ಅಂದು
ನನ್ನ ಪಾಟಿ ಕರಿಯದು| ಅದರ ಕಟ್ಟು ಬಿಳಿಯದು ||
ಬಹಳ ಚಂದ ಇರುವುದು | ಬರಿಯಲಿಕ್ಕೆ ಬರುವುದು ||
ಅಪ್ಪ ದುಡ್ಡು ಕೊಟ್ಟರು | ಬಳಪವೊಂದು ತಂದೆನು ||
ಅ ಆ ಇ ಈ ಬರೆದೆನು| ಅಮ್ಮನ ಮುಂದೆ ಹಿಡಿದೆನು ||
ಅಮ್ಮ ಹಿಗ್ಗಿ ಹೋದಳು | ಉಂಡೆಯೊಂದ ಕೊಟ್ಟಳು ||
ಗಪಾ ಗಪಾ ತಿಂದೆನು | ಥಕಾ ಥಕಾ ಕುಣಿದೆನು||
ಇಂದು
ನನ್ನ ಟ್ಯಾಬ್ pc ಕರಿಯದು | ಅದರ ಫ್ರೇಮ್ ಬಿಳಿಯದು ||
ಬಹಳ ಚಂದ ಇರುವುದು | ಬರಿಯಲಿಕ್ಕೂ (ಸಹ) ಬರುವುದು ||
ಅಪ್ಪ (ಕ್ರೆಡಿಟ್) ಕಾರ್ಡ್ ಕೊಟ್ಟರು | ಮೆಮೊರಿ ಸ್ಟಿಕ್ ತಂದೆನು ||
a b c d ಕ್ಲಿಕ್ಕಿಸಿದೆನು | ಅಮ್ಮನ ಮುಂದೆ ಹಿಡಿದೆನು ||
ಅಮ್ಮ (ವಾರೆ) ನೋಟ ಬೀರಿದಳು | pizza ಆರ್ಡರ್ ಮಾಡಿದಳು ||
(ಪಿಜ್ಜಾ) ತೆಗೆದುಕೊಂಡು ಹೋದೆನು | TV ಯ ಮುಂದೆ ಕುಳಿತೆನು||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ನೆನಪಿನ ಹಂಬಲಿಕೆ
ಕಾದಿರುವೆ ಪ್ರತಿಕ್ರಿಯೆಗೆ
ಕವಡೆ ಪಗಡೆ ಬದುಕು...
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)