಸಿ, ತಿಳಿನಿದ್ದೆಯಲ್ಲಿದ್ದ ತಮ್ಮ ಬೆಲೋವ್ದ್ ಒನ್ ಗಳಿಗೆ ಮಂಪರು ಹತ್ತಿಸುತಿದ್ದರು. ಎಲ್ಲಿಹೋದರು ಅದೇ ಜ್ಞಾನ ದಲ್ಲಿರುವ ಕಾರ್ಕಾನೆಯ ಕೊಳವೆಗಳು ಚಳಿಗೆ ಒಂದರ ಹಿಂದೆ ಇನ್ನೊಂದು ಹೇಳಿ ಧಮ್ಮು ಬಿಡುತಿದ್ದವು.
ಜಾಕೆಟನ್ನು ಸೊಂಟಕ್ಕೆ ಕಟ್ಟಿದ್ದ ಅವಿನಾಶ್ ಚಳಿಗೆ ತನ್ನನ್ನು ಬ್ರೆಸಲಿಯನ್ ಅಂದರೂ ಪರವಾಗಿಲ್ಲ ಎಂದು ಮೇಲ್ ಕುತ್ತಿಗೆತನಕ ಜಿಪ್ ಎಳೆದು ಹೂಡ್ ಅನ್ನು ಹಾಕಿ "ಬಾಯಿ ಮೇರ ಏಕ ಐಸೆ ಲೇಲೋ, ಬಾದ್ ಮೇ ಮೇ ತುಮ್ಹಾರಾ ಲೇತಾ ಹುನ್ " ಎಂದು ಯಾವ ರೀತಿಯಲ್ಲಿ ತನ್ನ -ಫೋಟೋ ಬರಬೇಕು ಎಂದು ಹೇಳಿ ವಿವರಿಸುತಿದ್ದ. ಒಂದರ ಹಿಂದೆ ಒಂದರಂತೆ ಫೋಟೋಗಳು ಮೆಮೊರಿ ಕಾರ್ಡ್ನಲ್ಲಿ ಅಚ್ಚಾಗುತಿದ್ದವು, ಅವನ ಪೋಸ್ ಬದಲಾಗುತ್ತಿತ್ತು, ಆದ್ರೆ ಆಸೆ ಪೂರಿರಲಿಲ್ಲ.
ನಾನು ಅವನಿಗೆ "ಭಾಯ್ ಬಸ್ ತೇರ ಹಿ ಫೋಟೋ ಲೇನಾ ಹೇ ಕ್ಯಾ ಮುಜೆ" ಎನ್ನುತ್ತಾ ಲೆನ್ಸ್ ಆನ್ನು ಅವನ ಫೋಸಿಗೆ ಕೊಡದೆ ಇನ್ನೊದು ದಿಕ್ಕಿಗೆ ಝೂಮ್ ಮಾಡಿದೆ.
ಮಂಜು ಮತ್ತು ಜನರ ನಡುವೆ ಮರೆಯಾದ ಆಕೃತಿಯ ನೀಲಿ ಜೀನ್ಸ್ ಮತ್ತು ತಿಳಿ ಹಸಿರು ಟಿ ಶರ್ಟ್ ಹುಡುಕುತಿತ್ತು ನನ್ನ ಕಣ್ಣೂ, ಕೆಮರಾ ಕಣ್ಣು. ತಿವಾರಿ ಹುಡುಗಿಯರನ್ನೆಲ್ಲಾ ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಯುತಿದ್ದ, ಅವನಲ್ಲಿಗೆ ಹೋಗಿ."ಸರ್ ನೀವು ನಿಲ್ಲಿ! ನಾನು ತೆಗೆಯುತ್ತೇನೆ" ಎನ್ನುತ್ತಾ ಅವರ ಕೆಮೆರಾ ಇಸ್ಕೊಂಡೆ.
೮ ಗೋಪಿಯರ ನೋಡುವೆ ಏಕಾಂಗಿ ಕೃಷ್ಣಾ ಮಿಂಚುತಿದ್ದ. ಅವನ ಕೆಮರಾದಲ್ಲಿ ಅಚ್ಚಾದ ಬಳಿಕ ನಾನು "ಏಕ್ ಮಿನಿಟ್, ಅಪನೇ ಕೆಮೆರಾ ಮೇ ಏಕ್" ಅಂದೆ.
ನಾನು ಕೆಮೆರಾ ಆನ್ ಮಾಡಿ ಪೋಕಸ್ ಮಾಡುವಷ್ಟರಲ್ಲಿ ಗೋಪಿಕೆಯರು ತಮ್ಮ ಕತ್ತು ಕುತ್ತಿಗೆಯನ್ನು ವಾಲಿಸಿ, ಮಾಸಿದ್ದ ಲಿಪ್ಸ್ಟಿಕ್ ಅನ್ನು ತುಟಿಯಿಂದ ಒರಸುತ್ತಾ ಶೈನಿಂಗ್ ಬರುವಂತೆ ಮಾಡಿಕೊಂಡರು. ಕೆಮೆರಾ ವನ್ನು ಝೂಮ್ ಮಾಡಿದೆ. ಎದುರಿದ್ದ ಒಂಬತ್ತು ತುಟಿಗಳು ನಗುತಿದ್ದವು.ನನಗೆ ಬೇಕಾದ ಒಂದೇ ತುಟಿ ಕೆಮೆರಾದಲ್ಲಿ ಸೆರೆಯಾಯಿತು.
ಎಂಟು ಜನರಲ್ಲಿ ಆರು ಮಂದಿ "ವೈಭು, ಪ್ಲೀಸ್ ಫ್ರೊಂ ದಿಸ್" ಎನ್ನುತ್ತಾ ಮುಂದೆ ಮೊಬೈಲ್ ಚಾಚಿದರು.
ನಾನು "ಐ ವಿಲ್ ಶೇರ್ ಆಲ್ ದೀಸ್ ಫೋಟೋಸ್ ವಿಥ್ ಯು ಆಲ್" ಎನ್ನುತ್ತಾ ನನ್ನ ೨ ನಿಮಿಷವನ್ನು ಬಚಾಯಿಸಿಕ್ಕೊಂಡೆ.
ಗುಂಪಿನಿಂದ ಪ್ರೀತಿ ನನ್ನಲ್ಲಿ ಬಂದು "ಮಂಗ ತೋರ್ಸೋ, ಹೇಗೆ ಬಂದಿದೆ ನೋಡ್ತೇನೆ" ಅಂದ್ಲು.
