ಕೃಷಿಪರಾಶರ
ಲೇಖಕರು: ವಿದ್ವಾನ್ ಉಮಾಕಾಂತ ಭಟ್ಟ, ಡಾ.ಮಧುಸೂದನ ಅಡಿಗ
5 (೧)
₹150.00
ದಾಸ್ತಾನು ಖಾಲಿ
ಇಂದಿನ ಓದುಗರಿಗಾಗಿ ಹೊಸ ಆವೃತ್ತಿ
ಕೃಷಿ ಪರಾಶರ
ಪ್ರಾಚೀನ ಭಾರತದ ಜ್ಞಾನ — ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ
₹280.80
₹351.00
20% ರಿಯಾಯಿತಿ
ಪುಸ್ತಕದ ಬಗ್ಗೆ
ಕೃಷಿಪರಾಶರ ಅಲ್ಪಕಾಯದ ಕೃತಿ. ಇದರ ಕರ್ತೃ ಋಷಿ ಪರಾಶರ. ಈ ಗ್ರಂಥದಲ್ಲಿ 243 ಕಾರಿಕೆಗಳಿವೆ. ಇದನ್ನು ಕೃಷಿಶಾಸ್ತ್ರಮ್ ಎಂಬ ಹೆಸರಿನಿಂದ ಅಲ್ಲಲ್ಲಿ ಉಲ್ಲೇಖಿಸಲಾಗಿದೆ.
ಕೃಷಿಪರಾಶರ ಗ್ರಂಥವು ಸಮಗ್ರವಾಗಿ ಉಪಲಬ್ಧವಾದಂತಿಲ್ಲ. ಕಾರಿಕೆಗಳಲ್ಲಿ ವಿಸ್ತಾರವಾಗಿ ವೃಷ್ಟಿಜ್ಞಾನ, ಕೃಷಿಯ ಪರಿಕರಗಳು, ಪೂರ್ವರಂಗ, ಕೃಷಿ ಪ್ರಕ್ರಿಯೆ, ಬೆಳೆ, ಸುಗ್ಗಿ, ಬೆಳೆಯ ಸಂರಕ್ಷಣ ಮೊದಲಾದ ಅನೇಕ ವಿಷಯಗಳನ್ನು ನಿರೂಪಿಸಿದರೂ ಕೇವಲ ಧಾನ್ಯ ಕೃಷಿಯನ್ನು ಮಾತ್ರ ಲಕ್ಷೀಕರಿಸಿದಂತಾಗಿದೆ.
ಕೃಷಿಕ ಅಜ್ಞಾನಿಯಾಗಬಾರದು. ಅವನು ಕೃಷಿಗೆ ಅನುಕೂಲವಾಗುವ ತಂತ್ರಗಳನ್ನೂ, ಕೌಶಲಗಳನ್ನೂ ಪರಂಪರೆ, ಸ್ವಯಂಪರೀಕ್ಷೆ ಮತ್ತು ಗ್ರಂಥಗಳಿಂದ ತಿಳಿದುಕೊಂಡು ಕೃಷಿಯಲ್ಲಿ ತೊಡಗಬೇಕು. ಅವನು ಆಲಸಿಯಾಗಬಾರದು. ಕೃಷಿ ಫಲವನ್ನು ಕೊಡುವುದಾದರೂ ಅದು ಕೃಷಿಕನ ಪರಿಶ್ರಮ, ಪ್ರಕೃತಿಯ ಅನುಕೂಲ್ಯ, ಇತರ ಪ್ರಾಣಿ ಮತ್ತು ವಸ್ತುಗಳ ಸಹಕಾರ, ದೈವಾನುಗ್ರಹ ಮೊದಲಾದ ನಾನಾ ಅಂಶಗಳನ್ನು ಅಪೇಕ್ಷಿಸುತ್ತದೆ. ಇದನ್ನೆಲ್ಲ ಅರ್ಥಮಾಡಿಕೊಂಡು, ಆಸ್ತಿಕನಾಗಿಯೂ, ದಯಾಳುವಾಗಿಯೂ ಕೃಷಿಕನು ವಿಶ್ವಾಸದಿಂದ ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು. ಈ ಹಿನ್ನೆಲೆಯಿಂದ ಕೃಷಿಕನಿಗೆ ಕೈಪಿಡಿಯಾಗಿ ಒದಗುವ ಗ್ರಂಥ “ಕೃಷಿಪರಾಶರ"
ಮತ್ತೆ ಲಭ್ಯವಾದಾಗ ನಿಮಗೆ ಇಮೇಲ್ ಮೂಲಕ ತಿಳಿಸುತ್ತೇವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
ವಿಮರ್ಶೆಗಳು
5 · ೧ ವಿಮರ್ಶೆಯ ಆಧಾರದಲ್ಲಿಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.