'ಕೃಷ್ಣ....ಕೃಷ್ಣ....ಕೃಷ್ಣ'
=============
ಆರಂಭ
=====
ಇಂದು ಅದೇಕೊ ಬಹಳಷ್ಟು ಬರಹಗಳು ವಿವಾದಕ್ಕೆ ಈಡಾಗುತ್ತವೆ. ಅಥವ ಮತ್ತೊಂದು ರೀತಿ ಹೇಳುವದಾದರೆರೆ ವಿವಾದ ಸೃಷ್ಟಿಯಾಗುವಂತೆ ಬರಹಗಳನ್ನು , ಕಾದಂಬರಿಗಳನ್ನು ರಚಿಸಲಾಗುತ್ತೆ. ಯಾವ ಹಿಂದೂ ಧರ್ಮದ ಶಕ್ತಿಗಳು ವ್ಯಕ್ತಿಗಳು ಒಂದು ಕಾಲಕ್ಕೆ ಪೂಜಿಸಲ್ಪಟ್ಟರೋ ಅವರೆಲ್ಲ ಇಂದು ಅವಹೇಳನಕ್ಕೆ ಒಳಗಾಗುತ್ತಿದ್ದಾರೆ .
ಅಂತಹ ಅವಹೇಳನದ ಕಾರ್ಯ ನಡೆದಾಗ ಅದನ್ನು ಅತ್ತ ಉಗ್ರವಾಗಿ ಪ್ರತಿಭಟಿಸುವ ಶಕ್ತಿಯೂ ಇಲ್ಲದೆ ಇತ್ತ ಅದನ್ನು ನಿರ್ಲಕ್ಷಮಾಡಿ ದೂರಸರಿಸುವ ಮನೋ ದಾರ್ಢ್ಯವು ಇಲ್ಲದೆ ಹಪಹಪಿಸುವ ಸ್ವಭಾವದಿಂದಾಗಿ ಸದಾ ವಾದ ವಿವಾದಗಳು ಇಂದಿನ ನಮ್ಮ ಸಮಾಜದಲ್ಲಿ ಎದ್ದು ಕಾಣುವುದು.
ಪೌರಾಣಿಕ ಪಾತ್ರಗಳಾದರೋ ಯಾವುದೋ ಕಾಲಕ್ಕೆ ಸಿಮೀತವಾಗಿದ್ದವರು. ಆಗ ನಿಜವಾಗಿ ಎನು ನಡೆಯಿತು ಎಂದು ಯಾರು ಹೀಗೆ ಎಂದು ಕುರಿತಿಟ್ಟು ಹೇಳಲಾರರು , ಪುರಾಣಗಳನ್ನು ಬರೆದವರೂ ಸಹ ಯಾವುದೋ ಕಾಲದವರೇ. ಸತ್ಯವಾದ ಘಟನೆಗಳು ಅದನ್ನು ನಿರೂಪಿಸುವಾಗ ಸೇರಿಕೊಂಡ ಕಲ್ಪನೆಗಳು ಎಲ್ಲವೂ ಸೇರಿ ಪುರಾಣದ ಕತೆಗಳು ಕೆಲವೊಮ್ಮೆ ಗೋಜಲು.
