ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೆಂಕಿಯ ನೆರಳು

ಎನ್ ಎಸ್ ಚಿದಂಬರ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೮೧ ವೀಕ್ಷಣೆ ೦
ಬೆಲೆ
₹140
ಎನ್ ಎಸ್ ಚಿದಂಬರ ರಾವ್ ಅವರ 'ಬೆಂಕಿಯ ನೆರಳು' ಕಾದಂಬರಿಯ ಬೆನ್ನುಡಿಯಲ್ಲಿ... "ಅಪ್ಪಾ, ನಾನು ನಿನ್ನ ಹತ್ರ ನೇರವಾಗಿ ಮಾತಾಡೋಕೆ ಬಂದಿದ್ದೀನಿ, ನೀನು ಯಾಕೆ ಹೀಗೆ ರೇಗ್ತಾ ಇದೀಯ? ನಾನೇನು ಮಾಡಬಾರದ ಕೆಲ್ಸ ಮಾಡಿಲ್ಲ. ಪ್ರಪಂಚದಲ್ಲಿ ಯಾರೂ ಬಸಿರಾಗೇ ಇಲ್ಲೇನು? ವ್ಯತ್ಯಾಸ ಇಷ್ಟೆ... ನಂದಿನ್ನೂ ಮದುವೆ ಅಂತ ಆಗಿಲ್ಲ... ಅದಕ್ಯಾಕೆ ಇಷ್ಟು ಹಾರಾಡ್ತಿ? ನಾನೇ ಆ ರವಿ ಹತ್ರ ಹೋಗ್ತಿನಿ... ಬೇಕಿದ್ರೆ ನೀನೂ ಬಾ... ಅವನು ನ್ಯಾಯವಾಗಿ ಒಕ್ಕೊಂಡ್ರೆ ಸರಿ... ಇಲ್ಲಾಂದ್ರೆ ಅವನ ಕೃಪೆ ನಂಗೆ ಬೇಕಿಲ್ಲ... ನಿಮಗೆಲ್ಲ ನನ್ನಿಂದ ಮಾನ ಹೋಗುತ್ತೆ ಅಂತಾದ್ರೆ ನಂಗೆ ನಿಮ್ಮ ಹಂಗೂ ಬ್ಯಾಡ. ನಾನೋಬ್ಬೇ ಹೊರಟು ಹೋಗ್ತಿನಿ... ನನ್ನ ಹಣೇಲಿ ಏನು ಬರೆದಿದೆಯೋ ಅನುಭವಿಸೋಕೆ ಸಿದ್ಧಳಾಗಿದೀನಿ... ಆದ್ರೆ ಇದೊಂದು ಕ್ಷುಲಕ ಕಾರಣಕ್ಕಾಗಿ ಸಾಯೋ ಅಂಥ ಹೇಡಿ ಕೆಲ್ಸ ನಾನು ಮಾಡಲಾರೆ... ಹೇಳು... ನಾಳೇನೇ ನೀನು ನನ್ನ ಜೊತೆ ಬರೋಕೆ ರೆಡಿಯಾಗಿದೀಯ?" ಬಿರುಸಾಗಿ ಎಡಬಿಡದೆ ಹೇಳಿದ ಸುಧಾ ದಿಟ್ಟತನದಿಂದ ತಂದೆಯ ಮುಖ ನೋಡುತ್ತಾ ನಿಂತಳು." ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಾದಂಬರಿ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