ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋಕ ತ್ಯಜಿಸಿ ಹೋದರು. ಹುಟ್ಟು ಅಕಸ್ಮಿಕ ಸಾವು ನಿಶ್ಚಯ ಎಂಬ ವಿಧಿತತ್ವ ನಮಗೆ ಗೊತ್ತಿದ್ದರೂ ಹಲವು ಸಾವುಗಳು ನಮಗೆ ಬರ ಸಿಡಿಲಿನಂತೆ ಬಂದೆರಗುತ್ತವೆ. ನಮ್ಮನ್ನು ಆಘಾತಕ್ಕೆ ತಳ್ಳುತ್ತವೆ. ಜನಪ್ರಿಯ ನಟರ ಸಾವು, ಸಮಾಜಮುಖಿ ಚಿಂತಕರ, ನಮ್ಮ ಪ್ರೀತಿ ಪಾತ್ರರ ಸಾವು ನಮ್ಮಲ್ಲಿ ವಿಷಾದ ಹುಟ್ಟು ಹಾಕುತ್ತವೆ. ಪಿ.ಬಿ.ಎಸ್ ರವರ ಸಾವು ಅಂತಹುದೆ ಒಂದು ವಿಷಾದ ಭಾವವನ್ನು ಅವರ ಆರಾಧಕರಲ್ಲಿ ತಂದಿರು ವುದರಲ್ಲಿ ಯಾವುದೆ ಸಂಶಯವಿಲ್ಲ.
ಅವರು ಈಗ ಚಾಲ್ತಿಯಲ್ಲಿಲ್ಲದಿದ್ದ ಒಬ್ಬ ಹಿನ್ನಲೆ ಗಾಯಕ. ಹೊಸ ಪೀಳಿಗೆಗೆ ಅವರದೆ ಜಮಾನಾದ ಸಾಧಕರ ಬಗ್ಗೆ ಒಲವಿರುತ್ತದೆ. ಈಗ ಚಲನಚಿತ್ರ ರಂಗದ ಸಂಗೀತ ಲೊಕವನ್ನೆ ತೆಗೆದು ಕೊಂಡರೆ ಅದರಲ್ಲಿ ಸಾಕಷ್ಟು ಬದಲಾವಣೆ ಯಾಗಿದೆ. ಸಂಗೀತ ತನ್ನ ಮಾಧುರ್ಯ ಗುಣವನ್ನು ಕಳೆದುಕೊಂಡು ಅಬ್ಬರದ ಸಂಗೀತ ವಾಗುತ್ತಿದೆ ಇದು ಸಹಜವೆ. ಆದರೆ ಏಕ ಪ್ರಕಾರವಾಗಿ ಕಳೆದ ಶತಮಾನದ ಕೊನೆಯ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದ ಗಾನ ಸಮ್ರಾಟನಾಗಿ ಮೆರೆದ ಪಿ.ಬಿ.ಶ್ರೀನಿವಾಸ ನೆನಪಿನ ಮರೆಗೆ ಸರಿದು ಹೋಗಿ ಬಿಡಬಹುದಾದ ಗಾಯಕನಲ್ಲ. ಉತ್ತಮ ಹಿನ್ನೆಲೆ ಗಾಯಕನೆಂಬ ಅಭಿದಾನದ ಹೊರತಾಗಿಯು ತಮ್ಮ ಸಾಮಾನ್ಯ ಬದುಕಿನಲ್ಲಿ ಮತ್ತು ವೃತ್ತಿ ಜಿವನದಲ್ಲಿ ಅವರೊಬ್ಬ ಮಾನವಂತ, ಹೃದಯ ಸಂಸ್ಕಾರ ಹೊಂದಿದ ಜೊತೆಗೆ ಉನ್ನತಾದರ್ಶಗಳು ಒಂದೆಡೆ ಮುಪ್ಪುರಿಗೊಂಡ ಸೃಷ್ಟಿಕರ್ತನ ಒಂದು ಅಪರೂಪದ ಸೃಷ್ಟಿ. ಅಂತಹವರನ್ನು ದೇವರು ವಿರಳವಾಗಿ ಸೃಷ್ಟಿಸುತ್ತಾನೆ. ಹೀಗಾಗಿ ಪಿ.ಬಿ. ಯವರ ಸಾವು ನಮ್ಮನ್ನು ಖಿನ್ನರನ್ನಾಗಿಸುತ್ತದೆ.
ಅವರ ಆದರ್ಶಗುಣಗಳಿಗಾಗಿ ಒಂದು ಉದಾಹರಣೆಯನ್ನು ಕೊಡುವುದಾದರೆ ಒಂದು ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತುತವೆನಿಸುತ್ತದೆ. ' ರಾಜಕುಮಾರ ಶರೀರವಾದರೆ ಪಿ.ಬಿ.ಶ್ರೀನಿವಾಸ ಅವರ ಶಾರೀರ ' ವೆನ್ನುವಷ್ಟು ಅವರ ಹಿನ್ನೆಲೆ ಗಾಯನ ರಾಜಕುಮಾರರಿಗೆ ಒಪ್ಪುತ್ತಿತ್ತು. ರಾಜಕುಮಾರ ಅತ್ಯುತ್ತಮ ಹಾಡುಗಾರರಾದರೂ ಅವರು ಹಿನ್ನಲೆ ಗಾಯಕರಾಗಲು ಉತ್ಸುಕರಾಗಿರಲಿಲ್ಲ. ಸಂಪತ್ತಿಗೆ ಸವಾಲ್ ಚಿತ್ರದ ತಯಾರಿಕೆ ಪ್ರಾರಂಭವಾದ ದಿನಗಳವು. ಎಮ್ಮೆ ಹಾಡನ್ನು ಪಿ.ಬಿ.ಶ್ರೀನಿವಾಸ ಹಾಡಬೇಕಿತ್ತು. ಅವರು ಪೂರ್ವ ನಿಯೋಜಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ವಿದೇಶಕ್ಕೆ ತೆರಳಿದ್ದರು. ಎಮ್ಮೆ ಚಿತ್ರೀಕರಣ ನಿಲ್ಲಿಸುವಂತಿರಲಿಲ್ಲ. ರಾಗ ಸಂಯೋಜಕ ಜಿ.ಕೆ.ವೆಂಕಟೇಶ ಆ ಹಾಡನ್ನು ರಾಜ ಕುಮಾರ ಕೈಲಿ ಹಾಡಿಸುತ್ತಾರೆ. ಇದೇನು ರಾಜ್, ಪಿಬಿ ಮತ್ತು ವೆಂಕಟೇಶರಿಗೆ ಹೊಸದಲ್ಲ. ಈ ಮೊದಲು ವೆಂಕಟೇಶ ರಾಜಕುಮಾರ ಕೈಲಿ ಹಾಡಿಸಿದ್ದರು. ಯಾಕೋ ಆ ಹಾಡುಗಳು ಉತ್ತಮವಾದರೂ ಅಷ್ಟು ಜನಪಪ್ರಿಯವಾಗಲಿಲ್ಲ. ಆದರೆ ಎಮ್ಮೆ ಹಾಡು ಪಡೆದ ಜನಪ್ರಿಯತೆ ಆ ಮೂವರನ್ನು ಸೇರಿಸದಂತೆ ರಾಜ್ ಅಭಿಮಾನಿ ಗಳ ಮನಸೂರೆ ಗೊಂಡಿತು. ರಾಜಕುಮಾರ ಅವರ ಚಿತ್ರಗಳಿಗೆ ತಾವೆ ಹಾಡಲು ಪ್ರಾರಂಭಿಸಿದರು. ಉಳಿದ ನಾಯಕ ನಟರುಗಳಿಗೆ ಹಾಡುವುದು ಮುಂದುವರಿದರೂ, ಅವರ ಏಕಮೇವಾದ್ವಿತೀಯ ಪಟ್ಟ ಹಿಂದೆ ಸರಿದಿತ್ತು. ಈ ಸಂಧರ್ಭ ದಲ್ಲಿ ಪತ್ರಕರ್ತರು ಎತ್ತಿದ ಪ್ರಶ್ನೆಗೆ ಪಿಬಿ ಹೀಗೆ ಹೇಳುತ್ತಾರೆ ' ರಾಜಕುಮಾರ ಉತ್ತಮ ಗಾಯಕರಾದರೂ ತಾವು ಹಾಡದೆ ನನಗೆ ದಶಕಗಳ ಕಾಲ ಅವಕಾಶ ಮಾಡಿಕೊಟ್ಟು ಅವರು ಉದಾತ್ತತನವನ್ನೆ ಮೆರೆದಿದ್ದಾರೆ ' ಎನ್ನುತ್ತಾರೆ. ಆದರೆ ರಾಜಕುಮಾರ ತಮ್ಮ ಚಿತ್ರಗಳಲ್ಲಿ ಕೆಲವು ಹಾಡುಗಳನ್ನು ಅವರಿಂದ ಹಾಡಿಸಲು ಮರೆಯಲಿಲ್ಲ. ಈ ನಡವಳಿಕೆ ಜನ ಸಾಮಾನ್ಯರಲ್ಲಿ ಬರುವಂತಹವಲ್ಲ. ಅದಕ್ಕೆ ಉನ್ನತ ಗುಣಾದರ್ಶಗಳು ಅವರಿಬ್ಬರಲ್ಲಿದ್ದವು.
