ಸಿಪ್ - ೩೬ 

 
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 

 

 
 
ಬೆಳಗ್ಗೆ ೮ ಕ್ಕೆ ಎಲ್ಲ ರೆಡಿಯಾಗಿ ಮೂರು ಕಾರಿನಲ್ಲಿ ಮಹಾಬಲಿಪುರಂ ಗೆ ಹೊರಡಲು ಮುಂದಾದೆವು. ನನ್ನ ಸೊಂಟದಲ್ಲಿ ನನ್ನ ಕೆಮರಾ ನೇತು ಹಾಕಿದ್ದೆ.ಷಣ್ಮುಗನ್ ಕುತ್ತಿಗೆಯಲ್ಲಿ ಡಿ.ಎಸ ಎಲ್. ಅರ್ ನೆತಾಡುತಿತ್ತು. ಆಕೃತಿ ನನ್ನಲ್ಲಿ ನಿನ್ನ ಡಬ್ಬ ಕೆಮರಾ ಇಲ್ಲೇ ಇಡೋ ಚಿಕ್ಕಪ್ಪನ ಕೈಯಲ್ಲಿರುವ ಡಿ ಎಸ್ ಎಲ್ ಆರ್ ನಿಂದ ಫೋಟೋ ತೆಗೆಯುವಿಯಂತೆ, ರಾತ್ರಿ ಹೋಗುವಾಗ ನಿನಗೆ ನಾನು ಟ್ರಾನ್ಸ್ಫರ್  ಮಾಡಿ ಕೊಡುತ್ತೇನೆ" ಎನ್ನುತ್ತಾ ನನ್ನ ಸೊಂಟಕ್ಕೆ ಕಟ್ಟಿದ್ದ ಕೆಮೆರಾ ಕಸಿದುಕೊಂಡಳು.
 
ಗಣಪತಿ ನಿನ್ನೆಯಂತೆ ದೇವರಿಗೆ ಆರತಿ ಬೆಳಗಿದರು, ಒಂಬತ್ತರ ಜೊತೆಗೆ ನಾನು ದೇವರ ಎದುರು ಕೈಮುಗಿದು ನಿಂತುಕ್ಕೊಂಡೆ. ಇವತ್ತು ಪ್ರಸಾದ ಹಚ್ಚಿ ಎಲ್ಲರ ಕಾಲಿಗೆ ಬಿದ್ದು ಆಶೀರ್ವಾದ ತೆಕ್ಕೊಂಡೆ. ಅವರಿಗೆಲ್ಲರಿಗೆ ಇದು ಹಿಡಿಸಿತು. ಆದರ್ಶನ ಅಮ್ಮ ನನ್ನಲ್ಲಿ "ಮುಂಡು ಕಟ್ಟಿ ಕೊಳ್ಳಲು ಬರುತ್ತಾ..?" ಎಂದು ಕೇಳಿದರು.
ನಾನು "ಬರುತ್ತೆ ಕಟ್ಕೊಳ್ತೇನೆ, ಊರಲ್ಲಿ ಇರುವಾಗ ಊರ ವೇಷ, ಹೊರಗಿರುವಾಗ ಹೊರಗಿನ ವೇಷ" ಎಂದೆ.
ಅವರು ತಮ್ಮ ಕೊನೆಗೆ ಹೋಗಿ ಒಂದು ಪ್ಲಾಸ್ಟಿಕ್ ಕವರ್ನಲ್ಲಿ ಹೊಸತೊಂದು ಪಟ್ಟೆ ಮುಂಡನ್ನು ತಂದು ನನಗೆ ಕೊಟ್ಟರು. 
 
ಕರ್ನಾಟಕದಲ್ಲಿ ಮಡಿ ತುಂಬುವಾಗ ಹೆಣ್ಣಿಗೆ ಕಾಯಿಯೊಂದಿಗೆ ರವಕೆ ಕಣ, ಸೀರೆ ಕೊಡುವುದನ್ನು ಕೇಳಿದ್ದೆ, ಇವರು ಇಲ್ಲಿ ಗಂಡಿಗೆ ಅದೇ ರೀತಿ ಮುಂಡು ಕೊಡುತ್ತಾರೋ ಎಂದು ಆಲೋಚಿಸ ತೊಡಗಿದೆ. ಪ್ಲಾಸ್ಟಿಕ್ ತೆರೆದು ಅದನ್ನು ಬಿಚ್ಚಿ ನೋಡಿದೆ. ಉತ್ತಮ ಕ್ವಾಲಿಟಿ ಯ ಮುಂಡು. ಅವರು ನನ್ನಲ್ಲಿ "ಇಲ್ಲಿ ದೇವಸ್ತಾನಕ್ಕೆ ಹೋಗಬೇಕಾದರೆ ಮುಂಡು ಸುತ್ತಿ ಹೋಗುವ ಸಂಪ್ರದಾಯ" ಅಂದರು.
ಅವರ ಉಡುಗೊರೆಯ ಹಿನ್ನಲೆ ಮನಗೊಂಡೆ. "ಒಂದು ನಿಮಿಷ, ಪ್ಯಾಂಟ್ ಬಿಚ್ಚಿ ಇದನ್ನು ಸುತ್ತಿ ಬಂದೆ" ಎನ್ನುತ್ತಾ, ನನಗೆ ಕೊಟ್ಟ ರೂಮಿಗೆ ಓಡಿದೆ.
 
ಎರಡು ನಿಮಿಷದಲ್ಲಿ ಕೆಳಗೆ ಬರಲು, ಎಲ್ಲ ಹೆಂಗಸರು ದೇವರಿಗೆ ಇಟ್ಟ ಹೂ ಮುಡಿದು, ಮೂರು ಗಂಡು ಗಳು ಒಂದೇ ರೀತಿಯ ಪಟ್ಟೆಯ ಮುಂಡು ಮತ್ತು ಮೇಲೆ ಒಂದೇ ರೀತಿಯ ಬಣ್ಣದಲ್ಲಿ ಫರಕ್ ಇರುವ ಚಕ್ಸ್ ನ ಶರ್ಟ್ ನಲ್ಲಿ ಒಂದೇ ರೀತಿ ಕಾಣುತಿದ್ದರು. 
ಎಲ್ಲ ಮನೆಯ ಹೊರಗೆ ಬಂದಾಗ ನಾನು ಕೆಮೆರಾ ಲೆನ್ಸ್ ತೆರೆಯುತ್ತಾ "ಇಲ್ಲಿ ನಿಲ್ಲಿ ಒಂದು ನಿಮಿಷ, ನಿಮ್ಮೆಲ್ಲರನ್ನು ಜೊತೆಯಾಗಿ ಫೋಟೋ ತೆಗೆಯುತ್ತೇನೆ, ಬ್ಯಾಕ್ ಗ್ರೌಂಡ್ ನಲ್ಲಿ ನಿಮ್ಮ ಮನೆ ಬರುವಹಾಗೆ" ಎಂದು ಅವರನ್ನು ಲೋನ್ ನಲ್ಲಿ ಜೋಡಿ ಜೋಡಿಯಾಗಿ ನಿಲ್ಲಿಸಿದೆ. ಗಂಡಸರು ತುಟಿ ಅಗಲಿಸದೆ ನಕ್ಕರು. ಹೆಂಗಸರು ತುಟಿಯನ್ನು ಅಗಲಿಸಿ ನಕ್ಕರು.
 
