ಭಾರತೀಯರಿಗೆ 'ಕಂಪೆನಿ ಸರ್ಕಾರ'ವೆಂದು ಜನಪ್ರಿಯರಾದ ಇಂಗ್ಲೀಷರು, ಸನ್. ೧೬೦೦ ರಲ್ಲೇ 
ವ್ಯಾಪಾರಕ್ಕಾಗಿ ಬಂದು, ಗುಜರಾತಿನ, 'ಸೂರತ್ ನಗರ'ದಲ್ಲಿ ಅಲ್ಲಿನ ಸುಲ್ತಾನನ ಅಪ್ಪಣೆಪಡೆದು, 
ತಮ್ಮ ವ್ಯಾಪಾರಗಳನ್ನು ರೂಢಿಕೊಳ್ಳುತ್ತಾ ಸಾಗಿದರು. ಹಾಗೆಯೇ ಮುಂದುವರೆಯುತ್ತಾ, ದಕ್ಷಿಣ 
ಭಾರತದ ಆಗಿನ ಮದ್ರಾಸ್ ಗೆ, ಹೋಗಿ ಅಲ್ಲಿ ತಳವೂರುತ್ತಾ ಬಂದ ಅವರು,  ಸನ್. ೧೬೪೪ ರಲ್ಲಿ 
ನಗರದ ಸಮುದ್ರದ ಹತ್ತಿರದಲ್ಲಿಯೇ ಒಂದು ಕೋಟೆಯನ್ನು  ನಿರ್ಮಿಸಿದರು.  ಆ ಭಾಗದ ಜಮೀನನ್ನು 
ಖರೀದಿಸಿದರು.  'ಸೇಂಟ್ ಜಾರ್ಜ್', (ಬಿಳಿಯರ ವಸತಿ ತಾಣ) ಆಂಗ್ಲರು, ಆಗಿನ ಮದ್ರಾಸ್ ನಗರ ಕೋಟೆ ಪ್ರದೇಶಕ್ಕೆ  ಕೊಟ್ಟ ಹೆಸರು. ಈ ಚಾರಿತ್ರ್ಯಿಕ ಬೆಳವಣಿಗೆ, ಭಾರತದಲ್ಲಿ ಪಾದಾರ್ಪಣೆಮಾಡಿದ ಅವರಿಗೆ, ತಮ್ಮ ವ್ಯಾಪಾರ ಲೇವಾದೇವಿ, ಮತ್ತು ದೇಸಿವಸ್ತುಗಳನ್ನು ಕೊಂಡು ತಮ್ಮ ದೇಶಕ್ಕೆ ರಫ್ತುಮಾಡುವ ನೆಲೆಯಲ್ಲಿ ಮತ್ತಷ್ಟು ಗಟ್ಟಿ 
ತಳವೂರಿನಿಲ್ಲಲು ದಾರ್ಷ್ಟ್ಯ ಸಿಕ್ಕಂತಾಯಿತು. ಈ ಪ್ರದೇಶ ಸ್ಥಾನಿಯ ಜನರ್ಯಾರೂ  ಹೆಚ್ಚಿಗೆ  ಸುತ್ತಾಡಲು ಆಶಿಸದ  ಸ್ಥಿತಿಯಲ್ಲಿದ್ದಿದ್ದು ನಂತರ ಬ್ರಿಟಿಷ್ ಜನರ ವಾಸಪ್ರದೇಶವಾಗಿ ಮಾರ್ಪಟ್ಟಿತು. ಮದ್ರಾಸ್ ಮತ್ತು ನೆರೆರಾಜ್ಯವಾದ ಕೇರಳದ 'ಸಾಂಬಾರ್  ಕೃಷಿ ಉತ್ಪನ್ನ' ಗಳನ್ನು ಪಡೆದು ಅವನ್ನು ತಮ್ಮ 
ದೇಶಕ್ಕೆ ಕಳಿಸುವ ಏರ್ಪಾಡುನಡೆಯುತ್ತಿತ್ತು.
 
 
-ಹೊರಂಲವೆಂ