ಯೋಗ ಧ್ಯಾನ ದೀಪಿಕೆ
ಲೇಖಕರು: ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
₹600.00
ಲಭ್ಯವಿದೆ
ಪುಸ್ತಕದ ಬಗ್ಗೆ
ಯೋಗಾಭ್ಯಾಸವು ಪ್ರಾಚೀನ ಭಾರತದ ಋಷಿಮುನಿಗಳು ಮಾನವಕೋಟಿಯ ಉದ್ಧಾರಕ್ಕಾಗಿ ಅನುಗ್ರಹಿಸಿದ ಅದ್ಭುತ ವಿದ್ಯೆ. ಜ್ಞಾನ, ಭಕ್ತಿ, ಕರ್ಮಗಳ ಮುಪ್ಪುರಿಯ ಬ್ರಹ್ಮಜ್ಞಾನ ಸೂತ್ರದಂತಿರುವ ಭಗವದ್ಗೀತೆಯು ಯೋಗವನ್ನೇ ಬೋಧಿಸುತ್ತದೆ. ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಎಂಬ ಎಂಟು ಅಂಗಗಳ ಮೂಲಕ ಸಾಧಿಸಬೇಕಾದ ಮೋಕ್ಷವಿದ್ಯೆ. ಇವೆಲ್ಲವುಗಳ ಸಮ್ಮಿಶ್ರವಾಗಿರುವ ಸರಳ-ಸುಂದರ ನೇರ ಶೈಲಿಯಲ್ಲಿ ರೂಪಗೊಳಿಸಿರುವ ಈ ಸಮಗ್ರ ಪುಸ್ತಕವನ್ನು ಅನಾಥಸೇವಾಶ್ರಮವು ಹೊರತರುತ್ತಿದೆ. ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಯೋಗ ಜ್ಞಾನ, ಆಯುರ್ವೇದ ಜ್ಞಾನವನ್ನು ಕುರಿತಂತೆ ರಚಿಸಿರುವ ಕೃತಿಗಳು ಈಗಾಗಲೇ ಜನಮನ್ನಣೆ ಗಳಿಸಿವೆ.
ಪೂಜ್ಯರ ಸತತ ಸಾಧನೆ ಮತ್ತು ಸ್ವಾನುಭವ ನಿಷ್ಟವಾಗಿರುವ ಈ ಕೃತಿಯಲ್ಲಿರುವ ಮಾಹಿತಿಯನ್ನು ಪ್ರಾಯೋಗಿಕವಾಗಿ ಗಂಡು-ಹೆಣ್ಣೆನ್ನದೆ, ಸತತವಾಗಿ ಅಧ್ಯಯನ ಮಾಡಿ ಆಚರಣೆಗೆ ತಂದುಕೊಂಡು ಅದರ ಸತ್ಪಲಗಳನ್ನು ಕಂಡುಕೊಳ್ಳಬಹುದಾದ ರೀತಿಯಲ್ಲಿ ರೂಪಿಸಲಾಗಿದೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹600.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.