ಸಿಪ್ - ೩೩ 

 
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 

 

 
 
ಸಂಜೆ ಕ್ಯಾಂಪ್ ಸೇರಿದಾಗ ಸ್ವಾಗತ ಭರದಿಂದ ಆಯಿತು , ಪ್ರತಿಯೊಬ್ಬನಿಗೂ ಹಣೆಗೆ ತಿಲಕ ಇಟ್ಟು ಸ್ವಾಗತಿಸಿದರು. ಸರತಿಯಲ್ಲಿ ನಿಂತಂತೆ ಪ್ರತಿ ನಾಲ್ಕು ಮಂದಿಗೆ ಒಂದೊಂದು ಟೆಂಟ್ ಮತ್ತು ಒಂದೊಂದು ಲೋಕಾರ್ ಕೀಯನ್ನು ಕೊಟ್ಟರು. ನಮ್ಮ ಮುಂದೆ ನಿಂತ ರಾಕೇಶ್ ಸರ್ ನಮ್ಮ ಟೆಂಟ್ ನ ಕೀಯನ್ನು ಇಸಕೊಂಡರು. ಅವರನ್ನು ನಾನು, ಅವಿನಾಶ್ ಮತ್ತು ಜೀವನ ಹಿಂಬಾಲಿಸಿದೆವು. ನಮ್ಮ ಹಿಂದೆ ಇದ್ದ ಆಕೃತಿ ಪ್ರೀತಿ ಹಿಂದಿನ ಎರಡು ಯಿಎಲ್ಟಿಪಿ ಗಳೊಂದಿಗೆ ಟೆಂಟ್ ಅನ್ನು ಹಂಚಿಕೊಂಡರು. ಕ್ಯಾಂಪ್ ನ  ನೇತ್ರತ್ವ ವಹಿಸಿದ ಸೈರಾಂ ಕಾವ್ಕಾರ್ ಅರ್ಧ ಗಂಟೆಯಲ್ಲಿ ಎಲ್ಲರನ್ನು ರೆಡಿಯಾಗುವಂತೆ ಟೈಮ್ ಕೊಟ್ಟರು. ಎಲ್ಲರು ತಮ್ಮ ತಮ್ಮ ಟೆಂಟ್ ಅನ್ನು ನಿಲ್ಲಿಸುವಲ್ಲಿ ನಿರತರಾಗಿದ್ದರು. ಗಂಡಿನ ಶಕ್ತಿ ನಮ್ಮಲ್ಲಿ ವಿರಾಜಮಾನವಾಗಿತ್ತು; ನಮ್ಮ ಟೆಂಟ್ ನ ಕೆಲಸವನ್ನು ಅವರಿಬ್ಬರಿಗೆ ಒಪ್ಪಿಸಿ, ನಾನು ಜೀವನ್ ಆಕೃತಿ ಪ್ರೀತಿಯ ಟೆಂಟ್ ಕಟ್ಟಲು ನೆರವಾದೆವು.
 
ಮೊದಲು ಬಂದ ಹತ್ತು ಗುಂಪುಗಳು ನಡುವಲ್ಲಿದ್ದ ಹತ್ತು ಸಿಮೆಂಟ್ ಚೌಕಟ್ಟಿನ ಮೇಲೆ ತಮ್ಮ ತಮ್ಮ ಟೆಂಟ್ ಗಳನ್ನೂ ನಿಲ್ಲಿಸಿದ್ದರು. ನಮ್ಮ ಈ ಎರಡು ಟೆಂಟ್ ಗಳು ಅವರ ಹಿಂದಿನ ಸಾಲಿನಲ್ಲಿದ್ದವು. ನಾವು ಎಂಟು ಮಂದಿ ಟೆಂಟ್ ನಿಲ್ಲಿಸಿ . ನಡುವಲ್ಲಿದ್ದ ಹಜಾರಕ್ಕೆ ಬರಲು ಕಾವ್ಕಾರ್ ನಡುವಲ್ಲಿ ಮುಂದಿನ ಒಂದು ದಿನದ ಚಟುವಟಿಕೆಗಳನ್ನು  ನೆರೆದವರಿಗೆ ವಿವರಿಸುತಿದ್ದ.
 
ಪ್ರತಿ ನಾಲ್ಕು ಟೆಂಟ್ ಗಳನ್ನು ಸೇರಿ ಒಂದೊಂದು ಗುಂಪಾಗಿ ವಿಂಗಡಿಸಿ, ಗುಂಪುಗಳ ನಡುವೆ ಸಂಜೆ ಕೊಂಪಿಟೆಶನ್ ಮಾಡಲಾಗುವುದು. ವಿಜೇತ ತಂಡಕ್ಕೆ ೨೦ ಅಂಕಗಳು, ಎರಡನೇ ಸ್ಥಾನಿಗೆ ೧೦ ಮತ್ತು ಮೂರನೆಯವನಿಗೆ ೦೫ ಅಂಕಗಳು. ಕೊನೆಗೆ ಕೆಂಪ ಫೈರ್ ನಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಣೆ. ನಾಳಿನ ಮುಂಜಾವಿನಲ್ಲಿ ಟ್ರೆಕ್ಕಿಂಗ್, ಡ್ರಾಫ್ಟಿಂಗ್, ಅರ್ಚರಿ, ಗಳಲ್ಲಿ ಇಂಡಿವಿಜುವಲ್ ಪೆರ್ಫಾರ್ಮನ್ಸ್ ಮೇಲೆ ವಿಜಯಿಗೆ ದೊಡ್ಡ ಮೊತ್ತದ ಬಹುಮಾನ.
 
ಸಂಜೆಯ ಕೊಂಪಿಟೆಶನ್ ಗುಂಪಲ್ಲಿದ್ದ ಎಲ್ಲರ ಇನ್ವೊಲ್ವೇಮೆಂಟ್ ನ  ಅಗತ್ಯತೆಗೆ ಒಂದು ವ್ಯಕ್ತಿಗೆ ಒಂದೇ ಕೊಂಪಿಟೆಶನ್ ನಲ್ಲಿ ಆಡುವ ಅವಕಾಶ. ಗುಂಪಿನ ನಾಯಕನಾಗಿ ಆರಿಸಲು ಮೂರು ಗುಂಪುಗಳಾದ ರೋಸ್, ಲಿಲ್ಲಿ ಮತ್ತು ಜಾಸ್ಮಿನ್ ಗಳಿಗೆ ಹೇಳಲಾಯಿತು. ಒಂದು ಗುಂಪನ್ನು ತಿವಾರಿ, ಸತೀಶ್ ಒಂದಕ್ಕೆ ಮತ್ತು ಇನ್ನೊಂದಕ್ಕೆ ಸಿನಿಯರ್ ಮೋಸ್ಟ್ ಲೇಡಿಸ್ ಕೆಂಡಿಡೆಟ್ ವೈದೇಹಿ ಮಾಮ್ ಅವಿರೋದ ವಾಗಿ ಆಯ್ಕೆಯಾದರು.
 
