ಹಗಲು ರಾತ್ರಿಗಳೆರಡು ದಿನದ
ಭಾಜಕಗಳು
ಹಗಲು ಗಂಡು ರಾತ್ರಿ ಹೆಣ್ಣು
ದೇವಪೂಜೆ ಹಗಲಿನಲಿ
ದೇವಿಯ ಉಪಾಸನೆ ರಾತ್ರಿಯಲಿ


ಗಂಡು ಹಗಲಿನಂತೆ ಬಟಾಬಯಲು
ಎಲ್ಲ ಗೋಚರ
ಹೆಣ್ಣು ರಾತ್ರಿಯಂತೆ ನಿಗೂಢ


ಸೂರ್ಯನ ಉರಿ ಬಿಸಿಲಿಗೆ
ಕಾವೇರುವ ಹಗಲು
ಪೌರುಷದ ಸಂಕೇತ ರಾತ್ರಿಯ
ತಂಪು ಬೆಳದಿಂಗಳ ಲಾವಣ್ಯ
ಹೆಣ್ಣಿನ ಮಾರ್ದವತೆಯ ಸಂಕೇತ


ದಿನವೆಂದರೆ
ಗಂಡು ಹೆಣ್ಣುಗಳ ಸಮ್ಮಿಲನದ
ಒಂದು ನಿರಂತರತೆ

 
ತ್ರಿಕೋನ ತ್ರಿಶಕ್ತಿಯ ಸಂಕೇತ
ವೃತ್ತ ಪುರುಷತ್ವದ ಲಾಂಛನ
ಸ್ತ್ರೀ ಪುರುಷ ಸಮನ್ವಯತೆ
ಸೃಷ್ಟಿ ಕ್ರಿಯೆಯ ಮಂಡಲ
ಇದು ಕಾಮದ ಆಧ್ಯಾತ್ಮ ಅಲ್ಲದೆ
ಆಧ್ಯಾತ್ಮದ ಕಾಮನೆಯು ಕೂಡ


ತ್ರಿಕೋಣ ವೃತ್ತಗಳ ಸಂಗಮ
ಚತುಷ್ಕೋನ ಪಂಚಕೋನ
ಷಟ್ಕೋನಗಳ ನಿರ್ಮತಿಗೆ ಹೇತು
ಚತುಷ್ಕೋನ ಚತುರ್ಮುಖ ಬ್ರಹ್ಮ
ಪಂಚಕೋನ ಪಂಚಮುಖಿ ಶಿವ
ಷಟ್ಕೋನ ಷಣ್ಮುಖ ಎಲ್ಲ
ಚತುರ್ಮುಖನ ವಿಸ್ತಾರ ರೂಪಗಳೆ
ಚತುರ್ವೇದ ಚತುರ್ರಾಶ್ರಮ
ಸಚತುರ್ರ ಪುರುಷಾರ್ಥಗಳು

ಪಂಚಮುಖಿ ಶಿವನಿಂದ
ಪಂಚ ಮಹಾಭೂತಗಳು
ಪಂಚ ತನ್ಮಾತ್ರ
ಪಂಚ ಜ್ಞಾನೇಂದ್ರಿಯ
ಕರ್ಮೇಂದ್ರಿಯಗಳು
ಪಂಚ ಪ್ರಾಣ ಉಪ ಪ್ರಾಣ
ಪಂಚವಿಧ ಅಂತಃಕರಣಗಳು
ಈ ಪಂಚ ಪಂಚಕಗಳ
ಸಂಯೋಜನೆಯೆ 'ಪ್ರಪಂಚ '


ಈ ಪ್ರಪಂಚ ಸಾಗರದಲ್ಲಿ
ಹಸಿವು ಬಾಯಾರಿಕೆ ದುಃಖ
ಮೋಹ ಮುಪ್ಪು ರೋಗ
ಈ ಷಡ್ವಿಕಾರಗಳ ಆಗಮನ
ಭ್ರೂಣ ಹುಟ್ಟು ಬೆಳವಣಿಗೆ
ಬದಲಾವಣೆ ಕುಸಿತ ಸಾವು


ಒಂದರಿಂದ ಮೂರು
ಮೂರರಿಂದ ಆರು
ಅರಿವಿಲ್ಲದ ಸ್ಥಿತಿ ಅವನತಿ
ಅರಿವಿರೆ ಅದೆ ಉನ್ನತಿ


ತ್ರಿಕೋಣ ಬರಿ ಸ್ತ್ರೀ ಸಂಕೇತ
ಮಾತ್ರವೆ ಅಲ್ಲ ಅದೊಂದು
'ಸೃಷ್ಟಿ ರಹಸ್ಯ'  ತ್ರಿಗುಣ ತ್ರಿಕಾಲ
ತ್ರಿಲೋಕ ತ್ರಿವೇದ ತ್ರಿಶಕ್ತಿಗಳು


ವಸ್ತುವಿನ ನಿರ್ಮಿತಿಗೆ
ಅರಿವುಬೇಕು ಜೊತೆಗೆ
ನಿರ್ಮಿತಿಯ ಇಚ್ಛೆ
ನಿರ್ಮಿತಿಗಳು ಮುಖ್ಯ ಇದು
ನಿರ್ಮಿತಿಯ ದರ್ಶನ ಕೂಡ


ಕೆಂಪು ಬಿಳಿ ಕಪ್ಪು
ಸೃಷ್ಟಿ ವೈವಿಧ್ಯಗಳು ಎಲ್ಲ
ಬಣ್ಣಗಳೊಳಗೆ ಹರಿವ
ಜೀವರಸವೊಂದೆ ಈ
ತತ್ವವನರಿಯೆ ಜೀವನ ಸ್ವರ್ಗ
ಅರಿಯದಿರೆ ಅದುವೆ ನರಕ

       *****

ಚಿತ್ರ ಕೃಪೆ : http://www.desktopedia.com/wallpaper/Secret-of-Life/