ಅತ್ಯಂತ ರೋಮಾಂಚಕಾರಿ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಭಾರತವನ್ನು ಮಣಿಸಿ ತನ್ನ ಪಯಣ ಮುಂದುವರಿಸಿದರೆ ಭಾರತ ತನ್ನ return ticket confirm ಮಾಡಿ ಬರಿಗೈಲಿ ಸ್ವದೇಶ ಮರಳುವ ಸಿದ್ಧತೆ ನಡೆಸಿದೆ. ಕೊನೆಘಳಿಗೆವರೆಗೂ ಕೆಚ್ಚೆದೆಯ ಬ್ಯಾಟ್ಟಿಂಗ್ ಪ್ರದರ್ಶನ ನೀಡಿದ ಯೂಸುಫ್ ಪಠಾಣ್ ಭಾರತಕ್ಕೆ ಗೆಲುವನ್ನು ತಂದು ಕೊಡಲಾಗಲಿಲ್ಲ. ಕ್ರಿಕೆಟ್ನ ತವರೂರಾದ ಇಂಗ್ಲೆಂಡಿನಲ್ಲಿ ನಡೆದ ಈ ಪಂದ್ಯ ಅಸಂಖ್ಯ ಭಾರತೀಯರು ಮೈದಾನಕ್ಕೆ ಬಂದು ತಂಡದ ವಿಜಯಕ್ಕೆ ಹುರುಪನ್ನು ತುಂಬುತ್ತಿದ್ದರು. ಗೆಲುವು ಸಾಧಿಸಿದ ನಂತರ ಮಾತನಾಡಿದ ಇಂಗ್ಲೆಂಡ್ ನಾಯಕ ಕಾಲಿಂಗ್ ವುಡ್ " ಅಭ್ಯಾಸ ಮುಗಿಸಿ ಭಾರತೀಯ ಬೆಂಬಲಿಗರಿಂದ ಅಪಹಾಸ್ಯ ಮತ್ತು ಗೇಲಿ ನಡುವೆ ಮೈದಾನಕ್ಕೆ ಬರುವುದು ವಿಲಕ್ಷಣ ಅನುಭವವೇ ಸರಿ. ಇಂಥ ಅನುಭವ ಆಗಿದ್ದು ಇದೇ ಮೊದಲ ಬಾರಿ ಮತ್ತು ಈ ಅನುಭವ ನಮ್ಮನ್ನು ಗೆಲ್ಲಲು ಪ್ರೇರೇಪಿಸಿತು" ಎಂದು ನುಡಿದರು.

ಈ ಪಂದ್ಯದ ಬಗ್ಗೆ ಬರೆಯುತ್ತಾ independent ಪತ್ರಿಕೆಯ stephen Brenkley "ಸುಮಾರು ಎರಡು ಶತಮಾನಗಳ
ಕ್ರಿಕೆಟ್ ಆಟದ ತವರೂರಿನಲ್ಲಿ ಆಡುವ ಇಂಗ್ಲೆಂಡಿಗೆ ತಾನು ಆಡುತ್ತಿರುವುದು ದೆಹಲಿ ಅಥವಾ ಮುಂಬಯಿಯಲ್ಲಿ ಎಂಬ ಭಾವ ಬಂದಿರಬೇಕು. ತಮ್ಮ ತಂಡವನ್ನು ಗೆಲ್ಲಿಸಲು ಅಷ್ಟೊಂದು ಬೊಬ್ಬೆ, ಪ್ರೋತ್ಸಾಹ ಭಾರತೀಯರದ್ದು, ನಂಬಲಾಗದ ದೃಶ್ಯ ಅದಾಗಿತ್ತು ಮತ್ತು ಲಾರ್ಡ್ಸ್ ನಲ್ಲಿ ಇಂಥ ಅನುಭವ ಎಂದೂ ಆಗಿರಲಿಲ್ಲ" ಎಂದು ಬರೆದು ಭಾರತೀಯರ ನಡತೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೊಂದು ಪತ್ರಿಕೆ Sun ವಾಚಕರೊಬ್ಬರು ' ಇಲ್ಲೇ ಹುಟ್ಟಿ ಬೆಳೆದ ಜನ ತಮ್ಮ ನಾಡಿಗೆ ನಿಷ್ಠೆ ತೋರುವುದನ್ನು ಬಿಟ್ಟು ತಮ್ಮ ಪೂರ್ವಜರ ನಾಡನ್ನು ಬೆಂಬಲಿಸುವುದು ಅಪಮಾನಕರ " ಎಂದು ತಮ್ಮ ರೋಷ ವ್ಯಕ್ತಪಡಿಸಿದರು.

ಹೀಗೆ ಹೊರನಾಡಿನಲ್ಲಿ ಹುಟ್ಟಿ ಬೆಳೆದು ತಮ್ಮ ಬದುಕನ್ನು ಹಸನಾಗಿಸಿಕೊಂಡ ಜನ ಈ ಪರಿಯ ತಾರತಮ್ಯ ತೋರುವುದು ಎಷ್ಟು ಸರಿ ಎನ್ನುವುದು ಮುಂದಿನ ದಿನಗಳಲ್ಲಿ ಚರ್ಚಿತವಾಗಬಹುದು.