ಎಲ್ಲರ ಗಮನ ರೋಸ್ ಗುಂಪಿನಲ್ಲಿತ್ತು, ಕಾರಣ ಇದರ ನೇತ್ರತ್ವ ಪ್ರಾಜೆಕ್ಟ್ ಮೇನೇಜರ್ ತಿವಾರಿ ವಹಿಸಿದ್ದು ಎಂದರೆ ತಪ್ಪಾಗುತ್ತದೆ, ಬದಲಾಗಿ ಅದು ಈ ಟ್ರಿಪಿನ ಸೌರ್ಸ್ ಆಫ್ ಅಟ್ರಾಕ್ಷನ್ ಆದ ಆಕೃತಿ ಪ್ರೀತಿಯನ್ನು ಒಳಗೊಂಡಿದ್ದು ಆಗಿತ್ತು. ಆ ಗುಂಪಿನಲ್ಲಿ ನಾವಿದದ್ದು ನನಗು ಜೀವನ್ಗೂ  ಏನೋ ಹಿತ ವೆನಿಸುತಿತ್ತು.
 
ಕಾವ್ಕಾರ್ ಈ ಸಂಜೆಯ ಗುಂಪುಗಳ ನಡುವಿನ ಕೊಂಪಿಟೆಶನ್ಗಳ ವಿವರಣೆ ನೀಡುತಿದ್ದ. ಮೊದಲಿಗೆ ಟ್ರೇಶರ್ ಹಂಟ್, ಅಂತ್ಯಾಕ್ಷರಿ, ಕ್ವಿಜ್ , ಮತ್ತು ಕೊನೆಯದಾಗಿ ಕ್ಯಾಮ್ ಫೈರ್ ಪೆರ್ಫಾರ್ಮನ್ಸ್. ಈಗ ಪ್ರತಿ ಗುಂಪಿನ ನಾಯಕ ತನ್ನ ತನ್ನ ಗುಂಪಿನಿಂದ ತನ್ನ ಗುಂಪನ್ನು ಈ ನಾಲ್ಕು ಕೊಂಪಿಟೆಶನ್ ಗೆ ವಿಂಗಡಿ ಸ ಬೇಕಿತ್ತು. ಮತ್ತು ಪ್ರತಿ ಒಂದು ಕೊಂಪಿಟೆಶನ್ ನಲ್ಲಿ ತನ್ನ ಗುಂಪನ್ನು ವಿಜಯಿಸ ಬೇಕಿತ್ತು.
 
ಪ್ರತಿ ಗುಂಪಿನಲ್ಲಿ ಚರ್ಚೆ ಆರಂಬವಾದವು. ತಿವಾರಿಯಲ್ಲಿ ನಾನು "ಟ್ರೇಶರ್ ಹುಂಟ್ ಗೆ ನಾನು ಹೋಗ್ತೇನೆ"ಅಂದೆ.
ಜೀವನ್ ನೂ "ನಾನು "ಅಂದ.
ಇನ್ನಿಬ್ಬರನ್ನು ಆಯ್ಕೆ ಮಾಡಲು ತಿವಾರಿ ಮುಂದಾದರು, ಅಷ್ಟರಲ್ಲಿ ಅವಿನಾಶ್ ಮತ್ತು ಪ್ರೀತಿ "ನಾನು ನಾನು" ಎಂದು ನಮ್ಮನ್ನು ಸೇರಿದರು.
ತಿವಾರಿ ಅವಿನಾಶ್ನಲ್ಲಿ "ನೀನು ಬೇಡ, ಅಂತ್ಯಾಕ್ಷರಿ ನೀನು ನೋಡ್ಕೋ " ಅಂದ.
ಅವರು ಆಕೃತಿಯಲ್ಲಿ "ಕಂ ಅಂಡ್ ಜೋಯಿನ್ ವೈಭು" ಎಂದು ಕಳ್ಳ ನಗೆ ಬೀರಿದರು. ಅವಳು ನಾಚುತ್ತ ಒಂದು ಸೇರಿದಳು.
ತಿವಾರಿ ಕ್ವಿಜ್ ನ ಜವಾಬ್ದಾರಿ ವಹಿಸಿದರು, ಇನ್ನಿಬ್ಬರನ್ನು ಅದರಲ್ಲಿ ಸೇರಿಸಿದರು. ಅವಿನಾಶ್ಗೆ ಅಂತ್ಯಾಕ್ಷರಿ ವಹಿಸಿಕೊಟ್ಟರು ಅವನು ಗುಂಪಲ್ಲಿ ಇದ್ದ ಎರಡು ಡಂಬು ಇಎಲ್ಟಿಪಿ ಗಳನ್ನು ಎಳೆದ. ಕೊನೆಗೆ ಮೂರು ಉಳಿದವರು ಕಡೆಯ ಫೈನಲ್ ಪೆರ್ಫಾರ್ಮನ್ಸ್ ಗೆ ಅವಿರೋದ ಆಗಿ ನೋಮಿನೆಟ್ ಆದರು.
 
ಲಿಲ್ಲಿ ತನ್ನ ೧೫ ಮಂದಿಯನ್ನು ಸೇಮ್ ಫಾರ್ಮಾಟ್ ನಲ್ಲಿ ವಿಂಗಡಿಸಿದರು. ಜಾಸ್ಮಿನ್ ನಲ್ಲಿ ೧೬ ಮಂದಿ ನಾಲ್ಕು ಜನರ ನಾಲ್ಕು ತಂಡವಾಯಿತು.
 
