ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೃಗಬೇಟೆ

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೮ ವೀಕ್ಷಣೆ ೧
ಪ್ರಥಮ ಮುದ್ರಣ
2021
ಆವೃತ್ತಿ
6
ಬೆಲೆ
250.00
ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿಮೂರನೇ ಪುಸ್ತಕವೇ “ಮೃಗ ಬೇಟೆ". ಈಗಾಗಲೇ ೧೨ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. ‘ಮೃಗಬೇಟೆ' ಬಗ್ಗೆ ಅವರೇ ಬೆನ್ನುಡಿಯಲ್ಲಿ ಹೇಳುವಂತೆ “ ಇವರು ದುಷ್ಟರು, ಇವರು ಶಿಷ್ಟರು ಎಂದೇನೂ ನೋಡದೆ ಪ್ರಕೃತಿ ಎಲ್ಲರಿಗೂ ಆಶ್ರಯ ಕೊಡುತ್ತದೆ. ಆದರೆ ದುಷ್ಟರು ಕೂಡಾ ಮಾಡಿದ್ದನ್ನು ಅನುಭವಿಸಲೇಬೇಕು ಎನ್ನುವುದು ಪ್ರಕೃತಿಯನ್ನೂ ದುಷ್ಟರನ್ನೂ ನಿರ್ಮಾಣ ಮಾಡಿದ ಭಗವಂತನ ನಿಯಮ. ಇದು ವೀರಪ್ಪನ್ ಕತೆಯಲ್ಲ. ಆದರೆ ಅದನ್ನೇ ಹೋಲುವ, ಕಾಡಿನ ಬದುಕನ್ನು ಹೊರಜಗತ್ತಿಗೆ ತೋರಿಸುವ ಪರೋಕ್ಷ ಪ್ರಯತ್ನ ಅಷ್ಟೆ. ಜ್ಞಾನದ ಕೊರತೆ ಇರುವ ಮನುಷ್ಯ ಹೇಗೆ ಮೃಗದಂತೆ ವರ್ತಿಸುತ್ತಾನೆ; ಅನಿವಾರ್ಯತೆ ಎಂತಹಾ ವಾತಾವರಣ ಸೃಷ್ಟಿಸುತ್ತದೆ; ಹುಟ್ಟುಗುಣದಂತೆ ಪರಿಸರ ಕೂಡಾ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸೂಕ್ಸ್ಮವೂ ಇದರಲ್ಲಿ ಸಿಗಬಹುದು.”

ಕೊನೆಯ ನವೀಕರಣ: ಅಕ್ಟೋಬರ್ ೦೫, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಅನಾಥ ಹಕ್ಕಿಯ ಕೂಗು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.

4 ೧೪೬

ಅರ್ಧರಾತ್ರಿಯ ಸಂಭಾಷಣೆ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.

4 ೧೪೦