ಇಂಗು ತಿಂದ ಮಂಗನತಾದೆ "ಬಾ ಇಲ್ಲಿ ನಿಲ್ಲು, ಈ ಬ್ಯಾಕ್ ಗ್ರೌಂಡ್ ನಲ್ಲಿ ಚೆನ್ನಾಗಿ ಬರುತ್ತದೆ, ಸ್ಮೈಲ್ " ಎನ್ನುತ್ತಾ ಅವಳ ಗಮನವನ್ನು ಇನ್ನೊದು ದಿಕ್ಕಿಗೆ ಹಾರಿಸಿದೆ.
ಫ್ಲಾಶ್ ಆದ ಮರುಕ್ಷಣದಲ್ಲೇ, ನನ್ನ ಕೈಯಿಂದ ಕೆಮೆರಾ ಕಸಿದು" ನಿನ್ನ ಫೋಟೋ ತೆಗಿತೀನಿ, ಸ್ಮೈಲ್ ವೈಭು" ಎಂದಳು.
ಹಿಂದಿನ ಪ್ರಪಾತ ನೋಡುತ್ತಾ, ಅದನ್ನು ಹಿನ್ನಲೆಯಲ್ಲಿ ಬರುವಂತೆ ನನ್ನನ್ನು ನಾನು ಅಡ್ಜಸ್ಟ್ ಮಾಡಿಕ್ಕೊಂಡೆ,ಅಲ್ಲೋಲ ಕಲ್ಲೋಲ ಆಗಿದ್ದ ಕೂದಲನ್ನು ಬಾಚಿ ತುಟಿಯನ್ನು ಎಷ್ಟು ಸಾದ್ಯವೋ ಅಷ್ಟು ದೂರಕ್ಕೆ ವಿಸ್ತರಿಸುತ್ತಾ ಹೋದೆ. ಎದುರು ನಿಂತ ಪ್ರೀತಿ, ಅವಳ ಕೈಯಲ್ಲಿನ ಕೆಮೆರಾ ಕಣ್ಣನ್ನೇ ನೋಡುತಿದ್ದೆ. ನನ್ನ ತುಟಿಗಳು ಬಚ್ಚ ಲಾರಮ್ಬಿಸಿದರೂ, ಫ್ಲಾಶ್ ಬರಲಿಲ್ಲ.
"ಕಳ್ಳ ಸಿಕ್ಕಿ ಬಿದ್ದ !!" ಎಂದು ನಕ್ಕಳು.
ಕಣ್ಣು, ತುಟಿಗಳು ಒಮ್ಮೆಲೇ ಮುದುರಿದವು. "ಹೇ ಗೂಬೇ ..." ಎನ್ನುತ್ತಾ ಅವಳೆಡೆಗೆ ಧಾವಿಸಿದೆ.
ಆವಳು "೮ ತಲೆಯನ್ನು ಬೋಳಿಸಿ ಬರೇ ಒಂದು ನಗುವನ್ನು ತೆಗ್ದಿದಿಯಲ್ಲೋ... ಟೂ ಇಂಟೆಲಿಜೇಂಟ್ !!" ಎನ್ನುತ್ತಾ ಮಂಜಿನಲ್ಲಿ ಓಡುತಿದ್ದಳು.
"ಹೇ ಗೂಬೆ, ಕೊಡೆ" ಅಂದೆ.
ಆವಳು "ಸೂಪರ್ ಬಂದಿದ್ದಳೋ, ಅವಳಿಗೆ ತೋರಿಸಿ ತರ್ತೇನೆ" ಎನ್ನುತ್ತಾ ಮಂಜಿನ ನಡುವೆ ಕಳೆದಿದ್ದ ಆಕೃತಿಯ ಕಡೆಗೆ ಓಡುತಿದ್ದಳು.
ಆಕೃತಿಗೆ ಕೆಮೆರಾ ಕೊಡುತ್ತಾ "ದಿಸ್ ಇಸ್ ನಾಟ್ ಫೈರ್" ಎನ್ನುತ್ತಾ ಅಲ್ಲಿಂದ ಓಡಿದಳು.
ಆಕೃತಿ ಒಂಬತ್ತು ಜನರನ್ನು ನಿಲ್ಲಿಸಿ ಅವರನ್ನು ಅನಾವಶ್ಯಕವಾಗಿ ತುಟಿ ಅಗಲಿಸಿ, ಬರೇ ಒಂದೇ ತುಟಿಯ ನಗು ಸೆರೆಯಾದ ಫೋಟೋ ನೋಡುತಿದ್ದಳು. ತನ್ನ ತಲೆಗೆ ಬಡಿದು ಕೊಳ್ಳುತ್ತಾ "ಕೇಳಿದ್ರೆ ನಾನೇ ಪೋಸ್ ಕೊಡ್ತಿರ್ಲಿಲ್ವೇನೋ...? ಯಾಕೋ ಅವರ ನಗುವಿಗೆ ಸರಿಯಾದ ಸಂಭಾವನೆ ಕೊಡದೆ ಮೋಸ ಮಾಡಿದೆ..?" ಎಂದು ನಕ್ಕಳು.
"ನಂಗೆ ಬೇಕಾದ ನಗು ನಾನು ಸೆರೆ ಹಿಡಿದೆ, ಉಳ್ದದದನ್ನು ಇಟ್ಟು ನಾನೇನು ಉಪ್ಪು ಖಾರ ಸೇರಿ ನೆಕ್ ಬೇಕಿತ್ತಾ ..?" ಅಂದೆ.
ಆವಳು "ಉದ್ದಾರ ಆದ ಹಾಗೆಯೇ ..." ಎನ್ನುತ್ತಾ ಆ ಫೋಟೋ ವನ್ನು ನೋಡುತಿದ್ದಳು.
"ಹೇ ನೋಡೋಣಾ ಆ ಮಿಲಿಯನ್ ಡಾಲರ್ ಸ್ಮೈಲ್ " ಎನ್ನುತ್ತಾ ಅವಳ ಜೋಡಿಯಾಗಿ ನಿಂತೆ. ಝೂಮ್ ಮಾಡುತ್ತಾ ಪ್ರತಿ ಪಿಕ್ಸಲ್ ಅನ್ನು ವಿಶ್ಲೆಶಿಸುತಿದ್ದೆ. ಬರಿ ತುಟಿ ಮತ್ತು ಒಳಗಿಂದ ಲೈಟಾಗಿ ಕಾಣುತಿದ್ದ ಹಲ್ಲಿನ ಸಾಲುಗಳು ಸ್ಕ್ರೀನನ್ನು ಆವರಿಸಿದ್ದವು.
"ಐ ನೀಡ್ ದಿಸ್" ಅಂದೆ.
ಝೂಮ್ ಔಟ್ ಮಾಡಿ ಆವಳು "ನಾಟ್ ನೌ !!" ಅಂದಳು.