ಕಾವ್ಕರ್ ಮತ್ತು ಅವನಿಗೆ ಸಹಾಯ ಮಾಡುತಿದ್ದ ರಮೇಶ್ ಎಲ್ಲರಿಗೆ ರೆಡಿಯಾಗಿರುವ ವಡಾಪಾವ್ ಮತ್ತು ಟೀ ಸವೆದು ಹದಿನೈದು ನಿಮಿಷದಲ್ಲಿ ಸೇರುವಂತೆ ಹೇಳಿದರು. ಪಕ್ಕದಲ್ಲಿರುವ ಹಾಲ್ ನಲ್ಲಿ ಊಟ ತಿಂಡಿಯ ವ್ಯವಸ್ತೆ ಯಾಗಿತ್ತು. ಎಲ್ಲರು ಅಲ್ಲಿ ತಮ್ಮ ತಮ್ಮ ತಂಡದ ಪ್ಲಾನ್ನಿಂಗ್ ಮಾಡುತಿದ್ದರು. ರೋಸ್ ನ ಟ್ರೇಶರ್ ಹುಂಟ್ ತಂಡ ಮಾತ್ರ ಫುಲ್ ಕೊಂಫಿಡೆನ್ಸ್ ನಲ್ಲಿ ವಡಾಪಾವ್ ತಿನ್ನುತ್ತಿತ್ತು, ಮತ್ತು ಬೈಟು ಟಿ ಸವೆಯುತಿತ್ತು.
 
ಟೀ ಮುಗಿದು ಮತ್ತೆ ಹಜಾರದಲ್ಲಿ ಸೇರಲು ನಡುವಲ್ಲಿ ರಾತ್ರಿಯ ಕ್ಯಾಂಪ್ ಫೈರ್ ಗೆ ಎಲ್ಲ ಸಿದ್ದತೆ ಮುಗಿಸಿದ್ದರು. ಅದರ ಸುತ್ತಲು ಚಾರ್ಪಾಯಿ ಹಾಕಿ, ಪ್ರತಿಯೊಂದರ ಎದುರು  ಚಳಿ ಕಾಯಿಸಲು ಕೆಂಡದ ಕುಂಡ ಹೊತ್ತಿಸಿ ಇಟ್ಟಿದ್ದರು. ನಿಧಾನಕ್ಕೆ ಕತ್ತಲು ಶುರುವಾಯಿತು. ಮಂಜು ಹೆಚ್ಚಾಯಿತು.  ಪ್ರತಿ ಟೆಂಟ್ ಗಳ ಒಳಗೆ ಹೊರಗೆ ಲಾಟನ್ ನೇತು ಹಾಕಿದ್ದರು. ನಡುವಲ್ಲಿ ಒಂದು ತಿಳಿ ಬೆಳಕಿನ ಹೊಲೋಜೆನ್ ಲೈಟ್ ಉರಿಸಲಾಗಿತ್ತು.  
 
ಹದಿನೈದು ಮಂದಿ ನಾಲ್ಕು ಚಾರ್ ಪಾಯಿಯಲ್ಲಿ ಕುಳಿತಿದ್ದಾಗ ತಿವಾರಿ ಬಂದು ಒಂದು ಚಾರ್ ಪಾಯಿಯಲ್ಲಿ ಕುಳಿತ ನಮ್ಮಲ್ಲಿ "ನೀವು ಯಾವ ಸ್ಟ್ರೆಟರ್ಜಿ ಪ್ಲಾನ್ ಮಾಡಿದ್ದಿರಿ...?" ಅಂದ.
"ಏನಿಲ್ಲ, ಹಾಗೆ ಹೋಗಿ ಟ್ರೇಶರ್ ಹುಡುಕಿ ತಂದು ಕೊಡುತ್ತೇವೆ." ಅಂದ ಜೀವನ್.
ಅವರು "ನಾಲ್ಕು ಜನ, ಒಟ್ಟಿಗೆ ಹೋಗಬೇಡಿ, ಇಬ್ಬಿಬ್ಬರು ಹೋಗಿ, ಕ್ಲೂ ಸಿಕ್ಕೊಡನೆ ಒಬ್ಬರನೊಬ್ಬರು ಕೊಂಟೆಕ್ಟ್ ಮಾಡಿ, ನಂತರ ಮತ್ತೆ ಇನ್ನೊದು ಸುಳಿವಿನ ಬೆನ್ನು ಹತ್ತಿ" ಅಂದರು.
ಜೀವನ್ "ಓಕೆ ಸರ್, ನಾನು ಮತ್ತು ಪ್ರೀತಿ , ಅವನು ಆಕೃತಿ" ಅಂದು ಹಲ್ಲು ಕಿರಿದ.
ಅದಕ್ಕೆ ತಿವಾರಿ "ಈ ತಾರಾ ಗುಂಪಾದರೆ ಟ್ರೇಶರ್ ಹುಡುಕಿ ಆದ ಬಳಿಕ ನಿಮ್ಮನ್ನು ಹುಡುಕಲು ನಾವೆಲ್ಲಾ ಬರಬೇಕಾದೀತು." ಎಂದು ಟೋನ್ಟ್ ಇಟ್ಟ.
ಜೀವನ್ ಗೆ ಮಾತು ಹೊರಡಲಿಲ್ಲ. ನಾನು "ಎಸ ಬೇಡ, ನಾನು ಪ್ರೀತಿ, ಅವನು ಆಕೃತಿ" ಅಂದೆ
ತಿವಾರಿ ಸರಿಯೆಂದರು , ನಮ್ಮನ್ನು ದಾಟಿ ಅವಿನಾಶ್ ನಲ್ಲಿ ಅವನ ಅಂತ್ಯಾಕ್ಷರಿ ಯ ಸ್ಟ್ರೆಟರ್ಜಿ ಕೇಳಲು ಹೋದರು.
ಪ್ರೀತಿ "ಆಸೆ ನೋಡು ಮಗನಿಗೆ... ಸಿಕ್ಕಾಕಿಕೊಂಡಿಯಲ್ಲ ಹೀರೋ ಆಗಲಿಕ್ಕೆ ಹೋಗಿ, ನಿನ್ನ ಬುದ್ದಿಗಿಷ್ಟು" ಎಂದು ತದುಕಿದಳು ಅವನಿಗೆ.
 
ಕಾವ್ಕರ್ ನಡು ಹಜಾರದಲ್ಲಿ ನಿಲ್ಲಿಸಿ ಮೂರೂ ಗುಂಪಿನ ಟ್ರೇಶರ್ ಹಂಟ್ ನ ಪಾರ್ಟಿಸಿಪೆಂಟ್ ಗಳನ್ನು ಕರೆದ. ಎಲ್ಲ ಗುಂಪಿಗೆ ಎರಡೆರಡು ಟಾರ್ಚ್ ಲೈಟ್ ಕೊಟ್ಟು, ಮೊದಲ ಕ್ಲೂ ಕೊಡುತ್ತಾ "ಟೋಟಲ್ ಫೋರ್ ಕ್ಲೂಸ್! ಫೈನಲ್ ಕ್ಲೂ ನಿಮಗೆ ಟ್ರೇಶರ್  ತಲುಪಿಸುತ್ತೆ,  ಈ ಟಾರ್ಚ್ ನಿಮಗೆ ಬೆಳಕು ಚೆಲ್ಲಲು ಸಹಾಯ ಮಾಡುತ್ತದೆ, ಯುವರ್ ಟೈಮ್ ಸ್ಟಾರ್ಟ್ ನೌ" ಅಂದ.
 
 
ಮೂರು ತಂಡಗಳು ಕ್ಲೂ ಓದಲು ಆರಂಬಿಸಿದರು.
ನಾವು ಆ ಗುಂಪಿನಿದ ಹೊರಬಂದು ಕ್ಲೂ ನೋಡಲು ಶುರು ಮಾಡಿದೆವು. ಬಿಳಿಯ ಹಾಳೆಯಲ್ಲಿ ಬರಿಯ "+ -" ಎಂದು ಬರೆದಿತ್ತು.
ಒಂದು ಕ್ಷಣ ಆಲೋಚನೆಯಲ್ಲಿ ಬಿದ್ದ ಮೂವರು ಅದನ್ನು ಡಿಕೋಡ್ ಮಾಡಲು ಆಲೋಚಿಸಿದೆವು. ಚಕ್ಕನೆ "+- ಅಂದರೆ ಬ್ಯಾಟರಿ, ಅಂದ್ರೆ ಈ ಟಾರ್ಚ್ಲ್ ನಲ್ಲೆ ಮುಂದಿನ ಕ್ಲೂ ಇದೆ" ಅಂದೆ.
 
ಪ್ರೀತಿ ತನ್ನ ಕೈಯಲ್ಲಿದ್ದ ಟಾರ್ಚ್  ತೆರೆದಳು, ಆಕೃತಿ ಅವಳಿಗೆ ಬೆಳಕು ಚೆಲ್ಲಿದಳು, ಅಲ್ಲಿ ಕ್ಲೂ ಇರಲಿಲ್ಲ. ಅದನ್ನು ಮತ್ತೆ ಸರಿಪದಿಸಿದಳು, ಆಕೃತಿ ಪ್ರೀತಿಯ ಟಾರ್ಚ್ ಬೆಳಕಿನಲ್ಲಿ ತನ್ನದನ್ನು ಬಿಚ್ಚಿದಾಗ  ಅದರ ಒಳಗೆ ಎರಡನೇ ಕ್ಲೂ ಇರುವ ಪೇಪರ್ ಕಣ್ಣಿಗೆ ಬಿತ್ತು.
ಬರಿಯ 'ಖಾಲಿ ಪೇಪರ್' 
ನಾಲ್ವರಿಗೂ ಅರ್ಥ ವಾಗಲಿಲ್ಲ.
ಕೂತು ಆಲೋಚನೆ ಮಾಡಿದೆವು. ಏನು ಹೊಳೆಯಲಿಲ್ಲ. ಮುಂದಿನ ಎರಡು ನಿಮಿಷದಲ್ಲಿ ಆಕೃತಿ "ಕಾವ್ಕರ್ ಆಗ ಮೊದಲ ಕ್ಲೂ ಕೊಡುವಾಗ ಹೇಳಿದ್ದು ರೆವೈಸ್ ಮಾಡ್ಕೋ ಡಂಬು" ಅಂದಳು.
 
ಅವನು ತನ್ನ ಮಾತು ಮುಗಿಸುತ್ತ "ಇಫ್ ಯು ವಾಂಟ್ ಸಂ ಪೇಪರ್ ಅಂಡ್ ಪೆನ್ ಫಾರ್ ಹೆಲ್ಪ್, ಕಾಂಟಾಕ್ಟ್ ದಿ ಹೆಲ್ಪ್ ಡೆಸ್ಕ್ ಅಟ್ ದಿ ಎಂಟ್ರನ್ಸ್" ಅಂದಿದ್ದ.
 
ಅವಳು ಆ ಮಾತನ್ನು ಈ ಕ್ಲೂ ನೊಂದಿಗೆ ಜೋಡಿಸುತ್ತ "ಖಾಲಿ ಪೇಪರ್, ಅಂದ್ರೆ ಖಾಲಿ ಪೇಪರ್ ಸಿಕ್ಕುವ ಸ್ತಳ ಎಂದಾಗ್ಬಾರ್ದಾ.. ಅಂದ್ರೆ ಹೆಲ್ಪ್ ಡೆಸ್ಕ್ ನಲ್ಲಿ ಇನ್ನೊಂದು ಕ್ಲೂ ಇದೆ" ಎಂದು ಕಂಕ್ಲುಶನ್ ಗೆ ಬಂದಳು.
ನಾನು "ಸುಮ್ನೆ ಎನೀನೋ ಅಸಸ್ಯುಂ ಮಾಡ್ತೀಯ..." ಅದಲ್ಲ ಅಂದೆ. ಮತ್ತು ಪುನಃ ಯೋಚನೆಯಲ್ಲಿ ಮುಳುಗಿದೆ. ಏನು ಹೊಳೆಯಲಿಲ್ಲ.
ಪ್ರೀತಿ "ಒಂದು ಸರ್ತಿ ಹೆಲ್ಪ್ ಡೆಸ್ಕ್ ಗೆ ಹೋಗಿ ನೋಡಿ ಬರೋಣಾ, ಏನಾಗುತ್ತೆ..?" ಅಂದಳು.
ಅದು ನಡೆದು ಬಿಡಲಿ ಎಂದು ಅಲ್ಲಿ ಹೋದೆವು. ಕಾವ್ಕಾರ್ ಏನು ಗೊತ್ತಿಲ್ಲ ದವನಂತೆ ನಿಂತಿದ್ದ "ಪ್ರೀತಿ ಅವನಲ್ಲಿ, ವೀ ನೀಡ ಅ ಪೇಪರ್ ಅ ಬ್ಲಾಂಕ್ ಪೇಪರ್" ಅಂದಳು.
ಅವನು "ಇಟ್ಸ್ ನಾಟ್ ಅ ಕ್ಲೂ ಪ್ಲೇಸ್" ಅಂದು ತನ್ನ ದೃಷ್ಟಿ ನಡುವಲ್ಲಿ ಇರುವ ಕೆಂ ಫೈರ್ ಅರ್ರೆನ್ಜ್ಮೆಂಟ್ ಕಡೆಗೆ ಹಾಯಿಸಿದ.
ಎಲ್ಲರಿಗೂ ನಿರಾಸೆಆಯಿತು, ನಾನು ಆಕೃತಿಯಲ್ಲಿ "ನೋಡಿದ್ಯಾ, ಈಗ ಸಮಾಧಾನ ಆಯ್ತಾ ಅಂದೆ" . ಅವಳು ಬೇಜಾರಲ್ಲಿ ತಲೆ ತಗ್ಗಿಸಿದಳು.
ಕೈಯಲ್ಲಿದ್ದ ಆ ಖಾಲಿ ಕ್ಲೂ ಹಾಳೆಯನ್ನು ಕಾವ್ಕರ್ ನ ಎದುರಿಟ್ಟು "ವೀ ಹಾವ್ ಅ ಬ್ಲಾಂಕ್ ಕ್ಲೂ, ಮೀನ್ಸ್ ಅ ಬ್ಲಾಂಕ್ ಪೆಪೆರ್, ಮೀನ್ಸ್  ಹೆಲ್ಪ್ ಡೆಸ್ಕ್" ಎಂದಳು.
ಅವನು "ಗುಡ್ ಗೆಸ್ಸ್..." ಇಟ್ಸ್ ಯುವರ್ ಥರ್ಡ್ ಕ್ಲೂ ಎನ್ನುತ್ತಾ ತನ್ನ ಕಿಸೆಯಲ್ಲಿದ್ದ ಇನ್ನೊಂದು ಕ್ಲೂ ಹೊರತೆಗೆದ.
 
