ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನಾಥ ಹಕ್ಕಿಯ ಕೂಗು

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೭ ವೀಕ್ಷಣೆ ೧
ಪ್ರಥಮ ಮುದ್ರಣ
2020
ಆವೃತ್ತಿ
5
ಬೆಲೆ
160.00
ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾದರೆ ‘ಅನಾಥ ಹಕ್ಕಿಯ ಕೂಗು’ ಎಂಬ ಕೃತಿ ಪತಿ, ಪತ್ನಿ ಮತ್ತು ಮಕ್ಕಳ ಮನಸ್ಸಿನ ತೊಳಲಾಟದ ಬಗ್ಗೆ ಬರೆದಿರುವ ಮನೋವೈಜ್ಞಾನಿಕ ಕಾದಂಬರಿ. ಗಿರಿಮನೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಿರುವಂತೆ “ ‘ಅನಾಥ ಹಕ್ಕಿಯ ಕೂಗು' ಒಂದು ಮನೋವೈಜ್ಞಾನಿಕ ಕಾದಂಬರಿ. ಹೆತ್ತವರಿದ್ದೂ ತಬ್ಬಲಿಯಾದ ಮಗುವಿನ ಬದುಕು ಸಂಕಟಕ್ಕೆ ಬಿದ್ದರೆ ಅದರ ನೋವು ತಟ್ಟುವುದು ಕೊನೆಗೂ ಹೆತ್ತವರಿಗೇ. ಅದರಲ್ಲೂ ಅಮ್ಮನಿಗೆ ! ಏಕೆಂದರೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಬೆಳೆಸಿದ ಅವಳದೇ ಒಂದು ಭಾಗ ಅದು. ನಂತರದ್ದು ಅದರ ರಕ್ಷಣೆಗೆ ನಿಲ್ಲಬೇಕಾದ ಅಪ್ಪನಿಗೆ ! ಇಬ್ಬರ ಪ್ರೀತಿಯೂ ಸಿಗದೆ ಹೋದರೆ ಮಗುವಿನ ಗತಿ? ‘ಹೆತ್ತವರ ಪ್ರೀತಿ ಇಲ್ಲದೆ ಬೆಳೆದ ಮಗು ಸಮಾಜಘಾತಕರಾಗಬಹುದು' ಎಂದು ಎಚ್ಚರಿಸುತ್ತಾರೆ ಮನಃಶಾಸ್ತ್ರಜ್ಞರು.

ಕೊನೆಯ ನವೀಕರಣ: ಅಕ್ಟೋಬರ್ ೦೮, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಅರ್ಧರಾತ್ರಿಯ ಸಂಭಾಷಣೆ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.

4 ೧೪೧

ಮೃಗಬೇಟೆ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.

4 ೧೨೮