ಹಿಂದಿನ ರಾತ್ರಿಯಂತೆ ನಾನು ಗಣಪತಿಯವರ ಹೊಂಡ ಸಿಟಿ ಎಡೆಗೆ ಹೋದೆ, ಆದರ್ಶ್ ನು ನನ್ನ ಜೊತೆಯಲ್ಲಿದ್ದ. ಎಲ್ಲರು ನಿನ್ನೆಯಂತೆ ಆಯಾ ಗಾಡಿ ಹತ್ತಿದರು.
"ವೈಭೂ"
ತಿರುಗಿ ನೋಡಿದೆ, ಆಕೃತಿ ಕರೆಯುತಿದ್ದಳು. ಹುಬ್ಬು ಮೇಲೆ ಮಾಡುತ್ತಾ "ಏನು ...?" ಎಂದೆ.
"ಕೆಮೆರಾ ಕೊಡೊ.. ಇಲ್ಲಿ" ಎಂದು ಕೆಳುತಿದ್ದಳು, ಅವಳು ನಮ್ಮ ಕಾರಿನ ಹತ್ತಿರ ಬರುತಿದ್ದಳು. ಕೆಮೆರಾ ಅವಳ ಕೈಗೆ ಕೊಟ್ಟೆ.
ಅವಳು "ಗುಡ್ ಗೋಯಿಂಗ್ ಡಂಬು... ಇಲ್ಲಿ ಡಂಬು ತಾರಾ ಮುಖ ಸಿಂಡರಿಸಿಕೊಂಡು ಇರ್ತೀಯ ಅನ್ಕೊಂಡಿದ್ದೆ, ಪರವಾಗಿಲ್ಲ ... ಎಲ್ಲರನ್ನು ಚೆನ್ನಾಗಿ ಮಸ್ಕಾ ಹಾಕ್ತಾ ಇದ್ದೀಯ... ನನ್ನ ಅಪ್ಪ-ಅಮ್ಮಎಲ್ಲಾ ಫ್ಲಾಟ್ !!" ಎಂದಳು ಮುಖವನ್ನು ಅರಳಿಸುತ್ತಾ.
ನಾನು"ನಿನಗಾಗಿ ಅಷ್ಟು ಮಾಡದಿದ್ರೆ ಹೇಗೆ...?" ಅಂದೆ
ಮತ್ತೆ ಮುಗುಳ್ನಕ್ಕಳು. ಅಪ್ಪಟ ತಮಿಳ್ ಚೆಲುವಿ ಅವಳ ಇಂಚು ಇಂಚಲ್ಲಿ  ಹೊರ ಬೀಳುತ್ತಿತ್ತು. ಅವಳನ್ನು ಆಸ್ವಾದಿಸುವ ಮನಸ್ಸಾಗುತಿತ್ತು. ಆದರೆ ಮನೆಯವರ ಕಣ್ಣು ನಮ್ಮ ಮೇಲಿತ್ತು. ನಾನು ಬಂದ ಕಾರ್ಯ ಮುಗಿಸಿ ಮೊದಲು ನಿಂತ ಕಾರಿನೆಡೆಗೆ ನಡೆದೆ. ಅವಳು "ಅಜಿತ್, ಸುರಿಯಾನಿಗೆ ಪೈಪೋಟಿ ಕೊಡ್ತಿದ್ದಿಯ , ಇವತ್ತಿಂದ ವಿಜಯ್ ನು ನಿನ್ನೆದುರು ಜೇರೊ ನೇ" ಅಂದಳು.
ಅದು ಅವಳು ಮುಂಡು ಕಟ್ಟಿದ ನನಗೆ ಕೊಟ್ಟ ಕೊಮ್ಪ್ಲಿಮೆಂಟ್ ಆಗಿತ್ತು.


ಕೆಳಗಿನ ಪಟ್ಟಿ ಹಿಡಿದು ಮಡಚಿ ಕಟ್ಟಿಕ್ಕೊಂಡೆ , ತಿರುಗಿ ನೋಡಿದೆ. ಅವಳು ಎರಡು ಬೆರಳನ್ನು ಒಟ್ಟುಗೂಡಿಸಿ 'ಸೂಪರ್' ಎನ್ನುತಿದ್ದಳು


ಗಣಪತಿ ನಿನ್ನೆ ತಮ್ಮ ಹಾಕಿದ್ದ ವೋಯಲೀನ್ ಹಾಕಿರಲಿಲ್ಲ, ಬದಲಿಗೆ ಎಫ್ ಎಂ ಹಾಕಿದರು. 
ಅವರಲ್ಲಿನ ಬದಲಾವಣೆಯನ್ನು ಆದರ್ಶ್ "ಏನು ದೊಡ್ಡಪ್ಪಾ...? ಸುಡನ್ ಎಫ್.ಎಂ ಟ್ಯೂನ್ ಮಾಡಿದ್ರಿ..?" ಎಂದು ಕೇಳಿದ.
ಅದಕ್ಕೆ ಅವರು "ವೈಭುಗೆ ಅದು ಹಿಡಿಸದಿದ್ರೆ, ಇವತ್ತಿನ ಜೆನೆರೇಶನ್..." ಅಂದ. 
 
ಹತ್ತು ವರ್ಷ ನನಗಿಂತ ಸಣ್ಣವನು ಅವರ ಜೆನೆರೇಶನ್ ಗೆ ಸೇರಿದ್ದನು, ನಾನು ಹೊಸ ಜೆನೆರೇಶನ್ ನವನಾಗಿದ್ದೆ.
 
ಅವರ ಈ ಡೈಲಾಗ್ ಕೇಳಿ ನಗುತ್ತಾ ಅವನು "ದೊಡ್ಡಪ್ಪಾ, ನಾನು ಹೊಸ ಜೆನೆರೇಶನ್ ನವನು, ಯಾವತ್ತು ನೀವು ನನ್ನಲ್ಲಿ ನನ್ನ ಇಷ್ಟದ ಬಗ್ಗೆ ವಿಚಾರಿಸಲಿಲ್ಲ, ಇವತ್ತೇನು ವೈಭು ಮೇಲೆ ಅಕ್ಕರೆ...?" ಎಂದು ಇನ್ನೊಂದು ಪ್ರಶ್ನೆ ಮುಂದಿಟ್ಟ.
ದೊಡ್ಡಮ್ಮ ಅವನ ಈ ಪ್ರಶ್ನೆಗೆ "ಅವನು ನಮ್ಮ ನೆಂಟ" ಎಂದು ಉತ್ತರ ಇಟ್ಟರು.
 
ನಡೆಯುತಿದ್ದ ಕಮರ್ಷಿಯಲ್ ಮುಗಿಯುತಿದ್ದಂತೆ, ಟಿನ್ ಟಿನ್ ಎಂದು 'ಮುಂಬೆ ವಾ ಏನ್ ಅಂಬೆ ವಾ' ಶುರುವಾಯಿತು.
ನಾನು, ಆದರ್ಶ್"ಸಲ್ಪ ದನಿ ಏರಿಸಿ ದೊಡ್ಡಪ್ಪಾ" ಒಂದೇ ಮೊಮೆಂಟ್ ಗೆ ಹೇಳಿದ್ದು ಮುಂದಿನ ಸೀಟ್ ನಲ್ಲಿದ್ದ ದಂಪತಿಗಳಿಗೆ ನಗುಮೂಡಿಸಿತು.
 
ಹಾಡು ಮುಂದುವರಿಯುತ್ತಿತ್ತು, ಅದರ ಸಾಹಿತ್ಯದಲ್ಲಿ ಕಳೆದು ಹೋಗಿದ್ದೆ. ಆದರ್ಶ್ ನನಗೆ ಕುಟ್ಟುತ್ತಾ, ಹಿಂದೆ ಬರುತ್ತಿರುವ ಆಕೃತಿಯ ಕಾರ್ ಕಡೆಗೆ ಕೈಯಾಡಿಸುತ್ತಾ ಗೇಲಿ ಮಾಡುತಿದ್ದ. ಗಣಪತಿ ಸ್ಟೇರಿಂಗ್ ನಲ್ಲಿ ಆಡಿಸುತಿದ್ದ ಬೆರಳುಗಳು ಅವರಿಗೂ ಹಾಡು ಹಿಡಿಸಿತು, ಎನ್ನುವುದನ್ನು ತೋರಿಸುತಿತ್ತು.


ಐದು ನಿಮಿಷದಲ್ಲಿ ಹಾಡು ನಿಂತಾಗ ಅವರು "ಚೆನ್ನಾಗಿತ್ತು ಹಾಡು,ಸಾಹಿತ್ಯನೂ ಹಿಡಿಸಿತು, ಈಚಿನ ದಿನದಲ್ಲಿ ಇಂತಹ ಹಾಡುಗಳು ಬರುವುದಿಲ್ಲ, ಈಗೀಗ ಬರೀ ಬೀಟ್ಸ್, ಕಿರಿಚಾಟಗಳು.. ಆದರೆ ಇದು ಬಿನ್ನವಾಗಿತ್ತು" ಎಂದು ಅದನ್ನು ವಿಶ್ಲೇಷಿಸಿದರು.
ಆದರ್ಶ್ "ದೊಡ್ಡಪ್ಪಾ, ಆ ಹಾಡು ಬೇಕಾ ನಿಮಗೆ..? ಕಂಪ್ಯೂಟರ್ ನಲ್ಲಿದೆ" ಅಂದ.
ಅವರು ಉತ್ತರಿಸುವ ಮೊದಲೇ ನಾನು "ಬೇಕಾದ್ರೆ ಈಗಲೇ ನಾನು ಸೆಂಡ್ ಮಾಡ್ತೇನೆ, ನಿಮ್ ಮೊಬೈಲ್ ಕೊಡಿ" ಎಂದೆ.
ಅವರು ಮರು ಮಾತನಾಡದೆ ಮೊಬೈಲ್ ನನ್ನ ಕೈಯಲ್ಲಿ ಇಟ್ಟರು.


ಬ್ಲೂ ತೂಥ್ ನಲ್ಲಿ ಹಾಡನ್ನು ಅವರಿಗೆ ಟ್ರಾನ್ಸಫರ್ ಮಾಡಿದೆ. ಕಾರ್ ಚೆನ್ನೈ ನಗರ ಬಿಟ್ಟು ಹೊರ ಇತ್ತು. ಎಫ್.ಎಂ ಫ್ರೀಕ್ವೆನ್ಸಿ  ಕ್ಷೀಣಿಸುತ್ತಿತ್ತು. ಅವರು ತಮ್ಮ ಕಾರ್ ನ ಸಿಸ್ಟಮ್ ಗೆ ತನ್ನ ಮೊಬೈಲ್ ಸಿಕ್ಕಿಸಿ ಮತ್ತೆ 'ಮುಂಬೆ  ವಾ..' ಚಾಲೂ ಮಾಡಿದರು. ಮತ್ತೆ ಅದರಲ್ಲಿನ ಶಬ್ದ, ಪ್ರಾಸ, ಅರ್ಥಗಳನ್ನು ಅಸ್ವಾದಿಸುತ್ತಾ, ಡ್ರೈವ್ ಮಾಡುತಿದ್ದರು.