ಒಂದು ಅಪ್ಲಿಕೇಶನ್ ರಿಜೆಕ್ಟ್ ಆಯಿತು. ಮತ್ತೆ ಫೋಟೋವನ್ನು ನೋಡುತ್ತಾ ಆವಳು "ಈ ವೇಷ ನಂಗೆ ಸೂಟ್ ಅನ್ಸಲ್ಲ, ಬಿಂದಿ ಇರಬೇಕಿತ್ತು" ಅಂದಳು.
ಹೌದು ಬಿಂದಿ ಹಾಕಿರುವ ಆಕೃತಿಯ ಸೌಂದರ್ಯ ಬೇರೇನೆ, ಇದು ಮೋಡರ್ನ್ ಆಗಿ ಕಂಡರೂ ಸುಂದರ ವೆನಿಸಿದರೂ ಅದಕ್ಕೆ ಸಾಟಿ ಆಗದು. ಆದರೂ ನಾನು "ಯು ಲುಕ್ಸ್ ಗುಡ್ ಡೀರ್" ಅಂದೆ. ಮತ್ತೆ ನಗು ಚಿಮ್ಮಿತು. ಅದು ಸೆರೆಯಾಯಿತು, ಹಿನ್ನಲೆ ಬದಲಾಯಿಸಿ ಒಂದರ ಹಿಂದೆ ಒಂದು ಸೇರೆಯಾಗುತಿದ್ದವು.
ಬಸ್ಸ ಹತ್ತಿ ಒಳಗೆ ಕುತಾಗ, ಮತ್ತೆ ತೆಗೆದ ಫೋಟೋ ಗಳನ್ನೂ ಮೆಲುಕು ಹಾಕುತಿದ್ದೆ.ಹಿಂದೆ ಹಿಂದೆ ಬರುತ್ತಾ ತೆಗೆದ ಮೊದಲ ಫೋಟೋ ಗೆ ಬಂದೆ, ಆವಳು'ಝೂಮ್ ಇಟ್' ಅಂದಳು. ಮತ್ತೆ ಅದೇ ಬರಿಯ ತುಟಿ ಸ್ಕ್ರೀನ್ ಆಕ್ರಮಿಸಿತು.
ಆವಳು "ಯು ವಾಂಟ್ ದಿಸ್ ..?" ಅಂದಳು.
ನಾನು ತಲೆಯನ್ನು ಮೇಲೆ ಕೆಳಗೆ ಮಾಡುತ್ತಾ ಹೌದು ಅಂದೆ.
ಆವಳು "ನೌ ..?" ಅಂದಳು.
ಮೌನದಲ್ಲಿದ್ದೆ, ಆವಳು ಮೌನದಲ್ಲಿ. ಮೌನ ಮೆರೆದಾಡುವ ಮೊದಲು ನಾನು "ನಾಟ್ ನೌ, ವ್ಹೆನೆವೆರ್ ಯು ವಾಂಟ್ ದೆನ್" ಅಂದೆ.
ಆವಳು "ಇವನ ಐ ವಾಂಟ್ ಟು ಡೆಡಿಕೇಟ್ ಥಟ್ ಫಾರ್ ಯು" ಅಂದಳು.
ಮೊದಲಿಗೆ ಚಳಿ,ಈಗ ಇನ್ನೂ ಚಳಿ ಹತ್ತಿತು.ಬಲ ತೋರ್ಬೆರಳು ಅವಳ ಅಧರಗಳನ್ನು ಸವರುತಿತ್ತು ಮೊಬೈಲ್ ಸ್ಕ್ರೀನ್ ನಲ್ಲಿ. ನಿಜದ ಅದರಗಳು ಅದರುತಿದ್ದವು. ಏಕಾಂತ ರೋಡ್ ನ ನೆನಪಾಗುತಿತ್ತು.
ಆ ಸ್ಪಾಟ್ ಈ ಸ್ಪಾಟ್ ಹೇಳಿ ಮದ್ಯಾಹ್ನಾದ ವರೆಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ, ಮೊದಲಿಗೆ ಪ್ರಕೃತಿಗೆ ಸೋತ ಕೆಮೆರಾ, ನಂತರ ಬರೀ ಆಕೃತಿ ಆವರಿಸಿದ್ದಳು. ನಡ ನಡುವೆ ಪ್ರೀತಿ ಕೊಡುತಿದ್ದ ಕಚಗುಳಿ ಮನಸ್ಸಿಗೆ ಮುದ ನೀಡುತ್ತಿತ್ತು, ಅಲ್ಲಿ ಜೀವನ ನ ಮನಸಲ್ಲಿ ಹುಳಿ ಹಿಂಡುತಿತ್ತು. ಅವನಿಗೆ ಬೇಜಾರಗದಂತೆ ಕೆಲವೊಂದು ಸ್ಪಾಟ್ ಗಳಲ್ಲಿ ಅವಳನ್ನು ಅವನು ಬಳಸಿರ್ವಹಾಗೆ ಫೋಟೋ ತೆಗೆದೆ. ನಡ ನಡುವೆ ಅವನು ನನ್ನ ಆಕೃತಿಯನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆದ. ಅವಿನಾಶ್ ನಡುವೆ ತನ್ನ ಜೆರ್ಮನ್ ಜೆರ್ಸಿಯಲ್ಲಿ ಮಿರ ಮಿರ ಮಿರುಗುವಂತೆ ಫೋಟೋ ಗೆ ಸೆರೆಯಾದ. ಮಂಜಿನ ಬಾಕ್ ಗ್ರೌಂಡ್ ನಲ್ಲಿ ಬಿಳಿ ಜೆರ್ಸಿ ಚೆನ್ನಾಗಿ ಕಾಣುವುದಿಲ್ಲ ಜಾಕೆಟ್ ಹಾಕೋ ಅಂದ್ರೆ "ಫೋಟೋ ಕ ಲಿಯೇ ಮೇ ಜೆರ್ಮನ್ ಸೆ ಬ್ರಸೆಲಿಯನ್ ನಹಿ ಬನುಂಗ ಬಾಯ್ , ಜೈಸ ಹೇ ವೈಸೇ ಫೋಟೋ ಲೇನ" ಅಂದ.
ಸಂಜೆ ಆ ಕ್ಯಾಂಪ್ ಗೆ ತಲುಪುಮದಕ್ಕೆ ಮುಂಚೆ ರೋಡಿನ ಬದಿಯಲ್ಲಿ ಹರಿಯುವ ಜಲಪಾತದ ಕೆಳಗೆ ಅಲ್ಪ ಕ್ಷಣ ಸೌಂದರ್ಯ ಸವೆಯುತಿದ್ದೆವು. ಮೊದಲಿಗೆ ಬರೀ ಫೋಟೋ ಗೆ ಸೀಮಿತ ವಿದ್ದ ನನಗೆ ನಂತರ ಆ ಐಸ್ ಕೋಲ್ಡ್ ನೀರಿನಲ್ಲಿ ಸ್ನಾನ ಮಾಡುವ ಮನಸ್ಸಾಯಿತು.
