' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ.
ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್ ಗಳ ಬಿಡುಗಡೆಗೆ ಪೈಪೋಟಿ ನಡೆಸುತ್ತಲೆ ಇರುತ್ತವೆ.
ಕೆಲವು ತಿಂಗಳಗಳ ಹಿಂದೆ ಹೀಗೆ ಮಾರುಕಟ್ಟೆಗೆ ' ಸ್ಯಾಮಸಂಗ್ 'ಪರಿಚಿಯಿಸಿದ ಒಂದು ಮಾದರಿಯ ಫೊನ್, ತಾನು ಬಿಡುಗಡೆ ಮಾಡಿರುವ ಆವೃತ್ತಿಯ ನಕಲು ಮಾಡಿದೆ ಎಂದು ಕೋರ್ಟಿನಲ್ಲಿ
'ಸ್ಯಾಮಸಂಗ'ವಿರುದ್ಧ ' ಎಪಲ್ 'ಕಂಪನಿಯು ದಾವೆ ಹೂಡಿ ಜಯ ಗಳಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.ಹಾಗಾಗಿ ಈ ಕಟ್ಲೆಯ ತಿರ್ಮಾನ ಮಾಡಿ ಕೋರ್ಟ 'ಸ್ಯಾಮಸಂಗ್' ಕಂಪನಿಗೆ ದಂಡ ವಿಧಿಸಿ
ಒಂದು ಬಿಲಿಯನ್ ಡಾಲರ್ ನ್ನು( 100 ಕೋಟಿ ಡಾಲರ್) ಪರಿಹಾರವಾಗಿ ನೀಡಲು ಆದೇಶಿಸಿತು.
ಈ ತಿಂಗಳ ದಿನಾಂಕ 23 ರಂದು ಬೆಳಿಗೆ 'ಎಪಲ್' ಕಂಪನಿ ಮುಖ್ಯಕಛೇರಿಯ ಬಳಿ 30 ಟ್ರಕ್ ಗಳು ಬಂದು ನಿಂತಾಗ ಅಲ್ಲಿನ ಸೆಕೂರಿಟಿ ಸಂಸ್ತೆಗೆ ಎನೋ ಗಾಭರಿ! .ಎಲ್ಲೋ ದಾರಿತಪ್ಪಿ ಇಲ್ಲಿಗೆ ಬಂದಿವೆ
ಎಂದು ಅವರು ಯೋಚಿಸುವಷ್ಟರಲ್ಲಿ 'ಸ್ಯಾಮಸಂಗ್' ಕಂಪನಿಯ ಸಿ.ಇ.ಒ ರು 'ಎಪಲ್' ಕಂಪನಿಯ ಸಿ.ಇ.ಒ ಅವರಿಗೆ ಫೊನಾಯಿಸಿ ನಮ್ಮ ಸಂಸ್ತೆಯಿಂದ ತಮ್ಮ ಸಂಸ್ತೆಗೆ ನಿಡಬೇಕಾಗಿರುವ
ಪರಿಹಾರ ಮೊತ್ತವನ್ನು ಕಳಿಸಿದ್ದೇವೆ ಎಂದು ತಿಳಿಸಿದರು.
ಈಗ ಬೆಸ್ತು ಬೀಳುವ ಸಮಯ ' ಎಪಲ್ ' ಕಂಪನಿಯ ಮುಖ್ಯಸ್ಥರುಗಳದಾಗಿತ್ತು. ಕಾರಣ ಏನು ಗೋತ್ತೆ, ಟ್ರಕ್ಕುಗಳ ತುಂಬಾ 5 ಸೆಂಟ್ ನ ನಾಣ್ಯಗಳಿದ್ದವು.ಅವುಗಳನ್ನು ಕ್ರೇಟರ್ ಗಳಲ್ಲಿ ಸುರಿದು,
ತಾವು ಒಪ್ಪಂದದಂತೆ ತಮಗೆ ನೀಡುವ ಹಣವನ್ನ ಕೊಟ್ಟು ಕೋರ್ಟನ ಆದೇಶದಂತೆ ನಡೆದು ಕೊಂಡಿದ್ದೇವೆ ಎಂದು' ಸ್ಯಾಮಸಂಗ' ಕಂಪನಿಯ ಸಿ.ಇ.ಒ ತಿಳಿಸಿದ್ದಾರೆ.
ನಾಣ್ಯಗಳನ್ನು ಎಣಿಸಿ ಒಂದು ಬಿಲಿಯನ್ ಡಾಲರ್ ಸರಿ ಇದೇಯೆ ಎಂದು ನೋಡುವ ಕಾರ್ಯ 'ಎಪಲ್ 'ಕಂಪನಿಯ ಮುಖ್ಯಸ್ಥರಿಗೆ ಒಂದು ಅವಮಾನದ ಸಂಗತಿ ಯಾಗಿರಬಹುದೆ?
ಹೇಗಿದೆ ನೋಡಿ ದ್ವೇಷ ಸಾಧಿಸುವ ಪರಿ ,ಅಲ್ಲವೆ?
ಚಿತ್ರ ಕೃಪೆ: ನ್ಯೂಸ್-ಹೋಂಡ.ನೆಟ್
ಲೇಖನ ಆಧಾರ :Samsung pays Apple $1 Billion sending 30 trucks full of 5 cent coins | News Hound
ಪ್ರತಿಕ್ರಿಯೆ (2)