ಹಾಗೆಂದು ಅವುಗಳನ್ನು ತಿರಸ್ಕರಿಸಬೇಕೆ. ಹಾಗು ಅವೆಲ್ಲ ಅಸತ್ಯ ಎಂದು ಘೋಷಿಸಬೇಕೆ. ಅದರ ಅಗತ್ಯವಾದರು ಏನಿದೆ. ಅದನ್ನು ಹೇಗಿದೆಯೋ ಹಾಗೆ ಓದುವುದು.ಅರ್ಥಮಾಡಿಕೊಳ್ಳುವುದು ಇಂತಹವನ್ನು ಮಾಡಿದರೆ ಸಾಕು, ಬದಲಾಗಿ ಅದನ್ನೆಲ್ಲ ಸುಳ್ಳು ಎಂದು ವಾದಿಸುವ ಬರದಲ್ಲಿ ಎಲ್ಲವನ್ನು ಅಲ್ಲಗೆಳೆಯುತ್ತ ಹೋದಲ್ಲಿ ಸಮಾಜದಲ್ಲಿ ಅಶಾಂತಿಯೊಂದು ತಲೆದೋರುವುದು. ಹಿಂದೆಲ್ಲ ಕೃಷ್ಣನ ಕತೆಯಾಗಲಿ ರಾಮನ ಕತೆಯಾಗಲಿ ಹಲವರು ತಮಗೆ ತೋರಿದಂತೆ ಅರ್ಥಕೊಡುತ್ತ ವಿವರಿಸಲು ಯತ್ನಿಸುತ್ತಿರುವರೆ. ಅದಕ್ಕಾಗಿ ರಾಮಾಯಣಗಳು ಭಾರತದಲ್ಲಿ ಅಸಂಖ್ಯಾತ. ಹಾಗೆಯೆ ಕೃಷ್ಣನ ಕಾಲದ ಘಟನೆಗಳು ಸಹ ಹಲವು ಅದ್ಭುತಗಳನ್ನು ಪವಾಡ ಸದೃಷ್ಯ ನಿರೂಪಣೆಗಳನ್ನು ಒಳಗೊಂಡಿರುವುದೆ. ಆದರೆ ಕೃಷ್ಣನನ್ನೆ ಒಬ್ಬ ರಾಕ್ಷಸ ಎನ್ನುವ ಮಾತನ್ನು ಒಪ್ಪಲಾಗದು. ಅವನ ಜೀವನದ ಹೋರಾಟಗಳನ್ನೆಲ್ಲ ವಿಫಲ ಎಂದು ಕರೆಯಲಾಗದು. ಆಗ ಇದ್ದ ಸಾಮಾಜಿಕ ರಾಜಕೀಯ ಪರಿಸ್ಥಿಥಿಗಳೆಲ್ಲ ನಮಗೆ ಅರ್ಥವಾಗದು. ಇಂದಿನ ಪರಿಸ್ಥಿಥಿಗಂತು ಅದು ಹೊಂದಿಕೆಯಾಗದು. ಅವನ ಮಾತುಗಳನ್ನು ಅವನ ಕಾಲದಲ್ಲಿ ನಿಂತು ಅರ್ಥಮಾಡಿಕೊಳ್ಳುವ ಸಹನೆಯಂತು ಈಗ ಯಾರಿಗೂ ಇಲ್ಲ. ಹಾಗೆ ಅವನ ಮಾತುಗಳನ್ನು ಅವನದೆ ಭಾವನೆಯ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವುದು ದುಸ್ತರವೆ.
ಹಾಗೆ ನೋಡಿದರೆ ಎಲ್ಲ ಧರ್ಮ ಗ್ರಂಥಗಳಲ್ಲಿ ಸೇರಿಕೊಂಡಿರುವ ಉಪಕತೆಗಳು ಸಹ ಕಲ್ಪನೆಯಿಂದ ಸೇರಿಕೊಂಡಿರುವಂತಹುದೆ. ನಮ್ಮ ಪುರಾಣದ ಪಾತ್ರಗಳಾಗಲಿ , ಗ್ರೀಕ್ ಮೊದಲಾದ ಪೌರಾಣಿಕ ಪಾತ್ರಗಳಾಗಲಿ ಸದಾ ಒಂದೆ ರೀತಿಯ ಕಲ್ಪನೆಗಳೆ. ನಮ್ಮಲ್ಲಿ ನಾಗಲೋಕವಿದ್ದರೆ, ಯಮಲೋಕವಿದ್ದರೆ ಬೇರೆ ಬೇರೆ ಧರ್ಮಗಳಲ್ಲಿ ಅವರದೆ ಆದ ಲೋಕಗಳು ಇರುತ್ತವೆ. ನಮ್ಮಲ್ಲಿ ಒಬ್ಬಾಕೆ ಸೂರ್ಯನ ವರದಿಂದ ಮಕ್ಕಳನ್ನು ಪಡೆದರೆ. ಅದೇ ರೀತಿಯ ಘಟನೆಗಳು ಬೇರೆ ಧರ್ಮದಲ್ಲೂ ಕಾಣಬಹುದು. ಹಾಗೆಂದು ಧರ್ಮಗಳೆಲ್ಲ ವ್ಯಭಿಚಾರವೆನ್ನಲಾದಿತೆ. ನಮ್ಮಲ್ಲಿ ಆರ್ಧಮನುಷ್ಯ ಅರ್ಧಸಿಂಹದ ದೇಹದ ದೈವವಿದ್ದರೆ ಬೇರೆ ಧರ್ಮಗಳಲ್ಲಿ ಹಾವಿನ ತಲೆಯ ದೇವತೆಗಳಿರುವದಿಲ್ಲವೆ. ಹಾಗೆಂದು ಸದಾ ಒಂದು ಧರ್ಮವನ್ನು ನಿಂದಿಸುತ್ತ, ಒಂದು ದೈವವನ್ನು ಸದಾ ದ್ವೇಷಮಾಡುತ್ತ ಇರುವ ಅಗತ್ಯವಾದರು ಏನು ನನಗರ್ಥವಾಗುವದಿಲ್ಲ.