ಅದರಲ್ಲಿ "ಒಂದು ನಾಯಿ ".
"ಇಲ್ಲಿ ನಾಯಿಯನ್ನು ಎಲ್ಲಿ ಹುಡುಕುವುದು, ಹುಡುಕಿದ ನಾಯಿ ಯಾವುದಾದರು ಕಂತ್ರಿ ನಾಯಿಯಾಗಿ ನಮ್ಮನ್ನು ಕಚ್ಚಿದರೆ ಏನು ಮಾಡುವುದು ...?".ಎನ್ನುತ್ತಾ ಹಲ್ಲು ಕಿರಿದೆ. ಅವನು"ಇದೆ ಕ್ಯಾಂಪಸ್ ನಲ್ಲಿ ಇದೆ ಆದ್ರೆ ಕ್ಲೂ ನಾಯಿಯಲ್ಲ " ಎನ್ನುತ್ತಾ ನಡುವಲ್ಲಿ ಕಟ್ಟಿಗೆ ಜೋಡಿಸುತ್ತಿದ್ದ ಹುಡುಗರ ನೆರವಿಗೆ ಧಾವಿಸಿದ.
 
"ನಾಯಿಯನ್ನು ಎಲ್ಲಿ ಹುಡುಕುವುದು..?" 
ಪ್ರೀತಿ ಇಬ್ಬಿಬ್ಬರಾಗಿ ಹುಡುಕುವಾ, ಬಾರೋ ಗೂಬೆ ನಂ ಜೊತೆ ಎಂದು ನನ್ನನ್ನು ಎಳೆದಳು, ನಾನು ಪ್ರೀತಿ ಒಂದು ದಿಕ್ಕಿಗೆ ಮುಂದುವರೆದೆವು, ಆಕೃತಿ ಜೀವನ್ ಇನ್ನೊಂದು ದಿಕ್ಕಿಗೆ.
 
ನಾವು ನಿರ್ಜನ ಬಯಲಲ್ಲಿ ಸುತ್ತು ತಿದ್ದೆವು ನಾಯಿಯ ಹುಡುಕಾಟದಲ್ಲಿ. ಅವರು ಇಲ್ಲಿ ಇರುವ ಪ್ರತಿಯೊಂದು ಬಿಲ್ಡಿಂಗ್ ನ ಅನ್ವೇಷಣೆಯಲ್ಲಿ ತೊಡಗಿದರು. ನಡುವಲ್ಲಿ ಲಿಲ್ಲಿ ಖಾಲಿ ಹಾಳೆಯನ್ನು ಹಿಡಿದು ಕ್ಲೂ ಸಿಗದೇ ಕಂಗಾಲಾಗಿತ್ತು. ಮತ್ತು ಜಾಸ್ಮಿನ್ ಇನ್ನು '+-' ಬಿಡಿಸಲಾಗದೆ. ಸುಸ್ತಾಗಿ ಕಳೆ ಕೂಡು ಮಾಡುತಿತ್ತು.
 
ಹಗಲಲ್ಲಿ ಕಣ್ಣುಹಾಯಿಸಿದ ದೂರ ಕಾಣದ ಮಂಜು, ಕವಿದ ಕತ್ತಲಲ್ಲಿ ನಾಯಿಯನ್ನು ಹುಡುಕಲು ಪರದಾಡುತಿದ್ದೆವು. ಪ್ರೀತಿ ನನ್ನಲ್ಲಿ "ಹೇಗಿತ್ತೋ ನೀರಿನೊಳಗಿನ ಅನುಭವ" ಎಂದು ಬೆಳಗ್ಗಿನ ವರಸೆ ತೆಗೆದಳು.
"ಗೂಬೆ, ಏನೇ ಹೆದರಿ ಹೋಗಿದ್ನಲ್ಲಾ ಆ ತಾರಾ ಶಾಕ್ ಕೊಡುವುದಾ, ಆದೂ ಆಕೃತಿ, ಜೀವನ್ ಜೊತೆ ಗಿರುವಾಗ.." ಎಂದೆ
ಅವಳು "ಹೇಗಿತ್ತು ಹೇಳು.."
"ಓಕೆ, ಓಕೆ ಇತ್ತು" ಅಂದೆ. ಟಾರ್ಚ್ ಅನ್ನು ನೆಲದಿಂದ ನನ್ನ ಮುಖಕ್ಕೆ ಚಿಮ್ಮಿಸಿದಳು. 
"ಏನು ರಾಯರೇ, ಕಣ್ಣು ಮುಚ್ಚಾಲೆ ಆಡುವ ಮನಸ್ಸಗಿರೋ ಹಾಗಿದೆ , ಆಕೃತಿ ಎದುರಲ್ಲಿ ಇರುವಾಗ,ಎಷ್ಟು ಸಾಚ್ಚಾ ಆಗಿರ್ತೀಯ, ಆದರೆ ನೀನು ಸಚ್ಚಾ ಅಲ್ಲ" ಎಂದು ಟಾರ್ಚ್ ಅನ್ನು ಬೇರೆಡೆಗೆ ಹಾಯಿಸಿದಳು.
"ನಿನಗೆ ಎನಸುತ್ತೆ..? ನನ್ ಮನಸ್ಸು ಯಾವ್ ಕಡೆ ಇದೆ ಹೇಳಿ...?" ಅಂದೆ ನಾನು.
ಅವಳು "ನಿಂದು ಡೆಡಿಕೆಟೆಡ್ ಲೈನ್ ಅನ್ಸುತ್ತೆ, ನಾನು ಎಸ್ಟಾದರೂ ಲೀಸ್ಡ್ ಲೈನ್, ಮನಸಿದ್ದಾಗ ಸೇರಿಸ್ತೀಯ, ಬೇಡ ಎಂದಾಗ ಮರೀತೀಯ" ಅಂದಳು
 
