ಕನಸುಗಳೆಲ್ಲ ಕರಗಿಹೋದವು ನಿನ್ನ ಹಿಂದೆಯೇ ನಲ್ಲೆ
ಉಳಿದೆಲ್ಲ ನೆನಪುಗಳು ಅಳುಕುತಿವೆ ಈಗ ಎದೆಯ ತುಂಬಿ

ಹಗಲಲ್ಲಿ ನಿನ್ನ ಕಾಣುವಾಸೆ
ಇರುಳಲ್ಲಿ ನಿನ್ನ ಮುದ್ದಿಸುವಾಸೆ
ನೀ ಎದುರಿಗಿದ್ದಾಗ ಆಸೆಯೆಲ್ಲಾ ನಿರಾಸೆ

ಎನ್ನ ಮನದ ನಲ್ಲೆ ನೀನು
ನೀನಿರೆ ನಾನು ಜೀವನದಲ್ಲಿ ಬೇಡೆನು ಏನನ್ನೂ

ಈ ಜನರಲ್ಲಿ ದಿನಕ್ಕೆ ಒಂದೊಂದು ತರಹದ ಮುಖವಾಡ
ಅದು ಮೇಕಪ್ ನ ಪವಾಡ

ಇನಿಯನಲ್ಲಿಗೆ ಬಂದು ಕೇಳಿದಳು ಪ್ರೇಯಸಿ
"ನೀನೆಷ್ಟು ಜನಕ್ಕೆ ಕೈ ಕೊಟ್ಟಿರುವೆ" ಎಂದು
ಇನಿಯ ಉತ್ತರ ಕೊಟ್ಟನು
"ತುಂಬಾ ಜನಕ್ಕೆ ಕೈ ಕೊಟ್ಟಿರುವೆ, ಥ್ಯಾಂಕ್ಸ್" ಹೇಳಲೆಂದು