ಕೃಷ್ಣನಂತ ಪುರಾಣದ ಅಥವ ಇತಿಹಾಸದ ಪುರುಷನನ್ನು ಇಂದು ನಾವು ನಿಂದಿಸಿದರೆ, ಅವನು ಬಂದು ತನ್ನನ್ನು ಸಮರ್ಥಿಸಿಕೊಳ್ಳಲಾರ. ಅವನು ಎದುರಿಗೆ ಬರಲಾರದ ಸ್ಥಿಥಿ ಇರುವಾಗ ಅವನನ್ನು ನಿಂದಿಸುತ್ತ ಹೋದರೆ ಅದಕ್ಕೆ ಏನು ಹೇಳುವುದು. ಹಾಗೆಯೆ ಗಣೇಶನಾದರು ಅವನನ್ನು ಯಾರೋ ಒಬ್ಬರು ಬೈದರೆ ಅವನು ತಾನೆ ಏನು ಮಾಡಿಯಾನು. ಮನುಷ್ಯ ತನ್ನ ನೆಮ್ಮದಿಗಾಗಿ , ಶಾಂತಿಗಾಗಿ, ತನ್ನನ್ನು ಕಾಪಾಡುವದೆಂದು ನಂಬಿ ತಾನೆ ನಿರ್ಮಿಸಿಕೊಂಡ ದೈವಭಾವವನ್ನು ತಾನೆ ಖಂಡಿಸುತ್ತ ಟೀಕಿಸುತ್ತ ಹೋದಲ್ಲಿ ದೇವರು ಖಂಡಿತ ಎದುರಿಗೆ ಬಂದು ತನ್ನನ್ನು ಸಮರ್ಥಿಕೊಳ್ಳಲಾರನು. ಯಾವ ಧರ್ಮ ದೇವರು ಪರಲೋಕ ಇಂತ ಕಲ್ಪನೆಗಳೆಲ್ಲ ಮನುಷ್ಯನ ಶಾಂತಿಗಾಗಿ ನೆಮ್ಮದಿಗಾಗಿ ಆತ್ಮವಿಶ್ವಾಸ ಹೆಚ್ಚಿಸುವದಕ್ಕಾಗಿ ಬೆಳಸಲಾಯಿತು ಇಂದೆ ಅದೇ ದರ್ಮ ದೇವರ ಇಂತಹ ಕಲ್ಪನೆಗಳೆಲ್ಲ ಅದೆ ಮನುಷ್ಯನ ನೆಮ್ಮದಿ ಕೆಡಿಸಲು ವಿಶ್ವಾಸ ಹಾಳುಮಾಡಲು , ಪರಸ್ಪರ ಅಪನಂಭಿಕೆ ಹೆಚ್ಚಿಸಲು ಕಾರಣವಾಗುತ್ತಿರುವುದು ಮಾತ್ರ ಕಾಲದ ವೈರುಧ್ಯ
ಧರ್ಮ ಪುರಾಣ ದೇವರು ಇವೆಲ್ಲ ಮನುಷ್ಯ ಸಮಾಜದಲ್ಲಿನ ಶಾಂತಿಗಾಗಿ, ಕುಸಿದು ಹೋಗುತ್ತಿರುವ ತನ್ನ ಆತ್ಮಶಕ್ತಿಯನ್ನು ಎತ್ತಿನಿಲ್ಲಿಸುವದಕ್ಕಾಗಿ ಆದಾರ ಮಾಡಿಕೊಂಡ ನಂಬುಗೆಗಳು, ಇಂತಹ ದರ್ಮ ಪುರಾಣ ಬೋಧನೆ ಇಂತಹುವೆಲ್ಲ ಈಗ ಒಬ್ಬರು ಮತ್ತೊಬ್ಬರನ್ನು ಅವಹೇಳನ ಮಾಡುವದಕ್ಕಾಗಿ ಬಳಸುತ್ತಿರುವುದು, ಅಥವ ತಾನು ನಂಬಿದ ಮತ್ತೊಂದು ಸತ್ಯವನ್ನು ಸರಿ ಎಂದು ನಿರೂಪಿಸಲು ಇರುವ ಮತ್ತೊಂದು ಸತ್ಯವನ್ನು ಸುಳ್ಳು ಎಂದು ಹೇಳುವುದು ನಡೆಯುತ್ತಲೆ ಹೋಗುತ್ತಿದೆ.