ಜೀವನ ಪ್ರೀತಿ ಆಗಲೇ ನೀರಿಗೆ ಇಳಿದಿದ್ದರು ಹುಡುಗರಲ್ಲಿ ಹೆಚ್ಚಿನವರು ಅರೆ ಬೆತ್ತಲೆಯಾಗಿ ನೀರಿನಲ್ಲಿ ಈಜಾಡುತಿದ್ದರು, ಕುತ್ತಿಗೆಯಲ್ಲಿ ತಾಳಿ ತೂಗುತಿದ್ದ ಕೊಲಿಗ್ಸ್ ಬದಿಯಲ್ಲಿದ್ದ ಬಂಡೆಯ ಮೇಲೆ ಕೂತು ತಮ್ಮ ತಮ್ಮ ಸಂಸಾರ ತಾಪತ್ರಯ ಹಂಚಿ ಕೊಳ್ಳುತಿದ್ದರು.
ಸಂಪ್ರದಾಯಕ್ಕೆ ನಾಚಿ ಕೊಳ್ಳುವ ಎರಡು ಹುಡುಗಿಯರು ಮಾತ್ರ ನೀರಿನ ಹೊರಗೆ ಇದ್ದು ನೀರಲ್ಲಿ ಇಳಿದವರ ಮೇಲೆ ಕಮೆಂಟ್ಸ್ ಹೊಡೆಯುತಿದ್ದರು.
ಆಕೃತಿಯಲ್ಲಿ "ನಾನು ನೀರಲ್ಲಿ ಇಳಿಯುತ್ತೇನೆ , ಬಾ" ಎಂದು ಕೈ ಹಿಡಿದು ಎಳೆದೆ.
ಅವಳು "ಪ್ಲೀಸ್ ವೈಭು ಸರಿ ಎಣಿಸಲ್ಲ ಬೇಡ" ಎಂದು ಕೈ ಹಿಂದೆ ತೆಗೆದಳು.
"ಚಿಲ್ ರೇ, ಬಾ ಏನು ಆಗಲ್ಲ, ಅಲ್ಲಿ ನೋಡು ಜೀವನ ಪ್ರೀತಿ ಹೇಗೆ ವಿಹರಿಸ್ತಾರೆ ಹೇಳಿ, ನೀನು ..." ಎಂದು ಅರ್ದಕ್ಕೆ ಮಾತನ್ನು ನಿಲ್ಲಿಸಿದೆ.
ಅವಳು "ಹೇ ವೈಭು, ಜನರಿಗೆ ನಾವಿಬ್ಬರು ಹತ್ತಿರವಾಗಿದ್ದೇವೆ ಎಂದು ತೋರಿಸಲು ಇವ್ವೆ ಮಾನದಂಡನಾ..? ನನ್ನ ಮನಸ್ಸು ಅವಳಂತೆ ಪತಂಗ ದಿಂದ ಪತಂಗಕ್ಕೆ ಹಾರುವ ಚಿಟ್ಟೆ ಅಲ್ಲ, ಮೊದಲಿಂದ ನೀನೊಬ್ಬನೇ ನನ್ನ ಹೂವು, ನೀನೆ ನನ್ನ ಮಕರಂದ, ನಿನ್ನ ರಸ ನಾನು ಹೀರಬೇಕು, ಅದು ಬೇರೆಯವರ ಎದುರು ಪ್ರದರ್ಶನದ ಸರಕಾಗ ಬೇಕು ಎನ್ನುವುದು ನನಗೆ ಸರಿ ಕಾಣಿಸಲ್ಲ, ಸೋರಿ ಕಣೋ.. ಐ ಲವ್ ಯು ವೈಭು"
"ಐ ಟು, ಆದ್ರೆ ಇಲ್ಲಿ ಬಂದದ್ದು ಎಂಜಾಯ್ ಮಾಡ್ಲಿಕ್ಕೆ ಅಲ್ಲ, ಇದು ಇಲ್ಲಿ ಕಾಮನ್ ಕಣೆ, ಬಾ, ಯಾರು ಏನು ಅಂದ್ಕೊಳಲ್ಲ.."
ಮೌನದಲ್ಲಿದ್ದಳು.ಕೆಮೆರಾ ಅವಳ ಕೈಗೆ ಕೊಟ್ಟೆ, ನೀನು ಮೆಲಿರ್ತೀಯಲ್ಲ, ನಾನು ನೀರಿಗೆ ಇಳಿತೇನೆ."ಡು ಯು ಹೇವ್ ಎನಿ ಪ್ರಾಬ್ಲಮ್..?" ಅಂದೆ.
ಅವಳು "ನನಗೇನೋ ಪ್ರಾಬ್ಲಮ್, ಜಾಗ್ರತೆ " ಅಂದಳು.
ಬಟ್ಟೆ ಕಳಚಿ ಅವಳಿಗೆ ಕೊಟ್ಟು, ನೀರಲ್ಲಿ ಇಳಿಯುತಿದ್ದೆ. ಅವಳು "ಟಿ ಶರ್ಟ್ ಹಾಕೊಂಡು ಇಳಿಯೋ.. ಹೇಸಿಗೆ ಅನ್ಸುತ್ತೆ ಖಾಲಿ ಮೈಯಲ್ಲಿ ನೋಡಲು" ಅಂದ್ಲು.
ಅವಳ ಈ ಮಾತಿಂದ ಬಟ್ಟೆ ಬಿಚ್ಚುವಾಗ ಇಲ್ಲದ ನಾಚಿಗೆ ಮೂಡಿತು, ಅವಳ ಕೈಯಲಿಂದ ಟಿ ಶರ್ಟ್ ಎತ್ತಿ ಅದನ್ನು ತೊಟ್ಟು, ನೀರಿಗೆ ಇಳಿದೆ.