ಮತ್ತೈದು ನಿಮಿಷದಲ್ಲಿ ಹಾಡು ಬದಲಾಯಿತು. ಅವರ ಮೊಬೈಲ್ನಲ್ಲಿದ್ದ ಕರ್ನಾಟಿಕ್ ಆಲಾಪ ಶುರುವಾಯಿತು. ಅವರು ಅದನ್ನು ಬದಲಿಸಲು ಎಡಗೈಯಲ್ಲಿ ಮೊಬೈಲ್ ಅನ್ನು ಕೈಗೆತ್ತಿಕ್ಕೊಂಡರು. ನಾನು "ಚೇಂಗ್ ಮಾಡ್ಬೇಡಿ.. ಭೈರವಿ.. ನಂ ಫೆವರಿಟ್" ಅಂದೆ.
ಭೈರವಿಗೆ ತೇಲಿ ಹೋಗುತಿದ್ದ ನನಗೆ, ಇವರು ಹೊಸಬರು ಎನ್ನುವ ವಿಚಾರ ವಿಲ್ಲದೇ ಅವರಲ್ಲಿ ನಿವೆದಿಸಿದೆ.


ನನ್ನ ಮಾತಿಂದ ಅವರಿಗೆ ಆಶ್ಚರ್ಯದಿಂದ "ವೈಭವ್ ... ಕ್ಲಾಸಿಕಲ್ ಗೊತ್ತಾ ..? ನೀನು ನ್ಯೂ ಜೆನೆರೇಶನ್ ನವನು ಅನ್ಕೊಂಡಿದ್ದೆ.. ನೀನು ಇನ್ನು ಪ್ಯೂರ್ ಟ್ರೆಡಿಶನಲ್ ಹುಡುಗ."
ಏನೆನ್ನ ಬೇಕೋ ತಿಳಿಯಲಿಲ್ಲ, ಅವರನ್ನು ಅಂಕಲ್ಅನ್ನುವುದಕ್ಕಿಂತ ದೊಡ್ಡಪ್ಪ ಅನ್ನುವುದು ಸೂಕ್ತ ಎನಿಸಿತು" ದೊಡ್ಡಪ್ಪಾ, ನಂಗೆ ಕ್ಲಾಸಿಕಲ್ ಇಷ್ಟ, ಅಂದ್ರೆ ಗಂಟೆಗಟ್ಟಲೆ ಕುಯ್ಯುತಿದ್ರೆ ಇಷ್ಟ ಆಗಲ್ಲ. ಆದರೆ ಭೈರವಿ ದಿನಗಟ್ಟಲೆ ನಡೆಯುತಿದ್ದರು ನಾನು ನಿದ್ದೆ ನೀರು ಬಿಟ್ಟು ಆಲಿಸ ಬಲ್ಲೆ, ಅಷ್ಟು ಇಷ್ಟ ಭೈರವಿ ಅಂದ್ರೆ" ಅಂದೆ.
ಅದಕ್ಕವರು "ನನ್ನದೂ ಅದು ಫೆವೆರೆಟ್ ರಾಗ, ಸಂಗೀತ ಕಲ್ತಿದ್ದೆಯೇನೋ..? ಹಾಡ್ತೀಯ ಒಂದು ಭೈರವಿ" ಎಂದರು.
ನಾನು "ಸಂಗೀತ ಕಲ್ತಿಲ್ಲ, ಆದರೆ ರಾಗ ಪರಿಚಯವಿದೆ. ಹಾಡಲು ಗೊತ್ತಿಲ್ಲ" ಅಂದೆ.
ಅದಕ್ಕವರು "ನಾನೂ ಅದೇ ರೀತಿ, ಸಣ್ಣವನಾಗಿರುವಾಗ ಸಂಗೀತ, ಈಜು ಎಲ್ಲ ಕಲೀಬೇಕು ಅಂತ ಇತ್ತು ಮೊದಲಿಗೆ ಬಡತನ ಕಲಿಯಲು ಸಾಧ್ಯವಾಗಲಿಲ್ಲ, ನಂತರ ತಲೆ ಮೇಲೆ ಬಿದ್ದ ಜವಾಬ್ಧಾರಿಯಿಂದ ಕಲಿಯಲಾಗಿಲ್ಲ.. ಅದಕ್ಕಾಗಿ ನಾನು ನನ್ನ ಎರಡು ತಮ್ಮಂದಿರು ಆಶೆ ಪಟ್ಟ ಯಾವುದೇ ವಿಷಯ ವಿರಲಿ ಅವರನ್ನು ಅದಕ್ಕೆ ಕಳುಹಿಸಿದೆ, ಅವರು ಎಲ್ಲದರಲ್ಲೂ ತಮ್ಮ ಸಾಮರ್ಥ್ಯ ತೋರಿಸಿದರು, ಈಗ ಮಕ್ಕಳಿಗೂ ಅದೇ ರೀತಿ ಅವರ ಎಲ್ಲ ಆಶೆ ಯನ್ನು ನಾನು ನೆರವೇರಿಸುತ್ತೇನೆ. ನನ್ನಂತೆ ಅವರು ಮುಂದೊಂದು ದಿನ  ನಮಗೆ ಕಲಿ ಬೇಕಿತ್ತು ಮನೆಯವರು ಕಲಿಸಲಿಲ್ಲ ಎಂದು ಹೇಳುವುದು ಬೇಡ " ಎಂದರು.
"ಹೌದು, ಸರಿಯಾಗಿದೆ, ನಿಮ್ಮ ಮನೆಯಲ್ಲಿ ನಾನು ಗಮನಿಸಿದ ಪ್ರಕಾರ ನಿಮ್ಮ  ನಡುವಿನ ಅನ್ಯೋನ್ಯತೆಗೆ, ನಿಮ್ಮ ಈ ಗುಣವೇ ಕಾರಣ ಅನ್ಕೊಳ್ತೇನೆ. ಮೂವರು ಅಣ್ಣ ತಮ್ಮಂದಿರು ಈ ರೀತಿ ಹೊಂದಿಕ್ಕೊಂಡು ಹೋಗುವುದು ಎಲ್ಲೂ ನೋಡಲಿಲ್ಲ, ಐ ಅಂ ಪ್ರೌಡ್ ಆಫ್ ಯುವರ್ ಫ್ಯಾಮಿಲಿ" ಅಂದೆ. ಅವರು ಕನ್ನಡಿಯಲ್ಲಿ ನನ್ನನ್ನು ಗಮನಿಸುತಿದ್ದರು.


ಸಲ್ಪ ತಡೆದು ಅವರು ನನ್ನಲ್ಲಿ "ನೀವೆಷ್ಟು ಮಂದಿ ಮಕ್ಕಳು ..?"
"ಇಬ್ಬರು,ಇನ್ನೊಬ್ಬಳು ಅಕ್ಕ, ಮದುವೆಯಾಗಿ ಮಂಗಳೂರಲ್ಲಿ ಇದ್ದಾಳೆ"
"ಓದು ..?"
"ಅವಳದ್ದು ಸಿ.ಎ ಕಂಪ್ಲೀಟ್ ಆಗಿದೆ"
"ಜೋಬಲ್ಲಿ ಇದ್ದಳಾ..?"
"ಇಲ್ಲ ಹೌಸ್ ವೈಫ್, ನಮ್ಮ ಅಪ್ಪನು ನಿಮ್ಮಂತೆ ಬರಿ ವಿದ್ಯಾರ್ಚನೆಗಾಗಿ ಕಲಿಸಿದ್ದು ನಮ್ಮಿಬ್ಬರನ್ನು, ಅವರೂ ನಿಮ್ಮಂತೆ ಓದಿರಲಿಲ್ಲ ಅದಕ್ಕಾಗಿ ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಕೊಟ್ಟರು. ಹಣ ಸಂಪಾದನೆಗೆ ಅವರದ್ದೇ ಆದ ಬ್ಯುಸಿನೆಸ್ಸ್ ಇದೆ."
"ನೀನ್ಯಾಕೆ ಬ್ಯುಸಿನೆಸ್ಸ್ ಮಾಡಲಿಲ್ಲ..?"
"ನಾಲ್ಕು ವರುಷ ಕಲ್ತದ್ದು ಹಾಳಾಗುವುದು ಬೇಡ ಹೇಳಿ, ಅಂದರೆ ಬ್ಯುಸಿನೆಸ್ಸ್ ಅನ್ನು ದೂರುವುದು ಅಲ್ಲ, ಐದು ಆರು ವರ್ಷ ಕಲಿತ ವಿದ್ಯೆಗೆ ಬೆಲೆ ಕೊಟ್ಟು ನಂತರ ಅದೇ ದಾರಿ ಹಿಡಿಯುವ ಹೇಳಿ"
"ಹೌದು, ಬೇರೆಯವರ ಕೈಯಿಂದ ಎಷ್ಟೇ ಸಂಬಳ ಪಡೆದ್ರೂ ಅದು ಸಂಬಳನೇ.. ನೀನು ಅದೇ ಇನ್ನೊಬ್ಬನಿಗೆ ದಿನಕ್ಕೆ ಹತ್ತು ರುಪಾಯಿ ಕೊಟ್ಟರೆ ಅದರಲ್ಲಿರುವ ಧನ್ಯತೆ ಬೇರೆಯವರ ಕೈಯಿಂದ ಪಡೆದ ಕೋಟಿ ರುಪಾಯಿಗೆ ಇರುವುದಿಲ್ಲ."     
 
