ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇವಯಾನ

ನವೀನಕೃಷ್ಣ ಎಸ್.ಉಪ್ಪಿನಂಗಡಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೪೦ ವೀಕ್ಷಣೆ ೦
ISBN
978-81-687250-0-3
ಬೆಲೆ
₹170
ಬೆನ್ನುಡಿಯಲ್ಲಿ ಕಂಡ ಬರಹ ಪಳಂಪುರಿ, ಪಾಲಕ್ಕಾಡ್, ಅಂಗುಲೀಯಂಗಮ್. ಕೇರಳ ಅಂದರೆ ದೇವರು, ದೈವ, ಹಿನ್ನೀರು, ಕಡಲು, ದೋಣಿ, ಬೆಳಕು ಮತ್ತು ಚೆಲುವು... ಉಪ್ಪಿನಂಗಡಿಯ ನನ್ನ ಗೆಳೆಯ ನವೀನಕೃಷ್ಣ ಮತ್ತೊಮ್ಮೆ ಕೇರಳದ ಯಾತ್ರೆ ಮಾಡಿದ್ದಾರೆ. ದೇವರು ಆಳುವ ದೇಶದ ಸಂಪತ್ತನ್ನು ತಂದುಕೊಟ್ಟಿದ್ದಾರೆ. ಈ ಪುಸ್ತಕ ದೇವಯಾನವೊಂದೇ ಅಲ್ಲ, ಇದು ಭಾವಯಾನವೂ ಎಂಬುದನ್ನು ಅವರು ಭಾಷೆಯ ಸೊಗಸಿನಲ್ಲಿ, ನಿರೂಪಣೆಯ ವಿಶಿಷ್ಟತೆಯಲ್ಲಿ ತೋರಿಸಿದ್ದಾರೆ. `ಪ್ರವಾಸ ಅಂದರೆ ತಿರುಗಾಟಕ್ಕೂ ಮಿಗಿಲಾದ ಒಂದು ಹಂತ. ಅಲ್ಲಿ ಪ್ರತಿ ಹೊತ್ತೂ, ಪ್ರತಿ ನೋಟವೂ ನಮ್ಮನ್ನು ನಮ್ಮಲ್ಲಿ ಶೋಧಿಸುವಂತೆ ಮಾಡುತ್ತದೆ. ಅಂಥ ಶೋಧನೆ ನಮ್ಮ ಒಳಗೂ ಹೊರಗೂ ಪ್ರಕಾಶಿಸಬೇಕು. ಆಗ ದೇವಯಾನ ಸಾರ್ಥಕವಾಗುತ್ತದೆ.. ನವೀನಕೃಷ್ಣ ಅವರ ಈ ಕೃತಿ ಅಂಥ ಸಾರ್ಥಕತೆಯನ್ನು ಹೊತ್ತು ಬಂದಿದೆ. ಲೌಕಿಕ ಅನ್ವೇಷಣೆಯಲ್ಲಿ ದೈವಿಕ ಆಯಾಮವನ್ನು ಗುರುತಿಸಿಕೊಂಡ ಚೆಂದದ ಪುಸ್ತಕ ಇದು. - ಗೋಪಾಲಕೃಷ್ಣ ಕುಂಟಿನಿ .

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