ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ.
ನಿಘಂಟು ತೆರೆದು ನೋಡಿದರೆ `ನೆನೆ' ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ ಮತ್ತು ಮುಖ್ಯವಾಗಿ ಎರಡು ಅರ್ಥಗಳು - ಒಂದು, `ನೆನಪಿಸಿಕೊಳ್ಳು'; ಇನ್ನೊಂದು `ಒದ್ದೆಯಾಗು'. ಇವೆರಡೂ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಅರ್ಥಗಳು. ಆದರೆ ಪರಸ್ಪರ ಪೂರಕವಾಗಿಯೂ ಪರ್ಯಾಯವಾಗಿಯೂ ಉಪಯೋಗಿಸಿದರೆ/ಅರ್ಥೈಸಿಕೊಂಡರೆ ಭಲೇ ಸ್ವಾರಸ್ಯವನ್ನು ಕೊಡುವಂಥವು!
ಹೇಗಂತೀರಾ?___LINK_OPEN_href="http://thatskannada.oneindia.in/column/vichitranna/030707rainfall_enjoyment.html" target="_blank" title="ವಿಚಿತ್ರಾನ್ನ"___ ಓದಿ ಶ್ರೀವತ್ಸ ಜೋಷಿಯವರ ವಿಚಿತ್ರ್ರಾನ್ನ
ಪ್ರತಿಕ್ರಿಯೆ (1)