ಪಕ್ಕದಲ್ಲಿ ಕುಳಿತ ಹೆಂಡತಿ ಅವರಲ್ಲಿ "ಹುಡುಗನ ತಲೆ ಕೆಡಿಸಬೇಡಿ, ಕೆಲಸದಲ್ಲಿರಲಿ, ಅಲ್ಲಿ ಯಾವುದೇ ಟೆನ್ಶನ್ ಇರುವುದಿಲ್ಲ, ಲಾಭ , ನಷ್ಟದ ಭಯ ವಿರುವುದಿಲ್ಲ, ಒಂದೇ ಹರಿವಲ್ಲಿ ಹಣ ಬರುತ್ತೆ" ಎಂದರು.
ಅವರ ಮಾತು ಅಮ್ಮ, ಹೇಳುತಿದ್ದ ಮಾತಿನಂತಿತ್ತು. ನಾನು ದೊಡ್ಡಪ್ಪನಲ್ಲಿ "ನನ್ನ ಅಮ್ಮನದು ಇದೇ ದೃಷ್ಟಿಕೋನ, ಅದಕ್ಕಾಗಿಯೇ ಕೆಲಸಕ್ಕೆ ಸೇರಿದ್ದು" ಅಂದೆ.
ಅದಕ್ಕವರು ಹೆಂಡತಿಯಲ್ಲಿ "ಈ ಜಗತ್ತಿನಲ್ಲಿ ನೀನೊಬ್ಬಳೆ ವ್ಯಾಪರಿಯನ್ನು ದೂರುತ್ತೀ ಅಂದುಕೊಂಡಿದ್ದೆ, ಮಂಗಳೂರಿನಲ್ಲಿ ನಿನಗೆ ಫಾನ್ ಫಾಲ್ಲೋವರ್ ಇದ್ದಾರೆ ಅಂತೆ ನೋಡು" ಎಂದು ಹಾಸ್ಯ ಮಾಡಿದರು.
 
ಮೊಬೈಲ್ ನ ಹಾಡು ಬದಗಾಲುತಿತ್ತು, ಮಾತು ಮುಂದುವರಿದಿತ್ತು. ಅರವತ್ತು ಕಿ.ಮಿ ದಾಟಿದ್ದೆ ಗೊತ್ತಾಗಲಿಲ್ಲ. ಕಾರ್ ನಿಂತಿತು. 
ಕೆಳಗಿಳಿದು ಮುಂಡನ್ನು ಗಟ್ಟಿಯಾಗಿ ಕಟ್ಟಿಕ್ಕೊಂಡೆ. ದೊಡ್ಡಮ್ಮ ಗಂಡನಲ್ಲಿ "ಹುಡುಗನಿಗೆ ಮುಂಡು ಚೆನ್ನಾಗಿ ಸೂಟ್ ಆಗುತ್ತದೆ, ನೀವು ಮುಂಡು ಕೇಳುವುದು ಬೇಡ ಹೇಳಿದ್ರಲ್ಲಾ... ನೋಡಿ ಎಷ್ಟು ಚೆಂದ ಕಾಣ್ತಾನೆ ಹೇಳಿ"
"ಈಗಿನ ಹುಡುಗರಿಗೆ ಇದೆಲ್ಲ ಎಲ್ಲಿ ಗೊತ್ತು ಹೇಳಿ ಬೇಡ ಅಂದೆ, ನನಗೇನು ಗೊತ್ತಿತ್ತು ಅವನು ಎಲ್ಲ ವಿಧದಲ್ಲಿ ನಮ್ಮನ್ನು ಸಾಟಿಯಾಗುತ್ತಾನೆ ಹೇಳಿ" ಅಂದರು.
ದೊಡ್ಡಮ್ಮ "ನಮ್ಮ  ಅರುಣ್ ಇದ್ರೆ ಇವನಗಿಂತ ಎರಡು ವರ್ಷ ದೊಡ್ದವನಾಗಿರ್ತಿದ್ದ, ಚೂರು ಕಪ್ಪಿರುತಿದ್ದ, ಆದರೆ ಗುಣದಲ್ಲಿ ಇವನನ್ನೇ ಹೊಲ್ತಿದ್ದ ಅನ್ಸುತ್ತೆ" ಎಂದು ಕಣ್ಣೀರು ಜಾರಿಸಿದಳು.
ದೊಡ್ಡಪ್ಪ "ಈಗ ನಮಗೆ ಮೂರು ಮಕ್ಕಳಿಲ್ಲವ, ಕಳೆದು ಹೋದ ಕಾಲಕ್ಕೆ ಯಾಕೆ ಮರಗುತ್ತೀಯಾ..?ಅವನು ನೋಡುತಿದ್ದಾನೆ ಕಣ್ಣೀರು ಒರೆಸಿಕೊ"ಎಂದು ತನ್ನ ಹೆಗಲಲ್ಲಿ ಇದ್ದ ಶಾಲನ್ನು ಹೆಂಡತಿಯ ಕೈಗಿಟ್ಟರು.
ಆದರ್ಶ್ ನೊಂದಿಗೆ ಮುಂದೆ ಹೋಗುತಿದ್ದವನಿಗೆ ಅವರ ಸಂಬಾಷಣೆ ಪೂರ್ತಿಯಾಗಿ ಅರ್ಥ ವಾಗದಿದ್ದರೂ, ಹೆತ್ತ ತಾಯಿಯ ಮನದಾಳದ ನೋವಿನ ಅರಿವಾಗುತ್ತಿತ್ತು.


************** 



ದೊಡಪ್ಪ ಮತ್ತು ಚಿಕ್ಕಮ್ಮ ಇತರಕ್ಕಿಂತ ನನಗೆ ಹತ್ತಿರವಾದರು. ನನ್ನ ಬಗ್ಗೆ ನನ್ನ ಹಿನ್ನಲೆ ಇಸ್ಟಾಇಷ್ಟತೆ ಕೇಳಿ ತಿಳಕೊಳ್ಳುತಿದ್ದರು. ಪ್ರುಕೃತಿ, ಆದರ್ಶ್ ನಿನ್ನೆಯಿಂದಲೇ ಹತ್ತಿರವಾಗಿದ್ದರು, ತಮ್ಮ ಶಾಲೆಯ ಆಗು ಹೋಗುಗಳನ್ನು ನನ್ನಲ್ಲಿ ಹಂಚುತಿದ್ದರು. 
ಕಣ್ಣಿಗೆ ಬೀಳುತಿದ್ದ ನೋಟಗಳು ಕೆಮೆರಾದಲ್ಲಿ ಸೇರೆಯಾಗುತಿದ್ದವು. ಅದನ್ನು ಮೂವರು ವಿಮರ್ಶಿಸುತಿದ್ದರು.


ಆದರ್ಶ್ "ನೀವು ವೇಷ್ಟ್ ಪಪ್ಪಾ, ಕೆಮರಾ ಯುಸ್ ಮಾಡಲು ಗೊತ್ತಿಲ್ಲ, ವೈಭವ್ ನೋಡಿ ಎಷ್ಟು ಚೆನ್ನಾಗಿ ಫೋಟೋ ತೆಗಿತಾನೆ, ಇಲ್ಲಿ ನೋಡಿ ಶೋರ್ ಟೆಂಪಲ್ ನ ಹಿಂಬಾಗ, ಎಷ್ಟು ಚೆನ್ನಾಗಿ ಬಂದಿದೆ. ಒಂದು ನೋಟಕ್ಕೆ ಆಕಾಶದಂತೆ ಕಂಡರೂ ನಡುವಲ್ಲಿ ಆಕಾಶ ಕಡಲನ್ನು ಬೇರ್ಪಡಿಸುವ ಅಲೆಯ ಸಾಲು ಗೋಚರಿಸುತ್ತಿದ್ದೆ." ಅಂದ.
ಚೂರು ಫೋಟೋಗ್ರಫಿ ತಿಳಿದಿದ್ದ ಚಿಕಪ್ಪಾ "ವೈಭವ್, ನಿಂಗೆ ಒಳ್ಳೆ ಟೆಸ್ಟ್ ಇದೆ. ಸೂಪರ್ ಬಂದಿದೆ ಫೋಟೋ... ಐ ಅಂ ಇಂಪ್ರೆಸೆಡ್ !!" ಅಂದರು.
 
