ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುದಿ ಎಸರು (ಭಾಗ 1)

ಡಾ. ವಿಜಯಾ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೦೦ ವೀಕ್ಷಣೆ ೦
ಪ್ರಕಾಶನ
Naakutanti Prakashana,
ಪ್ರಥಮ ಮುದ್ರಣ
2017
ಆವೃತ್ತಿ
5
ಪುಟಗಳು
೩೮೪
ಬೆಲೆ
₹300.00
ಕೊನೆಯ ಮುದ್ರಣ
೨೦೨೧
ವಿಜಯಾ, ವಿಜಯಾ ಸುಬ್ರಹ್ಮಣ್ಯಂ, ಇಳಾ ವಿಜಯಾ, ವಿಜಯಮ್ಮ ಹೀಗೆ ಹಲವು ಹೆಸರುಗಳಿಂದ ಪರಿಚಿತರಾದ ಅಮ್ಮ, ನಮ್ಮಮ್ಮ ವಿಜಯಮ್ಮ ಅವರ ಆತ್ಮಕಥನದ ಮೊದಲ ಭಾಗವನ್ನು ನಮ್ಮ ಪ್ರಕಾಶನದಿಂದ ಹೊರತರುತ್ತಾ ಇರುವುದು ನಾಕುತಂತಿ ಪ್ರಕಾಶನಕ್ಕೆ ಒದಗಿದ ಸುಯೋಗವೇ ಆಗಿದೆ. ಇದೆಲ್ಲವೂ ದಿಢೀರನೆ ಆದುದಲ್ಲ. ಅಮ್ಮನನ್ನು ಈ ಕೆಲಸ ಮಾಡುವಂತೆ ಒತ್ತಾಯಿಸಿದವರು ಹಲವರು. ಅವರ ಒತ್ತಾಯಗಳಿಗೆ ಒತ್ತಾಸೆಯಾಗಿ ನಿಂತವರು ನಾವು. ಮತ್ತೆ ಮತ್ತೆ ಅಮ್ಮನಿಗೆ ಬೇರೆ ಯಾವ ಕೆಲಸ ಒಪ್ಪಿಕೊಳ್ಳಬೇಡಿ ಎಂದು ಹೇಳುತ್ತಾ ಈ ಹಂತದ ಕೆಲಸ ಮುಗಿಸುವುದು ಸಾಧ್ಯವಾಗಿದೆ. ಇಲ್ಲಿ ವಿಜಯಮ್ಮನವರ ಜೀವನದ ಬಾಲ್ಯ, ವೈವಾಹಿಕ ಜೀವನದ ಮಜಲುಗಳು ಮತ್ತು ವೃತ್ತಿ ಜೀವನದ ಆರಂಭದ ದಿನಗಳವರೆಗಿನ ಕತೆ ಇದೆ. ಇಲ್ಲಿಂದಾಚೆಗಿನ ಅವರ ವೃತ್ತಿಜೀವನದ ಕಥನವನ್ನು ಎರಡನೆಯ ಭಾಗದಲ್ಲಿ ಕಟ್ಟಿಕೊಡಲಿದ್ದಾರೆ. ಆ ಪುಸ್ತಕವನ್ನೂ ಹೊರತರುವ ಆನಂದ ನಮಗೇ ಒದಗಿ ಬರಲಿ. - ಪ್ರಕಾಶಕರು (ಮುನ್ನುಡಿಯಲ್ಲಿ)

ಕೊನೆಯ ನವೀಕರಣ: ಅಕ್ಟೋಬರ್ ೩೧, ೨೦೨೬