ಮೌನದಲ್ಲಿದ್ದೆ, ನಡುಗೆ ನಿಂತಿತ್ತು. ಬಯಲಲ್ಲಿ ಕ್ಲೂ ಬಿಟ್ಟು ಬೇರೆ ವಿಚಾರ ದೆಡೆಗೆ ಓಡುತ್ತಿತ್ತು ಮನಸ್ಸು.
 
ಅವಳು ಮುಂದುವರೆಸಿದಳು "ಜೀವನ್ ಇಷ್ಟ ಪಡ್ತಾನೆ ನನ್ನ, ಇಬ್ಬರು ತುಂಬಾ ಹತ್ತಿರವಾಗಿದ್ದೇವೆ, ಆದ್ರೆ ಅವನಲ್ಲೂ ಆ ವಿವೇಕ್ ನ ಗುಣ ಕಾಣುತ್ತದೆ. ಪೂರ್ಣ ನಂಬಲಾಗದ ವ್ಯಕ್ತಿತ್ವ, ಈಗ ಕುಗ್ಗಿರುವ ಅವನು ಮುಂದೊಂದು ದಿನ ಮೇಲೇರಿದಾಗ ಇದೆ ರೀತಿ ಇರುತ್ತಾನೆ ಹೇಳುವುದು ಕಷ್ಟ, ಆದ್ರೆ ನೀನು ಹಾಗಲ್ಲ" ಎಂದಳು ತನ್ನ ಮನಸ್ಸಿನ ಭಾವನೆಯನ್ನು.
ನಾನು "ಎಲ್ಲರು ವಿವೇಕ್ ತರಾನೆ ಇರ್ತಾರೆ ಅಂತ ಅನ್ಕೊಲ್ಬೇಡ, ಜೀವನ್ ನಿನ್ನನ್ನು ತುಂಬಾ ಇಷ್ಟ ಪಡ್ತಾನೆ, ಒಪ್ಕೊಳ್ಳ ಬಹುದಲ್ಲಾ..?"
"ಪ್ರೀತಿ ಫೋರ್ಸ್ ನಲ್ಲಿ ಹುಟ್ಟಲ್ಲ ಕಣೋ, ಅದಾಗಿಯೇ ಹುಟ್ಬೇಕು, ಬಲವಂತದ ಪ್ರೀತಿ ಎಷ್ಟೆಂದದರೂ ಅಷ್ಟೇ, ನಿನ್ನೆದುರಿಗೆ ಅವೋನಡನೆ ಅನ್ಯೋನಾಗಿ ಕಾಣ್ತೇನೆ ಯಾಕೆಂದ್ರೆ , ಡೆಡಿಕೆಟೆಡ್  ನಿನ್ನ ಮನಸನ್ನು ದೋಚಲು ಇಷ್ಟವಿಲ್ಲ, ಪ್ಲುಸ್ ಕಶ್ಮಲ ರಹಿತ ಆಕೃತಿಗೆ ಮೋಸ ಮಾಡಲು ಮನಸ್ಸಾಗಲ್ಲ." ಅಂದು ದೃಷ್ಟಿ ತಗ್ಗಿಸಿದಳು.
 
ನಾನು ಇನ್ನು ಮೌನದಲ್ಲಿದ್ದೆ. ಅವಳು ಮುಂದುವರಿಸಿದಳು "ಐ ಲವ್ ಯು" ಎನ್ನತ್ತ ಕೈಗೆ ಮುತ್ತಿಟ್ಟಳು.
ಕೈ ಕಸಿದು ಕೊಂಡೆ.
ಅವಳು "ನಿಮ್ಮ ನಡುವೆ ಬರಲು ಇಷ್ಟವಿಲ್ಲ ನನಗೆ, ಆದ್ರೆ ಮನಸ್ಸಂತ ಇರ್ತದೆ ಅಲ್ಲ , ಅದಕ್ಕೆ ಮೋಸ ಮಾಡ್ಲಿಕ್ಕೆ ಆಗಲ್ಲ ಕಣೋ.. ಸೋರಿ" ಎನುತ್ತ ಕಂಬನಿ ಬೀಳಿಸಿದಳು.  ಚೊಲ್ಲು ಚೊಲ್ಲು ಹುಡುಗಿಯ ಕಣ್ಣಲ್ಲಿ ಮೊದಲ ಬಾರಿಗೆ ಜಾರುತಿದ್ದ ಕಣ್ಣಿರನ್ನು ನೋಡಿ ಮರುಕ ಹುಟ್ಟಿತು.
"ಗೂಬೆ, ಡೋಂಟ್ ಟೆಕ್ ದಿಸ್ ಸೇರಿಯಸ್, ಐ ಅಂ ಯುವರ್ ಬೆಸ್ಟ್ ಫ್ರೆಂಡ್" ಎಂದು ಕಣ್ಣೀರು ಒರೆಸಿದೆ.
ಅವಳು ಅಂಗೈಗೆ ಮುತ್ತಿಟ್ಟಳು. "ಬರೀ ಇಷ್ಟೇ, ಈ ಜಾಗ ನನಗೆ ಕೊಡು, ಸಾಕು ನನಗೆ" ಎಂದಳು. ಕಣ್ಣೀರು ಧಾರಾಕಾರವಾಗಿ ಹರಿಯುತಿತ್ತು.
 
