ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಥಾರೂಪದ ಯೋಗಾಸನ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೯೫ ವೀಕ್ಷಣೆ ೧
ಬೆಲೆ
₹55
ಮಲ್ಲಾಡಿಹಳ್ಳಿಯ ಅನಾಥಸೇವಾಶ್ರಮದ ಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಉದಾತ್ತಚರಿತರು. ಸಮಷ್ಟಿಯ ಒಳಿತಿಗಾಗಿ ತಮ್ಮ ಸಮಸ್ತ ವ್ಯಕ್ತಿತ್ವವನ್ನು ಅರ್ಪಿಸಿಕೊಂಡವರು. ಯೋಗ ಪ್ರಚಾರ, ಆಯುರ್ವೇದ ಚಿಕಿತ್ಸೆ ಮತ್ತು ಹಿಂದುಳಿದ ಗ್ರಾಮೀಣ ಪ್ರದೇಶದ ಜನತೆಗೆ ವಿದ್ಯೆಯನ್ನು ನೀಡುವ ಉದ್ದೇಶದಿಂದ ಅನಾಥ ಸೇವಾಶ್ರಮವನ್ನು ಸ್ಥಾಪಿಸುವ ಮೂಲಕ ರಾಘವೇಂದ್ರ ಸ್ವಾಮೀಜಿಯವರು ಲೋಕ ಕಲ್ಯಾಣದ ಕಾರ್ಯದಲ್ಲಿ ದಾಪುಗಾಲು ಹಾಕಿದವರು. ಯೋಗ ಮತ್ತು ಆಯುರ್ವೇದ ಜ್ಞಾನವನ್ನು ಕುರಿತಂತೆ ಪೂಜ್ಯ ಸ್ವಾಮೀಜಿ ಯವರು ರಚಿಸಿದ ಗ್ರಂಥ ಕೃತಿಗಳು ತಮ್ಮ ವೈಶಿಷ್ಟ್ಯದ ಮೂಲಕ ಜನಮನ್ನಣೆಯನ್ನು ಗಳಿಸಿವೆ. ಪ್ರಸ್ತುತ ಕಥಾರೂಪದ ಯೋಗಾಸನ ಕೃತಿಯು ಇಂಥ ಒಂದು ವಿಶಿಷ್ಟ ಕೃತಿಯಾಗಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