ಭಕ್ತಿ ಗೀತೆಗಳು - ವೀರಾಂಜನೇಯ ಭಕ್ತಿ ಕುಸುಮಾಂಜಲಿ ೨
ವೀರಾಂಜನೇಯ ಸುಪ್ರಭಾತ
|| ಏಳಯ್ಯ ಬೆಳಗಾಯಿತು ||
ಏಳಯ್ಯ ಬೆಳಗಾಯಿತು | ವೀರಾಂಜನೇಯ | ಏಳಯ್ಯ ಬೆಳಗಾಯಿತು ||
ಮೂಡಣವು ಅರಳಿತು | ಹಕ್ಕಿ ಕೊರಳುಲಿಯಿತು ||
ಏಳಯ್ಯ ಬೆಳಗಾಯಿತು | ವೀರಾಂಜನೇಯ | ಏಳಯ್ಯ ಬೆಳಗಾಯಿತು ||ಪ||
ದೇವ ದೇವಾದಿಗಳು ನಿನ್ನ ಸೇವೆಗೆ ಬಂದು
ದರ್ಶನಕೆ ಕಾದಿರುವರು ||
ಭಾಸ್ಕರನು ಉದಯಾದ್ರಿ ಏರಿ ಹೊಂಗಿರಣವನು
ನಿನ್ನ ಪದಕರ್ಚಿಸಿಹನು || ಏಳಯ್ಯ ಬೆಳಗಾಯಿತು ||1||
ಬಂಗಾರ ಕಿರಣದಲಿ ಬಂಗಾರಮಕ್ಕಿಯಿದು
ಮಿಂದು ಶೃಂಗರಿಸಿಕೊಂಡು ||
ಪವನಸಂಜಾತನೇ ವೃಕ್ಷಫಲ ಪ್ರೀಯನೇ
ನಿನಗೆಲ್ಲವೀವೆವೆಂದು || ಏಳಯ್ಯ ಬೆಳಗಾಯಿತು ||2||
ಸುರಗಂಗೆ ನಿನಗಾಗಿ ಶ್ರೀಶರಾವತಿಯೊಡಲ
ಸೇರಿ ಹರಿಯುತ್ತಲಿಹಳು ||
ಏಳಯ್ಯ ಸ್ನಾನವನು ಮಾಡಯ್ಯ ಪರಿಮಳದ
ಸುಮಮಾಲೆ ಕಾಯುತಿಹುದು || ಏಳಯ್ಯ ಬೆಳಗಾಯಿತು ||3||
ನೋಡು ಭಕ್ತರ ದಂಡು ನಿನಗಾಗಿ ಕಾದಿಹುದು
ದಣಿಯಲವರುಚಿತವೇನು ?
ನಿತ್ಯ ಸತ್ಯದ ಸಾಕ್ಷಿ ತೋರಬೇಕೆಲ್ಲರಿಗೆ
ಪ್ರಭುವೆ ನೀನೇಳಬೇಕು || ಏಳಯ್ಯ ಬೆಳಗಾಯಿತು ||4||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!