ಚದುರಿದ ಚಿಂತನೆಗಳು
================
ಸೃಷ್ಟಿ ಮನುಜನ ಬಗ್ಗೆ ಉಳಿದ ಪ್ರಾಣಿಗಳ ಬಗ್ಗೆ ಎಲ್ಲ ರೀತಿಯ ಎಚ್ಚರಿಕೆಯನ್ನು ತೆಗೆದುಕೊಂಡು ಸುಖವಾಗಿಡಲು ಪ್ರಯತ್ನಿಸುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ ಜಾಸ್ತಿ, ಹಾಗಾಗಿ ಯುಗಾದಿಯ ಹೊತ್ತಿಗೆ ಎಲ್ಲ ಮರಗಳು ಚಿಗುರುವಂತೆ ಮಾಡಿ ವಾತವಾರಣ ತಂಪಾಗಿಸಿ ಬಿಸಿಲಿನಿಂದ ಬಳಲುವ ಮನುಜನಿಗೆ ಉಳಿದ ಪ್ರಾಣಿಗಳಿಗೆ ತಂಪನ್ನು ಕೊಡಲು ಪ್ರಯತ್ನಿಸುತ್ತದೆ
ಹಾಗೆ ಚಳಿಗಾಲದಲ್ಲಿ ಮರದ ಎಲೆಗಳ ಅವಶ್ಯಕತೆ ಇಲ್ಲ ಹಾಗಾಗಿ ಎಲೆಗಳನ್ನೆಲ್ಲ ಉದುರಿಸಿ ಭಾಷ್ಪೀಕರಣವನ್ನು ತಡೆದು ವಾತವರಣ ಬೆಚ್ಚಗಾಗಿಸಲು ಪ್ರಯತ್ನಪಡುತ್ತದೆ
ಅರ್ಥ ಮಾಡಿಕೊಳ್ಳದ ಅಜ್ಞಾನಿ ಮನುಜ ಬೆಸಿಗೆಯಲ್ಲಿ ಮರಗಳನ್ನೆಲ್ಲ ಕಡಿದು ಬೆಂಕಿಯಿಟ್ಟು ಹಾಳುಮಾಡುವ ಹಾಗೆ ಚಳಿಗಾಲದಲ್ಲಿ ತಲೆಯ ಮೇಲೆ ಟೋಪಿ ಇಟ್ಟು ಗಿಡ ನೆಡುವ ಕಾರ್ಯಕ್ರಮದ ನಾಟಕ ಮಾಡುವ
===============================================
ನಮ್ಮ ಬೆಂಗಳೂರನ್ನು ಸಿಂಗಪುರ ಮಾಡುವ ಹುಚ್ಚಿನಲ್ಲಿ (ಹಣಮಾಡುವ ಹುಚ್ಚಿನಲ್ಲಿ) , ರಸ್ತೆಗೆಲ್ಲ ಟಾರ್ ಬಳಿದರು, ಪುಟ್ ಪಾತ್ ಅನ್ನು ಕಾಂಕ್ರೀಟ್ನಿಂದ ತುಂಬಿಸಿದರು, ಮನೆಕಟ್ಟಿದರು, ಮಳೆ ಬಂದಾಗ ಒಂದು ಹನಿ ನೀರು ನೆಲದೊಳಗೆ ಹೋಗದಂತೆ ಎಚ್ಚರ ವಹಿಸಿದರು. ಈಗ ಹೊಸ ಯೋಚನೆ ನಮ್ಮ ನಗರ ವಿಜ್ಞಾನಿಗಳಿಗೆ ಹೊಳೆದಿದೆ , ಮಳೆ ಕೋಯ್ಲು ಅಂದರೆ ನೆಲದೊಳಗೆ ಗುಂಡಿ ಮಾಡಿ ಮಳೆ ನೀರನ್ನು ನೆಲದೊಳಗೆ ಬಿಡುವದಂತೆ !!!!
ನಾವು ಸುಮ್ಮನಿದ್ದರೆ ಪ್ರಕೃತಿಯೆ ತನ್ನ ಕೆಲಸ ಮಾಡಿಕೊಳ್ಳುತ್ತಿತ್ತು ಅಲ್ಲವೆ
=============================================================
ನಮ್ಮ ರಸ್ತೆಯಲ್ಲಿ ಮೊದಲ ಮಹಡಿಗಿಂತ ಮೂರನ ಮಹಡಿಯಲ್ಲಿ ಬಿಸಿಲಿನ ದಗೆ ಜಾಸ್ತಿ ! ಏಕೆ ಹೇಳಿ ನಮಗಿಂತ ಅವರು ಸೂರ್ಯನಿಗೆ ಹತ್ತಿರವಲ್ಲವೆ !! ಹಹ್ಹ ಹ್ಹಹ್ಹ
===============================================================
ಒಮ್ಮೆ ಓದಿದ್ದೆ, ಪ್ರಕೃತಿ ತುಂಬ ಶಕ್ತಿಶಾಲಿ, ಮನುಜ ಸಾವಿರಾರು ವರುಷದಿಂದ ಭೂಮಿಯ ವಾತವರಣ ಹಾಳುಗೆಡಿವಿದ್ದಾನೆ ಈಗ, ಒಂದು ವೇಳೆ ಭೂಮಿಯಲ್ಲಿ ಮನುಷ್ಯನೆಂಬ ಪ್ರಾಣಿ ಕೇವಲ ಇಪ್ಪತ್ತು ವರ್ಷ ಇಲ್ಲವೆಂದರೆ ಸಾಕು, ಸಂಪೂರ್ಣ ಭೂಗ್ರಹ ತನ್ನ ಮೊದಲಿನ ಸ್ಥಿಥಿಗೆ ಬರಬಲ್ಲದು. ವಾಹನಗಳ ಓಡಾಟವಿಲ್ಲದಿದ್ದರೆ, ಭೂಮಿಯ ಒಳಗಿನಿಂದ ಹುಟ್ಟುವ ಹುಲ್ಲು ಸಾಕು ಈ ಟಾರ್ ರಸ್ತೆ , ಕಾಂಕ್ರೀಟನ್ನೆಲ್ಲ ಎತ್ತಿ ಹಾಕಿ ಬೆಳೆಯಬಲ್ಲದು
=====================================================
ಬೆಂಗಳೂರು ಈಗ ಬೇರೆಯೆ ಲೋಕ,
ಏನೊ ಹೇಳುತಾರಲ್ಲ ಅತಳ, ವಿತಳ, ತಳಾತಳ, ಪಾತಾಳ ಲೋಕಗಳೆಂದು ಅದ್ಯಾವುದು ಅಲ್ಲ
ಬೆಂಗಳೂರು ಈಗ ಶಬ್ದಲೋಕ
===================================================================
ಪ್ರತಿಕ್ರಿಯೆ (1)