ಪಿಬಿ ಕನ್ನಡ ಚಲನಚಿತ್ರರಂಗ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಸಂಭಾವನೆಯ ವಿಷಯದಲ್ಲಿ ಯಾವ ನಿಮರ್ಾಪಕರೊಂದಿಗೂ ಚಕಾರ ಮತನಾಡಲಿಲ್ಲ. ಅವರು ಕೊಟ್ಟಷ್ಟು ಪಡೆಯುತ್ತಿದ್ದರು ವ್ಯವಹಾರ ಹೊರತಾಗಿಯೂ ಅವರು ಮಾನವೀಯ ಮೌಲ್ಯಗಳ ವ್ಯಕ್ತಿಯಾಗಿದ್ದರು. ಅವರ ಇನ್ನೊಂದು ವಿಶೇಷತೆಯೆಂದರೆ ಅವರು ರಾಜ್ ಉದಯ ಮತ್ತು ಕಲ್ಯಾಣರಿಗೆ ಹೊಂದಿಕೊಂಡಂತೆ ಎರಡನೆ ತಲೆಮಾರಿನ ನಾಯಕ ನಟರಾದ ಶ್ರೀನಾಥ, ರಾಜಾಶಂಕರ, ರಾಜೇಶ ಮತ್ತು ಗಂಗಾಧರರಿಗೂ ಅದರಂತೆ ನಂತರದ ತಲೆಮಾರಿನ ವಿಷ್ಣವರ್ಧನ, ಅನಂತನಾಗ, ಅಂಬರೀಶ ರವರಿಗೂ ಸಹ ಹಾಡಿದರು. ಅವರ ಹಾಡುಗಾರಿಕೆ ಎಲ್ಲರಿಗೂ ಎಲ್ಲ ವಯೋಮಾನದ ವರಿಗೂ ಹೊಂದಿಕೆ ಯಾಗುತ್ತಿತ್ತು. ಅದು ಅವರ ಹಾಡುಗಾರಿಕೆಯ ಗಟ್ಟಿತನ ಮತ್ತೂ ಆಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಧರ್ಭದಲ್ಲಿ ನಮಗೆ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ರಫಿ ನೆನಪು ಬರುತ್ತದೆ. ಅವತರೂ ಸಹ ದಿಲೀಪ, ರಾಜ್ ಮತ್ತೂ ದೇವರಿಂದ ಪ್ರಾರಂಭಿಸಿ ಶಮ್ಮನಿ, ಜಾಯ್, ಶಶಿ, ಬಿಶ್ವಜೀತ ಹಾಗೂ ಅವರ ನಂತರದ ನಾಯಕರಿಗೂ ಕೆಲ ಹಾಡುಗಳನ್ನು ಹಾಡಿದರು. ಆದರೆ ಇವರಿಗೆ ಫಾಲ್ಕೆ ಪುರಸ್ಕಾರ ದೊರೆಯದುದು ಒಂದು ವಿಷಾದಕರ ಸಂಗತಿ.