ಬದಿಯಲ್ಲಿದ್ದ ಆಕೃತಿ "ಡಂಬು, ಇನ್ನೊಂದು ಡಂಬುವನ್ನು ಇಂಪ್ರೆಸ್ ಮಾಡಿ ಬಿಟ್ಟಿಯಲ್ಲ, ಗ್ರೇಟ್!!"ಅನ್ನುತ್ತಾ "ಇವರು ಯಾರಲ್ಲೂ ಮಾತನಾಡುವುದಿಲ್ಲ, ಅಂತದ್ರಲ್ಲಿ ನಿನ್ನನ್ನು ಹೊಗಳಿದರು ಅಂದ್ರೆ ಗುಡ್ ಗೋಯಿಂಗ್ ಕೀಪ್ ಇಟ್ ಅಪ್" ಎಂದು  ಶೋರ್ ಟೆಂಪಲ್ ನಿಂದ ಬರಬೇಕಾದರೆ ಪಿಸುಗುಟ್ಟಿದಳು.
 
ನಂತರ ಪ್ರಾಚ್ಯ ಇಲಾಕೆಯ ಗುಸ್ತಿನಲ್ಲಿರುವ ಪಲ್ಲವ ಸಾಮ್ರಾಜ್ಯದ ಅವಶೇಷ ನೋಡುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಚಿಕಪ್ಪ ಏನಾದರು ವಿಚಿತ್ರ, ಸುಂದರವಾಗಿ ಕಂಡರೆ "ವೈಭು, ಇಲ್ಲಿ ಒಳ್ಳೆ ಸ್ಪಾಟ್ ಇದೆ. ಬಾರೋ" ಎಂದು ಕರಿಯುವಾಗ ಮನದಲ್ಲಿ ನಾನೂ ಇವರ ಮನೆಮಗನಾದೆ ಎಂಬ ವಿಶ್ವಾಸ ಮೂಡಿತು.
 
ಚಿಕ್ಕಮ್ಮ, ಬಿಟ್ಟು ಉಳಿದ ಹೆಂಗಸರಿಬ್ಬರು ನನ್ನ ಆಗು ಹೋಗುಗಳನ್ನು ಮೆಚ್ಚಿದ್ದರು ಆದರೆ ಅದನ್ನು ವ್ಯಕ್ತ ಪಡಿಸಲು ಅವರಿಗೆ ಮಾದ್ಯಮದ ಕೊರತೆ ಇತ್ತು. ಸೋದರಗಿತ್ತಿ ಇಲ್ಲದಾಗ ತಮಿಳಿನಲ್ಲೇ ಹೇಳುತಿದ್ದರು, ಅವರಿಗೆ ನಾನೂ ಸಜ್ನೆ ಯಲ್ಲೇ ಉತ್ತರ ನೀಡುತಿದ್ದೆ. ಮದ್ಯಾಹ್ನ ಊಟ ಮುಗಿಸಿ ಕಾರಲ್ಲಿ ಕುಳಿತಾಗ ದೊಡ್ಡಪ್ಪ ಪತ್ನಿಯನ್ನು "ನೀನು ಹಿಂದಿನ ಸೀಟ್ ಗೆ ಹೋಗು, ಮಲಗುವ ನಿನಗೆ ಅದು ಸರಿಯಾಗ್ತದೆ. ವೈಭು ನಾನೂ ಮಾತಾಡುವುದಿದೆ." ಎಂದು ಅವರನ್ನು ಹಿಂದೆ ಕಳುಹಿಸಿದರು.
 
ನನ್ನ ಕೈಗೆ ಕಾರ್ ನ ಕೊಡುತ್ತ "ಡ್ರೈವ್ ಮಾಡು, ಟ್ರಾಫಿಕ್ ಇರಲ್ಲ" ಎಂದ.
 
ಇಬ್ಬರು ತಮ್ಮಂದಿರಿಗೆ ಆಗೊಮ್ಮೆ ಈಗೊಮ್ಮೆ ಕೊಡುತಿದ್ದ ಹೊಂಡಾ ಸಿಟಿ ನನಗೆ ಮೊದಲ ದಿನದಲ್ಲಿ ಕೊಟ್ಟದ್ದು ಅವರಲ್ಲಿ ನನ್ನ ಬಗ್ಗೆ ಉತ್ಪತ್ತಿಯಾದ ಆತ್ಮೀಯತೆಯ ಆಳವನ್ನು ಸಾರುತಿತ್ತು.
 
ಬೆಲ್ಟ್ ಕಟ್ಟಿ ಕಾರ್ ಸ್ಟಾರ್ಟ್ ಮಾಡಿದೆ. ಮಾರುತಿ, ಸೇನ್ಟ್ರೋ ಗೆ ಸೀಮಿತ ವಿದ್ದ ನನ್ನ ಲಿಮಿಟ್ ಇವತ್ತು ಹೊಂಡ ಸಿಟಿ ಪಡೆದಾಗ ನನ್ನನ್ನೇ ನಂಬಲಾಗಲಿಲ್ಲ. ಅಕ್ಸೇಲೆಟರ್ ಕಾಲಿಡುತಿದ್ದಂತೆ ಒಮ್ಮೆಲೇ ಸ್ಪೀಡೋ ಮೀಟರ್ ನ ಮುಳ್ಳು ಇಪ್ಪತ್ತು, ನಲವತ್ತು, ಅರವತ್ತು ದಾಟಿ ಎಂಬತ್ತರಲ್ಲಿ ಸಾಗುತಿತ್ತು.
 
ಹಿಂದೆ ಹೆಂಡತಿ ಮಗ ನಿದ್ದೆಗೆ ಜಾರಿದರು. ಅವರು ನನ್ನಲ್ಲಿ "ವೈಭು ರಾತ್ರಿ ಹೊರಗೆ ಉಟಕ್ಕೆ ಹೋಗೋಣ, ನಾನೇ ನಿನಗೆ ಬಸ್ಸೇರಿಸುತ್ತೇನೆ" ಅಂದರು.
ನಾನೂ "ಬೇಡ ಒಂದು ಬಾರಿಯಾದರೂ ನಿಮ್ಮ ಮನೆಯಲ್ಲಿ ಊಟ ಮಾಡಬೇಕು ಎನ್ನುವುದು ನನ್ನ ಆಸೆ, ನಿಮ್ಮ ಹೆಂಗಸರು ರಾತ್ರಿ ಮನೆಯಲ್ಲೇ ಊಟದ ಮಾತಾಗಿದೆ"
"ನೀನೊಬ್ಬ.. ರಾತ್ರಿ ಚೂರು ಬಿಸಿ ಏರಿಸಿ, ನಿನ್ನನ್ನು ಬೀಳ್ಕೊಡುವ ಮನಸ್ಸಿತ್ತು ನನಗೆ, ನೀನು ಸೆಂಟಿ ಮಾತಾಡ್ತಿದ್ದಿಯ" ಅಂದರು, ನಡುವಯಸ್ಸಿನ ಮಿತ್ರ ನಂತೆ.
ನಾನೂ ಅವರಲ್ಲಿ "ದೊಡ್ಡಪ್ಪ, ಬೇಕಾದ್ರೆ ನಾನೂ ನಿಮ್ಮ ಜೊತೆ ಬರುತ್ತೇನೆ ಆದರೆ ನಾನೂ ಬಿಸಿ ಏರಿಸಲ್ಲ" ಅಂದೆ
ಅವರು "ಏನೋ ಈ ರೀತಿ ಮಾತಾಡ್ತಾ ಇದ್ದಿಯಾ, ಆಫೀಸ್, ಪಾರ್ಟಿ ಎಂದು ಸುತ್ತಾಡುವ ನೀನು ಈ ತರಹ ಮಾತಾದುವುದಾ..?"
"ಸೋರಿ ದೊಡ್ಡಪ್ಪ, ನಾನೂ ಇಲ್ಲಿ ವರೆಗೆ ಅದನ್ನು ತೆಗೆದುಕೊಂಡಿಲ್ಲ .. ಇಲ್ಲ ಒಮ್ಮೆ ತೆಕೊಂಡಿದ್ದೇನೆ" ಎಂದು ಸತ್ಯ ಒಪ್ಪಿಕ್ಕೊಂಡೆ.
"ಮತ್ತೇನು, ಬಾ ಇವತ್ತು ನಿನಗೆ ನನ್ನ ಟ್ರೀಟ್" ಅಂದರು.
"ಅಂದು ಗೊತಿಲ್ಲದೇ ನಡೆದ ನಿರ್ಧಾರ ಅದು, ಸಂಕಟಕ್ಕೆ ಕಾರಣದ ಅನ್ವೇಷಣೆ ಗೆ ಕುಡಿದದ್ದು,ಆದರೆ ಆ ಬಳಿಕ ಇನ್ನೆಂದು ಕುಡಿಯಲ್ಲ ಎಂಬ ನಿರ್ಧಾರ ಮಾಡಿದ್ದೇನೆ, ನಿಮ್ ಜೊತೆ ಬರಲಿಕ್ಕೆ ನಾನೂ ರೆಡಿ, ಆದರೆ ಫೋರ್ಸ್ ಮಾಡ್ಬೇಡಿ" ಎಂದೆ.
 
ಅವರು " ವೈಭು ನೀನು ಪ್ಯೂರ್ ಕೊಹಿನೂರ್ ಕಣೋ, ಸುಮ್ಮನೆ ನಿನ್ನ ಹುಡುಗಾಟಿಕೆಯ ಮಿತಿ ಎಷ್ಟಿದೆ ಎಂದು ಪರೀಕ್ಷಿಸಲು ಕೇಳಿದ್ದು, ಅಲ್ಲೂ ನೀನೆ ಗೆದ್ದಿ, ಒಂದು ನೇರ ಪ್ರಶ್ನೆಗೆ ನೇರ ಉತ್ತರ, ಜೊತೆಗೆ ಹಿಂದೆ ಮಾಡಿದ ತಪ್ಪಿಗೆ ಪಶ್ಚ್ಯಾತಾಪ ಪಡುವ ಪರಿ ನಿನ್ನ ಮನಸ್ಸಿನ ಶುದ್ದತೆ ತಿಳಿಸುತ್ತದೆ. ಮನಸ್ಸನ್ನು ಗೆದ್ದಿ ಕಣೋ... ಇಬ್ಬರು ಸೋದರರನ್ನು ಬಿಟ್ಟು ಬೇರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನ್ನ ಮನಸಲ್ಲಿ ನೀನು ನಿನ್ನದೇ ಸ್ಥಾನ ಪಡಕ್ಕೊಂಡಿ"
 
ಅವರ ಈ ಮಾತಿನಿಂದ ಮನಸ್ಸು ಹಿಗ್ಗಿತು. ಇನ್ನು ಒಂದುವರುಷದ ನಂತರದ ನನ್ನ ನಿರ್ಧಾರಕ್ಕೆ ಇವರು ನೂರು ಪ್ರತಿಶತ ಒಪ್ಪುತ್ತಾರೆ ಎಂಬ ವಿಶ್ವಾಸವೂ ಮೂಡಿತು. ಹೋಗುವಾಗ ಒಂದು ಕಾಲು ಗಂಟೆ ತೆಗೆದ ದಾರಿ ಹಿಂದೆ ಬರಲು ಬರೇ ನಲ್ವತೆಂಟು ನಿಮಿಷ ತೆಗೆದುಕೊಂಡಿತು. 
 
ಕಾರ್ ಪಾರ್ಕಿಂಗ್ ನಲ್ಲಿ ಇಟ್ಟು, ಲೀವಿಂಗ್ ರೂಂ ನಲ್ಲಿ ಕೂತ ದೊಡ್ಡಪ್ಪನಿಗೆ ಕೀ ಹಿಂತಿರುಗಿಸಿ ಮೇಲಿನ ರೂಂ ಗೆ ಹೋಗಿ ಕೈಕಾಲು ಮುಖ ತೊಳೆದು ಕೆಳಗೆ ಬಂದೆ.
 
ಟಿವಿಯಲ್ಲಿ ಚೇನಲ್ ಬದಲಿಸಲು. ಇಬ್ಬರು ಸೋದರರು ಮತ್ತು ಅವರ ಗಾಡಿ ಬಂತು. ನನ್ನನ್ನು ನೋಡಿ ಆಕೃತಿಯ ಅಪ್ಪ "ಆಗ್ಲೇ ತಲುಪಿದ್ರಾ...?"
ಅಣ್ಣ "ವೈಭು ಡ್ರೈವಿಂಗ್ ಮಾಡ್ತಿದ್ದ.. ನಲವತ್ತೈದು ನಿಮಿಷದಲ್ಲೇ ತಲುಪಿದ್ವಿ, ಒಳ್ಳೆ ಹೋಲ್ಡ್ ಇದೆ ಡ್ರೈವಿಂಗ್ ನಲ್ಲಿ." ಅಂದರು.
ಆಕೃತಿ ದೊಡ್ಡಪ್ಪನ ಕೈಯಲ್ಲಿ ಹೊಗಳಿಕೆ ಗಿಟ್ಟಿಸಿದಕ್ಕೆ ಹಿರಿಹಿರಿ ಹಿಗ್ಗುತಿದ್ದಳು.
 
 
*********************
 
 
     
'ರಾತ್ರಿ ನಿದ್ದೆ ಬರಲ್ಲ ಮಲಗು' ಎಂದು ಮನೆಯವರೆಲ್ಲ ಟಿವಿ ನೋದುತಿದ್ದವನಿಗೆ ಮೇಲಿನ ಗೆಸ್ಟ್ ರೂಂ ಗೆ ಕಳುಹಿಸಿದರು. ಬಿಸಿಲಲ್ಲಿ ಬಚ್ಚಿದ್ದ ನನಗೆ ನಿದ್ದೆ ಹತ್ತಿತು.ಕಣ್ಣು ಬಿಟ್ಟಾಗ ಆಕೃತಿ ನನ್ನ ಬೆಡ್ ಮೇಲಿದ್ದಳು, ಕಂಪ್ಯೂಟರ್ ಉರಿಯುತ್ತಿತ್ತು, ಅದರಲ್ಲಿ ಮಹಾಬಲೇಶ್ವರ್ ನ ಕದ್ದು ತೆಗೆದ ಫೋಟೋ ರಾರಾಜಿಸುತ್ತಿತ್ತು.ಅವಳು ನನ್ನ ಕೆಮೆರಾ ಮತ್ತು ಚಿಕ್ಕಪ್ಪನ ಕೆಮೆರಾ ಕಂಪ್ಯೂಟರ್ ಗೆ ಜೋಡಿಸಿದಳು. 


 ನನ್ನನ್ನು ಎಬ್ಬಿಸಿ "ಡಂಬು, ಕೊಡೊ.. ಒಂದು" ಎಂದಳು.
ಇಲ್ಲಿ ವರೆಗೆ ಈ ರೀತಿಯಲ್ಲಿ ನಾನೂ ಅವಳನ್ನು ನಿವೆದಿಸುತಿದ್ದೆ, ಇವತ್ತು ಅವಳು ನನ್ನಲ್ಲಿ ನಿವೆದಿಸುತಿದ್ದಳು.
"ಇಲ್ಲಾ..?ಎಲ್ಲಾ ಇದ್ದಾರೆ !"
"ಡಂಬು ರವಿವಾರ ಸಂಜೆ ಎಲ್ಲಾ ಆ ಕೃಷ್ಣಾ ಮಂದಿರಕ್ಕೆ ಹೋಗಿ ಬರುವ ಸಂಪ್ರದಾಯವಿದೆ, ಅವರೆಲ್ಲ ಹೋಗಿದ್ದಾರೆ, ಅಲ್ಲಿ ಕಛೇರಿ ಇದ್ದರೆ ರಾತ್ರಿ ವರೆಗೆ ಅಲ್ಲೇ ಇರ್ತಾರೆ.. ಕನಿಷ್ಠ ಒಂದು ಗಂಟೆ ನಾನೂ ಮತ್ತು ನೀನು ಮಾತ್ರ, ಕೊಡು ಪರವಾಗಿಲ್ಲ ನಿನ್ನನ್ನು ಸೇರಿಕ್ಕೊಂಡು ಹೋಗಬೇಕು ಎಂದು ದೊಡ್ಡಪ್ಪ ಬಯಸಿದ್ದರು. ನಿದ್ದೆಯಿಂದ ಎಬ್ಬಿಸುವುದು ಬೇಡ ಹೇಳಿ ನಿನ್ನನ್ನು ಬಿಟ್ಟು ಹೋದರು. ಮನೆಯ ಕೆಲಸದವರಿಗೆ ಆದಿತ್ಯವಾರದ ಮದ್ಯಾಹ್ನ ರಜೆ. ಹಾಗೆ ಎಚ್ಚರವಾದಾಗ ಯಾರಾದರು ಇರುವುದು ಸೂಕ್ತ ಎಂದು ನನ್ನನ್ನು ಬಿಟ್ಟು ಹೋದರು"
"ಮತ್ತೆ ರಾತ್ರಿಯ ಅಡುಗೆ ..?" 
" ಅದು ಮುಗಿದಾಗಿದೆ, ಅದನ್ನು ನೀನು ಮತ್ತೆ  ಅಸ್ವಾದಿಸುವಿಯಂತೆ, ಅದರ ಮೊದಲು ನನ್ನ ನೈವಿದ್ಯ ಸ್ವೀಕರಿಸು"
ಮೌನದಲ್ಲಿದ್ದೆ. 
"ಕೊಡೊ.. ಒಂದು, ಇನ್ನು ಕೊಡಲಾಗುವುದಿಲ್ಲ ಒಂದು ವರ್ಷದ ಮಟ್ಟಿಗೆ"
"ಅವರೆಲ್ಲ ಬಂದ್ರೆ...?"
"ಕೊಲಿಂಗ್ ಬೆಲ್ ಅಂತ ಒಂದು ಮನೆಗೆ ಇರುತ್ತೆ ಗೊತ್ತಲ್ಲಾ...?"
ಮುಕ ಅರಳಿಸಿದೆ.
ಪಕ್ಕದಲ್ಲಿ ಕೂತಿದ್ದ ಅವಳು ಕಾಲು ಜಾರಿಸಿ ನನ್ನ ಎದೆಮೇಲೆ ಮಲಗಿದಳು. "ಇಲ್ಲೇ ಇರ್ಬೇಕು ಅನ್ಸುತ್ತೆ, ಮೋಸ್ಟ್ ಪ್ಲೇಶರೇಬಲ್ ಪ್ಲೇಸ್ ಆಫ್ ಯುನಿವರ್ಸ್ " ಎನ್ನುತ್ತಾ ಮುತ್ತಿಟ್ಟಳು.
ಮುಖವನ್ನು ಎತ್ತಿ ಹಿಡಿದು. ಹಣೆಗೆ ಮುತಿಟ್ಟೆ. 
ಅವಳು "ಕೆಳಗೆ ಬಾರೋ, ನಿನಗಾಗಿ ಕಾಯ್ತಾ ಇದೆ ನೋಡು ನನ್ನ ಡೆಡಿಕೇಶನ್" ಎನ್ನತ್ತ ಅದರುತ್ತಿರುವ ತುಟಿಯನ್ನು ನನ್ನ ತುಟಿಗೆ ಸಮೀಪಿಸುತಿದ್ದಳು.
 