ಆಲಂಗಿಸಿದೆ. ತಲೆ ಸವರಿದೆ. ಹಾರುವ ಕೂದಲನ್ನು ಬಾಚಿ ಅದರ ಮೇಲೆ ಗದ್ದ ಇತ್ತು ತಲೆಯನ್ನು ನೇವರಿಸಿದೆ.ಅವಳು "ಹಿತ ವೆನಿಸುತ್ತಿದೆ, ಸೋರಿ ಕಣೋ, ಈ ರೆಲೆಶನ್ ಹೀಗೆ ಇರಲಿ, ಜೀವನ್ಗೆ ಸಪೂರ್ಣ ನನ್ನನ್ನು ಒಪ್ಪಿಸಲು ಮನಸ್ಸು ಬಯಸಲ್ಲ, ಆದ್ರೂ ಪ್ರಯತ್ನಿಸ್ತೇನೆ, ಯಾಕೆಂದ್ರೆ ನೀನು ಆಕೃತಿಯ ಸಂ ಒನ್ ಸ್ಪೆಷಲ್, ನನ್ನ ಬರಿಯ ಫ್ರೆಂಡ್ ಅಷ್ಟೇ" ಎಂದಳು.
 
ಬೆಳಗ್ಗೆ ಸೇವ್ ಮಾಡಿದ "ಮುಂಬೆ ವಾ" ರಿಂಗಿಣಿಸಿತು. ಆಕೃತಿ "ಬಾರೋ , ಡಂಬು ಸಿಕ್ತು ಕ್ಲೂ .." ಅಂದಳು.
 
ಇಬ್ಬರು ಮತ್ತೆ ಅವಳು ಹೇಳಿದ ಜಾಗಕ್ಕೆ ತಲುಪಿದೆವು. ಅವಳು ನಮಗೆ ಆ ಕೆಫೆಟೆರಿಯ ಬರಲು ಹೇಳಿದ್ದಳು. ಅಲ್ಲಿ ತಲುಪಿದ ನಾನು ಕೈಯಲ್ಲಿದ್ದ ಕ್ಲೂ  ನೋಡಿದೆ ಅದರಲ್ಲಿ ಒಂದು ಫೋನ್ ನ ಚಿತ್ರ ವಿತ್ತು. ಹಿಂಬದಿಯಲ್ಲಿ ಒಡೆಯ ಚಿತ್ರ ಇತ್ತು.
ಕ್ಲೂ ಸರಿಯಾಗಿ ಅವರು ಗುರ್ತ ಹಚ್ಚಿದರು. ಹಿಡಿ ಕೆಫೆ ಟೆರಿಯಾ ದಲ್ಲಿ ಎಲ್ಲೂ ಟ್ರೇಶರ್ ಕಾಣಲಿಲ್ಲ ಅವಳಲ್ಲಿ ಹಳೆ ಕ್ಲೂ ಹೇಗೆ ಡಿ ಕೋಡ್ ಮಾಡಿದಿರಿ ಎಂದು ಕೇಳಿದೆ.
ಅವಳು "ನಾಯಿ, ಅಂದರೆ ನಾಯಿಯನ್ನು ಕಟ್ಟುವ ಸ್ತಳ ಅನ್ಕ್ಕೊಂದು ನಾವು  ಹುಡುಕಲು ಶುರು ಮಾಡಿದೆವು, ಬಳಿಕ , ಚೈನ್, ಅದರ ಬೆಲ್ಟ್ ಹೀಗೆ ಮುಂದು ವರೆದೆವು. ಕಡೆಗೆ  ಮೇಲಿನ ಹಾಲ್ ನಲ್ಲಿ ರಮೇಶ್ ಕತ್ತಲ್ಲಿ  ಸೈಕಲ್ ಚೈನ್ ಹಾಕಿ ಸುತ್ತುತಿದ್ದದ್ದು ಕಣ್ಣಿಗೆ ಬಿದ್ದ ಅವನಲ್ಲಿ ಚೈನ್ ನೆಕ್ಷ್ತ ಕ್ಲೂ ಅಂದೆ ಅವನು ಈ ಚಿಟ್ ಕೈಗೆ ಕೊಟ್ಟ.


ಫೋನ್ ಕೆಫೆ ಟೆರಿಯಾ ದಲ್ಲಿರುವುದು, ಓಡಾ ನೂ ಇಲ್ಲೇ ಸೇರ್ವ್ ಮಾಡಿದ್ದು" ಅಂದು ತನ್ನ ಈ ಕ್ಲೂ ವನ್ನು ಬೆದಿಸಿದ ಬಗೆ ಹೇಳಿದಳು.
 
ಅದು ಸರಿ ಆದ್ರೆ ಇಲ್ಲಿ ಏನು ಕ್ಲೂ ಇದೆ, ಹಾಲ್ ಪೂರ್ತಿ ಖಾಲಿಯಾಗಿದೆ. ಎಂದು ನಿರಾಶೆ ಪಟ್ಟೆ ಅಷ್ಟರಲ್ಲಿ ಪ್ರೀತಿ ಫೋನ್ ಮತ್ತು ವೊಡೆ. ಆಲೋಚಿಸು , ಅದಲು ಬದಲು ಮಾಡು ವೊಡೆ ಮತ್ತು ಫೋನ್ 'ವೊಡಫೋನ್' ಆಗಿರಬಹುದಲ್ಲ.
"ಅಬ್ಬ ಟ್ಯೂಬ್ ಲೈಟ್ ಕೊನೆಗೂ ಉರಿತು" ಎಂದ ಜೀವನ್.
"ಕೆಮ್ಪಾಸ್ ನೊಳಗೆ ಮೊಬೈಲ್ ಟವರ್ ಇತ್ತಲ್ಲ, ಅದು ವೊಡಾಫೋನ್ ದು, ಶೂರ್ ಅದೇ" ಅಂದೆ ಬಯಲಲ್ಲಿ ಕಂಡ ಟವರ್ ಅನ್ನು ನೆನಪಿಸುತ್ತಾ.
"ಎಲ್ಲರು ಒಟ್ಟಾಗಿ ಹೋಗೋಣ." ಅಂದಳು ಪ್ರೀತಿ.
"ಹೌದು ಟ್ರೇಶರ್ ದೊಡ್ಡದಿದ್ದರೆ , ಎಲ್ಲರು ಒಟ್ಟಿಗೆ ಹೋಗೋಣ" ಅಂದೆ ನಾನು.
 