ಅವಳು "ಟೆಕ್ ಕೇರ್"
ಹೊರಗೆ ಜುಮು ಜುಮು ಚಳಿ ಆದರೆ ನೀರಲ್ಲಿ ಬೆಚ್ಚನೆಯ ಅನುಭವ ವಾಗುತ್ತಿತ್ತು, ನೂರು ಮೀಟರ್ ದೂರದಲ್ಲಿ ಹತ್ತಿಪತ್ತು ಅಡಿ ಎತ್ತರದ ಒಂದು ಬಂಡೆಯ ಮೇಲಿನಿಂದ ರಭಸವಾಗಿ ನೀರಿನ ಝರಿ ಕೆಳಗೆ ಧುಮುಕುತಿತ್ತು. ಆ ಜರಿಯ ಕೆಳಗೆ ನೀರ ತಲೆ ಇಡುವ ಮನಸ್ಸಾಗಿತ್ತು , ಆದರೆ ನೀರಿನಾಲದ ಭಯ ಮನದಲ್ಲಿ ಮೂಡಿತ್ತು, ದೊಡ್ಡ ಈಜುಗಾರರೆಲ್ಲರು ಆ ಝರಿಯ ಕೆಳಗೆ ಈಜು ತಿದ್ದರು , ನಾನು ಅದನ್ನು ಬಿಟ್ಟು ಎದುರಿಗೆ ಬಂದೆ. ಜೀವನ್ ಮತ್ತು ಪ್ರೀತಿಯ ಸಲುಗೆ ಎಲ್ಲಿ ಮೀರಿ ನಡೆಯುತ್ತಿತ್ತು, ಪ್ರತಿ ಯೊಬ್ಬ ಎಂಪ್ಲೋಯೀ ಗಳ ಕಣ್ಣು ಕುಕ್ಕುತಿದ್ದರು.
ಒಂದು ಕ್ಷಣ ಆಕೃತಿಗೆ ನೋಡುತಿದ್ದೆ. ಅವಳು ಮದುವೆಯಾದ ಹೆಂಗಸರ ಗುಂಪು ಸೇರಿದ್ದಳು, ಮಡಿ ಮೈಲಿಗೆ ಎಂದು ಮೊದಲಿಗೆ ನೀರಿನಲ್ಲಿ ಇಳಿಯದ ಹುಡುಗಿಯರಿಬ್ಬರು ನೀರಲ್ಲಿ ಇಳಿದಿದ್ದರು.
ಪ್ರೀತಿ ನನ್ನನು ನೋಡಿ"ವೈಭು ಇಲ್ಲಿ ಬಾರೋ, ನೀರಿನ ಹರಿವು ಕಮ್ಮಿ ಇದೆ ಇಲ್ಲಿ" ಅಂದು ಕರೆದಳು. ಇಬ್ಬರು ಏಕಾಂತವನ್ನು ಭೇದಿಸುವ ಮನಸ್ಸಾಗಲಿಲ್ಲ. ನನ್ನಷ್ಟಕ್ಕೆ ನಾನು ಇತರ ಗೆಳೆಯರೊಡನೆ ನೀರಿನಾಟದಲ್ಲಿ ಮರೆತು ಹೋಗಿದ್ದೆ.
ಸಲ್ಪದರಲ್ಲೇ ಹಿಂದಿನಿಂದ ಬಂದು ನನ್ನ ಮೇಲೆ ನೀರನ್ನು ಎರಗಿಸಿದ ಹಾಗೆ ಆಯಿತು. ಪ್ರೀತಿ ಹತ್ತಿರ ನಿಂತು ನನ್ನ ಮೇಲೆ ನೀರನ್ನು ಚಿಮಿಕಿಸುತಿದ್ದಳು. ನಾನು ಅವಳ ಮೇಲೆ ನೀರು ಚಿಮುಕಿಸಿದೆ, ಜೀವನ ನನ್ನ ಮೇಲೆ ಇನ್ನು ಹೆಚ್ಚು ನೀರನ್ನು ಚಿಮುಕಿಸಿದ. ಪ್ರೀತಿ ಇಬ್ಬರ ಮೇಲು ಸಮವಾಗಿ ನೀರಿನ ಸಿಂಚನ ಮಾಡುತಿದ್ದಳು.
ಮತ್ತೆ ಪ್ರೀತಿಯ ಮೇಲೆ ಸಲುಗೆ ಹೆಚ್ಚಿಸಿಕ್ಕೊಂಡೆ. ಅವಳ ತಲೆ ಒತ್ತಿ ನೀರಿನೊಳಗೆ ಮುಳುಗಿಸಿದೆ.ಅವಳು ಎಡ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಬಲ ಗೈಯಿಂದ ಒತ್ತಡ ನೀರಿನೊಳಗೆ ಅವಳನ್ನು ತಳ್ಳುತಿತ್ತು, ಜೀವನ ಇನ್ನು ಕೆಳಗೆ ತಳ್ಳುತಿದ್ದ. ಕೈಗೆ ಮುತ್ತಿಟ್ಟಳು. ಚಳಿಯಲ್ಲಿ ವಿದ್ಯುತ್ ಸಂಚರಿಸಿದಂತಾಯಿತು. ಒಮ್ಮೆಲೇ ಅವಳನ್ನು ಮೇಲೆತ್ತಿದೆ.
ಯಾವುದರ ಪರಿವಿಲ್ಲದೆ ಜೀವನ್ ಇಬ್ಬರನ್ನು ನೋಡುತಿದ್ದ.
ಅವನು"ಹೌಸಿಟ್ " ಅಂದ.
ಪ್ರೀತಿ "ಹಾಡ್ ಅ ಗುಡ್ ಏಕ್ಸ್ಪೆರಿಯನ್ಸ್" ಎಂದು ನನ್ನನು ನೋಡಿದಳು.
ವಿದ್ಯುತ್ ತಾಗಿದ ಕಾಗೆಯಂತೆ ಆಗಿತ್ತು ನನ್ನ ಪರಿಸ್ತಿತಿ. ಸುಮ್ಮನಿದ್ದೆ.
ಅವಳು "ವೈಭು ಜೀವನ್ ಗೆ ಕೊಡೋಣ ಶಾಕ್" ಅಂದಳು
ಅವನನ್ನು ಬಗ್ಗಿಸಿ ನೀರಿನಲ್ಲಿ ಮುಳುಗಿಸಿದೆವು. ನನ್ನ ಕೈಯನ್ನು ಅವಳು ಬಲವಾಗಿ ಕೆಳಗೆ ಅದುಮುತಿದ್ದಳು, ಕೆಳಗಿನಿಂದ ಜೀವನ್ ಮೇಲ್ಮುಕವಾಗಿ ಒತ್ತಡ ಒದ್ದುತಿದ್ದ, ನಡುವಲ್ಲಿ ನನ್ನ ಬಲಗೈ ಸಿಕ್ಕಿ ಅಪ್ಪಚ್ಚಿಯಾಗಿತ್ತು.
ಪ್ರೀತಿಯನ್ನು ನೋಡಿ "ಏನೇ, ನೀರಲ್ಲಿ ಏನ್ ಮಾಡ್ಡಿ...?"