ಮೂರು ನಿಮಿಷಗಳ ಕಾಲ ಒಂದನ್ನೊಂದು ತಬ್ಬಿಕ್ಕೊಂಡವು. ಏರುಸಿರಿನ ಹರಿವು ಇಬ್ಬರ ದೇಹದಲ್ಲಿ ಶುರುವಾಯಿತು, ಮುಖವನ್ನು ಬೇರ್ಪಡಿಸಿದೆ, ಅವಳು ಮತ್ತೆ ಬಳಿ ಎಳೆಯುತಿದ್ದಳು.
ನಾನು"ರಾಜ, ಸಾಕೋ, ಇನ್ನು ಒಂದು ವರ್ಷದ ಮೇಲೆ ಮಾಡೋಣ ಮುಂದಿನದ್ದು" ಎಂದೆ
ಅವಳು "ಬಾರೋ, ಏನೂ ಆಗಲ್ಲ, ಅಲ್ಲಿ ವರೆಗಿನ ದಾಹ ತೀರಿಸಲು ನಾನು ನಿನ್ನ ಮುತ್ತಿನ ರಾಶಿಯನ್ನು ಡಿಪೋಸಿಟ್  ಮಾಡಬೇಕಿದೆ" ಎನ್ನುತ್ತಾ ನನ್ನ ಕುತ್ತಿಗೆಯ ಚೈನ್ ಎಳೆದಳು.
ನಾನು "ವಯಸ್ಸಿಗೆ ಬಂದ ಹುಡುಗಿಯನ್ನು, ಗೊತ್ತಿಲ್ಲದ ಹುಡುಗನೊಂದಿಗೆ , ಒಂಟಿ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಅನದರೆ ಅವರು ನಮ್ಮಿಬ್ಬರ ಮೇಲೆ ಇಟ್ಟ ವಿಶ್ವಾಸ ಎಷ್ಟಿದೆ ನೋಡು ರಾಜ, ಯಾಕಾಗಿ ನಾವು ಉದ್ರೆಗಕ್ಕೆ ಒಳಗಾಗಿ ಅವರ ವಿಶ್ವಾಸಕ್ಕೆ ದ್ರೋಹ ಮಾಡ ಬೇಕು, ಒಂದಲ್ಲ ಒಂದು ದಿನ ಇದು ಇದಿದ್ದೆ. ಸಾಕು ರಾಜ, ಏಳು ಅವರು ಬರುವಷ್ಟರಲ್ಲಿ ನೀನು ಫೋಟೋ ಟ್ರಾನ್ಸ್ ಫಾರ್ ಮಾಡು" ಎಂದೆ.
 
ಉದ್ರೆಕವನ್ನು ನಡುವಲ್ಲಿ ಚಿವುಟಿದಕ್ಕೆ ಅವಳಿಗೆ ನನ್ನಲ್ಲಿ ಕೋಪ ಬಂದಿತು, ಆದರೆ ನನ್ನ ಮಾತಿನ ಅರ್ಥ ಅವಳಿಗಾಗಿ ಎದೆಗೆ ಇನ್ನೊಂದು ಮುತ್ತಿಟ್ಟಳು. ಎದ್ದು ಕಂಪ್ಯೂಟರ್ ಎದುರು ಕುಳಿತುಕ್ಕೊಂಡಳು.



"ಡಂಬು , ದೊಡ್ಡ ಜನರ ಹಾಗೆ ಈ ಕೆಮೆರಾ ಹಿಡಿದು ಹೊರಟಿದ್ದಿ ಅಲ್ಲಾ, ಇದರಲ್ಲಿ ಮಹಾಬಲೇಶ್ವರ್ ನ ಫೋಟೋ ಇರುವುದನ್ನು ಮರ್ತೀಯ, ಒಂದು ವೇಳೆ ಅದು ಮನೆಯವರ ಗಮನಕ್ಕೆ ಬಂದ್ರೆ ನಾನೂ ಸತ್ತಂತೆಯೇ, ನನ್ನ ಪುಣ್ಯ ನಿನ್ನ ಕೈಯಿಂದ ಕೆಮೆರಾ ಅವರಿಗೆ ಸಿಕ್ಕುವುದರಿಂದ ತಪ್ಪಿಸಿದೆ."
"ಹುಡುಗೀರು ತುಂಬಾ ಹುಶಾರಿರ್ತಾರೆ.. ಎಲ್ಲಾ ನೋಟ್ ಮಾಡಿತಿರ್ತಾರೆ, ಗ್ರೇಟ್ ಆಕೃತಿ" ಎನ್ನುತ್ತಾ ನಾನು ಪಕ್ಕದಲ್ಲಿದ್ದ ಚೇರ್ ಮೇಲೆ ಕುಳಿತೆ. ಅವಳು ಇವತ್ತಿನ ಎಲ್ಲಾ ಫೋಟೋ ನೋಡಿ, ಅಲ್ಲಿರುವ ತಮ್ಮ ಹಳೆಯ ಫೋಟೋ ಗಳನ್ನೂ, ಇತರ ಎಲ್ಲಾ ಫೋಟೋ ಒಂದೊಂದಾಗಿ ತ್ಹೊರಿಸುತಿದ್ದಳು.
 
ಅಷ್ಟರಲ್ಲಿ ಮನೆಯ ಕಾಲ್ ಬೆಲ್ ಆಯಿತು, ಮೂರು ದಂಪತಿ ಮತ್ತು ಎರಡು ಚಿಳ್ಳೆ  ಪಿಳ್ಳೆಗಳು ಒಳ ಬಂದರು.
ದೊಡ್ಡಪ್ಪ ಅವಳಲ್ಲಿ "ವೈಭವ್ ಎದ್ನಾ...?" ಅಂದ.
ಅದಕ್ಕವಳು "ಎದ್ದ, ಇಬ್ಬರೂ ಸೇರಿ ಹಳೆ ಫೋಟೋಸ್ ನೋಡ್ತಾ ಇದ್ದೇವೆ, ಬನ್ನಿ ದೊಡ್ಡಪ್ಪ ಮೇಲೆ" ಎಂದು ಅವರನ್ನು ಮೇಲೆ ಕರೆದಳು. ಅವಳು ಏನನ್ನು ಮನೆಯವರಿಂದ ಮುಚ್ಚಿಡಲಿಲ್ಲ, ಅವಳ ಈ ನಡುವಳಿಕೆ ಇಷ್ಟ ವಾಯಿತು.
ಅವರು "ಬೇಡ ಬಿಡು, ಅವನಿಗೆ ಬೇಗ ರೆಡಿ ಆಗಲು ಹೇಳು, ಎಂಟಕ್ಕೆ ಬಸ್ಸಿದೆ. ಒಂದು ಗಂಟೆಯಲ್ಲಿ ಊಟ ಮುಗಿಸಿ ಹೋಗ್ಬೇಕು" ಎಂದರು.
 