ಕರಚಲು ಗಿಡದ ನಡುವಿದ್ದ ಟವರ್ ತಲುಪಿದೆವು. ಟವರ್ ನ ನಡುವೆ ಒಂದು ಲಾಟನ್ ನೇತು ಹಾಕಿತ್ತು ಅಷ್ಟೇ. ಬೇರೆ ಏನು ಕುರುಹು ಇರಲಿಲ್ಲ.
"ಎಲ್ಲೋ ಟ್ರೇಶರ್... ಲಾಟನ್ ಬಿಟ್ಟು ಬೇರೆ ಏನು ಇಲ್ಲ ಇಲ್ಲಿ " ಅಂದ ಜೀವನ್ 
"ಅದೇ ಇರಬಹುದು ಅದನ್ನು ತೆಕೊಂಡು ಬರ್ತೇನೆ" ಅಂದೆ ನಾನು.
 
ಬೇಲಿ ದಾಟಿ ಒಳಗೆ ಬಂದೆ. ಲೆಟನ್ ಅನ್ನು ಅಲ್ಲಿಂದ ಬಿಡಿಸಿದೆ. ಅದರ ಕೆಳಗೆ "ಕಾಂಗ್ರಟ್ಸ್, ಯು ಗೊಟ್ ದಿ ಟ್ರೇಶರ್ " ಎಂದು ಬರೆದಿತ್ತು.
"ಕಾಂಗ್ರಟ್ಸ್ ವೀ ವನ್"  ಅಂದು ಕೈಯಲ್ಲಿದ್ದ ಟ್ರೇಶರ್ ಮೇಲೆತ್ತಿದೆ.
 
ಬೇಲಿ ದಾಟುವಾಗ ಅದರ ಸರಿಗೆ ಗಮನಿಸದೆ ಹಾರಿದೆ, ಅದರ ಮುಳ್ಳು ಸೀದಾ ಕಾಲನ್ನು ಗೀರಿ ಗಾಯವಾಯಿತು.
ಹೊರಗೆ ಬಂದು ಬಯಲಲ್ಲಿ ಬಿದ್ದುಕ್ಕೊಂಡೆ. ಆಕೃತಿ "ಏನ್ ಮಾಡ್ಕೊಂಡಿ ನೋಡು ಫೂ ಫೂ " ಎಂದು ಗೀರಿದ್ದ ಗಾಯಕ್ಕೆ ಗಾಳಿ ಹಾಕುತಿದ್ದಳು.
ಮನ ಹಾರುತ್ತಿತ್ತು.
 
ಪ್ರೀತಿ "ಏನು ಆಗಿಲ್ಲ ಆಕೃತಿ, ಚಿಲ್, ಬರೀ ಗೀರಿದೆ ಅಷ್ಟೇ, ಬಾ ಹೋಗೋಣ, ಏಳೋ ಮಂಗಾ, ನಾಟಕ ಸಾಕು, ಹೆಚ್ಚು ಗಾಳಿ ತಿಂದ್ರೆ ಆ ಗೀರಿದ ಗಾಯ ಇನ್ಫೆಕ್ಷನ್ ಗೆ ತಿರುಗ ಬಹುದು, ಸಾಕು ಸಾಕು ನಾಟಕ" ಅಂದಳು.
ಜೀವನ್ ಲೆಟನ್ ಹಿಡಿದು ಮುಂದೆ ನಡೆದ , ಮೂವರು ಅವನನ್ನು ಹಿಂಬಾಲಿಸಿದೆವು.
 
ಮುಂದಿನ ಅಂತ್ಯಾಕ್ಷರಿ ಯಲ್ಲಿ ಅವಿನಾಶ್ ಒನ್ ಮ್ಯಾನ್ ಆರ್ಮಿಯಂತೆ ಎದುರಿನ ಎರಡು ಟೀಮ್ ಅನ್ನು ಸೋಲಿಸಿ ಬಿಟ್ಟ, ಆದರೆ ತಿವಾರಿ ತನ್ನ ಕ್ವಿಜ್ ನಲ್ಲಿ ಜೇರೊ ಕಾಣಿಕೆ ನೀಡಿದ. ಕೊನೆಯ ಪೆರ್ಫಾರ್ಮನ್ಸ್ನಲ್ಲೂ  ರೋಸ್ ನ ಪೆರ್ಫಾರ್ಮನ್ಸ್ ಅಷ್ಟಕಷ್ಟೇ.
ಆದ್ರೂ ರೋಸ್ ತಂಡ ಮೊದಲ ಬಹುಮಾನ ಗಳಿಸಿತು.
 
ನಂತರ  ಊಟ ಆದಬಳಿಕ ಡಿ. ಜೆ ಮುಂದುವರಿದಿತ್ತು. ಕುಪ್ಪಳಿಸುತಿದ್ದೆವು, ಬೆಂಕಿಯ ಜ್ವಾಲೆ ಬಿಸಿ ನೀಡುತ್ತಿತ್ತು. ಒಂದಾದದ್ದೇ ಗೊತ್ತಾಗಲಿಲ್ಲ.
 
ಡಿ. ಜೆ ಮುಗಿದಾಗ ಜೀವನ್ ನನ್ನಲ್ಲಿ ವಾಕ್ ಗೆ ಹೋಗೋಣ ವೇನೋ ಅಂದ ನನಗು ಹೆಚ್ಚು ಸಮಯ ಅವಳೊಂದಿಗೆ ಕ್ಕಳೆಯಲು ಕಾರಣ ಸಿಕ್ಕಂತಾಯಿತು. ಓಕೆ ಅಂದೆ.
ಹುಡುಗೀರಿಬ್ಬರ "ಓಕೆ" ಬಂದಾಯ್ತು.
ಇನ್ನೇನೋ ಹೊರಡ ಬೇಕು ಅನ್ನುವಷ್ಟರಲ್ಲಿ ತಿವಾರಿ "ಎಲ್ಲ ಮಲಗಿ, ನೋ ವಾಲ್ಕಿಂಗ್ ನೋ ಟಾಕಿಂಗ್... ನೋ ಎಕ್ಸ್ .. ಎಕ್ಸ್" ಎಂದು ತುಪಾಕಿ ಬಿಟ್ಟ.
 
ಮಾರನೆ ದಿನ ಇನ್ನೂ ಹತ್ತಿರವಾಗಿತ್ತು ಪ್ರತಿಯೊಂದರಲ್ಲಿ ಆಕೃತಿಗೆ ಚೆನ್ನೈನ ಮೊದಲ ಬೇಟಿಯ ನೆನಪು ತರಿಸುತಿತ್ತು. ಒಂದು ವರ್ಷ, ಕಳೆದ ದಿನಗಳು ಮೆಳುಕಾಗಿದ್ದವು ರಾತ್ರಿ ಬಸ್ ಪುಣೆಗೆ ತಲುಪಿದಾಗ.
 


 
ಮುಂದಿನ ಸಿಪ್