ನಿರಾಕಾರನಿಗೆ
ಅರಿವು ಇರುವ ಕಡೆ ಶಬುದಗಳಿರವು ದೀಪದೊಲು ಮೌನ ಬೆಳಗುವುದು ಗದ್ದಲ ಇರುವ ಕಡೆ ಧ್ಯಾನವಿರದು ಬಚ್ಚಲು ನೀರಂತೆ ಅಜ್ಞಾನ ನಿಲ್ಲುವುದು ಎಲ್ಲಿ ನೀನಿರುವೆಯೊ ಅಲ್ಲಿ ನಾನು ಇರುವುದಿಲ್ಲ ಎಲ್ಲಿ ನಾನು ಇರುವುದಿಲ್ಲವೊ ಅಲ್ಲಿ ನೀನು ಮಾತ್ರವಿರಬಲ್ಲೆ! ........
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅರಿವು ಇರುವ ಕಡೆ ಶಬುದಗಳಿರವು ದೀಪದೊಲು ಮೌನ ಬೆಳಗುವುದು ಗದ್ದಲ ಇರುವ ಕಡೆ ಧ್ಯಾನವಿರದು ಬಚ್ಚಲು ನೀರಂತೆ ಅಜ್ಞಾನ ನಿಲ್ಲುವುದು ಎಲ್ಲಿ ನೀನಿರುವೆಯೊ ಅಲ್ಲಿ ನಾನು ಇರುವುದಿಲ್ಲ ಎಲ್ಲಿ ನಾನು ಇರುವುದಿಲ್ಲವೊ ಅಲ್ಲಿ ನೀನು ಮಾತ್ರವಿರಬಲ್ಲೆ! ........
ಶಬ್ದಗಳು: ಮನಸುಗಳ ಮುರಿದವು ಮನೆಗಳ ಒಡೆದವು ಕಾಡುಗಳ ಕಡಿದವು ನಾಡುಗಳ ಕಟ್ಟಿದವು ಭಾಷೆಗಳಾಗಿ ಬಡಿದಾಡಿದವು ದೇಶಗಳ ಗಡಿಗಳಾದವು ಮೃಗಗಳ ಮಾಯ ಮಾಡಿದವು ಮನುಷ್ಯರ ಮೃಗಗಳಾಗಿಸಿದವು ಮೌನವ ಮಾತಾಗಿಸಿದವು ಧ್ಯಾನವ ಗದ್ದಲವಾಗಿಸಿದವು ಶಬ್ದಗಳು ಶಸ್ತ್ರಗಳಾ...
1. ಸಾವು ನಗುವ ಸಮಾದಿಯ ಮೇಲೂ ಅರಳುವವು ಬಿಳಿ ಹೂವು! 2. ಕರೆದಾಗ ಸಾವು ಹಿಂಬಾಲಿಸುವುದಷ್ಟೆ ನಾವು ಮಾಡಬಹುದಾದ ಕೆಲಸವು! 3. ಮಣ್ಣು ಮಾಡಿ ಹೋದವರು ಮರೆತರೂ ಮರೆಯಲಿಲ್ಲ ಮಣ್ಣೊಳಗೆ ಮಲಗಿದವನ ಗೆದ್ದಲು ಹುಳುಗಳು! 4. ಬಾ ಎಂದಾಗ ಬರದು ಸಾವು ಬಂದಾಗದು...
ಸತ್ತವರು ಎಲ್ಲಿಗೆ ಹೋಗುತ್ತಾರೆ? ಮಸಣಕೆ ಹೆಣವಾಗುತ್ತಾರೆ ಮಣ್ಣಲಿ ಮಣ್ಣಾಗುತ್ತಾರೆ ಬಾನಂಗಳದಲಿ ಚುಕ್ಕಿಯಾಗುತ್ತಾರೆ ಆಪ್ತರೆದೆಯಲಿ ಬಿಕ್ಕಾಗುತ್ತಾರೆ ತಿಥಿಯೂಟಕೆ ನೆಪವಾಗುತ್ತಾರೆ ಕಾಸಿರದವರ ಮನೆಯಲೂ ಕಜ್ಜಾಯವಾಗುತ್ತಾರೆ; ಸತ್ತವರು ಎಲ್ಲಿಗೆ ಹೋಗ...
ಮಾತು ಹೇಳದ್ದನ್ನ ಮೌನ ಹೇಳುತ್ತೆ: ಮುಚ್ಚಿಟ್ಟ ಪ್ರೀತಿ ಬಚ್ಚಿಟ್ಟ ನೆನಪು ಅದುಮಿಟ್ಟ ಕಣ್ಣೀರು ಎಲ್ಲವನು ಸಣ್ಣದೊಂದು ನಿಟ್ಟುಸಿರು ಹೇಳುತ್ತೆ! ಪಡಕೊಂಡದ್ದನ್ನ ಕೂಡಿ ಕಳಕೊಂಡದ್ದನ್ನ ಕಳೆದು ಉಳಿದದ್ದೇನು ಅಂತ ಮೌನ ಹೇಳುತ್ತೆ ಆಗ ಮಾತು ಸೋಲುತ್ತೆ!...
