ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರಾಯರ ಕಥೆಗಳು

ಕೆ. ರಾಧಾಕೃಷ್ಣ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೪೭ ವೀಕ್ಷಣೆ ೦
ಬೆಲೆ
₹150
ರಾಯರ ಇಲ್ಲಿನ ಕಥೆಗಳನ್ನು ಕಥಾವಸ್ತುಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳೇ ಮುಖ್ಯವಾಗಿವೆ. ಸಮಸ್ಯೆಗಳೇ ವಸ್ತುಗಳಾದರೂ ಕೇವಲ ಅವುಗಳ ಚಿತ್ರಣ ನೀಡದೆ ಅಂತಹ ಸಮಸ್ಯೆಗಳಿಗೆ ಪರಿಹಾರದ ಬೆಳಕಿಂಡಿಗಳನ್ನು ತೆರೆದು ತೋರುತ್ತಾರೆ. ಆ ಮೂಲಕ ಒಂದು ಸಂದೇಶವನ್ನು ಸಾರುತ್ತಾರೆ. ರಾಯರು ಸ್ತ್ರೀವಾದಿ ನೆಲೆಯಲ್ಲೂ ಚಿಂತಿಸುವವರೇ ಆಗಿದ್ದಾರೆ. ವರದಕ್ಷಿಣೆ, ಅತ್ತೆಯ ಅಧಿಕಾರ, ತಾಯಿಯನ್ನು ಮಿತಿಮೀರಿ ಆರಾಧಿಸುವ ಮಗನಿಂದ ಬಂದ ಸೊಸೆಗೆ ಆಗುವ ಮಾನಸಿಕ ಹಿಂಸೆಗಳಿಗೆ ಪ್ರತಿಯಾಗಿ ಒಬ್ಬ ವಿದ್ಯಾವಂತ ಹೆಣ್ಣು ವಿಚ್ಛೇದನ ಪಡೆದು ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವುದನ್ನು ಸರಿ ಎಂದು ಕಥೆಯಲ್ಲಿ ಪ್ರತಿಪಾದಿಸುತ್ತಾರೆ. ಅವರು ತನ್ನ ನಡೆ, ನುಡಿಯಲ್ಲಿ ಹಾಸ್ಯ ಪ್ರಿಯರು ಎನ್ನುವುದನ್ನು ಕಥೆಗಳು ಕೂಡಾ ಸಾಬೀತುಪಡಿಸುತ್ತವೆ. ಇಲ್ಲಿನ ಎಲ್ಲ ಕಥೆಗಳಲ್ಲಿ ಅವರ ಆಶಯಗಳ ವಿಸ್ತರಣೆಯನ್ನು ಕಾಣಬಹುದಾಗಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