ಅಂತಿಮ ಸತ್ಯ ಮಾತ್ರ ಯಾರಿಗೂ ಎಟುಕದು ಎನ್ನುವದನ್ನು ಎಲ್ಲರೂ ಅರ್ಥಮಾಡಿಕೊಂಡಲ್ಲಿ, ಹಾಗೆ ಮತ್ತೊಬ್ಬರ ನಂಬಿಕೆಗಳ ಬಗ್ಗೆ ನಾವು ಸ್ವಲ್ಪ ಸಹನೆ ಬೆಳೆಸಿಕೊಂಡಲ್ಲಿ, ಸಮಾಜದಲ್ಲಿ ಸ್ವಲ್ಪ ಮಟ್ಟಿಗಾದರೂ ಶಾಂತಿ ನೆಲೆಸೀತು.
ಹಾಗೆ ನನಗೆ ಅನ್ನಿಸಿದ್ದು ತೀರ ನಿಂದನೆಗೆ ಒಳಗಾಗಿರುವ ಕೃಷ್ಣ ಹಾಗು ಗಣೇಶ ಇವರೆಲ್ಲ ಇಂದು ಎದುರಿಗೆ ಬಂದು ಮಾತನಾಡಲು ತಮ್ಮ ಅಂದಿನ ಮನಸ್ಥಿಥಿ ಹೇಳಿಕೊಳ್ಲಲು ಸಾದ್ಯವಾದಲ್ಲಿ ........ ಇಂತಹ ಒಂದು ಕಲ್ಪನೆಯೆ
'ಕೃಷ್ಣ....ಕೃಷ್ಣ....ಕೃಷ್ಣ" ಬರಹಕ್ಕೆ ಮೂಲ ಕಾರಣ.
ಹಾಗೆಯೆ ಈ ಬರಹ ಪೂರ್ಣವಾಗಿ ಸಂಭಾಷಣೆಯ ರೂಪದಲ್ಲಿಯೆ ಸಾಗಿದೆ. ಇಲ್ಲಿ ನಾನು ಯಾವ ಮಾತಿಗು ಸಾಕ್ಷಿ ಅಥವ ಟಿಪ್ಪಣಿ ಕೊಡಲಾರೆ. ಇಲ್ಲಿರುವ ಯಾವ ಮಾತನ್ನು ಯಾವುದೆ ಭಾವಗಳಿಗೂ ಮಾತುಗಳಿಗೂ ಯಾವುದೆ ಪುಸ್ತಕದ ಗ್ರಂಥಗಳ ಆಧಾರವಿಲ್ಲ. ಎಲ್ಲವೂ ಕೇವಲ ನನ್ನ ಕಲ್ಪನೆ.
ಯಾವುದೆ ಮಾತು ಒಪ್ಪಿತವಾದರೆ ಸ್ವೀಕರಿಸಿ. ಇಲ್ಲವೆನ್ನುವದಾದರೆ ಓದಿ ಮರೆತುಬಿಡಿ. ಮುಂದಿನ ಬಾಗಗಳಲ್ಲಿ ನಿರೀಕ್ಷಿಸಿ
'ಕೃಷ್ಣ....ಕೃಷ್ಣ....ಕೃಷ್ಣ'
10:09:2013:
20:26:
ಪ್ರತಿಕ್ರಿಯೆ (5)