ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕೃಷಿಪರಾಶರ

ವಿದ್ವಾನ್ ಉಮಾಕಾಂತ ಭಟ್ಟ, ಡಾ.ಮಧುಸೂದನ ಅಡಿಗ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೫೭ ವೀಕ್ಷಣೆ ೧
ಬೆಲೆ
₹150
ಕೃಷಿಪರಾಶರ ಅಲ್ಪಕಾಯದ ಕೃತಿ. ಇದರ ಕರ್ತೃ ಋಷಿ ಪರಾಶರ. ಈ ಗ್ರಂಥದಲ್ಲಿ 243 ಕಾರಿಕೆಗಳಿವೆ. ಇದನ್ನು ಕೃಷಿಶಾಸ್ತ್ರಮ್ ಎಂಬ ಹೆಸರಿನಿಂದ ಅಲ್ಲಲ್ಲಿ ಉಲ್ಲೇಖಿಸಲಾಗಿದೆ. ಕೃಷಿಪರಾಶರ ಗ್ರಂಥವು ಸಮಗ್ರವಾಗಿ ಉಪಲಬ್ಧವಾದಂತಿಲ್ಲ. ಕಾರಿಕೆಗಳಲ್ಲಿ ವಿಸ್ತಾರವಾಗಿ ವೃಷ್ಟಿಜ್ಞಾನ, ಕೃಷಿಯ ಪರಿಕರಗಳು, ಪೂರ್ವರಂಗ, ಕೃಷಿ ಪ್ರಕ್ರಿಯೆ, ಬೆಳೆ, ಸುಗ್ಗಿ, ಬೆಳೆಯ ಸಂರಕ್ಷಣ ಮೊದಲಾದ ಅನೇಕ ವಿಷಯಗಳನ್ನು ನಿರೂಪಿಸಿದರೂ ಕೇವಲ ಧಾನ್ಯ ಕೃಷಿಯನ್ನು ಮಾತ್ರ ಲಕ್ಷೀಕರಿಸಿದಂತಾಗಿದೆ. ಕೃಷಿಕ ಅಜ್ಞಾನಿಯಾಗಬಾರದು. ಅವನು ಕೃಷಿಗೆ ಅನುಕೂಲವಾಗುವ ತಂತ್ರಗಳನ್ನೂ, ಕೌಶಲಗಳನ್ನೂ ಪರಂಪರೆ, ಸ್ವಯಂಪರೀಕ್ಷೆ ಮತ್ತು ಗ್ರಂಥಗಳಿಂದ ತಿಳಿದುಕೊಂಡು ಕೃಷಿಯಲ್ಲಿ ತೊಡಗಬೇಕು. ಅವನು ಆಲಸಿಯಾಗಬಾರದು. ಕೃಷಿ ಫಲವನ್ನು ಕೊಡುವುದಾದರೂ ಅದು ಕೃಷಿಕನ ಪರಿಶ್ರಮ, ಪ್ರಕೃತಿಯ ಅನುಕೂಲ್ಯ, ಇತರ ಪ್ರಾಣಿ ಮತ್ತು ವಸ್ತುಗಳ ಸಹಕಾರ, ದೈವಾನುಗ್ರಹ ಮೊದಲಾದ ನಾನಾ ಅಂಶಗಳನ್ನು ಅಪೇಕ್ಷಿಸುತ್ತದೆ. ಇದನ್ನೆಲ್ಲ ಅರ್ಥಮಾಡಿಕೊಂಡು, ಆಸ್ತಿಕನಾಗಿಯೂ, ದಯಾಳುವಾಗಿಯೂ ಕೃಷಿಕನು ವಿಶ್ವಾಸದಿಂದ ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು. ಈ ಹಿನ್ನೆಲೆಯಿಂದ ಕೃಷಿಕನಿಗೆ ಕೈಪಿಡಿಯಾಗಿ ಒದಗುವ ಗ್ರಂಥ “ಕೃಷಿಪರಾಶರ"

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