ಆಕೃತಿ ಮೇಲೆ ಓಡುತ್ತ ಬಂದಳು."ಒಂದೇ ಗಂಟೆ ವೈಭು" ಎನ್ನುತ್ತಾ ತಬ್ಬಿಕೊಂಡಳು. ಅವಳ ವಿಯೋಗ ಮನಸ್ಸು ತುಂಬಿ ಬರುತಿತ್ತು. ಗಟ್ಟಿಯಾಗಿ ಅವಳನ್ನು ತಬ್ಬಿಕ್ಕೊಂಡೆ. ಅವಳು "ಸಾಕು ಕೆಳಗೆ ಹೋಗ್ತೇನೆ.. ಮಿಸ್ ಯು ಡಂಬು ಬೇಗ ರೆಡಿಯಾಗು" ಎನ್ನುತ್ತಾ ಬಾಗಿಲು ಹಾಕಿ ಹೊರ ಹೋದಳು.
ಕಣ್ಣಲ್ಲಿ ನೀರು ತುಬಿತ್ತು. ಶವರ್ ಆನ್ ಮಾಡಿ ಕಣ್ಣೀರನ್ನು ಧಾರಾಳವಾಗಿ ಅದರೊಂದಿಗೆ ಹರಿಯಲು ಬಿಟ್ಟೆ.


ಐದು ನಿಮಿಷದಲ್ಲಿ ಒಳಗಿನ ಹರಿವು ಕಮ್ಮಿಯಾದ ಬಳಿಕ ಟವೆಲ್ನಿಂದ ಮೈ ಒರಸಿಕೊಂಡೆ. ಕಳಚಿಟ್ಟ ಜೀನ್ಸ್ ಶರ್ಟ್ ತೊಟ್ಟು ರೆಡಿಯಾಗಿ ಕೆಳಗೆ ಬಂದೆ.


ಮನೆಯ ಹೆಂಗಸರು, ಒಬ್ಬರಿಗೆ ಇನ್ನೊಬ್ಬರು ಪೈಪೋಟಿ ಕೊಡುವಂತೆ ನನ್ನ ಬಟ್ಟಲಿಗೆ ಖಾದ್ಯ ಬಡಿಸುತಿದ್ದರು. ಮೂರು ಗಂಡುಗಳು ನನ್ನನ್ನೇ ನೋಡುತಿದ್ದರು. ಮಕ್ಕಳಿರಲಿಲ್ಲ. ಆಕೃತಿ ಇರಲಿಲ್ಲ.


ಊಟ ಮುಗಿಸಿ ಕೈತೊಳೆದು ಸುತ್ತಲು ಹುಡುಕಾಡಿದೆ, ಆದರೂ ಕಾಣೆಯಾದ ಮೂರು ಮುಖಗಳು ಕಾಣಲಿಲ್ಲ. "ಆದರ್ಶ್,ಪ್ರಕೃತಿ " ಎಂದು ಕರೆದೆ. ಅಸಲಿಗೆ ಆಕೃತಿಗೆ ಕೊಟ್ಟ ಕರೆಯಾಗಿತ್ತು. ಆದರೆ ಹೆತ್ತವರ ಎದುರಿಗೆ ಅವಳನ್ನು ಕರೆಯಲಾಗದೆ ಇವರ ಹೆಸರನ್ನು ಎತ್ತಿದೆ.
 
ತನ್ನ ರೂಮಿನಿಂದ ಆಕೃತಿ ಹೊರ ಬಂದಳು. ಮುಖ ನೀರಲ್ಲಿ ತೊಳೆದು ಬಂದದ್ದು ಮುಖದಲ್ಲಿ ಹಸಿ ಯಾಗಿರುವ ನೀರಿನ ಪಶೆ ತಿಳಿಸುತಿತ್ತು. ಕಣ್ಣೊರೆಸುವ ಮನಸ್ಸಾಯಿತು, ಆದರೆ ಒರಸಲಾಗದ ಅಸಾಯಕಥೆ.
"ಡಂಬು ಇಲ್ಲೇ ಇರು, ನಿನ್ನ ಬಾಗ್ ತೆಕ್ಕೊಂಡು ಬರ್ತೇನೆ" ಎನ್ನುತ್ತಾ ಮೇಲೆ ಧಾವಿಸಿದಳು.
ನಾನು ಕೈ ಒರೆಸುತ್ತಾ, ದೇವರ ಮನೆಗೆ ಹೋಗಿ ಆಕೃತಿಯನ್ನು, ಅವಳ ಪ್ರೀತಿಯನ್ನು ಕಾಪಾಡುವಂತೆ ಕೋರಿ ಹೊರ ಬಂದೆ.
 
ಎಲ್ಲರ ಕಾಲಿಗೆ ಸ್ಪರ್ಶಿಸಿ ಆಶೀರ್ವಾದ ಪಡೆಯುವಷ್ಟರಲ್ಲಿ ಅವಳು ನನ್ನ ಬಾಗ್ ನೊಂದಿಗೆ ಕೆಳ ಬಂದಳು. ಮನೆಯಲ್ಲಿ ತಯಾರಿಸಿದ ಕೆಲವೊಂದು ಸಿಹಿ ಮತ್ತು ಕರಿದ ತಿಂಡಿಯನ್ನು ದೊಡ್ಡಮ್ಮ ಆಕೃತಿಗೆ ನೀಡಿದಳು. ಅವಳು ಅದನ್ನು ಅದರಲ್ಲಿ ಹಾಕಿ ಬ್ಯಾಗ್ ಅನ್ನು ನನಗೆ ಕೊಟ್ಟಳು.
 
ಬ್ಯಾಗ್ ಏರಿಸಿ ಎಲ್ಲರಿಗೆ ಬಾಯ್ ಹೇಳಿದೆ.
 
ದೊಡ್ಡಪ್ಪಾ ನೊಂದಿಗೆ ಹೊರಬರಲು, ಆಕೃತಿ "ನಾನು ಬರ್ತೇನೆ ದೊಡ್ಡಪ್ಪ.." ಎಂದಳು.
ಅವರು ಸಮ್ಮತಿಸಿದರು.
ಹಿಂದಿನ ಸೀಟ್ ನಲ್ಲಿ ಕೂತು ಕರ್ಚೀಪಿಂದ ಜಾರುವ ಕಣೀರು ಒರೆಸುತಿದ್ದಳು.
 
ಮತ್ತೆ ಇನ್ನೊಮ್ಮೆ ದೊಡ್ಡಪ್ಪನನ್ನು ತಬ್ಬಿ ಬಸ್ ಹತ್ತಿ ನನ್ನ ಸೀಟ್ ನಲ್ಲಿ ಕುಳಿತೆ. ಅವಳು ಈಗ ಬಸ್ ಅನ್ನು ನೋಡುತಿರಲಿಲ್ಲ, ನಾನು ಅವಳಿಗೆ ಬಾಯ್ ಅನ್ನಲಿಲ್ಲ.
ಅವಳಿಗೆ ಬಾಯ್ ಹೇಳುತ್ತಾ ಅವಳನ್ನು ಮತ್ತು ಕಣ್ಣಲ್ಲಿ ಜಾರುವ ಕಂಬನಿಯನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರಲಿಲ್ಲ.


ಬಸ್ ಮೇಲಾನೆ ಚಲಿಸಲು ಪ್ರಾರಂಬಿಸಿತು. ದೊಡ್ಡಪ್ಪ ಕೈ ಅಲ್ಲಾಡಿಸುತಿದ್ದರು, ಅವಳ ಕಣ್ಣು ಕೆಳಗೆ ನೆಟ್ಟಿತ್ತು. ಎರಡು ಕೈಗಳು ಮುಷ್ಟಿ ಕಟ್ಟಿತ್ತು.


ಚೆನ್ನೈ ಬಿಡಲು ಕಿವಿಯಲ್ಲಿ "ಮುಂಬೆ ವಾ ಅನ್ಬೆ ವಾ" ಇತ್ತು, ಕಣ್ತುಂಬಾ ಮೊಬೈಲ್ ನಲ್ಲಿ ಹಾಕಿದ ಇವತ್ತು ಮತ್ತು ನಿನ್ನೆಯ ಅವಳ ಫೋಟೋಗಳು, ಮನಸಲ್ಲಿ ಅವಳ ಆಲೋಚನೆಗಳು ಹೃದಯ ತುಂಬಾ ಅವಳ ಪ್ರೀತಿ.


 ಕೈಗಳು ಅವಳಾಡಿಸುತಿದ್ದ ನನ್ನ ಕೊರಳಿನ ಚೈನ್ ಅನ್ನು ಅದೇ ರೀತಿಯಲ್ಲಿ ಸುತ್ತಿಸುತಿದ್ದವು.


ಬೆರಳು ಸುತ್ತು ಸುತ್ತುತ್ತ, ಅಂಟಿಕೊಂಡಿದ್ದ  ಅವಳ ಕೂದಲನ್ನು ಗಮನಿಸಿತು. ಅವಳು ಎದೆಯ ಮೇಲೆ ಮಲಗಿದ ಕುರುಹು ಬಿಟ್ಟು ಹೋಗಿದ್ದಳು. ಜೋಪಾನವಾಗಿ ಅದನ್ನು ತೆಗೆದಿಟ್ಟೆ.
 
 
 
ಮುಂದಿನ ಸಿಪ್