"ಮನಸ್ಸಿನ ಭಾವನೆ ಹೊರ ಹಾಕಲು ಬೇರೆ ಮಾಧ್ಯಮ ಸಿಕ್ಕಲಿಲ್ಲ, ಒಳಗೆ ಯಾರ ಸುಳಿವಿಗೂ ಬಾರದೆ, ಎರಡು ತಿಂಗಳ ಹಿಂದೆ ನಿನ್ನಲ್ಲಿ ಮೂಡಿದ ಭಾವನೆ ವ್ಯಕ್ತ ಪಡಿಸಿದೆ, ಐ ಥಿಂಕ್ ಯು ಲೈಕೆಡ್ ಇಟ್" ಅಂದಳು.
ಏನು ಹೇಳಬೇಕೋ ತೋಚದಂತಾಯಿತು."ಜೀವನ್" ಎನ್ನುತ್ತಾ ನನ್ನ ಒತ್ತಡ ಕಡಿಮೆ ಮಾಡಿದೆ, ಅವಳ ಹಿಡಿತವು ಕಡಿಮೆ ಯಾಗಿತ್ತು , ಜೀವನ್ ಮರುಕ್ಷಣವೇ ಮೇಲಿದ್ದ.
ಅವನು "ಭಾರಿ ನನ್ನ ಮುಳುಗಿಸ್ತಿಯಲ್ಲ.." ಎನ್ನುತ್ತಾ ತನ್ನ ಎಲ್ಲ ಭಾರವನ್ನು ನನ್ನ ಮೇಲೆ ಹಾಕಿ ಸಂಪೂರ್ಣ ಬಲದಿಂದ ನನ್ನನ್ನು ನೀರಿನಲ್ಲಿ ಮುಳುಗಿಸಿದ.
ಅವಳ ಒತ್ತಡ ಇರಲಿಲ್ಲ, ಅವಳು "ನೋ, ಜೀವನ್" ಎನ್ನುತ್ತಾ ಅವನಿಗೆ ಹೇಳುತಿದ್ದದ್ದು ನೀರಿನಲ್ಲಿ ಮಂದ್ರದಲ್ಲಿ ನನಗೆ ಕೇಳುತಿತ್ತು, ಅವನಿಗೆ ನನ್ನನಲಿನ ಕೋಪ ತೀರಿಸುವ ಮಾರ್ಗ ಇದೊಂದೇ ಆಗಿತ್ತು, ಇನ್ನೂ ಕೆಳ ಕೆಳಗೆ ಒತ್ತುತಿದ್ದ, ನಾನು ಮೇಲೆಬರಲು ಹೆಣಗುತಿದ್ದೆ. ಒಂದೂವರೆ ನಿಮಿಷದ ವರೆಗೆ ಹಿಡಿತದಲ್ಲಿದ್ದ ಉಸಿರು ಬಿಗು ಗೊಂಡಿತು. ಹೊರಬಿಡುವುದು ಅನಿವಾರ್ಯವಾಗಿತ್ತು, ಬಾಯಿತೆರೆದೆ, ನೀರು ಒಳಗೆ ಸೇರಿತು , ನೀರಿನ ಗುಳ್ಳೆ ಗಳು ಮೇಲೇಳಿದವು. ಇದನ್ನು ಗಮನಿಸುತ್ತ ಅವನು ಕೂದಲನ್ನು ಹಿಡಿದು ಮೇಲೆತ್ತಿದ, ಅರ್ಧ ಗ್ಲಾಸ್ ನೀರು ಒಳಗಿತ್ತು. ಕಣ್ಣಿಂದ ನೀರು ಹೊರ ಬರುತಿತ್ತು.
ಪ್ರೀತಿ "ಐ ಹೇಟ್ ಯು ಜೀವನ್, ಆರ್ ಯು ಆಲ್ ರೈಟ್ ವೈಭು " ಎನ್ನುತ್ತಾ ನನಗೆ ಹತ್ತಿರವಾದಳು.
ಮೊದಲಿಗೆ ನಮ್ಮನ್ನು ಗಮನಿಸುತಿದ್ದ ಆಕೃತಿ ಈಗ ಕಾಣದಿದ್ದಳು. ಎಲ್ಲೋ ಕಳೆದು ಹೋಗಿರಬಹುದು ಎಂದು ಕೊಂಡೆ.
ನೀರಿನ ಒಳಗಿಂದ ನನ್ನನ್ನು ಯಾರೋ ಕೈಯಲ್ಲಿ ಸುತ್ತು ಬಳಸಿದಂತಾಯಿತು. ಪ್ರೀತಿಗೆ ಕೊಟ್ಟ ಸಲುಗೆ ಹೆಚ್ಚಾಯಿತು ಎಂದು ಮನಸಲ್ಲಿ ಅನಿಸುತ್ತಾ ಹಿಂದೆ ತಿರುಗಿದೆ. ಆಕೃತಿ ನೀರಿನಿಂದ ಮೇಲೆದ್ದಳು.
"ಹೇ ಡಂಬು ಏನಾಯ್ತೋ...?ಒಂದು ಕ್ಷಣಕ್ಕೆ ನನ್ನ ಜೀವ ನಿಂತಂತಾಯ್ತು" ಎಂದಳು.
"ಏನಿಲ್ಲ, ತುಂಬ ಹೊತ್ತು ನೀರಿನ ಒಳಗಿದ್ದೆಯಲ್ಲ ಉಸಿರುಕಟ್ಟಿತು ಅಷ್ಟೇ... ಹೆದರುಕ್ಕೊಂಡಿಯ...? ಐ ಅಂ ಆಲ್ ರೈಟ್" ಎಂದೆ.
ಅವಳ ಕಣ್ಣುಗಳಲ್ಲಿ ಈಗ ನಿರಾಳತೆ ಕಾಣುತಿತ್ತು. "ಸ್ವಿಮ್ಮಿಂಗ್ ಬಾರದಿದ್ರು ನೀರಿಗೆ ಇಳಿಯುವ ಹುಮಸ್ಸು ಬೇಕಿತ್ತಾ ...?" ಅಂದಳು.
"ಹೇ ಬರುತ್ತೆ, ಅದು ಬಿಡು ನೀನು ಇಲ್ಲಿ ನೀರಿನಲ್ಲಿ, ಅದು ಸಬ್ ಮರೈನ್ ಆಗಿ ನನ್ನನ್ನು ರಕ್ಷಿಸಲು ಹೇಗೆ ಬಂದಿ" ಎಂದೆ ೫ ಫೀಟ್ ನೀರಿನ ನಡುವಲ್ಲಿ.