22.9.1930 ರಂದು ಆಂಧ್ರ ಪ್ರದೇಶದ ಕಾಕಿನಾಡಿನಲ್ಲಿ ಜನಿಸಿದ ಅವರು ಸಿನೆಮಾ ಹಡುಗಠಾತರಿಕೆಯನ್ನೆ ವೃತ್ತಿಯನ್ನಾಗಿಸಿಕೊಂಡು ಕನ್ನಡ ತೆಲುಗು ತಮಿಳು ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಸರಿ ಸುಮಾರು ಎಂಟು ಭಾಷಾ ಚಿತ್ರಗಳಿಗೆ ಹಿನ್ನೆಲೆ ಹಾಡುಗಳನ್ನು ಹಾಡಿದರು. ಕನ್ನಡದ 'ಜಾತಕಫಲ' ಚಿತ್ರದಿಂದ ಆರಂಭವಾದ ಅವರ ಹಾಡುಗಾರಿಕೆ ಅವರನ್ನು ಕನ್ನಡದ ಏಕಮಾತ್ರ ಶತಮಾನಗಳ ಕಾಲ ನೆನಪಿನಲ್ಲುಳಿಯುವ ಗಾಯಕ ತಾನೆಂಬುದನ್ನು ಅವರು ಪ್ರಮಾಣಿಸಿ ಕೊಟ್ಟರು. ಹೀಗಾಗಿ ಅವರ ಸಾವು ಕನ್ನಡ ಚಿತ್ರರಂಗಕ್ಕಾದ ತುಂಬಲಾರದ ನಷ್ಟ. ಅವರ ನೆನಪು ನಮ್ಮನ್ನು ನಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತದೆ. ಬಯಲುಸೀಮೆಯ ಮರ ಗಿಡಗಳೆ ಅಪರೂಪ ವೆನ್ನುವ, ಬೀಸುವ ಗಾಳಿಯೂ ಸಹ ಬಿಸಿಯುಸಿರನ್ನೆ ಹೊತ್ತು ತರುವ ಬೇಸಿಗೆ ನಮಗೆ ಬೇಗುದಿಯನ್ನು ಹುಟ್ಟು ಹಾಕುವಂತಹುದು. ಈ ಬೇಗೆಯಿಂದ ಪಾರಾಗಲು ನಾವು ರಾತ್ರಿ ಮಲಗಲು ಆಯ್ಕೆ ಮಡಿಕೊಳ್ಳುತ್ತಿದ್ದ ಸ್ಥಳ ಮನೆ ಮುಂದಿನ ಬಯಲು ಜಾಗ ಇಲ್ಲದಿದ್ದರೆ ಮನೆಯ ಮಾಳಿಗೆಗಳು. ಅವು ನಮಗೆ ಸ್ವರ್ಗ ಸಮನ ಸ್ಥಳಗಳು. ಕಿಟಕಿ ಬಾಗಿಲು ಗೋಡಗಳಿಂದ ಮುಕ್ತವಾದ ವಿಶಾಲ ಅಂತರೀಕ್ಷಕ್ಕೆ ನಮ್ಮನ್ನು ಮುಖಾಮುಖಿ ಯಾಗಿಸುವ ಆ ಜಾಗೆಗಳು ನಮಗೆ ಅಪ್ಯಾಯಮಾನ.
ವಿಶಾಲ ನೀಕಲ ನಭ, ಮುನ್ನೆಲೆಗೆ ಮಿನುಗುಬವ ಗ್ರಹ ತಾರೆ ನಕ್ಷತ್ರಗಳು ಆಗಾಗ ಸರಿದು ಹೊಗುವ ತೆಳು ಬೆಳ್ಮೋಡಗಳು ಉದಯಿಸಿ ಅಸ್ತಮಿಪ ಚಂದ್ರ, ಶುಕ್ಲ ಪಕ್ಷದ ಹುಣ್ಣಿಮೆಯ ಕಾಲದಲ್ಲಿ ಆತ ಚೆಲ್ಲುವ ಬೆಳ್ನೊರೆಯ ಬೆಳ ದಿಂಗಳು ನಾವು ನಿದ್ರೆಗೆ ಜಾರಿದ್ದೆ ನಮಗೆ ಗೊತ್ತಾಗುತ್ತಿರಲಿಲ್ಲ. ಬಿಸಿಗಾಳಿ ತಂಗಾಳಿಯಾಗಿ ಹೊದಿಕೆಯೊಳಗೆ ನುಸುಳಿ ಕಚಗುಳಿಯಿಟ್ಟು ಪಿಸುಗುಡುವಾಗ ದಣಿದು ವಿಶ್ರಾಂತಿಗೆ ಮೊರೆ ಹೊಗಿದ್ದ ದೇಹ ಪ್ರಕೃತಿಯ ಬೆರಗಿನ ಬೇಳಗಿನ ಆಸ್ವಾದನೆಗೆ ಅಣಿಯಾಗಿ ಬಿಟ್ಟಿರುತ್ತಿತ್ತು. ಆಗ ಮದುವೆ ಮನೆಗಳ ಲೌಡ್ ಸ್ಪೀಕರ್ಗಳಲ್ಲಿ ತೇಲಿ ಬರುತ್ತಿದ್ದ ಪಿಬಿ ಮೋಡಿಯ ಗಾಯನದ ಭಕ್ತ ಕನಕದಾಸ ಚಿತ್ರದ ' ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ', ' ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನು ನೀವೇನಾದರೂ ಬಲ್ಲಿರಾ ', ಮಲ್ಲಿ ಮದುವೆಯ ' ಒಲವಿನ ಪ್ರಿಯ ಲತೆ ಅವಳದೆ ಚಿಂತೆ ', ಗಾಳಿಗೋಪುರದ ' ಯಾರಿಗೆ ಯಾರುಂಟು ಯರವಿನ ಸಂಸಾರ ' ಮುಂತಾದ ಮಾಧುರ್ಯ ಹಾಗೂ ಸತ್ವಭರಿತ ಹಡುಗಳು ನಮ್ಮನ್ನು ಭಾವಲೋಕಕ್ಕೆ ಎಳೆದೊಯ್ಯುತ್ತಿದ್ದವು. ಆ ಹಾಡುಗಳು ಅಲೆಯಲೆಯಾಗಿ ತೇಲಿ ಬರುತ್ತಿದ್ದರೆ ಮೋಡಗಳ ಮರೆಯ ವೈಕುಂಠದಲ್ಲಿ ತೇಲಿದ ಅನುಭವ. ಆ ಕಾಲ ಮತ್ತೆ ಬಾರದು ಕಾಲ ಗತಿಸಿದೆ ವ್ಯಕ್ತಿಗಳು ಗತಿಸಿದ್ದಾರೆ ನಾವೂ ಒಂದು ದಿನ ಗತಿಸುವವರೆ! ಜನರನ್ನು ಭಕ್ತಿ ಪರವಶತೆಗೆ ಒಯ್ಯುವ ಗುಣ ಪಿಬಿ ಯವರ ಗಾಯನಕ್ಕಿತ್ತು. ಹೀಗೆಯೆ ಉದಾಹರಿಸುತ್ತ ಹೋದರೆ ವಿಷಯಕ್ಕೆ ಬರವಿಲ್ಲ. ಅವರ ಶರೀರ ಈ ಭೌತಿಕ ಲೋಕವನ್ನು ಬಿಟ್ಟು ಹೋಗಿದ್ದರೂ ಅವರ ಶಾರೀರವನ್ನು ಉಳಿಸಿಕೊಂಡು ಕೇಳುವ ಸೌಲಭ್ಯವನ್ನು ವಿಜ್ಞಾನ ನಮಗೆ ನೀಡಿದೆ. ಅವು ನಮಗೆ ಬೇಕೆಂದಾಗ ಪಿಬಿ ಯವರನ್ನು ಆಲಿಸುವ ಸವಲತ್ತು ನಮಗೆ ಇದೆ. ಅವರ ಹಾಡುಗಳನ್ನು ಕೇಳಿ ಮೆಚ್ಚಿ ಇಂತಹ ಅದ್ಭುತ ಕಂಠದ ಗಾಯಕನೊಬ್ಬನಿದ್ದ ಎಂದು ನಾವು ಹೆಮ್ಮೆ ಪಡುವವರಾಆದರೆ ಅದು ನಾವು ಆ ಸುಸಂಸ್ಕೃತ ಆತ್ಮಕ್ಕೆ ನೀಡುವ ನಿಜವಾದ ಶ್ರದ್ಧಾಂಜಲಿ.
ಚಿತ್ರ ಕೃಪೆ : ___LINK_OPEN_href="http://www.google.co.in/search?q=p.b.srinivas+images&rls=com.microsoft:en-us&ie=UTF-8&oe=UTF-8&startIndex=&startPage=1&rlz=1I7ADFA_enIN462&redir_esc=&ei=x8hrUZz1IcXwrQfmp4CgCA"___http://www.google.co.in/search?q=p.b.srinivas+images&rls=com.microsoft:en-us&ie=UTF-8&oe=UTF-8&startIndex=&startPage=1&rlz=1I7ADFA_enIN462&redir_esc=&ei=x8hrUZz1IcXwrQfmp4CgCA
ಪ್ರತಿಕ್ರಿಯೆ (6)