ಕಷ್ಟಪಟ್ಟು ಕಟ್ಟಿದ್ದೆವು ಮನೆಯೊಂದನು ಅಂಗುಲ ಜಾಗಕ್ಕಾಗಿ ಕೆಡವಿಬಿಟ್ಟೆವು! ಇಷ್ಟಪಟ್ಟು ಹಾಕಿದ್ದೆವು ಜೋಕಾಲಿಯೊಂದನು ಯಾರು ಮೊದಲೆಂಬ ಮಾತಿಗೆ ಹಗ್ಗ ಹರಿದೆವು! ಬಣ್ಣ ತುಂಬಿ ಬಿಡಿಸಿದ್ದೆವು ಚಿತ್ರವೊಂದನು ಗೆರೆಯೊಂದಕ್ಕಾಗಿ ಮಸಿಚೆಲ್ಲಿ ಕೆಡಿಸಿಬಿ...
ಮೌನದಲಿ ಮುಗಿಸಬಹುದಾಗಿದ್ದ ಮುನಿಸೊಂದನು ಮಾತಾಡಿ- ಮಾತಾಡಿ ಮೈಲುದ್ದ ಎಳೆದೆವು; ಮಾತಾಡಿ ಮುಕ್ತಾಯ ಮಾಡಬಹುದಿದ್ದ ಮನಸ್ತಾಪವೊಂದನು ಮೌನಕೆ ಶರಣಾಗಿ ಮಹಾಯುದ್ದ ಮಾಡಿದೆವು; ಮಾತು-ಮೌನಗಳ ಮೌಲ್ಯವನರಿಯದೆ ಸಂಬಂದಗಳ ಸೇತುವೆಯನು ಕಡಿದು ಹಾಕಿದೆವು! ......
ಎರಡು ಹಗಲು ಗಳ ನಡುವೆ ಇರುಳಿನದೊಂದು ಸೇತುವೆ ಎರಡು ಇರುಳು ಗಳ ನಡುವೆ ಹಗಲಿನದೊಂದು ಸೇತುವೆ; ಹಗಲ ಸೇತುವೆಯಲಿ ದುಡಿದು ದಣಿದು ನಡೆದು ಸೇರುವೆವು ಇರುಳ ದಡಕೆ ವಿಶ್ರಮಿಸಿ ಅಲ್ಲಿ ಮತ್ತೆ ನಡೆವೆವು ಹಗಲ ಸೇತುವೆ ಕಡೆಗೆ ಎರಡು ಸೇತುವೆಗಳ ನಡುವೆ ಸಾಗು...
ಹರಿಯುವ ನದಿ ಜಂಗಮವಾಯ್ತು ನಿಂತ ಕಡಲು ಸ್ಥಾವರವಾಯ್ತು! ಬೀಸಿದ ಗಾಳಿ ಜಂಗಮವಾಯ್ತು ಅಲುಗದ ಹೆಬ್ಬಂಡೆ ಸ್ಥಾವರವಾಯ್ತು! ನೀನೆಂಬ ತನುವಿನೊಳಗಣ ಪ್ರಾಣ ಜಂಗಮವಾಗಿ ನಾ ಪಡೆದ ನಶ್ವರ ದೇಹ ಮಣ್ಣು ಸೇರಿ ಸಮಾದಿ ರೂಪದಿ ಸ್ಥಾವರವಾಯ್ತು!
ಕವಿತೆಗಳನ್ನು ಮೆಚ್ಚಿದ ಜನ ಸಾಲುಗಳ ನಡುವಿನ ವಿಷಾದವನ್ನು ಓದಲಿಲ್ಲ! ಕನಸುಗಳನ್ನು ಮೆಚ್ಚಿದ ಜನ ಅವು ಮುರಿದು ಬಿದ್ದುದನ್ನು ನೋಡಲಿಲ್ಲ! ಮುಗುಳ್ನಗುವನ್ನು ಮೆಚ್ಚಿದ ಜನ ನೋವಿನ ಮುಳ್ಳುಗಳನ್ನು ನೋಡಲಿಲ್ಲ! ಜೀವನ್ಮುಖತೆಯನ್ನು ಮೆಚ್ಚಿದ ಜನ ಹಿಂಬಾಲ...
ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನಲಿ ಕಳೆದು ಹೋಗಿವೆ ಇನ್ನು ಕೆಲವು ಕೋವಿ ಹಿಡಿದು ಕಾಡು...