ಅವಳು "ಐ ಅಂ ಅ ಸ್ವಿಮರ್, ಎಂಟಕ್ಕೆ ಸ್ಕೂಲ್ ನಲ್ಲಿ ಗೋಲ್ಡ್ ಮೆಡಲಿಸ್ಟ್" ಎನ್ನುತ್ತಾ ಧನಿಯನ್ನು ತಗ್ಗಿಸಿದಳು.
ಸಲ್ಪ ತಡೆದು ಮುಂದುವರಿಸಿದಳು"... ನಂತರ ಎಲ್ಲ ನಿಂತು ಹೋಯಿತು, ಮನೆಯವರು ಸೆರಗು ಹೊದ್ದು ಮನೆಯಲ್ಲಿ ಇರುವಂತೆ ಕೂಡಿ ಬಿಟ್ಟರು, ಅಲ್ಲ ದಿದ್ರೆ ಇವತ್ತು ಭಾರಕ್ಕೆ ಚಿನ್ನ ಗಳಿಸಿ ಕೊಡುತಿದ್ದೆ" ಎಂದಳು ತುಂಬು ವಿಶ್ವಾಸ ದಿಂದ.
"ಈ ಟೇಲೆಂಟ್ ನನಗೆ ಗೊತ್ತಿರಲಿಲ್ಲ, ನೀನು ಫುಲ್ಲಿ ಪಕೆಜೆಡ್ ಗೋಡ್ಸ್ ಗಿಫ್ಟ್ !!" ಅಂದೆ
ಅವಳು "ನೀರಲ್ಲಿ ಬಿದ್ದಾಗಿದೆ ಸಲ್ಪ ಈಜಿ ಕಳೆದ ಈಜಿನ ದಿನಗಳನ್ನು ಮೆಲುಕು ಹಾಕ್ತೇನೆ ಬರ್ತೀಯ ನಂ ಜೊತೆ" ಅಂದಳು.
ನಾನು "ಓಕೆ " ಅಂದೆ.
ಇಪತ್ತು ನಿಮಿಷ ಹಿಂದೆ ಆ ಝರಿಯ ಕೆಳಗೆ ಹೋಗಲು ನಡಗುತಿದ್ದ ದೇಹ ಈಗ ಸ್ವಿಮ್ಮೆರ್ ನೊಡನೆ ಪೈಪೋಟಿ ಕೊಡತ್ತ ಮುಂದೆ ಮುಂದೆ ಸಾಗುತಿತ್ತು. ನೀರಿನಲ್ಲಿ ಮುಳುಗಿ ಅವಳು ಕೆಳಗಿನಿದಲೇ ಸದ್ದಿಲ್ಲದೇ ಹರಿಯುತಿದ್ದಳು, ನನಗದು ಸಾದ್ಯವಿರಲಿಲ್ಲ. ನಾನು ಮೇಲ ಮುಖವಾಗಿ ಕೈಗಳನ್ನು ಬಾರಿಸುತಿದ್ದೆ. ಝರಿಯ ಕೆಳಗಿನ ಬಂಡೆ ತಲುಪಿ ಅಲ್ಲಿ ಕುಳಿತುಕ್ಕೊಂದೆವು. ಅಲ್ಲಿ ಇದ್ದ ಆರು ಗಂಡು ಶಕ್ತಿಗಳಿಗೆ ಇವಳನ್ನು ಕಂಡು ಆಶ್ರಯವಾಯಿತು, ೧೦೦ಮೀಟರ್ ನಷ್ಟು ಈಜಿ ಅಭ್ಯಾಸವಿಲ್ಲದೆ ಕೈಕಾಲು ರಟ್ಟೆಗಳು ಬಳಲಿದ್ದಳು. ಏದುಸಿರು ಬರುತಿತ್ತು. ಬಂಡೆಗೆ ವರಗಿ ಕುಳಿತೆ.
ಎರಡು ವರ್ಷದ ನಂತರ ಈಜಿದ ನನ್ನ ಬಳಲಿಕೆ ಯನ್ನು ನೋಡಿ ಅವಳು "ಹೇ ವೈಭು ಬ್ಯಾಟೆರಿ ಆಫಾ ..? ಹತ್ತು ವರ್ಷದ ನಂತರ ಇನ್ನೂ ಅದೇ ಹೊಸ ಅನುಭವ, ಐ ಲೈಕೆಡ್ ಇಟ್" ಎಂದಳು.
ಬಾಯಿ ತೆರೆದರೂ, ಉತ್ತರ ಹೊರ ಬರುತ್ತಿರಲಿಲ್ಲ. ಅವಳಲ್ಲಿನ ಸ್ಟೆಮಿನ ನೋಡಿ ಅವಳಿಗೆ ಸಂಪೂರ್ಣ ಸೋಲೋಪ್ಪಿಕ್ಕೊಂಡೆ.
ನಾನು ಬಂಡೆಯಲ್ಲಿ ಕೂತು ಇನ್ನು ಹತ್ತು ಇಪತ್ತು ನಿಮಿಷ ಸುಧಾರಿಸಿಕ್ಕೊಂಡೆ, ಅವಳು ನನ್ನೆದುರಲ್ಲಿ ಇನ್ನು ಹತ್ತು ನಿಮಿಷ ಈಜಿ ತನ್ನ ಆಶೆಯನ್ನು ತೀರಿಸಿ ಕ್ಕೊಂಡಳು. ಒಬ್ಬೊಬ್ಬರಾಗಿ ಬಂಡೆ ಬಿಡಲು ನಾನು ಅವಳಲ್ಲಿ," ಬಾ ಹೋಗೋಣ , ಇಲ್ಲಿ ಐದಕ್ಕೆ ಕತ್ತಲಾಗುತ್ತೆ, ಹೋಗೋಣ ಅಂದೆ.
ಅವಳು "ನೀನು ಸುಧಾರಿಸಿಕೊಂಡಿಯೇನೋ..?"
"ಹುಂ, ಬಾ ಹೋಗೋಣ, ಪ್ರವಾಹದ ದಿಕ್ಕಿನಲ್ಲಿ ಈಜಲು ಶ್ರಮದ ಅಗತ್ಯವಿಲ್ಲ, ಹೋಗೋಣ" ಅಂದೇ.
ಅವಳು "ಹಾಗಾದ್ರೆ ರೇಸ್ ಮಾಡೋಣಾ ..?"
"ಇಲ್ಲಮ್ಮಾ, ನೀನೆ ಗೆದ್ದೇ, ಆರಾಮಾಗಿ ನೀರಿನೊಂದಿಗೆ ತೇಲುವ..."
ಸರಿ ಎಂದಳು ಅವಳು.
ಅಲ್ಲಿಂದ ನೀರಿಗೆ ಸೀಧಾ ಧುಮುಕಿದೆ.
