ಇದೆಂತಾ ದೀಪಾವಳಿ ಅಂದ್ಕೊಂಡ್ರಾ? ಹೌದು, ಬಾಹ್ಯಾಕಾಶದಲ್ಲಿ ರಾಕೆಟ್ ಸಿಡಿದು ಹತ್ತು ಉಪಗ್ರಹಗಳನ್ನ ಕಕ್ಷೆಗೆ ಸೇರಿಸಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C9) ಸೋಮವಾರ ಈ ಕೆಲಸ ಮಾಡಿದೆ.
ಭಾರತ ಇದರಿಂದಾಗಿ ಬಾಹ್ಯಾಕಾಶ ಇತಿಹಾಸವನ್ನ ಸೃಷ್ಟಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾ ದಿಂದ ಗಗನಕ್ಕೆ ಚಿಮ್ಮಿದ PSLV-C9 ಒಂದಾದನಂತರ ಒಂದು ಉಪಗ್ರಹವನ್ನ ನಿರ್ದೇಶಿತ ಕಕ್ಷೆಗೆ ಸೇರಿಸ್ತಾ ಹೊಯ್ತಂತೆ. Cartosat-2A ಮತ್ತು IMS-1 ಭಾರತದ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್ಗಳಾದರೆ, ಉಳಿದವು ಬೇರೆ ದೇಶಗಳ ವಿಶ್ವವಿದ್ಯಾನಿಲಯಗಳು ಅಭಿವೃದ್ದಿ ಪಡಿಸಿದಂತಹವು.
ಈ ಉಪಗ್ರಹಗಳು ಏನೆಲ್ಲಾ ಮಾಡಬಲ್ಲವು ಅಂತ ತಿಳಿಸುವ ಹಿಂದು ಪತ್ರಿಕೆಯ "Fit as a Fiddle" ವರದಿ ___LINK_OPEN_href="http://www.hindu.com/2008/04/30/stories/2008043055961300.htm" target="_blank"___ಇಲ್ಲಿದೆ.
ಇಸ್ರೋದ PSLV-C9 ವೆಬ್ ಪೇಜ್ ನಿಮಗಿಲ್ಲಿ ___LINK_OPEN_href="http://www.isro.org/pslv-c9/index.htm" target="_blank"___ಲಭ್ಯವಿದೆ.
೮ ___LINK_OPEN_href="http://www.isro.org/pslv-c9/nanosat.htm" target="_blank"___ನ್ಯಾನೋ ಸ್ಯಾಟಲೈಟ್ ಗಳನ್ನ ನೋಡೋದ್ ಮರೀಬೇಡಿ.
ಪ್ರತಿಕ್ರಿಯೆ (1)