ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓ-ಹೆನ್ರಿ ಕಥೆಗಳು
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಓ-ಹೆನ್ರಿ ಕಥೆಗಳು

ಗುರುರಾಜ ಕರಜಗಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೧ ವೀಕ್ಷಣೆ ೦
ಬೆಲೆ
₹160
ಓ-ಹೆನ್ರಿ ಕಥೆಗಳು : ವಿಲಿಯಂ ಸಿಡ್ನೆ ಪೋರ್ಟರ್ (1862-1910) ಅಮೇರಿಕೆಯ ಅತ್ಯಂತ ಪ್ರಸಿದ್ಧ ಸಣ್ಣ ಕಥೆಗಳ ಲೇಖಕ. ಅವನ ಕಾವ್ಯನಾಮ ಓ-ಹೆನ್ರಿ. ಆತ ಆರುನೂರಕ್ಕೂ ಹೆಚ್ಚು ಕಥೆಗಳನ್ನು ರಚಿಸಿದ ಪ್ರತಿಭಾವಂತ. ಅವನು ಹಣದ ದುರುಪಯೋಗ ಮಾಡಿದ ಅಪರಾಧಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವಾಗ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಓ-ಹೆನ್ರಿಯ ಕಥೆಗಳ ವಿಶೇಷತೆ ಹಾಗೂ ಹೆಗ್ಗುರುತೆಂದರೆ ಅವುಗಳ ಆಶ್ಚರ್ಯಕರವಾದ ಅಂತ್ಯ. ಅವನ ಕಥೆಗಳಲ್ಲಿ ಕಂಡುಬರುವ ಅನಿರೀಕ್ಷಿತ ಬದಲಾವಣೆಗಳು ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುತ್ತವೆ. ಓ-ಹೆನ್ರಿಯ ಕಥೆಗಳು ಅಮೇರಿಕೆಯ ಸಾಮಾನ್ಯ ಹಾಗೂ ಅತಿಸಾಮಾನ್ಯ ಜನರ ಅಪೇಕ್ಷೆಗಳನ್ನು, ಆಕಾಂಕ್ಷೆಗಳನ್ನು, ಹತಾಶೆಗಳನ್ನು, ಸಂಭ್ರಮಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತವೆ. ಪ್ರತಿಯೊಂದು ಕಥೆಯೂ ಮನುಷ್ಯ ಸ್ವಭಾವದ ಒಳನೋಟಗಳನ್ನು ನೀಡುತ್ತ, ಆ ಸ್ವಭಾವ, ಬದುಕಿನ ಅನಿವಾರ್ಯ ಹೋರಾಟಗಳ ಫಲಶೃತಿಗಳಾದ ಪ್ರೀತಿ, ದ್ವೇಷ, ಬಡತನ, ಆತ್ಮಗೌರವ, ಮೋಸ, ಅಪರಾಧಗಳಿಂದ ಬದಲಾಗುವುದನ್ನು ಹೃದಯಕ್ಕೆ ಮುಟ್ಟುವಂತೆ ತಲುಪಿಸುತ್ತದೆ. ಈ ಕಥಾಸಂಕಲನದಲ್ಲಿ ಓ ಹೆನ್ರಿಯ ಪ್ರಾತಿನಿಧಿಕ ಇಪ್ಪತ್ತು ಅನುವಾದಿತ ಕಥೆಗಳಿವೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು