ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯೋಗ ಧ್ಯಾನ ದೀಪಿಕೆ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೭೮ ವೀಕ್ಷಣೆ ೧
ಬೆಲೆ
₹600
ಯೋಗಾಭ್ಯಾಸವು ಪ್ರಾಚೀನ ಭಾರತದ ಋಷಿಮುನಿಗಳು ಮಾನವಕೋಟಿಯ ಉದ್ಧಾರಕ್ಕಾಗಿ ಅನುಗ್ರಹಿಸಿದ ಅದ್ಭುತ ವಿದ್ಯೆ. ಜ್ಞಾನ, ಭಕ್ತಿ, ಕರ್ಮಗಳ ಮುಪ್ಪುರಿಯ ಬ್ರಹ್ಮಜ್ಞಾನ ಸೂತ್ರದಂತಿರುವ ಭಗವದ್ಗೀತೆಯು ಯೋಗವನ್ನೇ ಬೋಧಿಸುತ್ತದೆ. ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಎಂಬ ಎಂಟು ಅಂಗಗಳ ಮೂಲಕ ಸಾಧಿಸಬೇಕಾದ ಮೋಕ್ಷವಿದ್ಯೆ. ಇವೆಲ್ಲವುಗಳ ಸಮ್ಮಿಶ್ರವಾಗಿರುವ ಸರಳ-ಸುಂದರ ನೇರ ಶೈಲಿಯಲ್ಲಿ ರೂಪಗೊಳಿಸಿರುವ ಈ ಸಮಗ್ರ ಪುಸ್ತಕವನ್ನು ಅನಾಥಸೇವಾಶ್ರಮವು ಹೊರತರುತ್ತಿದೆ. ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಯೋಗ ಜ್ಞಾನ, ಆಯುರ್ವೇದ ಜ್ಞಾನವನ್ನು ಕುರಿತಂತೆ ರಚಿಸಿರುವ ಕೃತಿಗಳು ಈಗಾಗಲೇ ಜನಮನ್ನಣೆ ಗಳಿಸಿವೆ. ಪೂಜ್ಯರ ಸತತ ಸಾಧನೆ ಮತ್ತು ಸ್ವಾನುಭವ ನಿಷ್ಟವಾಗಿರುವ ಈ ಕೃತಿಯಲ್ಲಿರುವ ಮಾಹಿತಿಯನ್ನು ಪ್ರಾಯೋಗಿಕವಾಗಿ ಗಂಡು-ಹೆಣ್ಣೆನ್ನದೆ, ಸತತವಾಗಿ ಅಧ್ಯಯನ ಮಾಡಿ ಆಚರಣೆಗೆ ತಂದುಕೊಂಡು ಅದರ ಸತ್ಪಲಗಳನ್ನು ಕಂಡುಕೊಳ್ಳಬಹುದಾದ ರೀತಿಯಲ್ಲಿ ರೂಪಿಸಲಾಗಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