ಅವಳು ಸಲ್ಪ ದೂರ ಹೋಗಿ ತೇಲುತ್ತ ನಿಂತುಕೊಂಡಳು ಅವಳು ಮುಂದೆ ಹೋಗುತ್ತಿರಲಿಲ್ಲ. ಅವಳಲ್ಲಿಗೆ ತಲುಪಿದೆ. ಸುತ್ತಲು ಮಬ್ಬು ವಾತಾವರಣ.
ಅವಳು ನನ್ನಲ್ಲಿ "ಐ ವಾಂಟ್ ಟು ಡೆಡಿಕೇಟ್ ಸಂಥಿಂಗ್ !!" ಎಂದಳು.
"ಈಗ್ಲಾ ..?"
"ಹೌದು, ಕೊಡ್ಲಾ..?"
"ಇಲ್ಲಿ ಮತ್ತೆ ವಿದ್ಯುತ್ ಹತ್ತಿದರೆ ಸತ್ತೆ ಹೋಗ್ತೇನೆ ಕಣೇ" ಅಂದೆ.
ಅವಳು "ತೆಕೊಲೋದಿದ್ರೆ ತೆಕೊಳ್ಬಹುದು, ಇಲ್ಲನ್ತಾದ್ರೆ ನೀರಲ್ಲಿ ತೊಳ್ಕೋ ಬಹುದು" ಎನ್ನುತ್ತಾ ನನ್ನ ಮುಖವನ್ನು ಎಳೆದು ಕೊಂಡಳು.
ತುಟಿಗೆ ತುಟಿ ಸೇರುತ್ತಾ ಚುಂಬಿಸಿದಳು. ಎರಡು ಕ್ಷಣ ಕ್ಕೆ ಚಳಿಯಲ್ಲಿ ಕಂಪಿಸುತಿದ್ದ ದೇಹದಲ್ಲಿ ಮಿಂಚು ಹರಿಯಿತು, ದಣಿದಿದ್ದ ದೇಹಕ್ಕೆ ಶಕ್ತಿಯ ಪ್ರವಾಹ ಹರಿಯಿತು.ಝರಿ ತನ್ನ ಹರಿವನ್ನು ಮರೆತಿ ನಿಂತಂತಾಯಿತು. ನೀರಿನೋಅಲ್ಗೆ ತಬ್ಬಿಕ್ಕೊಂಡೆ. ಸ್ಪರ್ಶದ ಅನುಭವ ಹಿಡಿ ಶರೀರಕ್ಕೆ ಆದ ದಣಿವನ್ನು ಮರೆಸಿತು.
ತನ್ನ ಎನೆರ್ಜಿ ಟ್ರಾನ್ಸ್ಮಿಶನ್ ಆದ ಬಳಿಕ ಅವಳು ತುಟಿಯನ್ನು ತುಟಿಯಿಂದ ತೆಗೆದು ಹಣೆಗೆ ಮುತ್ತಿಟ್ಟಳು. ಮತ್ತು "ವೈಭು ಲವ್ ಯು ಕಣೋ, ಹೆತ್ತವರು ಹಾಕಿದ ಬೇಲಿಯನ್ನು ನೀನು ತೆಗೆದೆ, ಇವತ್ತಿನ ನನ್ನ ಈ ಖುಷಿ ಗೆ ನೀನೆ ಕಾರಣ. ಹೆತ್ತವರ ಸ್ತಾನ ಕಸಿದು ಕೊಂಡಿಯಲ್ಲೋ...., ಲವ್ ಯು ಕಣೋ.." ಎನ್ನುತ್ತಾ ಇನ್ನೊಮ್ಮೆ ಹಣೆಗೆ ಚುಂಬಿದಳು, ಅವಳನ್ನು ತಡೆದು. ಎರಡು ಕೈಯಲ್ಲಿ ಅವಳ ಮುಖ ಹಿಡಿದು. "ಐ ಟು ಕಣೇ.." ಎಂದು ಅವಳ ಮುತ್ತಿನ ಸಾಲವನ್ನು ಬಡ್ಡಿ ಸಮೇತಾ ತೀರಿಸಿದೆ.
ಇಬ್ಬರಲ್ಲೂ ಈಗ ಸಮ ಶಕ್ತಿ ಪ್ರವಾಹ ಆಗುತಿತ್ತು, ಜೊತೆಗೆ ಝರಿಯ ಪ್ರವಾಹವು ಸೇರಿತ್ತು. ಐದು ನಿಮಿಷದಲ್ಲಿ ದಡ ಸೇರಿದವು; ಪಕ್ಕದಲ್ಲಿನ ಚೇಂಜ್ ರೂಂ ನಲ್ಲಿ ಬಟ್ಟೆ ಬದಲಿಸಿ ಬರಲು, ಸಿಗರೆಟ್ ಸೇದುವ ಕಾರ್ಕಾನೆಗಳು ಮತ್ತೆ ಹೋಗೆ ಉಗುಳುತಿತ್ತು. ಜೀವನ್ ಪ್ರೀತಿ ಎಲ್ಲರ ಕಣ್ಣಿಗೆ ಬೀಳುವಂತೆ ನೀರಲ್ಲಿ ಇನ್ನೂ ಆಡುತಿದ್ದರು.
ತಿವಾರಿ "ಇಟ್ಸ್ ೫ ಕಮ್ ಕಮ್ "ಎನ್ನುತ್ತಾ ನೀರಿನಲ್ಲಿರುವ ಮೀನುಗಳಿಗೆ ಆರ್ಡರ್ ಮಾಡುತಿದ್ದ.
ಪಕ್ಕದಲ್ಲಿದ್ದ ಜೋಳದ ತೆನೆಯವನನ್ನು ನೋಡಿ ಆಕೃತಿ "ವೈಭು ಒನ್ ಬೈ ಟು...?" ಎಂದು ಸಜ್ನೆ ಮಾಡಿದಳು.
ಚಳಿಯಲ್ಲಿ ತೇಲುತಿದ್ದ ನಾಲಗೆ ಬಿಸಿಯಾದ ಏನನ್ನಾದರೂ ತಿನ್ನಲು ಹಂಬಲಿಸುತ್ತಿತ್ತು. ಒಂದು ಜೋಳದ ತೆನೆ ತೆಕ್ಕೊಂಡು ಅವಳಿದ್ದಲ್ಲಿಗೆ ಬಂದೆ ಒಂದು ಬಾರಿ ನಾನು ಇನ್ನೊಮ್ಮೆ ಅವಳು ತಿನ್ನುತ್ತಾ ಆ ಕೊಂಬಿನ ತಿರುಳನ್ನು ಇನ್ನು ಬಿಸಿಮಾಡಿದ್ದೆವು.
ಮುಂದಿನ ಸಿಪ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!