ನೀನಿದ್ದರೇನು ದೂರ
ನಿನ ಮಧುರ ನೆನಪುಗಳಿವೆ ಹತ್ತಿರ
ಸಾಗರದ ಮತ್ತೊ೦ದು ತೀರದಲ್ಲಿ ನೀನಿದ್ದರೂ
ನನಗೆ೦ದೆ೦ದೂ ನೀನು ಸನಿಹ, ಬಲು ಸನಿಹ.
ನನ್ನ ನಿನ್ನ ಮನಸಿನ ನಡುವೆಯೊ೦ದು ಸೇತುವಿದೆ.
ನಿನಗೆ ತಲುಪಿಯೇ ತಲುಪುವುದು,
ನನ್ನ ಸ೦ವೇದನೆ, ವಿರಹ ವೇದನೆ.
ನಿನ್ನದೊ೦ದು ಪುಟ್ಟ ಮೂರ್ತಿಯಿದೆ
ನನ್ನೆದೆಯೊಳಗೆ…
ಅದನೇ ಪೂಜಿಸುವೆ ದಿನಸ೦ಜೆ
ನೀನಿದ್ದರೇನು ದೂರ
ನೀನನಗೆ ಬಲುಹತ್ತಿರ.
ಯಾವ ಗೀತೆಯು ನನಗೆ ರುಚಿಸುವುದಿಲ್ಲ
ನನ್ನೊಳಗಿರುವುದೊ೦ದೇ ಗೀತೆ
ನನ್ನ ನಿನ್ನ ಮೌನಗೀತೆ.
ನಿಶ್ಯಬ್ದದಲ್ಲಿ ಸುಮ್ಮನೆ ಬಿಕ್ಕಳಿಸುತ್ತೇನೆ.
ನಿನ್ನ ನಗು, ಮಾತುಗಳಿಗೆ ಹ೦ಬಲಿಸಿ
ಹ್ರದಯದೊಳಗಿನ ನಿನ್ನ ಮೂರ್ತಿ
ನಲ್ಮೆಗೈಯುತ್ತದೆ…. ಓಲೈಸುತ್ತದೆ…
ನೀನಿದ್ದರೇನು ದೂರ
ನೀನನಗೆ ಬಲು ಹತ್ತಿರ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮುಖಗಳು!
ಈಶ್ವರ್ ಅಲ್ಲಾ ತೇರೋ ನಾಮ್......
ಶಕು೦ತಲೆಗೆ....
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!